• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವದಂತಿಗೆ ಕಡಿವಾಣ: ತಂತ್ರಜ್ಞಾನ ಆವಿಷ್ಕರಿಸಿದವರಿಗೆ ವಾಟ್ಸಾಪ್ ಬಹುಮಾನ

|

ನವದೆಹಲಿ, ಜುಲೈ 6: ವದಂತಿಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಾಟ್ಸಾಪ್, ಅದರ ನಿಯಂತ್ರಣ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದೆ.

ವಾಟ್ಸಾಪ್ ಸಂದೇಶ ವಾಹಕದ ದುರ್ಬಳಕೆಯಾಗುತ್ತಿರುವುದರ ಬಗ್ಗೆ ಕೇಂದ್ರ ಸರ್ಕಾರ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ವಾಟ್ಸಾಪ್ ಸಂಸ್ಥೆ, ಸುಳ್ಳು ಸಂದೇಶಗಳ ಸಮಸ್ಯೆಯನ್ನು ನಿವಾರಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದೆ.

ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?

ತನ್ನ ಆಪ್‌ ಮೂಲಕ ಆಗುತ್ತಿರುವ ಸುಳ್ಳು ಮಾಹಿತಿ ರವಾನೆ ಹಾಗೂ ಅದರಿಂದ ತಾನು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಸಂಶೋಧನೆ ನಡೆಸಲು ಮುಂದಾದರೆ ಅದಕ್ಕೆ ಅನಿಯಮಿತ ಹಣಕಾಸಿನ ನೆರವು ನೀಡುವುದಾಗಿ ಕೂಡ ವಾಟ್ಸಾಪ್ ಮಂಗಳವಾರ ಘೋಷಣೆ ಮಾಡಿದೆ.

ಪ್ರಸ್ತುತ ಸುಳ್ಳು ಸಂದೇಶಗಳಿಂದ ಸಂಭವಿಸುತ್ತಿರುವ ಹಿಂಸಾಚಾರದಂತಹ ಕ್ರೂರ ಕೃತ್ಯಗಳಿಂದ ಭಾರತ ಸರ್ಕಾರದಂತೆಯೇ ನಮಗೂ ಆಘಾತ ಉಂಟಾಗಿದೆ. ನೀವು ಎತ್ತಿರುವ ಬಹುಮುಖ್ಯ ವಿಚಾರಕ್ಕೆ ಕೂಡಲೇ ಪ್ರತಿಸ್ಪಂದಿಸಲು ಬಯಸುತ್ತೇವೆ.

ಸರ್ಕಾರ, ನಾಗರಿಕ ಸಮಾಜ ಮತ್ತು ತಂತ್ರಜ್ಞಾನ ಸಂಸ್ಥೆಗಳು ಜತೆಯಾಗಿ ತೊಡಗಿಸಿಕೊಂಡು ಕೆಲಸ ಮಾಡಬೇಕಾದ ಸವಾಲು ಇದು ಎಂದು ಕಂಪೆನಿಯು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಮೊನ್ನೆ ಸಾಮಾಜಿಕ ಮಾಧ್ಯಮ ದಿನ! ಇಂದು Whatsapp ಗೆ ಬೇಲಿ!

ಅನಗತ್ಯ ಮಾಹಿತಿಗಳನ್ನು ಹರಡುವುದನ್ನು ತಡೆಯಲು ಗ್ರೂಪ್ ಚಾಟ್‌ಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿರುವುದಾಗಿ ಅದು ಹೇಳಿದೆ,

ಗುಂಪಿನಿಂದ ಹೊರ ಹೋದ ವ್ಯಕ್ತಿಗಳು ಬೇರೆಯವರನ್ನು ಅದಕ್ಕೆ ಸೇರಿಸುವುದನ್ನು ತಡೆಯುವ ಹೊಸ ರಕ್ಷಣೆ ವಿಧಾನ ಅಳವಡಿಸಲಾಗಿದೆ. ಇದು ದುರ್ಬಳಕೆಯ ಮಾರ್ಗಗಳಲ್ಲಿ ಒಂದಾಗಿದ್ದು, ಸರಿಪಡಿಸಬೇಕಾದ ಮಹತ್ವದ ಸಂಗತಿಯಾಗಿತ್ತು.

ವೈಯಕ್ತಿಕ ಗುಂಪುಗಳ ಒಳಗೆ ಯಾರು ಸಂದೇಶಗಳನ್ನು ಕಳುಹಿಸಬಹುದು ಎಂಬುದನ್ನು ಗುಂಪಿನ ಅಡ್ಮಿನ್ ನಿರ್ಧರಿಸುವ ಹೊಸ ಸೆಟ್ಟಿಂಗ್‌ಅನ್ನು ಆರಂಭಿಸಿದ್ದೇವೆ ಎಂದು ವಿವರಿಸಿದೆ.

ವದಂತಿಯ ಹರಿವಿಗೆ ಕಡಿವಾಣ: ವಾಟ್ಸಾಪ್‌ಗೆ ಕೇಂದ್ರ ಸರ್ಕಾರ ಸೂಚನೆ

ಇದರಿಂದ ಅನಗತ್ಯವಾದ ಸಂದೇಶಗಳನ್ನು ಮಹತ್ವದ ಗುಂಪಿಗಳಿಗೆ ಹರಡುವುದು ಮತ್ತು ಸುಳ್ಳು ಹಾಗೂ ಸಮಸ್ಯಾತ್ಮಕ ವಿಚಾರಗಳನ್ನು ಹೊಂದಿರುವ ಸಂದೇಶಗಳನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ.

ವ್ಯಕ್ತಿ ಸಿದ್ಧಪಡಿಸಿದ ಸಂದೇಶವನ್ನು ಫಾರ್ವರ್ಡ್ ಮಾಡುವಾಗ ಯಾವ ರೀತಿ ಬದಲಾಯಿಸಲಾಗಿದೆ ಎಂಬುದನ್ನು ಹೈಲೈಟ್ ಮಾಡುವ ರೀತಿಯ ವಿನೂತನ ತಂತ್ರಜ್ಞಾನವನ್ನು ಭಾರತಕ್ಕಾಗಿ ಪರೀಕ್ಷಿಸಲಾಗುತ್ತಿದೆ.

ಇದು ಸಂದೇಶ ಕಳಹಿಸುವವರಿಗೆ ಸಂಕೇತವನ್ನು ನೀಡುತ್ತದೆ. ಇದರಿಂದ ಅವರು ಯಾವುದೇ ಸಂದೇಶವನ್ನು ಫಾರ್ವರ್ಡ್ ಮಾಡುವ ಮುನ್ನ ಇನ್ನೊಮ್ಮೆ ಯೋಚಿಸಲು ಅವಕಾಶ ನೀಡಿದಂತೆ ಆಗುತ್ತದೆ.

ಅದರಲ್ಲಿ ಇರುವ ಸಂದೇಶವು ಅವರಿಗೆ ಪರಿಚಿತನಾಗಿರುವ ವ್ಯಕ್ತಿ ಕಳುಹಿಸಿದ್ದೇ ಅಥವಾ ಯಾರಿಂದಲೋ ಬಂದಿರುವ ವದಂತಿಯಾಗಿರಬಹುದೇ ಎಂಬುದನ್ನು ಅವರು ತಿಳಿದುಕೊಳ್ಳಲು ಸಾಧ್ಯವಿದೆ.

ವಾಟ್ಸಾಪ್ ನಲ್ಲಿ ಬಂದ ಒಂದು ವದಂತಿಗೆ ಬಲಿಯಾಗಿದ್ದು 29 ಪ್ರಾಣ

ಈ ವರ್ಷದಿಂದ ಇದೇ ಮೊದಲ ಬಾರಿಗೆ ವದಂತಿಗಳು ಮತ್ತು ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಲು ಫ್ಯಾಕ್ಟ್ ಚೆಕ್ಕಿಂಗ್ ಸಂಸ್ಥೆಗಳ ಜತೆಗೆ ಕೆಲಸ ಮಾಡುತ್ತಿದ್ದೇವೆ.

ಉದಾಹರಣೆಗೆ ಮೆಕ್ಸಿಕೊದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆ ವೇಳೆ ವೆರಿಫಿಕ್ಯಾಡೊ ಎಂಬ ಸುದ್ದಿ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದೆವು.

ಬಳಕೆಗಾರರು ವೆರಿಫಿಕ್ಯಾಡೊದ ವಾಟ್ಸಾಪ್ ಖಾತೆಗೆ ಸಾವಿರಾರು ವದಂತಿ ಸಂದೇಶಗಳನ್ನು ರವಾನಿಸುತ್ತಿದ್ದರು. ಅದಕ್ಕೆ ಅವರು ನಿಖರವಾದ ಸುದ್ದಿಯ ಅಪ್ಡೇಟ್‌ಗಳನ್ನು ನೀಡುತ್ತಿದ್ದರು ಎಂದು ವಾಟ್ಸಾಪ್ ವಿವರಿಸಿದೆ.

ಬೂಮ್ ಲೈವ್ ಭಾರತದಲ್ಲಿ ಲಭ್ಯವಿರುವ ಫ್ಯಾಕ್ಟ್ ಚೆಕ್ಕಿಂಗ್ ಸಂಸ್ಥೆಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
WhatsApp responded to the central government's letter asking it to prevent the misuse of platform on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more