ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ತಿ ಬಂಧನ : ಏನಿದು ಐಎನ್ಎಕ್ಸ್ ಮೀಡಿಯಾ ಹಗರಣ?

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಐ ಎನ್ ಎಕ್ಸ್ ಮೀಡಿಯಾ ಹಗರಣ : ಕಾರ್ತಿ ಚಿದಂಬರಂರನ್ನ ಅರೆಸ್ಟ್ ಮಾಡಿದ ಸಿಬಿಐ | Oneindia Kannada

ಚೆನ್ನೈ, ಫೆಬ್ರವರಿ 28 : ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಲಂಚ ತಿಂದ ಆರೋಪ ಹೊತ್ತಿರುವ ಕಾರ್ತಿ ಚಿದಂಬರಂ ಅವರನ್ನು ಬಂಧಿಸುವ ಮೂಲಕ ಕೇಂದ್ರ ಸರಕಾರ ಭರ್ಜರಿ ಹೊಡೆತ ನೀಡಿದೆ. ಕಾರ್ತಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಲಾಗಿದೆ.

ಸಿಬಿಐ ಕೈಗೊಂಡಿದ್ದ ತನಿಖೆಗೆ ಕಾರ್ತಿ ಚಿದಂಬರಂ ಅವರು ಸಹಕರಿಸಲಿಲ್ಲ ಎಂಬ ಕಾರಣದ ಮೇಲೆ ಅವರನ್ನು ಬಂಧಿಸಲಾಗಿದೆ. ಕಾರ್ತಿ ಚಿದಂಬರಂ ಅವರ ಸಿಎ ಎಸ್ ಭಾಸ್ಕರರಾಮನ್ ಅವರನ್ನು ಬಂಧಿಸಲಾಗಿದ್ದು ಅವರನ್ನು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐಎನ್ ಎಕ್ಸ್ ಮೀಡಿಯಾ ಪ್ರಕರಣ: ಕಾರ್ತಿ ಚಿದಂಬರಂ ಸಿಬಿಐ ವಶಕ್ಕೆಐಎನ್ ಎಕ್ಸ್ ಮೀಡಿಯಾ ಪ್ರಕರಣ: ಕಾರ್ತಿ ಚಿದಂಬರಂ ಸಿಬಿಐ ವಶಕ್ಕೆ

ಈ ಮೊದಲು, ಕಾರ್ತಿ ಚಿದಂಬರಂ, ಪೀಟರ್ ಮತ್ತು ಇಂದ್ರಾಣಿ ಮುಖರ್ಜಿಯಾ ಅವರ ವಿರುದ್ಧ ಕ್ರಿಮಿನಲ್ ಷಡ್ಯಂತ್ರ, ಮೋಸ, ಅನೈತಿಕವಾಗಿ ಹಣ ಪಡೆದ, ಕ್ರಿಮಿನಲ್ ದುರ್ವರ್ತನೆ ಮತ್ತು ಪಬ್ಲಿಕ್ ಸರ್ವಂಟ್ ಮೇಲೆ ಪ್ರಭಾವ ಬೀರಿದ ಆರೋಪಗಳ ಮೇಲೆ ಸಿಬಿಐ ಎಫ್ಐಆರ್ ದಾಖಲಿಸಿತ್ತು.

ಐಎನ್ಎಕ್ಸ್ ಮೀಡಿಯಾ ಮಾಲಿಕರಾದಿ ಪೀಟರ್ ಮತ್ತು ಇಂದ್ರಾಣಿಯವರಿಂದ 10 ಲಕ್ಷ ರುಪಾಯಿ ಲಂಚ ಪಡೆದ ಆರೋಪ ಕೂಡ ಕಾರ್ತಿ ಮೇಲಿದೆ. ಕೋಟ್ಯಂತರ ರುಪಾಯಿ ತೆರಿಗೆ ವಂಚನೆ ಮಾಡಿದ ಪ್ರಕರಣದಿಂದ ತಮ್ಮ ಪ್ರಭಾವ ಬಳಸಿ ಪಾರು ಮಾಡಲು ಪೀಟರ್ ಮತ್ತು ಇಂದ್ರಾಣಿ ಅವರು ಕಾರ್ತಿ ಅವರನ್ನು ಬಳಸಿಕೊಂಡಿದ್ದರು ಎಂಬ ಆರೋಪವೂ ಇದೆ.

ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ

ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ

2007ರಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (Foreign Investment Promotion Board)ಯಿಂದ 4.62 ಕೋಟಿ ರುಪಾಯಿ ಹೂಡಿಕೆ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ ಮಾರಿಷಸ್ ನ ಎರಡು ಕಂಪನಿಗಳಿಂದ ಪೀಟರ್ ಮತ್ತು ಇಂದ್ರಾಣಿ ಒಡೆತನದ ಕಂಪನಿ ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ ರುಪಾಯಿಗಳು.

10 ಲಕ್ಷ ರುಪಾಯಿ ಕಮಿಷನ್ ಗುಳಂ ಮಾಡಿದ್ದ ಕಾರ್ತಿ

10 ಲಕ್ಷ ರುಪಾಯಿ ಕಮಿಷನ್ ಗುಳಂ ಮಾಡಿದ್ದ ಕಾರ್ತಿ

ಇದರ ವಿರುದ್ಧ ಕಂದಾಯ ಇಲಾಖೆ ವಿಚಾರಣೆಗೆ ಆದೇಶಿಸಿತ್ತು. ಈ ವಿಚಾರಣೆಯನ್ನು ತಪ್ಪಿಸಲು ಕಾರ್ತಿ ಅವರು ತಮ್ಮ ಕಂಪನಿಯ ಮೂಲಕ ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ 10 ಲಕ್ಷ ರುಪಾಯಿ ಕಮಿಷನ್ ಪಡೆದಿದ್ದರು. ಕಳೆದ ಜೂನ್ ನಲ್ಲಿ ಕಾರ್ತಿ ಅವರನ್ನು ವಿಚಾರಣೆಗೆ ಸಿಬಿಐ ಕರೆದಿತ್ತು. ಹಲವಾರು ಸಮನ್ಸ್ ನೀಡಿದ್ದರು ವಿಚಾರಣೆಗೆ ಕಾರ್ತಿ ಅವರು ಬರಲು ವಿಫಲರಾಗಿದ್ದರು. ಈ ಕಾರಣಕ್ಕಾಗಿ ಕಾರ್ತಿ ಅವರನ್ನು ಬಂಧಿಸಲಾಗಿದೆ.

ಹಲವಾರು ಕಂಪನಿ ಆರಂಭಿಸಿದ್ದ ಪೀಟರ್

ಹಲವಾರು ಕಂಪನಿ ಆರಂಭಿಸಿದ್ದ ಪೀಟರ್

2014ರಲ್ಲಿ ಮೀಡಿಯಾ ಕುಳ ಪೀಟರ್ ಮುಖರ್ಜಿಯಾ ಅವರು ತನ್ನ ಹೆಂಡತಿ ಇಂದ್ರಾಣಿಯನ್ನು ಮುಂದಿಟ್ಟುಕೊಂಡು ಐಎನ್ಎಕ್ಸ್ ಬ್ಯಾನರ್ ಅಡಿಯಲ್ಲಿ ಹಲವಾರು ಕಂಪನಿಗಳನ್ನು ಆರಂಭಿಸಿದ್ದರು. ಐಎನ್ಎಕ್ಸ್ ನ್ಯೂಸ್ ಪ್ರೈ.ಲಿ., ಐಎನ್ಎಕ್ಸ್ ಮೀಡಿಯಾ ಪ್ರೈ.ಲಿ., ಐಪಿಎಂ ಇನ್ಕಾನ್ ಪ್ರೈ.ಲಿ., ಐಎನ್ಎಕ್ಸ್ ಎಕ್ಸಿಕ್ಯೂಟಿವ್ ಸರ್ಚ್ ಪ್ರೈ.ಲಿ. ಮುಂತಾದ ಕಂಪನಿಗಳನ್ನು ಆರಂಭಿಸಿದ್ದರು.

ಇಂದ್ರಾಣಿಯಿಂದ ಶೀನಾ ಬೋರಾ ಹತ್ಯೆ

ಇಂದ್ರಾಣಿಯಿಂದ ಶೀನಾ ಬೋರಾ ಹತ್ಯೆ

2012ರ ಏಪ್ರಿಲ್ 24ರಂದು ತನ್ನ ಮಗಳು ಶೀನಾ ಬೋರಾ ಅವರನ್ನು ಷಡ್ಯಂತ್ರ ರಚಿಸಿ ಹತ್ಯೆಗೈಯುವ ಮುನ್ನ ಪೀಟರ್ ಮತ್ತು ಇಂದ್ರಾಣಿ ಅವರು ಐಎನ್ಎಕ್ಸ್ ಗ್ರೂಪ್ ಆಫ್ ಕಂಪನಿಗಳಲ್ಲಿ ಹೂಡಿಕೆದಾರರಾಗಿದ್ದರು. ಶೀನಾ ಬೋರಾ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಜೈಲು ಸೇರಿದ್ದಾರೆ.

English summary
Karti Chidambaram was arrested today by the Central Bureau of Investigation in connection with the INX Media case. It has been alleged Karti had received money from the Peter-Indrani owned INX Media. It is also alleged that they wanted him to use his influence to manipulate a tax probe against it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X