ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿನೀವಾ ಒಪ್ಪಂದ ಎಂದರೇನು?, ಪ್ರಮುಖ ಅಂಶಗಳು ಏನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 27 : ಜಿನೀವಾ ಒಪ್ಪಂದದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಂದು ಭಾರಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ಭಾರತೀಯ ಪೈಲೆಟ್ ಪಾಕಿಸ್ತಾನದ ವಶದಲ್ಲಿದ್ದಾರೆ ಎಂಬ ವಿಚಾರ ತಿಳಿದ ಬಳಿಕ ಹೆಚ್ಚಿನ ಚರ್ಚೆಗಳು ಆರಂಭವಾಗಿವೆ.

ಯುದ್ಧದ ಸನ್ನಿವೇಶದಲ್ಲಿ ಸೈನಿಕರನ್ನು ಮತ್ತು ಜನರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಜಿನೀವಾ ಒಪ್ಪಂದ ಹಲವು ಮಾರ್ಗಸೂಚಿಗಳನ್ನು ಒಳಗೊಂಡಿದೆ. ಈಗ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಬಿಗುವಿನ ವಾತಾವರಣವಿದೆ.

ಪಾಕ್ ವಶದಲ್ಲಿ ಅಭಿನಂದನ್ ಸುರಕ್ಷಿತವಾಗಿದ್ದಾರೆ, ನಿರಾತಂಕವಾಗಿದ್ದಾರೆ ಪಾಕ್ ವಶದಲ್ಲಿ ಅಭಿನಂದನ್ ಸುರಕ್ಷಿತವಾಗಿದ್ದಾರೆ, ನಿರಾತಂಕವಾಗಿದ್ದಾರೆ

ಜಿನೀವಾ ಒಪ್ಪಂದ ಯುದ್ಧದ ಸಂದರ್ಭದಲ್ಲಿ ಸೆರೆ ಸಿಕ್ಕ ಸೈನಿಕರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಹೇಳುತ್ತದೆ. ಗಾಯಗೊಂಡ ಸೈನಿಕರು ಹಕ್ಕುಗಳು, ಯುದ್ಧ ಭೂಮಿಯ ಸುತ್ತಮುತ್ತ ಸೆರೆ ಸಿಕ್ಕ ಜನರ ಹಕ್ಕುಗಳ ರಕ್ಷಣೆ ಬಗ್ಗೆ ಹಲವು ಮಾರ್ಗಸೂಚಿಗಳನ್ನು ಒಳಗೊಂಡಿದೆ.

What is the Geneva Convention

1949ರ 2ನೇ ಮಹಾಯುದ್ಧದ ಸಂದರ್ಭದಲ್ಲಿ ಜಿನೀವಾ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಇವುಗಳಲ್ಲಿ ಪ್ರಮುಖವಾದ ನಾಲ್ಕು ಮಾರ್ಗಸೂಚಿಗಳನ್ನು ದೇಶಗಳು ಪಾಲಿಸಬೇಕಾಗಿದೆ.

3 ತಿದ್ದುಪಡಿ : 1949ರಲ್ಲಿ ನಡೆದ ಒಪ್ಫಂದಕ್ಕೆ ಮೂರು ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ. ಈ ಶಿಷ್ಟಚಾರಗಳನ್ನು ಪಾಲನೆ ಮಾಡಬೇಕು ಎಂದು ತಿದ್ದುಪಡಿ ಹೇಳುತ್ತದೆ.

* ಶಿಷ್ಟಾಚಾರ 1 (1977) : ಶಿಷ್ಟಾಚಾರ 1 ಅಂತರಾಷ್ಟ್ರೀಯ ಶಸ್ತ್ರ ಸಂಘರ್ಷಕ್ಕೆ ಒಳಪಟ್ಟಿದ್ದು.

* ಶಿಷ್ಟಾಚಾರ 2 (1977) : ಶಿಷ್ಟಾಚಾರ 2 ಅಂತರಾಷ್ಟ್ರೀಯ ವಲ್ಲದ ಶಸ್ತ್ರ ಸಂಘರ್ಷಕ್ಕೆ ಒಳಪಟ್ಟಿದೆ.

* ಶಿಷ್ಟಾಚಾರ 3 (2005) : ಶಿಷ್ಟಾಚಾರ 3 ವಿಶಿಷ್ಟ ಗುರುತಿನ ಲಾಂಚನವನ್ನು ಒಳಪಡಿಸಿಕೊಳ್ಳುವ ಬಗ್ಗೆ ಇದೆ.

196 ರಾಷ್ಟ್ರಗಳು 1949ರ ಒಪ್ಪಂದಕ್ಕೆ ಸಹಿ ಹಾಕಿವೆ. 2010ರಲ್ಲಿ 170 ರಾಷ್ಟ್ರಗಳು ಶಿಷ್ಟಾಚಾರ 1 ಮತ್ತು 165 ರಾಷ್ಟ್ರಗಳು ಶಿಷ್ಟಾಚಾರ 2ಕ್ಕೆ ಒಪ್ಪಿಗೆ ನೀಡಿವೆ.

ಪಾಕ್ ಹಿಮ್ಮೆಟ್ಟಿಸಲು ಹೋದ ಒಂದು ಮಿಗ್ 21 ವಿಮಾನ ನಾಪತ್ತೆ ಪಾಕ್ ಹಿಮ್ಮೆಟ್ಟಿಸಲು ಹೋದ ಒಂದು ಮಿಗ್ 21 ವಿಮಾನ ನಾಪತ್ತೆ

ಒಪ್ಪಂದದ ಪ್ರಮುಖ ಅಂಶ 1 : ಜಿನೀವಾ ಒಪ್ಪಂದ ಮೊದಲನೆ ಅಂಶ ಗಾಯಗೊಂಡ ಸೈನಿಕರಿಗೆ ಸಂಬಂಧಿಸಿದೆ. ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕನಿಗೆ ಧರ್ಮ, ಬಣ್ಣ, ಲಿಂಗ ಬೇಧವಿಲ್ಲದೇ ಚಿಕಿತ್ಸೆ ನೀಡಬೇಕು. ಸೆರೆ ಸಿಕ್ಕ ಸೈನಿಕರನ್ನು ಹಿಂಸೆ ಮಾಡುವುದು ಹತ್ಯೆ ಮಾಡುವುದನ್ನು ನಿಷೇಧಿಸಿದೆ.

ಒಪ್ಪಂದದ ಅಂಶ 2 : ಈ ಅಂಶದ ಪ್ರಕಾರ ನೌಕಾಪಡೆಯ ಹಡಗು ಮುಳುಗಡೆಯಾದರೆ ಸೈನಿಕರ ರಕ್ಷಣೆ ಬಗ್ಗೆ ಇದೆ. ವಿಮಾನ ಪತನವಾದಾಗಲೂ ನಿಯಮ ಪಾಲನೆ ಮಾಡಬೇಕು ಎಂದಿದೆ. ಹಡಗಿನಲ್ಲಿರುವ ಆಸ್ಪತ್ರೆಗಳಿಗೆ ವಿಶೇಷ ರಕ್ಷಣೆ ನೀಡಬೇಕು ಎಂದು ಹೇಳಿದೆ.

ಒಪ್ಪಂದದ ಅಂಶ 3 : ಯುದ್ಧದ ಸಂದರ್ಭದಲ್ಲಿ ಸೆರೆ ಸಿಕ್ಕ ಖೈದಿಯ ಬಗ್ಗೆ 3ನೇ ಅಂಶ ಒಳಗೊಂಡಿದೆ. ಖೈದಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕೈದಿಯ ಹೆಸರು, ಹುದ್ದೆ, ಸೀರಿಯಲ್ ನಂಬರ್‌ಗಳನ್ನು ಎದುರಾಳಿಗಳ ಜೊತೆ ಹಂಚಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಅವರನ್ನು ಹಿಂಸೆ ಮಾಡುವಂತಿಲ್ಲ.

ಒಪ್ಪಂದದ ಅಂಶ 4 : ಯುದ್ಧದ ಸಂದರ್ಭದಲ್ಲಿ ಜನರು ಸೆರೆ ಸಿಕ್ಕರೆ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವಂತಿಲ್ಲ.

English summary
The Geneva Convention is one of the trends on Twitter today. The Geneva Convention is and the additional protocols are set to determine how soldiers and civilians must be treated during the time of war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X