ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗವಕಾಶ: ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನದ ವಿವರ

|
Google Oneindia Kannada News

ನವದೆಹಲಿ, ಜೂನ್.22: ಕೊರೊನಾವೈರಸ್ ಹರಡುವಿಕೆ ಭೀತಿ ಹಿನ್ನೆಲೆ ಲಾಕ್ ಡೌನ್ ಆದ ನಗರಗಳಿಂದ ಲಕ್ಷಾಂತರ ಕಾರ್ಮಿಕರು ತಮ್ಮ ತಮ್ಮ ಗ್ರಾಮಗಳತ್ತ ವಲಸೆ ಹೋಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಸಂದಿಗ್ಘ ಸ್ಥಿತಿಯಲ್ಲಿ ಬದುಕು ಸಾಗಿಸುವದಕ್ಕೂ ಪರದಾಡುವಂತಾ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

Recommended Video

Solar Eclipse 2020: Impact of Solar Eclipse On Zodiac Signs | Oneindia Kannada

ಭಾರತದ ಪ್ರಸಿದ್ಧ ನಗರಗಳಿಂದ ಗ್ರಾಮಗಳಿಗೆ ವಲಸೆ ತೆರಳಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂನ್.20ರಂದು 125 ದಿನಗಳ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಮೋದಿಯಿಂದ ವಲಸೆ ಕಾರ್ಮಿಕರಿಗೆ 50,000 ಕೋಟಿ ರು. ಗಿಫ್ಟ್‌:ಗರೀಬ್ ಕಲ್ಯಾಣ ಅಭಿಯಾನಕ್ಕೆ ಚಾಲನೆಮೋದಿಯಿಂದ ವಲಸೆ ಕಾರ್ಮಿಕರಿಗೆ 50,000 ಕೋಟಿ ರು. ಗಿಫ್ಟ್‌:ಗರೀಬ್ ಕಲ್ಯಾಣ ಅಭಿಯಾನಕ್ಕೆ ಚಾಲನೆ

ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿನ ಕಾರ್ಮಿಕರನ್ನು ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. 116 ಜಿಲ್ಲೆಗಳ 25 ಸಾವಿರ ವಲಸೆ ಕಾರ್ಮಿಕರು ಈ ಅಭಿಯಾನದ ಉಪಯೋಗ ಪಡೆದುಕೊಳ್ಳಲಾಗಿದ್ದಾರೆ. ಮೂರರ ಒಂದು ಭಾಗದಷ್ಟು ವಲಸೆ ಕಾರ್ಮಿಕರನ್ನು ಈ ಅಭಿಯಾನದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ.

ದಿನಕ್ಕೆ ಕೂಲಿ ಕಾರ್ಮಿಕರಿಗೆ 202 ರೂಪಾಯಿ ವೇತನ

ದಿನಕ್ಕೆ ಕೂಲಿ ಕಾರ್ಮಿಕರಿಗೆ 202 ರೂಪಾಯಿ ವೇತನ

ಕೇಂದ್ರ ಸರ್ಕಾರದ ಈ ನೂತನ ಅಭಿಯಾನದಲ್ಲಿ 25 ರೀತಿಯ ಉದ್ಯೋಗವಕಾಶಗಳನ್ನು ಕಲ್ಪಿಸಿ ಕೊಡಲಾಗುತ್ತಿದ್ದು, ಇದಕ್ಕೆ 50,000 ಕೋಟಿ ರೂಪಾಯಿಯನ್ನು ಮೀಸಲು ಇರಿಸಲಾಗಿದೆ. ಮನರೇಗಾ ಕೂಲಿ ಕಾರ್ಮಿಕರಿಗೆ ದಿನಗೂಲಿ ಆಧಾರದಲ್ಲಿ ವೇತನವನ್ನು ನೀಡಲಾಗುತ್ತದೆ. ಪ್ರತಿನಿತ್ಯ ಕೂಲಿ ಕಾರ್ಮಿಕರಿಗೆ 202 ರೂಪಾಯಿ ವೇತನವನ್ನು ನಿಗದಿಗೊಳಿಸಲಾಗಿದೆ.

ಸರ್ಕಾರ ಸಿದ್ಧಪಡಿಸಿದ ಪಟ್ಟಿ ಅನ್ವಯ ಉದ್ಯೋಗ

ಸರ್ಕಾರ ಸಿದ್ಧಪಡಿಸಿದ ಪಟ್ಟಿ ಅನ್ವಯ ಉದ್ಯೋಗ

ಮನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಮಾಡುತ್ತಿದ್ದ ಕಾರ್ಮಿಕರ ಪಟ್ಟಿಯನ್ನು ಗ್ರಾಮಗಳಿಗೆ ವಾಪಸ್ ಕಳುಹಿಸಲಾಗಿದೆ. ಸರ್ಕಾರವು ಈ ಪಟ್ಟಿಯನ್ನು ಅನುಗುಣವಾಗಿಟ್ಟುಕೊಂಡು ಕಾರ್ಮಿಕರನ್ನು ಗುರುತಿಸಲಾಗುತ್ತದೆ. ಅದೇ ಪಟ್ಟಿ ಆಧಾರದ ಮೇಲೆ ಕೂಲಿ ಕಾರ್ಮಿಕರಿಗೆ ಸಾಮರ್ಥ್ಯದ ಆಧಾರದ ಮೇಲೆ ಉದ್ಯೋಗವನ್ನು ನೀಡಲಾಗುತ್ತದೆ. ನಗರ ಪ್ರದೇಶಗಳಿಂದ ಗ್ರಾಮಗಳಿಗೆ ವಲಸೆ ತೆರಳಿರುವ ಕೂಲಿ ಕಾರ್ಮಿಕರ ವಿವರವನ್ನು ಪಡೆದು ಅಭಿಯಾನದ ಫಲಾನುಭವವನ್ನು ತಲುಪಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ.

ಸ್ವಯಂಉದ್ಯೋಗ ಮತ್ತು ಕೂಲಿ ಕೆಲಸಕ್ಕೆ ಅಗತ್ಯ ನೆರವು

ಸ್ವಯಂಉದ್ಯೋಗ ಮತ್ತು ಕೂಲಿ ಕೆಲಸಕ್ಕೆ ಅಗತ್ಯ ನೆರವು

ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನದ ಅಡಿಯಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವುದು. ಕೌಶಲ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ಸ್ವಯಂ-ಉದ್ಯೋಗಕ್ಕೆ ಆರ್ಥಿಕ ನೆರವು ನೀಡುವುದಕ್ಕೆ ಸರ್ಕಾರವು ಮುಂದಾಗಿದೆ. ಈ ಅಭಿಯಾನದ ಅಡಿಯಲ್ಲಿ ರಸ್ತೆ ಕಾಮಗಾರಿ, ಗ್ರಾಮೀಣ ವಸತಿ ನಿರ್ಮಾಣ, ತೋಟಗಾರಿಕೆ, ನೀರಿನ ಸಂರಕ್ಷಣೆ ಮತ್ತು ನೀರಾವರಿ, ಅಂಗನವಾಡಿ, ಪಂಚಾಯತ್ ಭವನ, ಮತ್ತು ಜಲ ಜೀವನ್ ಮಿಷನ್ ಸೇರಿದಂತೆ 25 ವಲಯಗಳಲ್ಲಿ ಉದ್ಯೋಗವನ್ನು ನೀಡಲಾಗುತ್ತಿದೆ.

ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನದ ಉದ್ಯೋಗಗಳ

ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನದ ಉದ್ಯೋಗಗಳ

1. ಸಮುದಾಯ ನೈರ್ಮಲ್ಯ ಸಂಕೀರ್ಣ

2. ಗ್ರಾಮ ಪಂಚಾಯಿತಿ ಭವನ

3. ಹಣಕಾಸು ಆಯೋಗದ ನಿಧಿಯಡಿ ಮಾಡಬೇಕಾದ ಕೆಲಸ

4. ರಾಷ್ಟ್ರೀಯ ಹೆದ್ದಾರಿ ಕೆಲಸ

5. ಬಾವಿಗಳ ನಿರ್ಮಾಣ

6. ನಾಟಿ ಕೆಲಸ

7. ತೋಟಗಾರಿಕೆ ಕೆಲಸ

8. ಅಂಗನವಾಡಿ ಕೇಂದ್ರದ ಕೆಲಸ

9. ಪ್ರಧಾನ್ ಮಂತ್ರಿ ಗ್ರಾಮಿನ್ ಆವಾಸ್ ಯೋಜನೆ

10. ಗ್ರಾಮೀಣ ರಸ್ತೆ ಮತ್ತು ಗಡಿ ರಸ್ತೆ ಕಾಮಗಾರಿ

11. ಭಾರತೀಯ ರೈಲ್ವೆಯಡಿ ಕೆಲಸ ಮಾಡುತ್ತದೆ

12. ಶ್ಯಾಮಾ ಪ್ರಸಾದ್ ಮುಖರ್ಜಿ ಅರ್ಬನ್ ಮಿಷನ್

13. ಭಾರತ್ ನೆಟ್ ಅಡಿಯಲ್ಲಿ ಫೈಬರ್ ಆಪ್ಟಿಕಲ್ ಕೇಬಲಿಂಗ್ ಕೆಲಸ

14. ಪಿಎಂ ಕುಸುಮ್ ಯೋಜನೆ ಕೆಲಸ

15. ವಾಟರ್ ಲೈಫ್ ಮಿಷನ್ ಅಡಿಯಲ್ಲಿ ಕೆಲಸಗಳು

16. ಪ್ರಧಾನ್ ಮಂತ್ರಿ ಉರ್ಜಾ ಗಂಗಾ ಯೋಜನೆ

17. ಕೃಷಿ ವಿಜ್ಞಾನ ಕೇಂದ್ರದಡಿಯಲ್ಲಿ ಜೀವನೋಪಾಯ ತರಬೇತಿ

18. ಜಿಲ್ಲಾ ಖನಿಜ ನಿಧಿಯಡಿ ಕೆಲಸ ಮಾಡುತ್ತದೆ

19. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕೆಲಸ ಮಾಡುತ್ತದೆ

20. ಕೃಷಿ ಕೊಳ ಯೋಜನೆ ಕೆಲಸ

21. ಅನಿಮಲ್ ಶೆಡ್ ನಿರ್ಮಾಣ

22. ಕುರಿ / ಮೇಕೆಗಾಗಿ ಶೆಡ್ ನಿರ್ಮಾಣ

23. ಕೋಳಿ ಸಾಕಣೆಗಾಗಿ ಶೆಡ್ ನಿರ್ಮಾಣ

24. ಎರೆಹುಳು ಮಿಶ್ರಗೊಬ್ಬರ ಘಟಕ ತಯಾರಿಕೆ

25. ನೀರಿನ ಸಂರಕ್ಷಣೆ ಮತ್ತು ನೀರು ಕೊಯ್ಲು ಕೆಲಸ

English summary
What kind of employment and wages do you get under Garib Kalyan Rozgar Abhiyan?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X