ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಪೆದ್ದುತನ ಅನಾವರಣ : ಬಿಜೆಪಿ

By Mahesh
|
Google Oneindia Kannada News

ಬೆಂಗಳೂರು, ಜ.28: ಲೋಕಸಭೆ ಚುನಾವಣೆಗೂ ಮುನ್ನ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದಶಕದ ನಂತರ ಟಿವಿ ವಾಹಿನಿ ಮುಂದೆ ಕುಳಿತು ಮುಖಾಮುಖಿ ಮಾತನಾಡಿದ್ದಾರೆ. ಈ ಮೂಲಕ ಅವರ ಪೆದ್ದುತನ, ಇತಿಹಾಸದ ಬಗ್ಗೆ ಅವರಿಗಿರುವ ಅಜ್ಞಾನ ಅನಾವರಣಗೊಂಡಿದೆ. ರಾಹುಲ್ ಅವರನ್ನು ಸಂದರ್ಶಿಸಿದ ಟೈಮ್ಸ್ ನೌ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಅನಂತ ವಂದನೆಗಳು ಎಂದು ಪ್ರತಿಪಕ್ಷ ಬಿಜೆಪಿ ಪ್ರತಿಕ್ರಿಯೆ ನೀಡಿದೆ.

'ರಾಹುಲ್ ಗಾಂಧಿ ಮುಖದಲ್ಲಿ ಸೋಲಿನ ಭೀತಿ ಎದ್ದುಕಾಣುತ್ತಿತ್ತು' ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ನಿಲ್ಲಬಲ್ಲೆ ಎಂದು ಘೋಷಿಸುವ ಆತ್ಮವಿಶ್ವಾಸವಿಲ್ಲದ ರಾಹುಲ್ ನನ್ನು ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸದೆ ಇದ್ದದ್ದೇ ಒಳ್ಳೆದಾಯ್ತು ಎಂದು ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಸಂದರ್ಶನ ನನ್ನ ಜ್ಞಾನದ ಪರಿಮಿತಿಯನ್ನು ಪರೀಕ್ಷೆ ಮಾಡಿತು. ರಾಹುಲ್ ಅವರಿಗೆ ಇತಿಹಾಸದ ಪಾಠವಾಗಬೇಕುದೆ. ಸಂದರ್ಶನದಲ್ಲಿ ಅವರ ಅಜ್ಞಾನದ ಅನಾವರಣವಾಯಿತು ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ. ಈ ನಡುವೆ 1984 ಸಿಖ್ ದಂಗೆ ಹಾಗೂ ಗೋಧ್ರೋತ್ತರ ಹಿಂಸಾಚಾರದ ಬಗ್ಗೆ ರಾಹುಲ್ ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯ ಮುಖಂಡರ, ಗಣ್ಯಾತಿಗಣ್ಯರ ಪ್ರತಿಕ್ರಿಯೆಗಳತ್ತ ಒಂದು ನೋಟ ಇಲ್ಲಿದೆ..[ಅರ್ನಾಬ್-ರಾಹುಲ್ ಸಕತ್ ಕಾಮಿಡಿ ಶೋ ಗುರು]

ಕಪಿಲ್ ಸಿಬಲ್, ದಿಗ್ವಿಜಯ್, ಮನೀಶ್ ಮಾತಾಡಿರಿ

ಕಪಿಲ್ ಸಿಬಲ್, ದಿಗ್ವಿಜಯ್, ಮನೀಶ್ ಮಾತಾಡಿರಿ

ಕಪಿಲ್ ಸಿಬಲ್, ದಿಗ್ವಿಜಯ್, ಮನೀಶ್ ತಿವಾರಿ ನೀವು ಮಾತಾಡ್ತಾ ಇರಿ ಇದರಿಂದ ನಮಗೆ(ಬಿಜೆಪಿ) ಲಾಭ: ರವಿಶಂಕರ್ ಪ್ರಸಾದ್

ರಾಹುಲ್ ಗಾಂಧಿ ಹೇಳಿಕೆ ಸಮರ್ಥಿಸಿದ ದಿಗ್ವಿಜಯ್ ಸಿಂಗ್

ಕರಣ್ ಥಾಪರ್ ಸಂದರ್ಶನ ತೊರೆದ ನರೇಂದ್ರ ಮೋದಿಗಿಂತ ರಾಹುಲ್ ಗಾಂಧಿ ಬೆಸ್ಟ್

ಯಾರೇ ಕೂಗಾಡಲಿ, ಊರೇ ಹೊರಾಡಲಿ ರಾಹುಲ್ ಬೆಸ್ಟ್

ಯಾರೇ ಕೂಗಾಡಲಿ, ಊರೇ ಹೊರಾಡಲಿ ರಾಹುಲ್ ಬೆಸ್ಟ್ ಎಂದು ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ

ರಾಹುಲ್ ಸಂದರ್ಶನ ಬಗ್ಗೆ ಪ್ರೀತಿಶ್ ನಂದಿ

ಸಂದರ್ಶನದಲ್ಲಿ ಅರ್ನಾಬ್ ಪ್ರಶ್ನೆ ದಾಳಿಯ ನಡುವೆ ರಾಹುಲ್ ಅವರಿಂದ ಒಂದಷ್ಟು ವಿಷಯಗಳ ಬಗ್ಗೆ ಉತ್ತರ ಸಿಕ್ಕಿದ್ದಂತೂ ನಿಜ. ಇನ್ನಷ್ಟು ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿ...

ರಾಹುಲ್ ಸಂದರ್ಶನ ಬಗ್ಗೆ ಕಿರಣ್ ಬೇಡಿ

ವಿಶ್ವದ ಅತಿದೊಡ್ದ ಪ್ರಜಾಪ್ರಭುತ್ವ ಅನನುಭವಿಗಳ ಕೈಗೆ ಸಿಗದಂತೆ ತಡೆಗಟ್ಟುವುದು ನಿಮ್ಮ ಕೈಲಿದೆ ಎಂದು ಪರೋಕ್ಷವಾಗಿ ಚುಚ್ಚಿದ ಕಿರಣ್ ಬೇಡಿ

ರಾಹುಲ್ ಬಗ್ಗ್ಗೆ ತಸ್ಲೀಮಾ ಮೆಚ್ಚುಗೆ ಮಾತು

ರಾಹುಲ್ ಬಗ್ಗ್ಗೆ ತಸ್ಲೀಮಾ ಮೆಚ್ಚುಗೆ ಮಾತು

Rahul Gandhi is giving importance to bring youngsters into his party, and to women's empowerment. I appreciate his ideas.- ತಸ್ಲೀಮಾ ನಸ್ರೀನ್

ರಾಹುಲ್ ಸಂದರ್ಶನದ ಬಗ್ಗೆ ಆರ್ಟಿಐ ಬಗ್ಗೆ ಬಾಬಾ

ರಾಹುಲ್ ಸಂದರ್ಶನದ ಬಗ್ಗೆ ಆರ್ಟಿಐ ಬಗ್ಗೆ ಬಾಬಾ ರಾಮದೇವ್ ಟ್ವೀಟ್

English summary
A day after Congress Vice President Rahul Gandhi's much talked about television interview was aired, reactions from all across the country began to pour in, some backing him for his reactions, some mocking him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X