ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2: ಉದ್ದೇಶ ಹಾಗೂ ಉಪಯೋಗವೇನು?

|
Google Oneindia Kannada News

ಶ್ರೀಹರಿಕೋಟ, ಜುಲೈ 22: ಜಿಎಸ್‌ಎಲ್‌ವಿ ಮಾಕ್ 3, ಎಂನು 1 ಬಾಹುಬಲಿ ಯಶಸ್ವಿಯಾಗಿ ಚಂದ್ರನೆಡೆಗೆ ಹಾರಿದೆ.

ಒಟ್ಟು 47 ದಿನಗಳು ಚಂದ್ರನ ದಕ್ಷಿಣ ಪಾರ್ಶ್ವಕ್ಕೆ ತೆರಳಲು ಬೇಕಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಂದರೆ ಸೆಪ್ಟೆಂಬರ್ 10ರೊಳಗೆ ಚಂದ್ರನ ಮೇಲೆ ಕಾಲಿಡಲಿದೆ.

ಚಂದ್ರಯಾನ-2 ಉದ್ದೇಶವೇನು?: ಚಂದ್ರನ ಮೇಲ್ಮೈನ ವಿಶ್ಲೇಷಣೆ, ಸ್ಥಳಾಕೃತಿಯ ವಿವರಣೆ, ವಾತಾವರಣ, ಖನಿಜ ಸಂಪತ್ತು, ಪ್ರಾಕೃತಿಕ ಸಂಪನ್ಮೂಲಗಳು, ಹೈಡ್ರಾಕ್ಸಿಲ್‌ ಮತ್ತು ನೀರು ಅಥವಾ ಮಂಜು ಎಷ್ಟಿದೆ ಎಂಬುದನ್ನು ಪತ್ತೆಹಚ್ಚುವುದು.

ಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿ

ಎಲ್ಲವೂ ಅಂದುಕೊಂಡಂತಾದರೆ, ಚಂದ್ರನ ಮೇಲ್ಮೈನಲ್ಲಿ ನೀರು ಅಥವಾ ಮಂಜು ಇದೆಯೇ ಎಂಬ ಸ್ಪಷ್ಟಚಿತ್ರಣ ಈ ಬಾರಿ ಲಭ್ಯವಾಗಲಿದೆ. ಮತ್ತು ಯಾವ ವಿಜ್ಞಾನಿಗಳೂ ಶೋಧಿಸದ ಅಂಶಗಳನ್ನು ಇಸ್ರೋ ವಿಜ್ಞಾನಿಗಳು ಶೋಧಿಸಿದ ಹೆಗ್ಗಳಿಕೆಯೂ ನಮ್ಮದಾಗುತ್ತದೆ. ಜೊತೆಗೆ ಲಭ್ಯವಿರುವ ಖನಿಜದ ಕುರಿತೂ ಮಾಹಿತಿ ಲಭ್ಯವಾಗಲಿದ್ದು, ಹೈಡೆಫಿನಿಶನ್‌ ಕ್ಯಾಮೆರಾ ಇರುವುದರಿಂದ ಮಣ್ಣು ಮತ್ತು ಬಂಡೆಗಳ ಸ್ಪಷ್ಟಫೋಟೋಗಳು ದೊರೆಯಲಿವೆ.

ಚಂದ್ರಯಾನ-2 ಇಸ್ರೋ ಪಾಲಿಗೆ ಅತಿ ದೊಡ್ಡ ಸವಾಲಿನ ಕೆಲಸ. ಕಾರಣ ಚಂದ್ರನ ಮೇಲೆ ಗಗನನೌಕೆಯು ಸಾಫ್ಟ್‌ಲ್ಯಾಂಡ್‌ ಆಗುವುದೇ ಅತ್ಯಂತ ಕಠಿಣ ಸವಾಲು. ನೇವಿಗೇಶನ್‌, ನಿಯಂತ್ರಣ ಮತ್ತು ಪ್ರೊಪಲ್ಷನ್‌ ಸಿಸ್ಟಮ್‌ಗಳು ಹೊಂದಾಣಿಕೆಯಿಂದ ಹಾಗೂ ಸ್ವಯಂಚಾಲಿತವಾಗಿ ಕೆಲಸ ಮಾಡಬೇಕಾಗುತ್ತದೆ. ಇನ್ನೊಂದು ಪಥದ ನಿಖರತೆ. ಚಂದ್ರ ಭೂಮಿಯಿಂದ 384,400 ಕಿ.ಮೀ. ದೂರದಲ್ಲಿದೆ. ಹೀಗಾಗಿ ನಿಖರವಾಗಿ ಲ್ಯಾಂಡ್‌ ಆಗುವುದು ಕಷ್ಟಕರ.

ಸಚಿತ್ರ ಮಾಹಿತಿ: ಸಂಖ್ಯೆಗಳಲ್ಲಿ 'ಬಾಹುಬಲಿ' ರಾಕೆಟ್- ಚಂದ್ರಯಾನ-2 ಸಚಿತ್ರ ಮಾಹಿತಿ: ಸಂಖ್ಯೆಗಳಲ್ಲಿ 'ಬಾಹುಬಲಿ' ರಾಕೆಟ್- ಚಂದ್ರಯಾನ-2

ಮತ್ತು ಚಂದ್ರಯಾನದಲ್ಲಿ ಆರ್ಬಿಟರ್‌, ರೋವರ್‌ ಮತ್ತು ಲ್ಯಾಂಡರ್‌ಗಳೊಟ್ಟಿಗೆ ಸಂಪರ್ಕ ಸಾಧಿಸುವಾಗ ರೇಡಿಯೋ ಸಿಗ್ನಲ್‌ಗಳು ದುರ್ಬಲವಾಗಿರುತ್ತ್ತವೆ. ಚಂದ್ರನಲ್ಲಿರುವ ಧೂಳು ಲ್ಯಾಂಡರ್‌ ಮತ್ತು ರೋವರ್‌ ಕೆಲಸಕ್ಕೆ ಅಡ್ಡಿಯುಂಟು ಮಾಡಬಹುದು.

ಚಂದ್ರನ ಮೇಲಿಳಿಯುವ ರೋವರ್ ತೂಕವೆಷ್ಟು?

ಚಂದ್ರನ ಮೇಲಿಳಿಯುವ ರೋವರ್ ತೂಕವೆಷ್ಟು?

ಚಂದ್ರನ ಮೇಲಿಳಿಯುವ ರೋವರ್‌ ಸುಮಾರು 20 ಕೆ.ಜಿ. ತೂಕವಿದ್ದು, ಸೌರಶಕ್ತಿ ಮೂಲಕ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕೆ 6 ಚಕ್ರಗಳಿದ್ದು, ಚಂದ್ರನ ಮೇಲ್ಮೈಯಲ್ಲಿ 100-200 ಮೀಟರ್‌ ಕ್ರಮಿಸಿ ಅಲ್ಲಿ ದೊರಕುವ ಕಲ್ಲು ಮತ್ತು ಮಣ್ಣಿನ ಮಾದರಿ ಪಡೆದು ವಿಶ್ಲೇಷಿಸಿ ಭೂಮಿಗೆ ಆರ್ಬಿಟರ್‌ ಮೂಲಕ ಡೇಟಾ ಮತ್ತು ಫೋಟೋವನ್ನು ಕಳಿಸುತ್ತದೆ. ಚಂದ್ರಯಾನ -2ರ ಆರ್ಬಿಟರ್‌ ತೂಕ 1,400 ಕೆ.ಜಿ. ಮತ್ತು ಲ್ಯಾಂಡರ್‌ ತೂಕ 1250 ಕೆ.ಜಿ. ಇದೆ. ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಉದ್ದೇಶಿಸಿರುವ ಚಂದ್ರನ ಪರಿಶೋಧನಾ ಅಭಿಯಾನವಾಗಿದ್ದು, ಇದಕ್ಕೆ ತಗಲುವ ವೆಚ್ಚ ಸುಮಾರು 423 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಅಭಿಯಾನವನ್ನು ಉಡಾವಣೆ ಮಾಡಲಾಗಿದೆ.

ಮಣ್ಣು ಅಥವಾ ಶಿಲೆಯ ಮಾದರಿ ಸಂಗ್ರಹಿಸುತ್ತದೆ

ಮಣ್ಣು ಅಥವಾ ಶಿಲೆಯ ಮಾದರಿ ಸಂಗ್ರಹಿಸುತ್ತದೆ

ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆಮಾಡುವುದರ ಜೊತೆಗೆ 'ಹೊಸ' ಪ್ರಯೋಗಗಳನ್ನು ನಡೆಸುತ್ತದೆ. ಗಾಲಿಗಳಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ. ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-2 ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ.

ರೋವರ್ 30-100 ಕೆಜಿ ತೂಕ ಹೊಂದಿದ್ದು ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ರೋವರ್ ಗಾಲಿಗಳ ಮೇಲೆ ಚಂದ್ರನ ಮೇಲ್ಮೈಯನ್ನು ತಲುಪಿ, ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸಿ, ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ, ಹಾಗು ಮೇಲಿರುವ ಕಕ್ಷೆಗಾಮಿಗೆ ಶೋಧಿತ,ದೊರೆತ ದತ್ತಾಂಶವನ್ನು ಕಳುಹಿಸುತ್ತದೆ, ಇದು ಭೂಮಿಯ ಸ್ಟೇಶನ್ ಗೆ ತನ್ನ ಪರಿಧಿ ಕೇಂದ್ರದ ಮುಖಾಂತರ ಮಾಹಿತಿ ಪ್ರಸಾರ ಮಾಡುತ್ತದೆ.

ಚಂದ್ರನಿಗೂ ಭೂಮಿಗೂ ಇರುವ ಅಂತರವೆಷ್ಟು?

ಚಂದ್ರನಿಗೂ ಭೂಮಿಗೂ ಇರುವ ಅಂತರವೆಷ್ಟು?

ಚಂದ್ರನಿಗೂ ಭೂಮಿಗೂ ಇರುವ ಅಂತರವನ್ನು 3,84,000 ಕಿ.ಮೀ ಎಂದು ಅಂದಾಜು ಮಾಡಲಾಗಿದೆ.

ಇಂದು ಉಡಾವಣೆಯಾಗಿರುವ ರಾಕೆಟ್ 48 ದಿನಗಳಲ್ಲಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಪಾದಾರ್ಪಣೆ ಮಾಡಲಿದೆ. ಭೂ ಕಕ್ಷೆಗೆ ಸೇರಲು ಮಿಷನ್ ಯಶಸ್ವಿಯಾಗಿದ್ದು, ಐತಿಹಾಸ ಪಯಣದ ಆರಂಭವಾಗಿದ್ದು, ಯೋಜನೆ ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲಲಿದೆ. ಈ ಯೋಜನೆಗೆ ಇಸ್ರೋ, ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಎದುರು ನೋಡುತಿತ್ತು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದರು.

ಒಂದೂವರೆ ತಿಂಗಳಲ್ಲಿ 15 ಹಂತಗಳನ್ನು ದಾಟಬೇಕು

ಒಂದೂವರೆ ತಿಂಗಳಲ್ಲಿ 15 ಹಂತಗಳನ್ನು ದಾಟಬೇಕು

ಸದ್ಯ ಪಡೆದಿರುವ ಮಾಹಿತಿಯ ಅನ್ವಯ ಎಲ್ಲವೂ ನಿಗದಿಯಂತೆ ನಡೆದಿದೆ. ಮುಂದಿನ ಯೋಜನೆಗೆ ನಮ್ಮ ಕೆಲಸ ಇಂದಿನಿಂದಲೇ ಆರಂಭವಾಗಲಿದೆ. ಈ ಹಿಂದೆ ನಮಗೇ ಸ್ವಲ್ಪ ಹಿನ್ನಡೆ ಆಗಿದ್ದರೂ ಕೂಡ ಮತ್ತೆ ಸ್ಪಿಡ್ ನಲ್ಲಿ ಬೌನ್ಸ್ ಬ್ಯಾಕ್ ಮಾಡಿದ್ದೇವೆ. ಇದು ನಮಗೆ ಬೋನಸ್ ರೀತಿ ಆಗಿದೆ. ಮುಂದಿನ ಒಂದೂವರೆ ತಿಂಗಳಿನಲ್ಲಿ 15 ಪ್ರಮುಖ ಹಂತಗಳನ್ನು ದಾಟಬೇಕಾಗುತ್ತದೆ. ಈ ಯಶಸ್ಸು ಎಲ್ಲರಿಗೂ ಸಲ್ಲುತ್ತದೆ ಎಂದರು.

ಬಾಹುಬಲಿ 14 ವೈಜ್ಞಾನಿಕ ಉಪಕರಣಗಳ ಹೊತ್ತೊಯ್ದಿದೆ

ಬಾಹುಬಲಿ 14 ವೈಜ್ಞಾನಿಕ ಉಪಕರಣಗಳ ಹೊತ್ತೊಯ್ದಿದೆ

ಭಾರತದ ಅತಿ ಭಾರದ ರಾಕೆಟ್ 'ಬಾಹುಬಲಿ' ಎಂದು ಹೆಸರಿಸಲಾದ ಜಿಎಸ್​ಎಲ್​ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ. ಇದರಲ್ಲಿ ನಾಸಾದ ಒಂದು ಉಪಕರಣವೂ ಇದೆ.

ಈ ಹಿಂದೆ ಚಂದ್ರಯಾನ-1 ಮತ್ತು ಮಂಗಳಯಾನದ ಉಪಗ್ರಹ ವನ್ನು ಪಿಎಸ್​ಎಲ್​ವಿ ಕ್ಲಾಸ್​ನ ರಾಕೆಟ್​ನಿಂದ ಉಡಾವಣೆ ಮಾಡಲಾಗಿದೆ.
ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದೆ. ಮೊದಲ ಇಳಿಕೆಯ ಪ್ರಯತ್ನದಲ್ಲಿ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ. ಚಂದ್ರಯಾನ-2, ಚಂದ್ರ ಉಪಗ್ರಹದಲ್ಲಿ ಭಾರತದ ಎರಡನೆಯ ಅಧ್ಯಯನವಾಗಲಿದೆ.
ಯೋಜನಾ ವೆಚ್ಚ: 978 ಕೋಟಿ ರೂ
ಜಿಎಸ್‌ಎಲ್‌ವಿ: ಬಾಹುಬಲಿ
ಲ್ಯಾಂಡರ್: ವಿಕ್ರಮ
ರೋವರ್: ಪ್ರಜ್ಞಾನ್

English summary
What is the intention and goal of ISRO to launch chandrayaan-2. Here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X