• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಗಾಸಸ್ ಸಾಫ್ಟ್‌ವೇರ್ ಎಂದರೇನು? ಮೊಬೈಲ್ ಮೇಲಿನ ದಾಳಿ ಹೇಗಿರುತ್ತೆ?

|
Google Oneindia Kannada News

ನವದೆಹಲಿ, ಜುಲೈ 19: ಪೆಗಾಸಸ್ ತಂತ್ರಾಂಶದ ಮೂಲಕ ಭಾರತ ಪತ್ರಕರ್ತರು ಹಾಗೂ ಪ್ರಭಾವಿಗಳ ವಿರುದ್ಧ ಬೇಹುಗಾರಿಕೆ ನಡೆಸಲಾಗುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

ಟಾರ್ಗೆಟ್ ಪಟ್ಟಿಯಲ್ಲಿದ್ದ ಕೆಲವೊಂದು ಮೊಬೈಲ್ ಡಿವೈಸ್ ಗಳಲ್ಲಿ ಪೆಗಾಸಸ್ ಸ್ಪೈವೇರ್ ಅಸ್ತಿತ್ವವಿರುವುದು ವಿಧಿವಿಜ್ಞಾನ ಪರೀಕ್ಷೆಗಳಿಂದ ಸ್ಪಷ್ಟವಾಗಿದೆ ಎಂದು ದಿ ವೈರ್ ವರದಿ ಪ್ರಕಟಿಸಿದೆ.

ಕಳೆದ ಲೋಕಸಭೆ ಚುನಾವಣೆಗೂ ಒಂದು ವರ್ಷ ಮೊದಲು ಭಾರತದ 300ಕ್ಕೂ ಅಧಿಕ ಗಣ್ಯರ ಮೊಬೈಲ್‌ಗಳನ್ನು ಇಸ್ರೇಲ್ ಅಭಿವೃದ್ಧಿಪಡಿಸಿದ ಪೆಗಾಸಸ್ ಎಂಬ ಬೇಹುಗಾರಿಕೆ ಸಾಫ್ಟ್‌ವೇರ್ ಬಳಸಿ ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಪೆಗಾಸಸ್ ಒಮ್ಮೆ ಫೋನ್‌ನಲ್ಲಿ ಇನ್‌ಸ್ಟಾಲ್ ಆದರೆ, ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ಬೇಹುಗಾರಿಕೆ ಮಾಡುತ್ತದೆ. ವಾಟ್ಸಾಪ್‌ನಲ್ಲಿ ಮಾಡಿದ ಸಂಪೂರ್ಣ ಚಾಟ್ಸ್ ಅನ್ನು ಪೆಗಾಸಸ್ ಎನ್‌ಕ್ರಿಪ್ಟ್ ಮಾಡುತ್ತದೆ.

ಹಾಗಾದರೆ ಪೆಗಾಸಸ್ ಸಾಫ್ಟ್‌ವೇರ್ ಎಂದರೇನು, ಅದು ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ತಿಳಿಯಲು ಮುಂದೆ ಓದಿ..

 ಸಚಿವರ ಬಗ್ಗೆ ಬೇಹುಗಾರಿಕೆ

ಸಚಿವರ ಬಗ್ಗೆ ಬೇಹುಗಾರಿಕೆ

ಲೋಕಸಭೆ ಚುನಾವಣೆಗೂ ಮುನ್ನ, ಅಂದರೆ 2018ರಿಂದ 2019ರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿದ್ದ ಇಬ್ಬರು ಸಚಿವರು ಸೇರಿದಂತೆ 40 ಪತ್ರಕರ್ತರು,ಮೂರು ವಿರೋಧ ಪಕ್ಷದ ನಾಯಕರು, ಉದ್ಯಮಿಗಳು, ಸರಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಸಾಮಾಜಿಕ ಹಕ್ಕುಗಳ ಹೋರಾಟಗಾರರ ಮೊಬೈಲ್‌ ಸಂಖ್ಯೆಗಳನ್ನು ಹ್ಯಾಕ್‌ ಮಾಡಿರುವುದು ಬಯಲಿಗೆ ಬಂದಿದೆ. ಪ್ಯಾರಿಸ್‌ ಮೂಲದ ಎನ್‌ಜಿಒ ಫಾರ್ಬಿಡನ್‌ ಸ್ಟೋರೀಸ್‌ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಜಂಟಿಯಾಗಿ ನಡೆಸಿದ ತನಿಖೆ 'ಪೆಗಾಸಸ್‌ ಪ್ರಾಜೆಕ್ಟ್' ಮೂಲಕ ಹ್ಯಾಕಿಂಗ್‌ ಬಯಲಾಗಿದ್ದು, ಈ ತನಿಖಾ ವರದಿಯನ್ನು ಅಂತಾರಾಷ್ಟ್ರೀಯ ಮತ್ತು ಭಾರತೀಯ ಮಾಧ್ಯಮ ಸಂಸ್ಥೆಗಳಿಗೆ ನೀಡಲಾಗಿದೆ.

 ಪೆಗಾಸಸ್ ಬಗ್ಗೆ ಮಾಹಿತಿ

ಪೆಗಾಸಸ್ ಬಗ್ಗೆ ಮಾಹಿತಿ

2019ರಲ್ಲಿ ಸುಮಾರು 20 ದೇಶಗಳಲ್ಲಿ 1400 ಪೆಗಾಸಸ್ ವಾಟ್ಸಾಪ್, ಫೇಸ್‌ಬುಕ್ ಮೆಸೆಜಿಂಗ್ ಸರ್ವೀಸ್‌ನ ಖಾತೆಗಳನ್ನು ಹ್ಯಾಕ್‌ ಮಾಡಲಾಗಿತ್ತು, ಅದರಲ್ಲಿ ಭಾರತೀಯ ಪತ್ರಕರ್ತರು ಹಾಗೂ ಕಾರ್ಯಕರ್ತರು ಕೂಡ ಇದ್ದರು.

ಹಲವು ದಿನಗಳ ಬಳಿಕ ಆವಿಷ್ಕಾರದ ನಂತ ಆಪಲ್ ಕಂಪನಿ ತನ್ನ ಐಒಎಸ್‌ನ ನಬವೀಕರಣದ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು.ಪೆಗಾಸಸ್ ಸೃಷ್ಟಿ ಮಾಡಿರುವ ಕುರಿತು ಎನ್‌ಎಸ್‌ಒ ಗ್ರೂಪ್ ವಿರುದ್ಧ ಫೇಸ್‌ಬುಕ್ 2019ರಲ್ಲಿ ದೂರು ನೀಡಿತ್ತು.
ಪೆಗಾಸಸ್ ಬೇಹುಗಾರಿಕಾ ಸಾಫ್ಟ್‌ವೇರ್‌ನ್ನು ಇಸ್ರೇಲ್ ಕಂಪನಿ ಎನ್‌ಎಸ್ ಒ ಅಭಿವೃದ್ಧಿಪಡಿಸಿದೆ. ಸೈಬರ್ ಶಸ್ತ್ರಾಸ್ತ್ರ ತಯಾರಿಸುವಲ್ಲಿ ಈ ಕಂಪನಿ ಮುಂದಿದೆ. ಇದಕ್ಕೆ ದಿ ಪೆಗಾಸಸ್ ಪ್ರಾಜೆಕ್ಟ್ ಎಂದು ನಾಕರಣ ಮಾಡಲಾಗಿದೆ.
2016ರಲ್ಲಿ ಮೊದಲಿಗೆ ಇದು ಮುಖ್ಯವಾಹಿನಿಗೆ ಬಂದಿತ್ತು. ಅರಬ್ ಕಾರ್ಯಕರ್ತರೊಬ್ಬರು ಸಂಶಯಾಸ್ಪದ ಸಂದೇಶವನ್ನು ಸ್ವೀಕರಿಸಿದ್ದರು. ಈ ವೇಳೆ ಪೆಗಾಸಸ್ ಐಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ನಂಬಲಾಗಿತ್ತು.
 ಪೆಗಾಸಸ್ ಏನು ಮಾಡುತ್ತದೆ?

ಪೆಗಾಸಸ್ ಏನು ಮಾಡುತ್ತದೆ?

ಕಾಲ್‌ ಟ್ರ್ಯಾಕಿಂಗ್, ರೀಡಿಂಗ್, ಬಳಕೆದಾರರ ಚಟಿವಟಿಕೆ ಮೇಲೆ ನಿಗಾ ಇರಿಸಲಾಗುತ್ತದೆ. ಫೋನ್‌ನಲ್ಲಿರುವ ಕ್ಯಾಮರಾ ವಿಡಿಯೋಗಳನ್ನು ಲಭ್ಯವಾಗುವಂತೆ ಮಾಡುತ್ತದೆ. ಹಾಗೂ ಪೈಕ್ರೋಫೋನ್ ಮೂಲಕ ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಣಿರಿಸುತ್ತದೆ.
ಪೆಗಾಸಸ್ ಒಂದು ಬಾರಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿದರೆ, ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ಬೇಹುಗಾರಿಕೆ ಮಾಡುತ್ತದೆ. ವಾಟ್ಸಾಪ್‌ನಲ್ಲಿ ಮಾಡಿದ ಸಂಪೂರ್ಣ ಚಾಟ್ಸ್ ಅನ್ನು ಪೆಗಾಸಸ್ ಎನ್‌ಕ್ರಿಪ್ಟ್‌ ಮಾಡುತ್ತದೆ.

ಫೋನ್‌ ಅನ್ನು ಹೇಗೆ ಹ್ಯಾಕ್ ಮಾಡುತ್ತೆ?

ಫೋನ್‌ ಅನ್ನು ಹೇಗೆ ಹ್ಯಾಕ್ ಮಾಡುತ್ತೆ?

ಬಳಕೆದಾರ ಲಿಂಕ್ ಮಾಡಿದಾಗ ಗೊತ್ತಿಲ್ಲದಂತೆ ಪೆಗಾಸಸ್ ಆತನ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಆಗುತ್ತದೆ. ಬಳಿಕ ವಾಟ್ಸಾಪ್‌ನಂತಹ ಅಪ್ಲಿಕೇಷನ್‌ಮೂಲಕ ವಾಯ್ಸ್ ಕಾಲ್ಸ್‌ನಲ್ಲಿರುವ ಸೆಕ್ಯೂರಿಟಿ ಬಸ್‌ ಮೂಲಕ ಇನ್‌ಸ್ಟಾಲ್ ಮಾಡಲಾಗುತ್ತದೆ. ಅಲ್ಲದೆ, ಕೇವಲ ಮಿಸ್ಡ್‌ಕಾಲ್ ಕೊಡುವ ಮೂಲಕವೂ ಸಾಫ್ಟ್‌ವೇರ್ ಇನ್‌ಸ್ಟಾಲ್ ಆಗಲಿದೆ.

ಪೆಗಾಸಸ್ ದಾಳಿ ಮಾಡುವುದು ಕಣ್ಣಿಗೆ ಕಾಣುವುದಿಲ್ಲ, ತನ್ನ ಫೋನ್ ಪೆಗಾಸಸ್‌ನೊಂದಿಗೆ ರಾಜಿ ಮಾಡಿಕೊಂಡಿದೆ ಎಂಬ ಸಣ್ಣ ಸುಳಿವು ಕೂಡ ಬಳಕೆದಾರರಿಗೆ ಬಿಟ್ಟುಕೊಡುವುದಿಲ್ಲ. ಯಾವ ಫೋನ್‌ಗೆ ಹ್ಯಾಕ್ ಮಾಡಬೇಕೆಂದು ಹ್ಯಾಕರ್ ನಿರ್ಧರಿಸುತ್ತಾರೋ, ಆ ಫೋನ್‌ಗೆ ಮೊದಲು ದುರುದ್ದೇಶಪೂರಿತ ವೆಬ್‌ಸೈಟ್ ಲಿಂಕ್‌ಗಳನ್ನು ಕಳುಹಿಸಲಾಗುತ್ತದೆ.
English summary
Pegasus was developed by the Tel Aviv, Israel-based cyber intelligence and security firm NSO Group. The spyware, believed to have been around at least since 2016, is said to be known by other names as well, like Q Suite and Trident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X