ವಾಟ್ಸಪ್ ಮೆಸೇಜ್ ಇನ್ನು ಮುಂದೆ ಕದಿಯಲಾರದ ಸ್ವತ್ತು

Subscribe to Oneindia Kannada

ನವದೆಹಲಿ, ಏಪ್ರಿಲ್, 07: ವಾಟ್ಸಪ್ ಬಳಕೆ ಮಾಡುತ್ತಿದ್ದ ನಿಮಗೆ ಬುಧವಾರ ಈ ಅಂಶ ಗಮನಕ್ಕೆ ಬಂದಿರಲೇಬೇಕು. ನಿಮ್ಮ ಸಂದೇಶಗಳು ಇನ್ನು ಮುಂದೆ ಸುರಕ್ಷಿತ ಎಂಬ ಮಾಹಿತಿ ಫೋನ್ ಪರಧೆಯ ಮೇಲೆ ಗೋಚರವಾಗಿರುತ್ತದೆ.

ಪಿಯು ಪತ್ರಿಕೆ ಸೋರಿಕೆ ಸಂಬಂಧ ರಾಜ್ಯದಲ್ಲಿ ವಾಟ್ಸಪ್ ಬ್ಯಾನ್ ಗುಲ್ಲೆದ್ದಿದೆ. ಈ ನುಡುವೆ ಕಂಪನಿ ಸಂದೇಶಗಳ ಸುರಕ್ಷತೆಗೆ ಹೊಸ ಕ್ರಮ ತೆಗೆದುಕೊಂಡಿದೆ.[ವಾಟ್ಸಪ್ ಬ್ಯಾನ್ ಮಾಡ್ತೀರಾ? ಮಾಡ್ಕಳ್ಳಿ ನಮಗೇನಂತೆ!]

ಒಬ್ಬ ಬಳಕೆದಾರ ಕಳುಹಿಸಿದ ಸಂದೇಶವನ್ನು, ಅದನ್ನು ಸ್ವೀಕರಿಸಿದ ವ್ಯಕ್ತಿ ಮಾತ್ರವೇ ಓದಬಲ್ಲಬಹುದಾಗಿರುತ್ತದೆ. ಈ ಇಬ್ಬರ ನಡುವಿನ ಸಂದೇಶ ರವಾನೆ, ಸ್ವೀಕೃತಿ ವೇಳೆ ಮಧ್ಯದಲ್ಲಿ ಯಾವುದೇ ತನಿಖಾ ಸಂಸ್ಥೆ, ಹ್ಯಾಕರ್‌ಗಳು ಅಷ್ಟೇ ಏಕೆ ವಾಟ್ಸಪ್‌ ಕಂಪನಿ ಕೂಡಾ ಸಂದೇಶವನ್ನು ಬೇಧಿಸಲು ಸಾಧ್ಯವಿಲ್ಲ ಎಂದು ವಾಟ್ಸಪ್‌ನ ಸಹ ಸಂಸ್ಥಾಪಕರಾದ ಜಾನ್‌ ಕೋಮ್‌ ಮತ್ತು ಬ್ರಿಯಾನ್‌ ತಿಳಿಸಿದ್ದಾರೆ.

ಈ ಹೊಸ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿವರವಾಗಿ ನೋಡಿಕೊಂಡು ಬರೋಣ...

ಎಂಡ್‌-ಟು-ಎಂಡ್‌ ಗೂಢಲಿಪೀಕರಣ

ಎಂಡ್‌-ಟು-ಎಂಡ್‌ ಗೂಢಲಿಪೀಕರಣ

ಪ್ರಪಂಚದಾದ್ಯಂತ 1 ಬಿಲಿಯನ್‌ಗಿಂತ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ತನ್ನ ಆಪ್‌ ಸೇವೆ ನೀಡಿರುವ ಐಫೋನ್‌, ಆಂಡ್ರಾಯ್ಡ್‌, ವಿಂಡೋಸ್‌, ಬ್ಲಾಕ್‌ಬೆರ್ರಿ ಸೇರಿದಂತೆ ಎಲ್ಲ ಮಾದರಿಗಳಿಗೂ ಎಂಡ್‌-ಟು-ಎಂಡ್ ಗೂಢಲಿಫೀಕರಣ ಜಾರಿಗೊಳಿಸಿದೆ.

 ಯಾರಿಗೂ ತಿಳಿಯಲ್ಲ

ಯಾರಿಗೂ ತಿಳಿಯಲ್ಲ

ವಾಟ್ಸಾಪ್‌ನ ಇತ್ತೀಚಿನ ವರ್ಸನ್ ಬಳಸುವ ಬಳಕೆದಾರರ ಪ್ರತಿಯೊಂದು ಮೆಸೇಜ್, ಫೋಟೋ, ವೀಡಿಯೋ, ಫೈಲ್‌, ವಾಟ್ಸಾಪ್‌ ಕರೆ ಎಲ್ಲವೂ ಸಹ ಸುರಕ್ಷಿತವಾಗಿರುತ್ತವೆ. ಅಂದರೆ ಸೆಂಡರ್ ಮತ್ತು ಸ್ವೀಕೃತದಾರರು ಬಿಟ್ಟರೆ ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ನಡೆಯುವ ಯಾವುದೇ ಸಂವಹನ ಪ್ರಕ್ರಿಯೆ ಯಾರಿಗೂ ಸಹ ತಿಳಿಯುವುದಿಲ್ಲಾ. ವಾಟ್ಸಾಪ್‌ ಉದ್ಯೋಗಿಗಳಿಗೂ ಸಹ ತಿಳಿಯುವುದಿಲ್ಲ.

 ಹೇಗೆ ಜಾರಿ

ಹೇಗೆ ಜಾರಿ

ಗೂಢಲಿಪೀಕರಣ' ವ್ಯವಸ್ಥೆ ಜಾರಿಗಾಗಿ ಎಲ್ಲಾ ಮೊಬೈಲ್‌ ಡಿವೈಸ್‌ ವೇದಿಕೆಗಳಲ್ಲೂ ಈ ವ್ಯವಸ್ಥೆ ಜಾರಿಗಾಗಿ 2 ವರ್ಷಗಳ ಕಾಲ ಕೆಲಸ ನಿರ್ವಹಿಸಿದೆ. ಪ್ರಸ್ತುತದಲ್ಲಿ ಹೊಸ ವರ್ಸನ್‌ ಆಪ್‌ ಬಳಸುವವರು ಚಿತ್ರದಲ್ಲಿರುವಂತೆ ನೋಟಿಫಿಕೇಶನ್‌ ಪಡೆಯುತ್ತೀರಿ.

ಉಗ್ರ ಚಟುವಟಿಕೆ ಆತಂಕ

ಉಗ್ರ ಚಟುವಟಿಕೆ ಆತಂಕ

ಸುರಕ್ಷತಾ ಕ್ರಮ ಅಗತ್ಯವಿದ್ದ ವೇಳೆ ವಾಟ್ಸಪ್ ಬಳಕೆಯನ್ನು ಪತ್ತೆ ಹಚ್ಚಲಾಗದಿದ್ದರೆ ಭದ್ರತೆಗೆ ಆತಂಕ ಎದುರಾಗುವ ಲಕ್ಷಣವೂ ಇದೆ. ಉಗ್ರ ಚಟುವಟಿಕೆ ಇರುವ ದೇಶಗಳಿಗೆ ಇದು ಶಾಪವಾದರೂ ಆಶ್ಚರ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Messaging giant WhatsApp is rolling out end-to-end encryption, a move that will potentially protect texts and voice calls of its over one billion users from hackers and "regimes". The announcement has come close on the heels of a legal battle between Apple and FBI over the US agency's demand that the iPhone maker help unlock its mobile phones.
Please Wait while comments are loading...