ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಗುಣಮುಖರಾದವರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಕೊರೊನಾ ಸೋಂಕಿನಿಂದ ಗುಣಮುಖರಾದವರು, ಮೂರ್ನಾಲ್ಕು ವಾರಗಳ ನಂತರ ಹಲವು ತೊಂದರೆಗಳೊಂದಿಗೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಒಮ್ಮೆ ಕೊರೊನಾ ಸೋಂಕಿನಿಂದ ಗುಣಮುಖರಾದವರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಯಾಕೆಂದರೆ ಕೊರೊನಾ ಸೋಂಕು ಕೇವಲ ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಹೃದಯ, ಮೆದುಳು ಸೇರಿದಂತೆ ದೇಹದ ಹಲವು ಭಾಗಗಳನ್ನು ಅದು ಆವರಿಸಿರುತ್ತದೆ

ನೂತನ ಆವಿಷ್ಕಾರ: ಕೊವಿಡ್ 19 ರೋಗವನ್ನು ತಡೆಯಲು ಅಯೋಡಿನ್ ದ್ರಾವಣ ನೂತನ ಆವಿಷ್ಕಾರ: ಕೊವಿಡ್ 19 ರೋಗವನ್ನು ತಡೆಯಲು ಅಯೋಡಿನ್ ದ್ರಾವಣ

ಹಿರನಂದನಿ ಆಸ್ಪತ್ರೆ ವೈದ್ಯ ಶಕೀಲ್ ಹೇಳುವ ಪ್ರಕಾರ, ಇಟಲಿಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದ ಶೇ.84.7ರಷ್ಟು ಮಂದಿಗೆ ಎರಡು ತಿಂಗಳ ನಂತರ ಆಯಾಸ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಚೇತರಿಕೆ ಬಳಿಕವೂ ಕಂಡುಬರುವ ಲಕ್ಷಣಗಳು

ಚೇತರಿಕೆ ಬಳಿಕವೂ ಕಂಡುಬರುವ ಲಕ್ಷಣಗಳು

ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಮತ್ತೆ ಉಸಿರಾಟದ ಸಮಸ್ಯೆ ಕಾಣಸಿಕೊಂಡಿತ್ತು. ಮತ್ತೆ ಹತ್ತು ದಿನಗಳ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಚೇತರಿಸಿಕೊಂಡ ರೋಗಿಗಳಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.

ಅತಿಯಾದ ರಕ್ತ ಹೆಪ್ಪುಗಟ್ಟುವಿಕೆ

ಅತಿಯಾದ ರಕ್ತ ಹೆಪ್ಪುಗಟ್ಟುವಿಕೆ

ರಕ್ತನಾಳಗಳಗಳನ್ನು ಸಂಧಿಸುವ ಎಂಡೋಥೆಲಿಯನ್ ಕೋಶಗಳ ಮೇಲೆ ವೈರಸ್ ದಾಳಿ ಮಾಡುತ್ತದೆ. ಇದು ದೇಹದಲ್ಲಿ ಅತಿಯಾದ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ.

ಪೋಸ್ಟ್ ಕೊವಿಡ್ ಸಿಂಡ್ರೋಮ್

ಪೋಸ್ಟ್ ಕೊವಿಡ್ ಸಿಂಡ್ರೋಮ್

ಈ ದೀರ್ಘ ಮತ್ತು ಅಲ್ಪಾವಧಿಯ ಪರಿಣಾಮಗಳನ್ನು ಪೋಸ್ಟ್ ಕೊವಿಡ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದರರ್ಥ ಕೊವಿಡ್‌19ನ ತೀವ್ರ ಹಂತ ಮುಗಿದ ನಂತರ ರೋಗಿಗಳಲ್ಲಿ ಆಲಸ್ಯ, ಎದೆನೋವು, ಗಂಟಲಲ್ಲಿ ತುರಿಕೆ ಇಂತಹ ಲಕ್ಷಣಗಳು ಕಂಡುಬರುತ್ತವೆ.

ರೋಗಿಗಳಿಗೆ ಮಾನಸಿಕ ಖಿನ್ನತೆ

ರೋಗಿಗಳಿಗೆ ಮಾನಸಿಕ ಖಿನ್ನತೆ

ನಾಲ್ಕರಿಂದ ಐದು ವಾರಗಳ ನಂತರವೂ, ರೋಗಿಗಳು ಸ್ವಲ್ಪ ಮಾನಸಿಕ ಒತ್ತಡವನ್ನು ಹೊಂದಿರುತ್ತಾರೆ. ಇದು ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಅಂತಹ ಪ್ರಕರಣಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಕೊರೊನಾದಿಂದ ಗುಣಮುಖರಾದವರು ಅನುಸರಿಸಬೇಕಾದ ಕ್ರಮ

ಕೊರೊನಾದಿಂದ ಗುಣಮುಖರಾದವರು ಅನುಸರಿಸಬೇಕಾದ ಕ್ರಮ

-ನಿತ್ಯ ಆಕ್ಸಿಜನ್ ಶುದ್ಧತೆ, ಕೋಣೆಯಲ್ಲಿ ಶೇ.94 ಇರುವಂತೆ ನೋಡಿಕೊಳ್ಳಬೇಕು
-ಉಸಿರಾಟದ ತೊಂದರೆ, ಗಂಟಲಿಗೆ ಸಂಬಂಧಿಸಿದ ತೊಂದರೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು.
- ನಿತ್ಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಬೇಕು
-ನಿತ್ಯ ರಕ್ತದಲ್ಲಿ ಸಕ್ಕರೆ ಅಂಶ ಎಷ್ಟಿದೆ ಪರೀಕ್ಷಿಸಿಕೊಳ್ಳಬೇಕು
-ಆಸ್ಪತ್ರೆಯಿಂದ ಬಿಡುಗಡೆಯಾಗಿ ಏಳು ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಬೇಕು.

Recommended Video

Pangong ಸರೋವರದಿಂದ ಹಿಂದೆ ಸರಿಯಲ್ಲ ಎಂದ China | Oneindia Kannada

English summary
It has been a while now since the COVID-19 pandemic, and people are slowly learning of many different ways to deal with it — both in terms of recovery and prevention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X