ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ವಾಟ್ಸಾಪ್ ಸಂದೇಶ ಮನಬಂದಂತೆ ಫಾರ್ವರ್ಡ್ ಮಾಡುವಂತಿಲ್ಲ

|
Google Oneindia Kannada News

ನವದೆಹಲಿ, ಜುಲೈ 20: ಸುಳ್ಳು ಹಾಗೂ ಪ್ರಚೋದನಾಕಾರಿ ಸುದ್ದಿಗಳ ಹರಡುವಿಕೆಯನ್ನು ತಡೆಗಟ್ಟಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವ ವಾಟ್ಸಾಪ್, ಫಾರ್ವರ್ಡ್ ಸಂದೇಶಗಳ ರವಾನೆ ಮೇಲೆ ನಿಯಂತ್ರಣ ಹೇರಲು ಉದ್ದೇಶಿಸಿದೆ.

ಭಾರತದಲ್ಲಿ ಸಂದೇಶಗಳು, ವಿಡಿಯೋ, ಆಡಿಯೋ, ಫೋಟೊಗಳನ್ನು ಒಂದು ಖಾತೆಯಿಂದ ಒಮ್ಮೆಗೆ ಐದು ಜನರಿಗೆ ಮಾತ್ರ ಫಾರ್ವರ್ಡ್ ಮಾಡಬಹುದು. ಬಳಿಕ ತ್ವರಿತವಾಗಿ ಫಾರ್ವರ್ಡ್ ಮಾಡಲು ಸಾಧ್ಯವಾಗದಂತೆ ಈ ಮೊದಲು ಇದ್ದ ಅನಿಯಮಿತ ಅವಕಾಶವನ್ನು ನಿರ್ಬಂಧಿಸಲಾಗುತ್ತದೆ.

ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?

ಸಂದೇಶಗಳನ್ನು ಫಾರ್ವರ್ಡ್ ಮಾಡುವ ಅವಕಾಶವನ್ನು ಐದಕ್ಕೆ ಮಿತಿಗೊಳಿಸುವ ಪರೀಕ್ಷಾರ್ಥ ಪ್ರಯೋಗವನ್ನು ಗುರುವಾರದಿಂದಲೇ ಪ್ರಾರಂಭಿಸುತ್ತಿದ್ದು, ವಾಟ್ಸಾಪ್ ಬಳಸುವ ಪ್ರತಿಯೊಬ್ಬರಿಗೂ ಇದು ಅನ್ವಯವಾಗಲಿದೆ.

whatsapp forward messages limited to five

ಇದರಿಂದ ಐವರಿಗೆ ಮಾತ್ರ ಒಂದೇ ಬಾರಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಬಹುದು. ಮೀಡಿಯಾ ಮೆಸೇಜ್‌ಗಳ ಕ್ವಿಕ್ ಫಾರ್ವರ್ಡ್‌ಗೆ ಇರುವ ಆಯ್ಕೆಯನ್ನು ವಾಟ್ಸಾಪ್ ತೆಗೆದು ಹಾಕಲಿದೆ.

ಆದರೆ, ಜನರು ಸಂದೇಶಗಳನ್ನು ಕಾಪಿ ಮಾಡಿಕೊಂಡು ಅದನ್ನು ಹೆಚ್ಚು ಜನರಿಗೆ ಒಮ್ಮೆಲೆ ರವಾನಿಸುವ ಆಯ್ಕೆಯನ್ನು ನಿರ್ಬಂಧಿಸಿಲ್ಲ.

ವದಂತಿಗೆ ಕಡಿವಾಣ: ತಂತ್ರಜ್ಞಾನ ಆವಿಷ್ಕರಿಸಿದವರಿಗೆ ವಾಟ್ಸಾಪ್ ಬಹುಮಾನವದಂತಿಗೆ ಕಡಿವಾಣ: ತಂತ್ರಜ್ಞಾನ ಆವಿಷ್ಕರಿಸಿದವರಿಗೆ ವಾಟ್ಸಾಪ್ ಬಹುಮಾನ

ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಪತ್ತೆಹಚ್ಚಲು ಹಾಗೂ ಬಳಕೆದಾರರು ಅದನ್ನು ತೆರೆಯುವ ಮುನ್ನ ಎಚ್ಚರಿಕೆ ನೀಡಲು ಹೊಸ ಫೀಚರ್ ನೀಡುವ ಪ್ರಯತ್ನದಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ.

ಉಚಿತ ವೋಚರ್‌ಗಳು, ವಿಮಾನ ಟಿಕೆಟ್‌ಗಳು ಮುಂತಾದವುಗಳನ್ನು ನೀಡುವುದಾಗಿ ಸುಳ್ಳು ಲಿಂಕ್‌ಗಳನ್ನು ಹರಡುವ ಮಾಧ್ಯಮವಾಗಿಯೂ ವಾಟ್ಸಾಪ್ ಬಳಕೆಯಾಗುತ್ತಿದೆ.

ಎಲ್ಲ ಫಾರ್ವರ್ಡ್ ಸಂದೇಶಗಳಿಗೆ 'ಫಾರ್ವರ್ಡೆಡ್' ಎಂಬ ಗುರುತನ್ನು ನಮೂದಿಸುವ ಕಾರ್ಯವನ್ನು ವಾಟ್ಸಾಪ್ ಈಗಾಗಲೇ ಆರಂಭಿಸಿದೆ.

ಫೇಕ್ ಸುದ್ದಿ ತಡೆಗಟ್ಟಲು ವಾಟ್ಸಾಪ್ ನೀಡುತ್ತಿದೆ ಹೊಸ ಸೌಲಭ್ಯಫೇಕ್ ಸುದ್ದಿ ತಡೆಗಟ್ಟಲು ವಾಟ್ಸಾಪ್ ನೀಡುತ್ತಿದೆ ಹೊಸ ಸೌಲಭ್ಯ

ಇದರಿಂದ ತಮಗೆ ಬಂದ ಸಂದೇಶವು ರವಾನಿಸಿದಾತ ಸೃಷ್ಟಿಸಿದ್ದಲ್ಲ ಎನ್ನುವುದು ಸ್ವೀಕೃತಿದಾರರಿಗೆ ತಿಳಿಯುತ್ತದೆ. ಇದರಿಂದ ಜನರು ತಮಗೆ ಬಂದ ಸಂದೇಶವನ್ನು ಮತ್ತೆ ಫಾರ್ವರ್ಡ್ ಮಾಡುವ ಮುನ್ನ ಎಚ್ಚರಿಕೆ ವಹಿಸುವಂತೆ ಸೂಚನೆ ದೊರಕುತ್ತದೆ.

ಸುಳ್ಳು ಸುದ್ದಿಗಳನ್ನು ಹರಡಿಸುವುದನ್ನು ತಡೆಯಲು ಭಾರತೀಯ ಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಲು ಸಹ ವಾಟ್ಸಾಪ್ ಚಿಂತನೆ ನಡೆಸಿದೆ.

ಜಗತ್ತಿನ ಇನ್ಯಾವುದೇ ದೇಶಕ್ಕಿಂತಲೂ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ವಾಟ್ಸಾಪ್ ಮೂಲಕ ಸಂದೇಶಗಳು, ಫೋಟೊ ಹಾಗೂ ವಿಡಿಯೋಗಳು ಫಾರ್ವರ್ಡ್ ಆಗುತ್ತಿದೆ ಎಂದು ವಾಟ್ಸಾಪ್ ತನ್ನ ಬ್ಲಾಗ್‌ನಲ್ಲಿ ಹೇಳಿದೆ.

ಭಾರತವು ಕಂಪೆನಿಯ ಅತಿದೊಡ್ಡ ಮಾರುಕಟ್ಟೆಯಾಗಿದ್ದು, 250 ಮಿಲಿಯನ್ ಬಳಕೆದಾರರು ಇದ್ದಾರೆ. ಅಲ್ಲದೆ, ವಾಟ್ಸಾಪ್‌ನಲ್ಲಿ ರವಾನೆಯಾಗುವ ಸುಳ್ಳು ಸಂದೇಶಗಳು ಹಾಗೂ ವಿಡಿಯೋಗಳನ್ನು ನಂಬಿ ಜನರು ಹಿಂಸಾಚಾರ ನಡೆಸುವ ಮತ್ತು ಹೊಡೆದು ಕೊಲ್ಲುವಂತಹ ಅನೇಕ ಘಟನೆಗಳು ಭಾರತದಲ್ಲಿ ವರದಿಯಾಗಿವೆ.

English summary
WhatsApp will now enforce a farwarding limit to five on all messages in the platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X