ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಢಲಿಪಿ ಕಾಯ್ದೆಯಿಂದ ವಾಟ್ಸಪ್, ಟ್ವಿಟ್ಟರ್ ಗೆ ರಿಯಾಯಿತಿ

By Mahesh
|
Google Oneindia Kannada News

ನವದೆಹಲಿ, ಸೆ.22: ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆ ಆಧಾರದ ಮೇಲೆ ಹೊಸ ಗೂಢಲಿಪಿ ಕಾಯ್ದೆ (ನ್ಯಾಷನಲ್ ಎನ್ಕ್ರಿಪ್ಷನ್ ಪಾಲಿಸಿ) ಜಾರಿಗೆ ತರಲು ಮುಂದಾದ ಎನ್ ಡಿಎ ಸರ್ಕಾರಕ್ಕೆ ಆರಂಭಕ್ಕೆ ಹಿನ್ನಡೆಯಾಗಿದೆ. 90ದಿನಗಳ ಕಾಲ ಸಾಮಾಜಿಕ ಜಾಲ ತಾಣಗಳ ಮಾಹಿತಿ ಶೇಖರಣೆ ಹೇರಿಕೆಯನ್ನು ಹಿಂಪಡೆದುಕೊಂಡಿದೆ.

ಹೀಗಾಗಿ ವಾಟ್ಸಪ್, ಎಸ್ ಎಂಎಸ್, ಇ ಮೇಲ್, ಫೇಸ್ ಬುಕ್, ಟ್ವಿಟ್ಟರ್ ಸಂದೇಶಗಳನ್ನು 90 ದಿನಗಳವರೆಗೆ ಕಡ್ಡಾಯವಾಗಿ ಕಾಯ್ದಿಟ್ಟುಕೊಳ್ಳಬೇಕಾಗಿಲ್ಲ.

ಕೇಂದ್ರ ಸರ್ಕಾರವು ಸಂದೇಶಗಳನ್ನು ಕಾಯ್ದಿಟ್ಟುಕೊಂಡು ಭದ್ರತಾ ಸಂಸ್ಥೆಗೆ ಸಲ್ಲಿಸಲು ವಿಫಲರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಯೋಜನೆ ಹಾಕಿಕೊಂಡಿತ್ತು.ಈ ಕಾಯ್ದೆಯ ಪ್ರಕಾರ ಪ್ರತಿಯೊಬ್ಬರೂ ತಮ್ಮ ಗೂಢಲಿಪಿ ಕೀಲಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುವುದು ಕಡ್ಡಾಯ ಎಂದು ಹೇಳಲಾಗಿತ್ತು. ಅದರೆ, ಆದೇಶವನ್ನು ಬದಲಿಸಿದ ಸರ್ಕಾರ ಕೆಲ ಸಾಮಾಜಿಕ ಜಾಲ ತಾಣಗಳನ್ನು ಪಟ್ಟಿಯಿಂದ ಕೈ ಬಿಟ್ಟಿದೆ.

ಸಾಮಾನ್ಯವಾಗಿ ವಾಟ್ಸಪ್, ವೈಬರ್, ಲೈನ್, ಹೈಕ್, ಗೂಗಲ್ ಚಾಟ್, ಯಾಹೂ ಮೆಸೆಂಜರ್ ಮುಂತಾದ ಸೇವೆಗಳು ಗೂಢಲಿಪಿಯನ್ನು ಬಳಕೆ ಮಾಡುತ್ತಿದ್ದು, ಭದ್ರತಾ ಸಂಸ್ಥೆಗಳು ಅಳಿಸಲ್ಪಟ್ಟ ಈ ಸಂದೇಶಗಳನ್ನು ಮತ್ತೆ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಗೂಢಲಿಪಿ ಬಳಸುವ ಎಲ್ಲಾ ಸಂದೇಶಗಳನ್ನು 90 ದಿನ ಕಾಯ್ದಿಟ್ಟುಕೊಳ್ಳುವುದು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಕಾಯ್ದೆಯ ಕರಡು ಪ್ರತಿಯಲ್ಲಿ ತಿಳಿಸಲಾಗಿದೆ.

ನಿಯಮ ಜಾರಿಗೊಂಡರೆ ಏನಾಗಲಿದೆ?

ನಿಯಮ ಜಾರಿಗೊಂಡರೆ ಏನಾಗಲಿದೆ?

ವಾಟ್ಸಪ್ ಸೇರಿದಂತೆ ಅನೇಕ ಚಾಟ್ ತಂತ್ರಾಂಶಗಳಿಂದ ನೀವು ನಡೆಸುವ ಸಂದೇಶಗಳನ್ನು ಕಡ್ಡಾಯವಾಗಿ ಸೇವ್ ಮಾಡಬೇಕಾಗುತ್ತದೆ. ಪೊಲೀಸರು ಅಥವಾ ಯಾವುದೇ ತನಿಖಾಧಿಕಾರಿಗಳು ಒಂದು ವೇಳೆ ನಿಮ್ಮಲ್ಲಿಗೆ ಬಂದರೆ ನೀವು 90 ದಿನಗಳ ಅವಧಿಯ ಎಲ್ಲಾ ಮೆಸೇಜ್ ಗಳನ್ನು ತೋರಿಸಲೇಬೇಕಾಗುತ್ತದೆ.

ಭಾರತದ ಹೊರಗಿನಿಂದ ಗೂಢಲಿಪಿ ಬಳಕೆ ಮಾಡಿ ಕಾರ್ಯನಿರ್ವಹಿಸುತ್ತಿರುವ ಸಂದೇಶವಾಹಕ ಸಂಸ್ಥೆಗಳೂ ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಬಳಕೆದಾರರಿಗೆ ಸ್ಟೋರೇಜ್ ಸ್ಪೇಸ್ ಸಮಸ್ಯೆ

ಬಳಕೆದಾರರಿಗೆ ಸ್ಟೋರೇಜ್ ಸ್ಪೇಸ್ ಸಮಸ್ಯೆ

ಒಂದು ವೇಳೆ 90 ದಿನಗಳ ಕಾಲ ಎಲ್ಲಾ ಸಂದೇಶಗಳನ್ನು ಸೇವ್ ಮಾಡಬೇಕಾಗಿ ಬಂದರೆ ಬಹುತೇಕ ಬಳಕೆದಾರರಿಗೆ ಸ್ಟೋರೇಜ್ ಸ್ಪೇಸ್ ಸಮಸ್ಯೆ ಎದುರಾಗಬಹುದು. ಅಲ್ಲದೆ ನಿಮ್ಮ ಖಾಸಗಿ ಸಂದೇಶಗಳು, ನಿಮ್ಮ ಸಂಗಾತಿಗೆ ಕಳಿಸಿದ ಪ್ರೀತಿ ಪ್ರೇಮ ಭರಿತ ಸಂದೇಶಗಳು ಕೂಡಾ ಅಧಿಕಾರಿಗಳ ಮುಂದಿಡಬೇಕಾಗುತ್ತದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಾಸಗಿ ಬದುಕಿನ ಮೇಲೆ ಸರ್ಕಾರ ಬೇಹುಗಾರಿಕೆ ನಡೆಸಿದಂತೆ ಆಗುತ್ತದೆ.

ನಿಮ್ಮ ಅಭಿಪ್ರಾಯ ಸರ್ಕಾರಕ್ಕೆ ತಿಳಿಸಿ

ನಿಮ್ಮ ಅಭಿಪ್ರಾಯ ಸರ್ಕಾರಕ್ಕೆ ತಿಳಿಸಿ

ಈ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಕರಡು ಪ್ರತಿ ಬಗ್ಗೆ ನಾಗರಿಕರು, ಸಂಘಟನೆಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.

ಪ್ರಸ್ತಾವಿತ ನೀತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನೀವು ಅಕ್ಟೋಬರ್ 16ರವರೆಗೆ ದಾಖಲಿಸಬಹುದು. ನೀವು ನಿಮ್ಮ ಅಭಿಪ್ರಾಯ ತಿಳಿಸಬೇಕಾದ ಇ-ಮೇಲ್ ಐಡಿ: [email protected]

ಕರಡು ಪ್ರತಿ ಬಗ್ಗೆ ಹೆಚ್ಚಿನ ಮಾಹಿತಿ ಸರ್ಕಾರಿ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಆಸಕ್ತರು ಡೌನ್ ಲೋಡ್ ಮಾಡಿಕೊಳ್ಳಬಹುದು

ಈ ಕಾಯ್ದೆಯ ವ್ಯಾಪ್ತಿಗೆ ಎಲ್ಲರು ಒಳಪಡಬೇಕಾಗುತ್ತದೆ

ಈ ಕಾಯ್ದೆಯ ವ್ಯಾಪ್ತಿಗೆ ಎಲ್ಲರು ಒಳಪಡಬೇಕಾಗುತ್ತದೆ

* ಈ ಕಾಯ್ದೆಯ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ಇಲಾಖೆಗಳು(ಕೇಂದ್ರ, ರಾಜ್ಯ, ಗುಪ್ತಚರ ಇಲಾಖೆ, ಏಜೆನ್ಸಿಗಳು)
* ಸ್ಥಾನಿಕ ಸಂಸ್ಥೆಗಳು, ಕಾರ್ಯಕಾರಿ ಸಂಸ್ಥೆ, ವಾಣಿಜ್ಯ ಸಂಸ್ಥೆ, ಶೈಕ್ಷಣಿಕ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು
* ಪ್ರತಿಯೊಬ್ಬ ನಾಗರಿಕ ಮತ್ತು ಎಲ್ಲಾ ವಿಧದ ಅಧಿಕೃತ ಮತ್ತು ವೈಯಕ್ತಿಕ ಸಂವಹನಗಳು ಒಳಪಡಲಿವೆ.

ಶೇ 99.9ರಷ್ಟು ಜನಕ್ಕೆ ಪ್ಲೇನ್ ಟೆಕ್ಸ್ಟ್, ಮೆಸೇಜ್ ಶೇಖರಣೆ ಅಂದರೆ ಏನು ಗೊತ್ತ್ತಿಲ್ಲ, ಅಂಥವರ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ ಎಂದು ಸೇವ್ ದಿ ಇಂಟರ್ನೆಟ್ ಸಂಸ್ಥೆಯ ನಿಖಿಲ್ ಪಾಹ್ವಾ ಪ್ರತಿಕ್ರಿಯಿಸಿದ್ದಾರೆ.

ಕಾಯ್ದೆಯಿಂದ ನಿರ್ಬಂಧ ಇಲ್ಲ

ಕಾಯ್ದೆಯಿಂದ ನಿರ್ಬಂಧ ಇಲ್ಲ

*ವಾಟ್ಸಪ್, ವೈಬರ್, ಲೈನ್, ಹೈಕ್, ಗೂಗಲ್ ಚಾಟ್, ಯಾಹೂ ಮೆಸೆಂಜರ್ ಮುಂತಾದ ಸೇವೆಗಳು ಗೂಢಲಿಪಿಯನ್ನು ಬಳಕೆ ಮಾಡುತ್ತಿದೆ.
* ಇಂಟರ್ ನೆಟ್* ಬ್ಯಾಂಕಿಂಗ್, ಇ ಕಾಮರ್ಶ್, ಪಾಸ್ ವರ್ಡ್ ಆಧಾರಿತ ನೆಟ್ ಸೇವೆಗಳು, ಆರ್ ಬಿಐ ಮಾನ್ಯತೆ ಪಡೆದ ಪೇಮೆಂಟ್ ಗೇಟ್ ವೇಗಳಿಗೆ ಈ ಕಾಯ್ದೆಯಿಂದ ನಿರ್ಬಂಧ ಇಲ್ಲ.

* ಭಾರತದ ಹೊರಗಿನಿಂದ ಗೂಢಲಿಪಿ ಬಳಕೆ ಮಾಡಿ ಕಾರ್ಯನಿರ್ವಹಿಸುತ್ತಿರುವ ಸಂದೇಶವಾಹಕ ಸಂಸ್ಥೆಗಳು ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಮಾಡುವುದು ಕಷ್ಟಕರವಾಗಲಿದೆ.

English summary
Hours after announcing that users will have to store their Whatsapp, SMS and E-mail conversations for upto 90 days under the National Encryption Policy, the Government did a U-turn on Tuesday and has now exempted Whatsapp, Twitter, Facebook and others from the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X