• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಟ್ಸಪ್ ಗೀಳಿಗಾಗಿ ಮುರಿದುಬಿದ್ದ ಮದುವೆ: ಹೀಗೊಂದು ವಿಚಿತ್ರ ಘಟನೆ

By Nayana
|

ಉತ್ತರಪ್ರದೇಶ, ಸೆಪ್ಟೆಂಬರ್ 10: ಯಾರನ್ನೋ ಪ್ರೀತಿಸುತ್ತಿದ್ದಾರೆ ಎಂದು ಗೊತ್ತಾಗಿ ನಿಶ್ಚಿತಾರ್ಥ ಅಥವಾ ಮದುವೆ ಮುರಿದುಕೊಂಡಿರುವುದನ್ನು ನೋಡಿದ್ದೇವೆ, ವರದಕ್ಷಿಣ, ಯುವಕ-ಯುವತಿ ನಡುವೆ ಹೊಂದಾಣಿಕೆಯಾಗದೆಯೂ ಕೆಲವು ಮದುವೆ ಮುರಿದುಬಿದ್ದಿದೆ. ಆದರೆ ಯುವತಿ ವಾಟ್ಸಪ್ ನನ್ನು ಅತಿಯಾಗಿ ಬಳಕೆ ಮಾಡುತ್ತಾಳೆ ಎನ್ನುವ ಕಾರಣಕ್ಕೆ ಮದುವೆ ಮುರಿದುಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ವಾಟ್ಸಪ್ ಮೂಲಕ ವಿಚಾರಣೆ ನಡೆಸಿದ ಕೋರ್ಟ್‌ ಗೆ ಸುಪ್ರೀಂ ಚಾಟಿಏಟು?

ಮದುವೆ ಒಂದು ತಿಂಗಳೋ ಅಥವಾ ಒಂದು ವಾರವಿರುವಾಗಲೋ ನಡೆದ ಘಟನೆ ಇದಲ್ಲ ಬದಲಾಗಿ ಮದುವೆಯ ದಿನವೇ ಹೀಗೊಂದು ಘಟನೆ ನಡೆದಿದೆ, ಹೆಣ್ಣಿನ ಮನೆಯವರು ವರನಿಗಾಗಿ ಕಾದಿದ್ದಾರೆ, ವರ ಬಾರದಿದ್ದಾಗ ಆತನ ಮನೆಗೆ ಯುವತಿ ಸಹೋದರ ತೆರಳಿದ್ದಾರೆ ಅಲ್ಲಿ ವಾಟ್ಸಪ್ ನ್ನು ವಧು ಹೆಚ್ಚಾಗಿ ಬಳಸುವ ಕಾರಣ ಆಕೆಯನ್ನು ಮದುವೆಯಾಗಲು ಸಾಧ್ಯವಿಲ್ಲ ಮದುವೆಯಾಗುವುದಾದರೆ 68 ಲಕ್ಷ ರೂ. ವರದಕ್ಷಿಣೆ ನೀಡಬೇಕು ಎಂದು ತಿಳಿಸಿದ್ದಾರೆ.

ವಾಟ್ಸಾಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವುದು ಹೇಗೆ?

ಈ ಕುರಿತು ಅಮ್ರೋಹದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಾಟ್ಸಪ್ ಬಳಸುತ್ತಾಳೆ ಎನ್ನುವ ಕಾರಣಕ್ಕೆ ಮದುವೆ ನಿರಾಕರಿಸಿದ್ದಾನೆ ಅಷ್ಟೇ ಅಲ್ಲದೆ 68 ಲಕ್ಷ ವರದಕ್ಷಿಣ ಕೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಹಲವು ವಿಚ್ಛೇದನ ಪ್ರಕರಣಗಳಲ್ಲಿ ಇಂತಹ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡುವುದನ್ನು ನೋಡಿದ್ದೇವೆ, ಇದೇ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುವವರನ್ನು ಕೂಡ ನೋಡಿದ್ದೇವೆ, ಆದರೆ ಮದುವೆಯ ದಿನ ಈ ಕಾರಣವನ್ನಿಟ್ಟು ಮದುವೆ ಮುರಿದುಕೊಂಡ ಮೊದಲ ಪ್ರಕರಣ ಇದು ಎನ್ನಬಹುದು.

English summary
Alleging that bride has too much addicted with WhatsApp messenger, marriage engagement was canceled in Uttar Pradesh. Parents of bridegroom were alleged the bride was sent messages through her cousins relentlessly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X