ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಗಿಲಿಗೆ ತೆರಳಿ ಕೊರೊನಾವೈರಸ್ ಲಸಿಕೆ ನೀಡುವುದೆಷ್ಟು ಸರಿ!?

|
Google Oneindia Kannada News

ನವದೆಹಲಿ, ಜೂನ್ 14: "ಭಾರತದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಕೊರೊನಾವೈರಸ್ ಲಸಿಕೆ ವಿತರಿಸುವ ಬಗ್ಗೆ ರಾಷ್ಟ್ರೀಯ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿಲ್ಲ" ಎಂದು ಕೇಂದ್ರ ಸರ್ಕಾರವು ಮುಂಬೈ ಹೈಕೋರ್ಟ್ ಎಂದು ಸ್ಪಷ್ಟಪಡಿಸಿದೆ.

"ಕೆಲವು ರಾಜ್ಯ ಸರ್ಕಾರಗಳು ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ಸಲಹೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಮನೆ ಮನೆಗೆ ತೆರಳಿ ವಿಶೇಷ ವರ್ಗದ ಫಲಾನುಭವಿಗಳಿಗೆ ಲಸಿಕೆಯನ್ನು ನೀಡುತ್ತಿದ್ದಾರೆ. ಆದರೆ ರಾಷ್ಟ್ರೀಯ ನೀತಿ ಪ್ರಕಾರ ಈ ರೀತಿ ಮನೆಗಳಿಗೆ ತೆರಳಿ ಲಸಿಕೆ ನೀಡುವಂತಿಲ್ಲ," ಎಂದು ಕೇಂದ್ರ ಸರ್ಕಾರದ ಅಡಿಷನಲ್ ಸಾಲಿಸಟರ್ ಜನರಲ್ ಅನಿಲ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ವರದಿ: ಬಳ್ಳಾರಿ ಜಿಲ್ಲೆ ಸಂಡೂರು ಮಂದಿಗೆ ಹೊಲದಲ್ಲೇ ಕೊರೊನಾವೈರಸ್ ಲಸಿಕೆ!?ವಿಶೇಷ ವರದಿ: ಬಳ್ಳಾರಿ ಜಿಲ್ಲೆ ಸಂಡೂರು ಮಂದಿಗೆ ಹೊಲದಲ್ಲೇ ಕೊರೊನಾವೈರಸ್ ಲಸಿಕೆ!?

ಹಿರಿಯ ವಯಸ್ಸಿನವರು, ಹಾಸಿಗೆ ಹಿಡಿದು ಓಡಾಡುವುದಕ್ಕೆ ಬಾರದವರು ಅಥವಾ ಈ ರೀತಿಯಾದ ಫಲಾನುಭವಿಗಳ ಮನೆಗಳಿಗೆ ತೆರಳಿ ಕೊವಿಡ್-19 ಲಸಿಕೆ ನೀಡುವುದಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಬಾಂಬೆ ಮಹಾನಗರ ಪಾಲಿಕೆಯು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ಜಿ ಎಸ್ ಕುಲಕರ್ಣಿ ನೇತೃತ್ವದ ಪೀಠಢಕ್ಕೆ ಕೇಂದ್ರ ಸರ್ಕಾರದ ಪರವಾಗಿ ಅನಿಲ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಜೂನ್ 22ಕ್ಕೆ ನ್ಯಾಯಾಲಯ ಮುಂದೂಡಿದೆ.

ಕೇಂದ್ರ ಸರ್ಕಾರದ ನೀತಿಯನ್ನು ಪಾಲಿಸಲು ಸೂಚನೆ

ಕೇಂದ್ರ ಸರ್ಕಾರದ ನೀತಿಯನ್ನು ಪಾಲಿಸಲು ಸೂಚನೆ

"ಭಾರತದ ಹಲವು ರಾಜ್ಯಗಳು ಮತ್ತು ಮಹಾನಗರ ಪಾಲಿಕೆ, ಪುರಸಭೆ ವ್ಯಾಪ್ತಿಗಳಲ್ಲಿ ಮನೆ ಮನೆಗಳಿಗೆ ತೆರಳಿ ಕೊವಿಡ್-19 ಲಸಿಕೆಯನ್ನು ವಿತರಿಸುವ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಈ ರೀತಿ ಲಸಿಕೆ ವಿತರಿಸುವುದಕ್ಕೆ ಅವಕಾಶವಿಲ್ಲ. ಕೊರೊನಾವೈರಸ್ ಲಸಿಕೆ ವಿತರಣೆ ಪ್ರಕ್ರಿಯೆಯಲ್ಲಿ ಎಲ್ಲ ರಾಜ್ಯಗಳು ಕೇಂದ್ರ ಸರ್ಕಾರದ ನೀತಿಯನ್ನು ಪಾಲನೆ ಮಾಡಬೇಕು. ಹೈಕೋರ್ಟ್ ಮುಂದಿನ ಕೆಲ ಸಮಯದವರೆಗೂ ನಮ್ಮ ಮನವಿಗೆ ಸಮ್ಮತಿಸಬೇಕಿದೆ. ಏಕೆಂದರೆ ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ," ಎಂದು ಎಎಸ್ ಜಿ ಅನಿಲ್ ಸಿಂಗ್ ಹೇಳಿದ್ದಾರೆ.

ಮುಂದಿನ ಹಂತಗಳಲ್ಲಿ ಮನೆಮನೆಗೆ ತೆರಳಿ ಲಸಿಕೆ

ಮುಂದಿನ ಹಂತಗಳಲ್ಲಿ ಮನೆಮನೆಗೆ ತೆರಳಿ ಲಸಿಕೆ

"ಕೇಂದ್ರ ಸರ್ಕಾರವು ಕೊರೊನಾವೈರಸ್ ಲಸಿಕೆ ವಿತರಣೆಯ ನೀತಿಯನ್ನು ಕಾಲದಿಂದ ಕಾಲಕ್ಕೆ ಬದಲಾಯಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಲಸಿಕೆ ವಿತರಣೆ ವ್ಯಾಪ್ತಿ ಹಾಗೂ ರೀತಿಯನ್ನು ಪರಿಷ್ಕರಿಸಲಾಗುತ್ತದೆ. ಭವಿಷ್ಯದಲ್ಲಿ ಮನೆಗಳಿಗೆ ತೆರಳಿ ಲಸಿಕೆ ನೀಡುವುದಕ್ಕೂ ಅನುಮತಿ ನೀಡಲಾಗುವುದು. ಕೇಂದ್ರ ಸರ್ಕಾರದ ನೀತಿಯು ಕೇವಲ ಸಲಹಾ ಸ್ವರೂಪದಲ್ಲಿದೆ. ಕೇರಳ, ಒಡಿಶಾ ಹಾಗೂ ಜಾರ್ಖಂಡ್‌ನಂತಹ ರಾಜ್ಯಗಳು ಲಸಿಕೆಯನ್ನು ಹಿಂದಕ್ಕೆ ತಿರುಗಿಸಬೇಕು ಎಂದು ಸರ್ಕಾರ ಕೇಳಿಲ್ಲವಲ್ಲ," ಎಂದು ಅರುಣ್ ಸಿಂಗ್ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ.

ಗೊಂದಲಕ್ಕೆ ಕಾರಣವಾದ ಮಹಾರಾಷ್ಟ್ರ ನಿರ್ಧಾರ

ಗೊಂದಲಕ್ಕೆ ಕಾರಣವಾದ ಮಹಾರಾಷ್ಟ್ರ ನಿರ್ಧಾರ

ಮಹಾರಾಷ್ಟ್ರದಲ್ಲಿ ಮನೆ ಮನೆಗಳಿಗೆ ತೆರಳಿ ಕೊರೊನಾವೈರಸ್ ಲಸಿಕೆ ವಿತರಿಸುತ್ತಿರುವ ನಡೆಯ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಮುಂಬೈ ಮಹಾನಗರ ಪಾಲಿಕೆಯು ಉಲ್ಲೇಖಿಸಿದೆ. ರಾಜ್ಯ ಸರ್ಕಾರವು ಮನೆಗಳಿಗೆ ತೆರಳಿ ಲಸಿಕೆ ವಿತರಿಸುವುದಕ್ಕೆ ಸೂಚಿಸುತ್ತದೆ. ಕೇಂದ್ರ ಸರ್ಕಾರದ ನೀತಿಯಲ್ಲಿ ಈ ನಿಯಮವನ್ನು ಪಾಲಿಸದಂತೆ ಸೂಚಿಸಲಾಗುತ್ತಿದೆ. ಎರಡು ನಿಯಮಗಳನ್ನು ಯಾವ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಎಂದು ಪ್ರಶ್ನ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರದ ನೀತಿಗಳಿಂದ ಆತಂಕ

ಮಹಾರಾಷ್ಟ್ರದಲ್ಲಿ ಸರ್ಕಾರದ ನೀತಿಗಳಿಂದ ಆತಂಕ

"ನಾವು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನೇ ಪಾಲನೆ ಮಾಡುತ್ತೇವೆ. ಕೊರೊನಾವೈರಸ್ ಲಸಿಕೆ ಜೊತೆಗೆ ರಾಜ್ಯ ಸರ್ಕಾರವು ಮಾನವ ಸಂಪನ್ಮೂಲದ ಬಗ್ಗೆಯೂ ಆಲೋಚಿಸಬೇಕಿದೆ. ಒಬ್ಬರಿಗೆ ಲಸಿಕೆ ನೀಡಲು ತೆರಳುವುದಕ್ಕೆ ಕನಿಷ್ಠ ಮೂವರು ಸಿಬ್ಬಂದಿ ಜೊತೆಗೆ ಆಂಬುಲೆನ್ಸ್ ಹಾಗೂ ಲಸಿಕೆ ವ್ಯರ್ಥವಾಗದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ," ಎಂದು ಬಿಎಂಸಿ ಸಲಹೆಗಾರ ಅನಿಲ್ ಸಖ್ರೆ ಹೇಳಿದ್ದಾರೆ.

English summary
What Is The Central Govt Clarification About Door-to-door Coronavirus Vaccine Distribution Across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X