• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರಣಾಂತಿಕ ಝಿಕಾ ವೈರಸ್: ಲಕ್ಷಣಗಳು ಮತ್ತು ಪರಿಹಾರ

|

ಜೈಪುರ, ಅಕ್ಟೋಬರ್ 13: ರಾಜಸ್ಥಾನದ ಜೈಪುರದಲ್ಲಿ 50 ಕ್ಕೂ ಹೆಚ್ಚು ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂಬ ಆತಂಕಕಾರಿ ಸುದ್ದಿಯನ್ನು ವರದಿಯೊಂದು ಹೊರಹಾಕಿದೆ.

ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾದಂಥ ಮಹಾಮಾರಿಯೊಂದಿಗೆ ಸೆಣೆಸಿದ ಜನರಿಗೆ ಈ ಝಿಕಾ ಎಂಬ ಹೊಸ ಹೆಸರಿನ ಕಾಯಿಲೆ ಭಯ ಹುಟ್ಟಿಸಿದೆ. ಸೊಳ್ಳೆ ಕಡಿತದಿಂದಲೇ ಬರುವ ಈ ಝಿಕಾ ವೈರಸ್ ಕಾಯಿಲೆ ಮಾರಣಾಂತಿಕವೂ ಹೌದು.

ಮತ್ತೆ ಸದ್ದು ಮಾಡುತ್ತಿದೆ ಡೆಂಗ್ಯೂ ಮಹಾಮಾರಿ, ಪರಿಹಾರ ಹೇಗೆ?

ಆದರೆ ಗಾಬರಿಪಡುವ ಅಗತ್ಯವಿಲ್ಲ. ಸರಿಯಾದ ಸಮಯದಲ್ಲಿ ರೋಗಪತ್ತೆ, ಚಿಕಿತ್ಸೆಯಿಂದ ರೋಗದಿಂದ ಬಚಾವಾಗಬಹುದು. ಅದೆಲ್ಲಕ್ಕಿಂತ ಸೋಂಕೇ ತಗುಲದಂತೆ ಮುನ್ನೆಚ್ಚರಿಕೆ ವಹಿಸುದರಿಂದ ಝಿಕಾ ವೈರಸ್ ನಿಂದ ಪಾರಾಗುವುದಕ್ಕೆ ಸಾಧ್ಯ.

ಏನಿದು ಝಿಕಾ ವೈರಸ್?

ಏನಿದು ಝಿಕಾ ವೈರಸ್?

ಝಿಕಾ ವೈರಸ್ ಎಂಬುದು ಸೊಳ್ಳೆಗಳಿಂದಲೇ ಹರಡುವ ಒಂದು ಕಾಯಿಲೆ. ಇದಕ್ಕೂ ಸಹ ಡೆಂಗ್ಯೂದಂತೆಯೇ ಎಡಿಸ್ ಎಂಬ ಜಾತಿಯ ಸೊಳ್ಳೆಯೇ ಕಾರಣ. ಎಡಿಸ್ ಸೂಳ್ಳೆಯಿಂದ ಹರಡುವ ಝಿಕಾ ವೈರಸ್ ಮನುಷ್ಯನ ದೇಹ ಸೇರಿ ರೋಗ ನಿರೋಧಕ ಶಕ್ತಿಯನ್ನೇ ನಾಶಮಾಡುತ್ತದೆ. ಸೊಳ್ಳೆಗಳು ರೋಗವನ್ನು ಸೃಷ್ಟಿಸುವುದಷ್ಟೇ ಅಲ್ಲ, ರೋಗ ವಾಹಕವಾಗಿಯೂ ಕೆಲಸ ನಿರ್ವಹಿಸುತ್ತವೆ. ಈ ವೈರಸ್ ಮೊದಲ ಬಾರಿಗೆ ಪತ್ತೆಯಾಗಿದ್ದು ಉಗಾಂಡಾದಲ್ಲಿ.

ರಾಜ್ಯದಲ್ಲಿ ಎಚ್‌1 ಎನ್‌1 ಭೀತಿ: ಆರೋಗ್ಯ ಇಲಾಖೆ ಕಟ್ಟೆಚ್ಚರ

ಲಕ್ಷಣಗಳೇನು?

ಲಕ್ಷಣಗಳೇನು?

ಝಿಕಾ ವೈರಸ್ ಗೆ ನಿರ್ದಿಷ್ಟವಾಗಿ ಇಂಥದೇ ಲಕ್ಷಣವೆಂದಿಲ್ಲ. ಸಾಮಾನ್ಯ ಜ್ವರದಂತೆ ಆರಂಭವಾಗುತ್ತದೆ. ಮೊದಲಿಗೆ ಕೊಂಚ ಜ್ವರ, ತಲೆನೋವು, ತುರಿಕೆ, ಕೀಲುನೋವು, ಮಾಂಸಖಂಡಗಳಲ್ಲಿ ನೋವು ಉಂಟಾಗುತ್ತದೆ. ಇದೇ ಉಲ್ಬಣಕ್ಕೆ ತೆರಳುತ್ತದೆ. ಇಂಥ ಲಕ್ಷಣಗಳು ಕಂಡುಬಂದಲ್ಲಿ, ಒಂದು ವಾರದೊಳಗೆ ಕಡಿಮೆಯಾಗದಿದ್ದಲ್ಲಿ ಒಮ್ಮೆ ವೈದ್ಯರನ್ನು ಕಂಡು ರಕ್ತಪರೀಕ್ಷೆಯ ಅಗತ್ಯವಿದ್ದರೆ ಮಾಡಿಸಬೇಕು.

ಕೇರಳದಂತೆ ರಾಜ್ಯದಲ್ಲಿ ಇಲಿಜ್ವರ ಭೀತಿ ಇಲ್ಲ : ಆರೋಗ್ಯ ಇಲಾಖೆ

ಅಪಾಯಗಳು

ಅಪಾಯಗಳು

ಝಿಕಾ ವೈರಸ್ ಅಪಾಯಕಾರಿ. ರೋಗ ಉಲ್ಬಣಿಸಿದರೆ ಮೆದುಳಿನ ಆರೋಗ್ಯವನ್ನೇ ಹಾಳುಗೆಡವಬಹುದು. ಕಣ್ನಿನ ಆರೋಗ್ಯಕ್ಕೂ ಕಂಟಕ. ರೋಗ ಗುಣಮುಖವಾದರೂ ಸಂಧಿನೋವುಗಳು ಶಾಸ್ವತವಾಗಿ ಉಳಿಯಬಹುದು. ಗರ್ಭಿಣಿಯರಿಗೆ ಈ ವೈರಸ್ ತಗುಲಿದರೆ ಗರ್ಭಪಾತವಾಗುವ ಸಂಭವವೂ ಇರುತ್ತದೆ. ಆದ್ದರಿಂದ ರೋಗ ಬರುವ ಮೊದಲೇ ಕಾಳಜಿ ವಹಿಸುವುದು ಅತ್ಯುತ್ತಮ ಪರಿಹಾರ.

ಪರಿಹಾರವೇನು?

ಪರಿಹಾರವೇನು?

ಸೊಳ್ಳೆಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ಇರಬೇಡಿ. ಮನೆಯಲ್ಲಿ ಸೊಳ್ಳೆಗಳ ಸಂತತಿ ಹೆಚ್ಚದಂತೆ ನೋಡಿಕೊಳ್ಳಿ. ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಿ. ಮನೆಮದ್ದಿನ ಕಷಾಯ ಅದರಲ್ಲೂ ಅಮೃತಬಳ್ಳಿ, ತುಳಸಿ ಕಷಾಯವನ್ನು ನುಯಮಿತವಾಗಿ ಕುಡಿಯುವುದರಿಂದ ರೋಗ ಬಾರದಂತೆ ಎಚ್ಚರಿಕೆ ವಹಿಸಬಹುದು. ಆದರೆ ಒಮ್ಮೆ ರೋಗ ಪತ್ತೆಯಾದರೆ ನಿರ್ಲಕ್ಷ್ಯಿಸದೆ ಚಿಕಿತ್ಸೆ ಪಡೆಯಿರಿ. ವೈದ್ಯರ ಔಷಧಿಯನ್ನು ಮೊದಲು ಪಡೆದು ನಂತರ ಮನೆಮದ್ದುಗಳ ಮೊರೆಹೋಗಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A total of 50 people have tested positive for Zika virus in Jaipur making it the biggest outbreak of the deadly disease in India so far. Here is a brief note about what is zika virus and symptoms and remedies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more