ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಹುಲ್ ಗಾಂಧಿ ಗೋತ್ರ ಯಾವುದು? ಅವರು ತೊಡುವ ಜನಿವಾರ ಯಾವುದು?'

|
Google Oneindia Kannada News

ಇಂದೋರ್, ಅಕ್ಟೋಬರ್ 29: "ರಾಹುಲ್ ಗಾಂಧಿ ಅವರು ಜನಿವಾರ ಧರಿಸುವುದಾದರೆ, ಅವರು ಯಾವರೀತಿಯ ಜನಿವಾರ(ಯಜ್ಞೋಪವಿತ) ಧರಿಸುತ್ತಾರೆ? ಅವರ ಗೋತ್ರ ಯಾವುದು?" ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ ರಾಹುಲ್ ಗಾಂಧಿ ಅವರನ್ನು ಪಾತ್ರ ಅಣಕಿಸಿದರು.

ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ

ಚುನಾವಣೆಯ ಸಮಯದಲ್ಲಿ ಮಾತ್ರವೇ ರಾಹುಲ್ ಗಾಂಧಿ ಅವರ ಟೆಂಪಲ್ ರನ್ ಆರಂಭವಾಗುತ್ತದೆ. ಆದ್ದರಿಂದ ಅವರ ಗೋತ್ರ ಯಾವುದು ಮತ್ತು ಯಾವ ರೀತಿಯ ಜನಿವಾರ ಧರಿಸುತ್ತಾರೆ ಎಂಬುದನ್ನು ತಿಳಿಯಬೇಕಿದೆ ಎಂದು ಅವರು ಅಣಕವಾಡಿದ್ದಾರೆ.

ಯಾವ ಗೋತ್ರದವರು ರಾಹುಲ್?

ಯಾವ ಗೋತ್ರದವರು ರಾಹುಲ್?

ಜನಿವಾರ ಎಂಬುದು ಪವಿತ್ರ ದಾರ. ಅದನ್ನು ಆಸ್ತಿಕ, ಭಕ್ತ ಹಿಂದು ಧರಿಸುತ್ತಾನೆ. ಗೋತ್ರ ಎಂದರೆ ಯಾವ ಋಷಿ ಪರಂಪರೆಯ ಮೂಲದಿಂದ ಬಂದವರು ಎಂಬುದನ್ನು ತಿಳಿದುಕೊಳ್ಳುವುದಕ್ಕಿರುವ ಸಂಗತಿ. ಆದ್ದರಿಂದ ರಾಹುಲ್ ಗಾಂಧಿ ಅವರು ಯಾವ ಗೋತ್ರದವರು ಎಂಬುದನ್ನು ಹೇಳಲಿ, ಅವರು ಯಾವ ರೀತಿಯ ಜನಿವಾರ ಧರಿಸುತ್ತಾರೆ ಎಂಬುದನ್ನೂ ತಿಳಿಸಲಿ ಎಂದು ಪಾತ್ರ ಆಗ್ರಹಿಸಿದರು.

ಪ್ರಧಾನಿಯನ್ನು ಚೇಳಿಗೆ ಹೋಲಿಸಿದ್ದ ಕಾಂಗ್ರೆಸ್!

ಪ್ರಧಾನಿಯನ್ನು ಚೇಳಿಗೆ ಹೋಲಿಸಿದ್ದ ಕಾಂಗ್ರೆಸ್!

ಪ್ರಧಾನಿ ನರೇಂದ್ರ ಮೋದಿಯವರು ಶಿವಲಿಂಗದ ಮೇಲಿರುವ ಚೇಳಿನ ಹಾಗೆ. ಅದನ್ನು ಬರೀ ಕೈಯಲ್ಲಿ ಮುಟ್ಟುವುದೂ ಅಪಾಯ, ಚಪ್ಪಲಿಯಿಂದ ಹೊಡೆದು ಹಾಕುವುದಕ್ಕೂ ಸಾಧ್ಯವಿಲ್ಲ! ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ನೀಡಿದ ಹೇಳಿಕೆ ಸಾಕಷ್ಟ ವಿವಾದ ಸೃಷ್ಟಿಸಿತ್ತು. ಕಾಂಗ್ರೆಸ್ ನ ಈ ಹೇಳಿಕೆಯ ನಂತರ ಒಂದೇ ದಿನದಲ್ಲಿ ಬಿಜೆಪಿ ರಾಹುಲ್ ಗಾಂಧಿಯವರ ಗೋತ್ರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದೆ!

ರಾಹುಲ್ ಮಧ್ಯಸ್ಥಿಕೆ ನಂತರವೂ ಬಗೆಹರಿದಿಲ್ಲ ಟಿಕೆಟ್ ಹಂಚಿಕೆ ಬಿಕ್ಕಟ್ಟು!ರಾಹುಲ್ ಮಧ್ಯಸ್ಥಿಕೆ ನಂತರವೂ ಬಗೆಹರಿದಿಲ್ಲ ಟಿಕೆಟ್ ಹಂಚಿಕೆ ಬಿಕ್ಕಟ್ಟು!

ಶಶಿ ತರೂರ್ ಉಚ್ಚಾಟನೆಗೆ ಆಗ್ರಹ

ಶಶಿ ತರೂರ್ ಉಚ್ಚಾಟನೆಗೆ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದಲ್ಲದೆ, ಶಿವಲಿಂಗಕ್ಕೂ ಅವಮಾನ ಮಾಡಿದ ಶಶಿ ತರೂರ್ ಅವರನ್ನು ಪಕ್ಷದಿಂದ ಕಿತ್ತೆಸೆಯುವಂತೆಯೂ ಸಂಬಿತ್ ಪಾತ್ರ ಒತ್ತಾಯಿಸಿದರು. ಆರೆಸ್ಸೆಸ್ ನ ಕೆಲ ಮುಖಂಡರಿಗೇ ಪ್ರಧಾನಿ ಮೋದಿಯವರ ನಡೆ ಇಷ್ಟವಾಗುತ್ತಿಲ್ಲ, ಅವರನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದ ಶಶಿ ತರೂರ್, ನಂತರ ಮೋದಿ ಅವರನ್ನು ಚೇಳಿಗೆ ಹೋಲಿಸಿದ್ದರು.

ಚುನಾವಣೆ ನೆಲದಲ್ಲಿ ಕೆಸರೆರಚಾಟ ಜೋರು!

ಚುನಾವಣೆ ನೆಲದಲ್ಲಿ ಕೆಸರೆರಚಾಟ ಜೋರು!

ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು ವಿಧಾನಸಭಾ ಕ್ಷೇತ್ರಗಳು 230. ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 116. ಚುನಾವಣೆಯ ಹಿನ್ನೆಲೆಯಲ್ಲಿ ಪರಸ್ಪರ ರಾಜಕೀಯ ಪಕ್ಷಗಳು ಕೆಸರೆರಚಾಟ ಆರಂಭಿಸಿವೆ.

ಟಿಕೆಟ್ ಹಂಚಿಕೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ ಟಿಕೆಟ್ ಹಂಚಿಕೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ

English summary
The Bharatiya Janata Party(BJP) on Monday launched a scathing attack on Congress president Rahul Gandhi, asking him about his 'Gotra'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X