• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್‌ನ ಯಾವ ಹಂತ ಭಾರತಕ್ಕೆ ಎಷ್ಟು ಅಪಾಯಕಾರಿ?

|

ಬೆಂಗಳೂರು, ಮಾರ್ಚ್ 16: ಕೊರೊನಾ ವೈರಸ್ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಅಲ್ಲೋಲಕಲ್ಲೋಲ ಗೊಳಿಸಿದೆ.

   No need to panic about Corona says this MBBS student | Oneindia kannada

   ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಕೊರೊನಾ ಯಾವ ಹಂತದಲ್ಲಿದ್ದಾಗ ಸಾವು ಸಂಭವಿಸುತ್ತದೆ. ಮುಂಜಾಗ್ರತಾ ಕ್ರಮಗಳೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

   ಸದ್ಯ ಭಾರತದಲ್ಲಿ ಸೋಂಕು 2ನೇ ಹಂತದಲ್ಲಿದೆ. 3,4ನೇ ಹಂತ ಬಂದರೆ ಚೀನಾ, ಇಟಲಿ ರೀತಿಯಲ್ಲಿ ಸಹಸ್ರಾರು ಮಂದಿ ಸಾವನ್ನಪ್ಪುವ ಆತಂಕವಿದೆ.

   ವಿಶ್ವದಾದ್ಯಂತ ಬರೋಬ್ಬರಿ 6 ಸಾವಿರ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೊನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟಾಗಿದೆ. ಈಗಾಗಲೇ ಈ ವೈರಾಣು ಸೋಂಕಿಗೆ ಇಬ್ಬರು ಬಲಿಯಾಗಿದ್ದರೆ 100ಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗಿದ್ದಾರೆ.

   ದೇಶಾದ್ಯಂತ ಬಂದ್ ವಾತಾವರಣ ಕಂಡು ಬರುತ್ತಿದೆ. ಮನೆಯಿಂದ ಹೊರಬರಲು ಬಸ್, ರೈಲು, ವಿಮಾನ ಏರಲು ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಇನ್ನೂ ಎರಡನೇ ಹಂತದಲ್ಲಿದೆ ಇದನ್ನು ದಾಟಿಬಿಟ್ಟರೆ ಘೋರಾತಿಘೋರ ದುರಂತವಾಗಿಬಿಡುತ್ತದೆ.

   ಕೊರೊನಾದ ಯಾವ ಹಂತ ಎಷ್ಟು ಅಪಾಯಕಾರಿ

   ಕೊರೊನಾದ ಯಾವ ಹಂತ ಎಷ್ಟು ಅಪಾಯಕಾರಿ

   -ಕೊರೊನಾ ಬಾಧಿತ ದೇಶಗಳಿಂದ ನಮ್ಮ ದೇಶಕ್ಕೆ ಬಂದವರಲ್ಲಿ ಕೊರೊನಾ ಸೋಂಕು ಪತ್ತೆಯಾಗುವುದು.

   -ಬೇರೆ ದೇಶಗಳಿಂದ ಬಂದಿರುವವರ ಮೂಲಕ ಸ್ಥಳೀಯ ಜನರಿಗೆ ಕೊರೊನಾ ಸೋಂಕು ತಗುಲುವುದು.

   -ಒಂದು ಇಡೀ ಸಮುದಾಯಕ್ಕೇ ಕೊರೊನಾ ಅಂಟುವುದು, ಇದರಿಂದ ಹೆಚ್ಚು ಪ್ರದೇಶಗಳು ಬಾಧಿತವಾಗುವುದು.

   -ಸೋಂಕು ಸಾಂಕ್ರಾಮಿಕ ಪಿಡುಗು ಆಗುತ್ತದೆ. ಇದರ ಅಂತ್ಯ ತಿಳಿಯದು, ಈ ಸ್ಥಿತಿ ಇಟಲಿ ಮತ್ತು ಚೀನಾದಲ್ಲಿದೆ.

   ಬೇರೆಯವರಿಂದ ಸೋಂಕು ಹರಡದಿರಲು ಏನು ಮಾಡಬೇಕು

   ಬೇರೆಯವರಿಂದ ಸೋಂಕು ಹರಡದಿರಲು ಏನು ಮಾಡಬೇಕು

   -ಕೊರೊನಾ ಬಾಧಿತ ದೇಶಗಳಿಂದ ಬಂದವರನ್ನು 14 ದಿನ ಪ್ರತ್ಯೇಕ ವಾಸದಲ್ಲಿ ಇಟ್ಟು ತಪಾಸಣೆ ಮಾಡಬೇಕು.

   -ವ್ಯಕ್ತಿ ಕೊರೊನಾ ಪೀಡಿತ ಎಂದು ದೃಢಪಟ್ಟರೆ , ಆತನ/ಆಕೆಯ ಸಂಪರ್ಕಕ್ಕೆ ಬಂದವರನ್ನು ತಪಾಸಣೆ ಮಾಡಬೇಕು.

   -ಜನರು ಒಂದೇ ಸ್ಥಳದಲ್ಲಿ ಹೆಚ್ಚು ಗುಂಪುಗೂಡಬಹುದಾದ ಶಾಲೆ, ಸಿನಿಮಾ ಥಿಯೇಟರ್, ವ್ಯಾಪಾರ ಮಳಿಗೆ ಮುಚ್ಚಬೇಕು, ಮದುವೆ ಸಮಾರಂಭಗಳಿಗೆ ಅವಕಾಶ ಮಾಡಿಕೊಡಬಾರದು.

   -ಟೆಸ್ಟಿಂಗ್ ಸೌಲಭ್ಯ, ಪ್ರತ್ಯೇಕ ವಾರ್ಡ್ ಸೇರಿದಂತೆ ಚಿಕಿತ್ಸೆಗಾಗಿ ಮೂಲ ಸೌಕರ್ಯಗಳ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.

   ಕರ್ನಾಟಕದಲ್ಲಿ 7ನೇ ಕೊರೊನಾ ಪ್ರಕರಣ ಪತ್ತೆ

   ಕರ್ನಾಟಕದಲ್ಲಿ 7ನೇ ಕೊರೊನಾ ಪ್ರಕರಣ ಪತ್ತೆ

   ಕರ್ನಾಟಕದಲ್ಲಿ ಕೊರೊನಾ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಭಾನುವಾರ ಮತ್ತೊಬ್ಬ ಮಹಿಳೆಗೆ ಸೋಂಕು ದೃಢಪಟ್ಟಿದೆ. ಕಲಬುರಗಿಯಲ್ಲಿ ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟಿದ್ದ ವೃದ್ಧನ ಪುತ್ರಿಗೆ ಈ ಸೋಂಕು ಇರುವುದು ದೃಢಪಟ್ಟಿದೆ.

   ಅಮೆರಿಕದಲ್ಲಿ ವಾಲ್‌ಮಾರ್ಟ್ ಬಿಟ್ಟು ಇತರೆ ಮಾಲ್ ಬಂದ್

   ಅಮೆರಿಕದಲ್ಲಿ ವಾಲ್‌ಮಾರ್ಟ್ ಬಿಟ್ಟು ಇತರೆ ಮಾಲ್ ಬಂದ್

   ಅಮೆರಿಕದಲ್ಲೂ ಕೊರೊನಾ ಸೋಂಕು ಈವರೆಗೆ ಸುಮಾರು 3 ಸಾವಿರ ಮಂದಿಗೆ ತಗುಲಿ, 57 ಮಂದಿಯನ್ನು ಬಲಿಪಡೆದಿದೆ. ಈ ಹಿನ್ನೆಲೆಯಲ್ಲಿ ಚಿಲ್ಲರೆ ಕ್ಷೇತ್ರದ ದೈತ್ಯ ಕಂಪನಿಯಾಗಿರುವ ವಾಲ್‌ಮಾರ್ಟ್ ದಿನದ 24 ತಾಸು ಬದಲು ಬೆಳಗ್ಗೆ 6-11ರವರೆಗೆ ಕಾರ್ಯ ನಿರ್ವಹಿಸಲಿದೆ. ಇದನ್ನು ಹೊರತುಪಡಿಸಿ , ಆಫಲ್, ನೈಕ್ ಸೇರಿ ಹಲವು ಮಳಿಗೆಗಳು ಬಂದ್ ಆಗಲಿದೆ.

   English summary
   Death occurs during which stage of the corona. Here's information on what precautionary measures to be taken.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X