ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ನಲ್ಲಿ ಹೆಚ್ಚುತ್ತಿರುವ SBI ವಿರೋಧಿ ಆಂದೋಲನ

ಈ ಸಂದೇಶವು ಈಗಾಗಲೇ ಲಕ್ಷಾಂತರ ಜನರನ್ನು ಮುಟ್ಟಿದ್ದು ಎಲ್ಲರಲ್ಲೂ ಒಂದು ಆವೇಶ ಸೃಷ್ಟಿ ಮಾಡುವ ನಿಟ್ಟಿನಲ್ಲಿ ವಾಟ್ಸಾಪ್ ನಲ್ಲಿ ಪ್ರಸಾರ ಹಾಗೂ ಪ್ರಚಾರ ಪಡೆಯುತ್ತಿದೆ.

|
Google Oneindia Kannada News

ಬೆಂಗಳೂರು, ಏಪ್ರಿಲ್ 3: ಜನರ ಅವಲಂಬನೆ ಹಾಗೂ ಅಸಹಾಯಕತೆಗಳ ಮೇಲೆ ಸವಾರಿ ಮಾಡುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಬುದ್ಧಿ ಕಲಿಸಬೇಕೆಂದು ಆರೋಪಿಸಿ, ಇದೇ ತಿಂಗಳ 6ರಂದು ಬ್ಯಾಂಕಿಂಗ್ ರಹಿತ ದಿನವನ್ನಾಗಿ ಆಚರಿಸಬೇಕೆಂದು ಕರೆ ನೀಡಿರುವ ಸಂದೇಶವೊಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ಈ ವಿಚಾರ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ.

ಆ ದಿನವನ್ನು ಬ್ಯಾಂಕಿಂಗ್ ರಹಿತ ದಿನವನ್ನಾಗಿ ಆಚರಿಸಲು ಸಾಧ್ಯವಾಗದಿದ್ದರೆ, ಇದೇ ಮಾಸಾಂತ್ಯದ 24, 25, 26 ಹಾಗೂ 27ರಂದು ಬ್ಯಾಂಕಿಂಗ್ ವ್ಯವಹಾರ ರದ್ದು ದಿನಗಳನ್ನಾಗಿ ಆಚರಿಸಿ ಬ್ಯಾಂಕ್ ಗೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ.

ಸಂದೇಶದಲ್ಲಿ ಬ್ಯಾಂಕ್ ಉದ್ಯೋಗಿಗಳನ್ನು ಕಳ್ಳರು ಎಂದೂ ಸಂಬೋಧಿಸಲಾಗಿದೆ. ಈ ಸಂದೇಶವು ಈಗಾಗಲೇ ಲಕ್ಷಾಂತರ ಜನರನ್ನು ಮುಟ್ಟಿದ್ದು ಎಲ್ಲರಲ್ಲೂ ಒಂದು ಆವೇಶ ಸೃಷ್ಟಿ ಮಾಡುವ ನಿಟ್ಟಿನಲ್ಲಿ ವಾಟ್ಸಾಪ್ ನಲ್ಲಿ ಪ್ರಸಾರ ಹಾಗೂ ಪ್ರಚಾರ ಪಡೆಯುತ್ತಿದೆ.

ಉಳಿತಾಯ ಖಾತೆಗಳಲ್ಲಿ ಕನಿಷ್ಠ ಠೇವಣಿ ಹೊಂದಿರದ ಗ್ರಾಹಕರ ಮೇಲೆ ದಂಡ ವಿಧಿಸುವ ನಿಯಮವನ್ನು ಐದು ವರ್ಷಗಳ ನಂತರ, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತೆ ಜಾರಿಗೆ ತಂದಿದೆ. ಅವುಗಳ ಮುಖ್ಯಾಂಶ ಹಾಗೂ ಸಂದೇಶದಲ್ಲಿ ಮತ್ತೇನಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕೆಲ ದಿನಗಳ ಹಿಂದೆ ಪ್ರಕಟವಾಗಿದ್ದ ನಿಯಮ

ಕೆಲ ದಿನಗಳ ಹಿಂದೆ ಪ್ರಕಟವಾಗಿದ್ದ ನಿಯಮ

ಹೊಸ ನಿಯಮಗಳನ್ವಯ, ಮೆಟ್ರೋ ಪಾಲಿಟನ್ ನಗರಗಳಲ್ಲಿರುವವರ ಖಾತೆಯಲ್ಲಿ ಕನಿಷ್ಠ 5 ಸಾವಿರ ರು., ದೊಡ್ಡ ನಗರಗಳಲ್ಲಿ 3 ಸಾವಿರ ರು., ತಾಲೂಕು ಕೇಂದ್ರಗಳಂಥ ಊರುಗಳಲ್ಲಿ 2 ಸಾವಿರ ರು., ಗ್ರಾಮೀಣ ಪ್ರದೇಶಗಳಲ್ಲಿನ ಜನರು 1 ಸಾವಿರ ರು. ಹಣವನ್ನು ಕನಿಷ್ಠ ಠೇವಣಿಯಾಗಿ ಇಟ್ಟುಕೊಳ್ಳಲೇಬೇಕಿದೆ. ಇದಕ್ಕೆ ತಪ್ಪಿದಲ್ಲಿ ರು. 200 ಹಾಗೂ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ದಂಡ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಕೆಲ ದಿನಗಳ ಹಿಂದೆಯೇ ಪ್ರಕಟಿಸಿದೆ.

ಹಣ ಹಿಂಪಡೆಯಲು ತೆರಬೇಕು ಶುಲ್ಕ

ಹಣ ಹಿಂಪಡೆಯಲು ತೆರಬೇಕು ಶುಲ್ಕ

ಇದಲ್ಲದೆ ತಿಂಗಳಿಗೆ ಖಾತೆಗೆ ಕೇವಲ ಮೂರು ಬಾರಿ ಮಾತ್ರ ಶುಲ್ಕ ರಹಿತ ಜಮೆಗೆ ಅವಕಾಶ ನೀಡಲಾಗಿದೆ. ಮೂರು ಅವಕಾಶಗಳ ನಂತರ ಜಮೆ ಮಾಡುವ ಪ್ರತಿಯೊಂದು ವ್ಯವಹಾರಕ್ಕೂ 50 ರು. ಶುಲ್ಕ ತೆರಬೇಕಿದೆ. ಇಷ್ಟೇ ಅಲ್ಲ, ಹಣ ಹಿಂಪಡೆಯಲೂ ಇದೇ ನಿಯಮ ಅನ್ವಯವಾಗುತ್ತದೆ.

ಮಿಕ್ಕ ಎಟಿಎಂಗಳಿಗೆ ಒಂದು ನಿಯಮ

ಮಿಕ್ಕ ಎಟಿಎಂಗಳಿಗೆ ಒಂದು ನಿಯಮ

ಇನ್ನು, ಎಸ್ ಬಿಐ ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ತಿಂಗಳಿಗೆ ಐದು ಬಾರಿ ಉಚಿತ ಅವಕಾಶ ನೀಡಲಾಗಿದೆ. ಆನಂತರದ ಪ್ರತಿ ಎಟಿಎಂ ವ್ಯವಹಾರಗಳಿಗೆ 10 ರು. ಶುಲ್ಕ ಅನ್ವಯವಾಗುತ್ತದೆ. ಇತರ ಬ್ಯಾಂಕ್ ಗಳ ಎಟಿಎಂಗಳಲ್ಲಿ ಶುಲ್ಕ ರಹಿತ ವಿತ್ ಡ್ರಾ ಅವಕಾಶಗಳ ಮಿತಿಯನ್ನು 3ಕ್ಕೆ ಇಳಿಸಲಾಗಿದ್ದು, ಆ ನಂತರದ ಪ್ರತಿ ವ್ಯವಹಾರಕ್ಕೆ 25 ರು. ಶುಲ್ಕ ವಿಧಿಸಲಾಗಿದೆ.

ಸಂದೇಶದ ಮೂಲಕ ಆಂದೋಲನಕ್ಕೆ ಪ್ರಯತ್ನ

ಸಂದೇಶದ ಮೂಲಕ ಆಂದೋಲನಕ್ಕೆ ಪ್ರಯತ್ನ

ಇವೇ ಮುಂತಾದ ಎಲ್ಲಾ ಬ್ಯಾಂಕಿಂಗ್ ನಿಯಮಗಳ ವಿರುದ್ಧ ದಂಗೆಯೆದ್ದಿರುವ ಕೆಲವರು (ಈ ಸಂದೇಶ ಸೃಷ್ಟಿಸಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ) ಒಂದು ಜನಾಂದೋಲನ ರೂಪಿಸಲು ಮುಂದಾಗಿದ್ದಾರೆ. ಮೇಲೆ ಸೂಚಿಸಲಾಗಿರುವ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಕರೆ ನೀಡಿಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ

ಬ್ಯಾಂಕಿಂಗ್ ವ್ಯವಹಾರ ನಿಲ್ಲಿಸುವುದು ಕಷ್ಟ. ಆದರೆ ಅಸಂಭವವೇನಲ್ಲ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದ್ದು, ಬನ್ನಿ ನಮ್ಮೆಲ್ಲರ (ಗ್ರಾಹಕರ) ಒಗ್ಗಟ್ಟನ್ನು ಬ್ಯಾಂಕುಗಳಿಗೆ ಮನವರಿಕೆ ಮಾಡಿಕೊಡೋಣ ಎಂದು ಕರೆ ನೀಡಿವೆ. ಇದಲ್ಲದೆ, ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಸೆಸ್, ಸೇವಾ ತೆರಿಗೆ, ವಿದ್ಯಾಭ್ಯಾಸ ಸೆಸ್, ಕೊಳ್ಳುವಿಕೆ ಮೇಲೆ ಸೆಸ್.... ಹೀಗೆ ನಾನಾ ರೀತಿಗಳಲ್ಲಿ, ನಾನಾ ರೂಪದಲ್ಲಿ ತೆರಿಗೆಗಳನ್ನು ಹೇರಿ ನಮ್ಮನ್ನು ಸುಲಿಗೆ ಮಾಡುತ್ತಿವೆ ಎಂದೂ ಸಂದೇಶದಲ್ಲಿ ಅಸಮಾಧಾನ ಹೊರಹಾಕಲಾಗಿದೆ.

English summary
A message has been circulating rapidly in Whatsapp, to provoke the people against State Bank of India (SBI). In the message they urged to implement April 16 or April 24 to 27, 2017 as 'anti banking day', to teach a lesson to SBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X