ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝಿಕಾ ವೈರಸ್ ಎಂದರೇನು? ಹೇಗೆ ಹರಡುತ್ತದೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 03: ಜಾಗತಿಕ ಮಟ್ಟದಲ್ಲಿ ಆತಂಕ, ಭಯ ಸೃಷ್ಟಿ ಮಾಡಿರುವ ಝಿಕಾ ವೈರಾಣು ಎಂದರೇನು? ಇದು ಹೇಗೆ ಹರಡುತ್ತದೆ? ಇದರ ಮೂಲ ಎಲ್ಲಿ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಅಮೆರಿಕವನ್ನು ನಡುಗಿಸುತ್ತಿರುವ ವೈರಸ್ ಭಾರತಕ್ಕೂ ಕಾಲಿಡಲಿದೆ ಎಂದು ಹೇಳಲಾಗುತ್ತಿದ್ದು ಕೇಂದ್ರ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.[ಎಚ್ಚರ.. ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು]

ಹುಟ್ಟಲಿರುವ ಮಗುವಿನ ಮೇಲೆಯೇ ಪರಿಣಾಮ ಬೀರಲಿರುವ ವೈರಸ್ ನ ಹತ್ತು-ಹಲವು ಕರಾಳ ಮುಖಗಳನ್ನು ತಿಳಿದುಕೊಳ್ಳಲೇಬೇಕು.. ಈ ಎಲ್ಲ ಅಂಶಗಳ ಮೇಲೆ ಒಂದು ನೋಟ ಇಲ್ಲಿದೆ..

ಝಿಕಾ ವೈರಸ್ ಎಂದರೇನು?

ಝಿಕಾ ವೈರಸ್ ಎಂದರೇನು?

ಸೊಳ್ಳೆಯಿಂದ ಹರಡುವ ವೈರಸ್ ಇದಾಗಿದ್ದು ಡೆಂಗ್ಯೂ ತರಹದ ರೋಗ ಲಕ್ಷಣಗಳನ್ನು ತರಬಹುದು. ಜಾಂಡಿಸ್ ಬಗೆಯ ಲಕ್ಷಣಗಳು ರೋಗಿಯಲ್ಲಿ ಗೋಚರವಾಗಬಹುದು. ಕೆಂಪು ಕೆಣ್ಣು, ಜ್ವರ, ಗಂಟು ನೋವು ಸಾಮಾನ್ಯ ಲಕ್ಷಣ, ಸಾವು ಸಂಭವಿಸುವುದು ವಿರಳ.

ಹೇಗೆ ಹರಡುತ್ತದೆ?

ಹೇಗೆ ಹರಡುತ್ತದೆ?

ಎಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಗರ್ಭಿಣಿಯರಿಗೆ ಸೋಂಕು ತಗುಲಿದರೆ ಮಗುವಿಗೂ ವರ್ಗಾವಣೆಯಾಗುತ್ತದೆ. ದೇಹದೊಳಗೆ ಪ್ರವೇಶ ಮಾಡಿದ ವೈರಸ್ ನ ಪರಿಣಾಮ ಏಳು ದಿನಗಳ ನಂತರ ಆರಂಭವಾಗುತ್ತದೆ.

 ಲೈಂಗಿಕ ಸಂಪರ್ಕದಿಂದ ಹರಡಬಹುದು

ಲೈಂಗಿಕ ಸಂಪರ್ಕದಿಂದ ಹರಡಬಹುದು

ಲೈಂಗಿಕ ಸಂಪರ್ಕದಿಂದಲೂ ಹರಡಬಹುದು ಎಂದು ಅಮೆರಿಕಾದ ಸಂಸ್ಥೆಯೊಂದು ತಿಳಿಸಿದೆ. ಎದೆಹಾಲು ಕುಡಿಸುವುದರಿಂದ ಹರಡಲ್ಲ ಆದರೆ ರಕ್ತ ಸೇರಿದರೆ ಹರಡುತ್ತದೆ.

ಝಿಕಾ ಎಲ್ಲೆಲ್ಲಿದೆ?

ಝಿಕಾ ಎಲ್ಲೆಲ್ಲಿದೆ?

ಸದ್ಯ 23 ದೇಶಗಳಲ್ಲಿ ಕಾಣಿಸಿಕೊಂಡಿದೆ. ಕೆರೆಬಿಯನ್, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೋದಲ್ಲಿ ಹಾವಳಿ ಜೋರಾಗಿದೆ. ಈಜಿಫ್ಟ್, ನೈಜಿರಿಯಾ, ಕೊಲಂಬಿಯಾ, ಮಲೇಷಿಯಾದಲ್ಲೂ ಇದ್ದು ಪಾಕಿಸ್ತಾನ, ಭಾರತ, ಥೈಲಾಂಡ್ ಭೀತಿ ಎದುರಿಸುತ್ತಿವೆ.

 ಝಿಕಾಕ್ಕೆ ಪರಿಹಾರವೇನು?

ಝಿಕಾಕ್ಕೆ ಪರಿಹಾರವೇನು?

ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿದ ನಂತರ ದೇಹದಲ್ಲಿ ವೈರಸ್ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಪತ್ತೆ ಮಾಡಿಕೊಳ್ಳಲಾಗುತ್ತದೆ. ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರ ಮೂಲಕ ನಿಧಾನವಾಗಿ ಹತೋಟಿಗೆ ತರಬಹುದು.

ಚಿಕಿತ್ಸಾಕ್ರಮ ಏನು?

ಚಿಕಿತ್ಸಾಕ್ರಮ ಏನು?

ಸದ್ಯ ಯಾವುದೇ ನಿರ್ದಿಷ್ಟ ಚಿಕಿತ್ಸಾ ಕ್ರಮವನ್ನು ಕಂಡುಹಿಡಿಯಲಾಗಿಲ್ಲ. ರೋಗಿಯ ಸ್ಥಿತಿಯ ಆಧಾರದ ಮೇಲೆ ಔಷಧಗಳನ್ನು ನೀಡಲಾಗುತ್ತಿದೆ.

ಔಷಧ ಇದೆಯೇ?

ಔಷಧ ಇದೆಯೇ?

ಔಷಧ ಕಂಡುಹಿಡಿಯಲು ಬಿಲಿಯನ್ ಗಟ್ಟಲೇ ಡಾಲರ್ ವೆಚ್ಚ ತಗುಲಬಹುದು. ಇನೊವಿಯೋ, ಹುವೈ ಬಯೋಟೆಕ್, ಜಿಎಸ್ ಕೆ ಯಂಥ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ.

English summary
Zika virus is a mosquito-transmitted infection related to dengue, yellow fever and West Nile virus. Symptoms are mild and include fever, rash, joint pain and conjunctivitis (red eyes). A rare case of the Zika virus being transmitted through sex, not a mosquito bite, has been reported in the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X