ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರಗಳ ರೂವಾರಿ: ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ಹಿಂದಿನ ಕಾರಣವೇನು!?

|
Google Oneindia Kannada News

ನವದೆಹಲಿ, ಮೇ 20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ಹಿಂದಿನ ಕಾರಣದ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ICMR) ಅಧ್ಯಯನ ನಡೆಸಿದೆ. ವಿದೇಶದಿಂದ ವಲಸೆ ಬಂದವರು, ವಲಸೆ ಕಾರ್ಮಿಕರು ಹಾಗೂ ಧಾರ್ಮಿಕ ಸಮಾರಂಭಗಳಿಂದ ಎರಡನೇ ಅಲೆ ವ್ಯಾಪಕವಾಗಿ ಹರಡಿದೆ ಎಂದು ಐಸಿಎಂಆರ್ ತಿಳಿಸಿದೆ.

ದೇಶದಲ್ಲಿ ವಲಸೆ ಕಾರ್ಮಿಕರು ಮತ್ತು ಧಾರ್ಮಿಕ ಆಚರಣೆಗಳ ಕೂಟದಿಂದ ರೂಪಾಂತರ ವೈರಸ್ ಹರಡುವಿಕೆ ಹೆಚ್ಚಾಗಲು ಕಾರಣವಾಗಿದೆ. ಆರಂಭಿಕ ಹಂತದಲ್ಲಿ ಅಮ್ಯುನೋ ಆಸಿಡ್ ರೂಪಾಂತರವನ್ನು ಸ್ವತಂತ್ರವಾಗಿ ಗುರುತಿಸಲಾಗುತ್ತಿದ್ದು, ರೂಪಾಂತರ ತಳಿಗಳ ಪರಿವರ್ತನೆ ಮತ್ತು ಹರಡುವಿರಕೆಯನ್ನು ಹೆಚ್ಚಿಸಿದೆ ಎಂದು ಅಧ್ಯಯನ ತಿಳಿಸಿದೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು 3 ತಿಂಗಳ ಬಳಿಕ ಲಸಿಕೆ: ಕೇಂದ್ರಕೊರೊನಾ ಸೋಂಕಿನಿಂದ ಚೇತರಿಸಿಕೊಂಡು 3 ತಿಂಗಳ ಬಳಿಕ ಲಸಿಕೆ: ಕೇಂದ್ರ

ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ B.1.1.7 ಸೇರಿ ಮೂರು ರೂಪಾಂತರ ತಳಿಗಳು ವರದಿಯಾಗಿದೆ. ಭಾರತದಲ್ಲಿ B.1.351 ರೂಪಾಂತರ ತಳಿಯು ವರದಿಯಾಗಿದೆ. ಈ ರೂಪಾಂತರ ವೈರಸ್ ಹೆಚ್ಚು ಪ್ರಸರಣ ಸಾಮರ್ಥ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ರೀತಿಯಲ್ಲಿ ಕೆಲಸ ಮಾಡುತ್ತವೆ. ವಿಶೇಷವಾಗಿ ದೇಶದಲ್ಲಿ ಮೊದಲು ಕಾಣಿಸಿಕೊಂಡ B.1.351 ರೂಪಾಂತರ ತಳಿಯು ಹೆಚ್ಚು ಅಪಾಯಕಾರಿ ಎಂದು ಐಸಿಎಂಆರ್ ತಿಳಿಸಿದೆ.

ಕೊವಿಡ್-19 ಸೋಂಕಿನ ಅಪಾಯ

ಕೊವಿಡ್-19 ಸೋಂಕಿನ ಅಪಾಯ

ಭಾರತದ ಮಟ್ಟಿಗೆ ಹೆಚ್ಚು ಅಪಾಯಕಾರಿ ಎಂದು ಎನಿಸಿಕೊಂಡಿರುವ ಮತ್ತೊಂದು ಕೊರೊನಾವೈರಸ್ ರೂಪಾಂತರ ತಳಿಯೇ B.1.617. ಸಾರ್ಸ್-ಕೊವಿಡ್-2 ಅನುಕ್ರಮದಲ್ಲಿ E484Q ಮತ್ತು L452R ರೂಪಾಂತರ ಹೆಚ್ಚು ಪರಿಣಾಮಕಾರಿಯಾಗಿದ್ದು, ಇದನ್ನು ದ್ವಿಗುಣ ರೂಪಾಂತರ ಎಂದೂ ಸಹ ಕರೆಯಲಾಗುತ್ತದೆ. ಈ ರೂಪಾಂತರ ವೈರಸ್ ಅತಿಹೆಚ್ಚು ಹರಡುವಿಕೆ ವೇಗವನ್ನು ಹೊಂದಿದೆ.

ರಾಜ್ಯದಲ್ಲಿ ಕೊರೊನಾವೈರಸ್ ಹರಡಲು ಕಾರಣ

ರಾಜ್ಯದಲ್ಲಿ ಕೊರೊನಾವೈರಸ್ ಹರಡಲು ಕಾರಣ

ಸಾರ್ಸ್-ಕೊವಿಡ್-2 ಅನುಕ್ರಮದಲ್ಲಿ ವಿಶ್ಲೇಷಣೆ ಮಾಡಿದಾಗ ಕಳೆದ 2020ರ ಜನವರಿಯಿಂದ ಆಗಸ್ಟ್ ವರೆಗೂ ಪತ್ತೆಯಾದ ಕೊರೊನಾವೈರಸ್ E484Q ರೂಪಾಂತರವು ಹೆಚ್ಚು ಪ್ರೋಟಿನ್ ಹೆಚ್ಚಿಸಿರುವುದು ಗೊತ್ತಾಗುತ್ತದೆ. 2020ರ ಮಾರ್ಚ್ ಮತ್ತು ಜುಲೈ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ಇದೇ ಮಾದರಿಯ ರೂಪಾಂತರ ವೈರಸ್ ಅತಿಹೆಚ್ಚು ಸೋಂಕು ಹರಡುವುದಕ್ಕೆ ಕಾರಣವಾಯಿತು. 2020ರ ಮೇ ತಿಂಗಳಿನಲ್ಲಿ ಅಸ್ಸಾಂ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುವುದಕ್ಕೆ N440K ಎಂಬ ರೂಪಾಂತರ ವೈರಸ್ ಕಾರಣ ಎಂದು ಅಧ್ಯಯನ ತಿಳಿಸಿದೆ.

ಹೋಮ್ ಟೆಸ್ಟಿಂಗ್ ಬಗ್ಗೆ ಸಲಹೆ ನೀಡಿದ ಐಸಿಎಂಆರ್

ಹೋಮ್ ಟೆಸ್ಟಿಂಗ್ ಬಗ್ಗೆ ಸಲಹೆ ನೀಡಿದ ಐಸಿಎಂಆರ್

ಕೊರೊನಾವೈರಸ್ ಸೋಂಕು ದೃಢಪಟ್ಟಿರುವ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ನಡೆಸುವುದು ಸೂಕ್ತ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ. ಮನೆಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ವಿವೇಚನೆಯಿಲ್ಲದ ಪರೀಕ್ಷೆ ಸೂಕ್ತವಲ್ಲ ಮತ್ತು ಬಳಕೆದಾರರ ಕೈಪಿಡಿಯಲ್ಲಿ ತಯಾರಕರು ವಿವರಿಸಿದ ಕಾರ್ಯವಿಧಾನದ ಪ್ರಕಾರ ಪರೀಕ್ಷೆ ನಡೆಸಬೇಕು ಎಂದು ಐಸಿಎಂಆರ್ ತಿಳಿಸಿದೆ.

ದೇಶದಲ್ಲಿ ಕೊವಿಡ್-19 ಸೋಂಕಿತರ ತಪಾಸಣೆ

ದೇಶದಲ್ಲಿ ಕೊವಿಡ್-19 ಸೋಂಕಿತರ ತಪಾಸಣೆ

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 20,55,010 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 32,23,56,187 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

Recommended Video

India - China ಬಾರ್ಡರ್‌ನಲ್ಲಿ ಮತ್ತೆ ಸದ್ದು | Oneindia Kannada
ದೇಶದಲ್ಲಿ ಕೊವಿಡ್-19 ಸೋಂಕಿತರ ಅಂಕಿ-ಸಂಖ್ಯೆ

ದೇಶದಲ್ಲಿ ಕೊವಿಡ್-19 ಸೋಂಕಿತರ ಅಂಕಿ-ಸಂಖ್ಯೆ

ಕಳೆದ 24 ಗಂಟೆಗಳಲ್ಲಿ 2,76,070 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,69,077 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದಲ್ಲಿ ಮಹಾಮಾರಿಗೆ 3,874 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಒಟ್ಟು 2,57,72,400 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,23,55,440 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 2,87,122 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 31,29,878 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

English summary
What Is The Reason Behind Spread Mutant Of Coronavirus Second Wave: ICMR Study Report Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X