ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?

|
Google Oneindia Kannada News

ನವದೆಹಲಿ, ಮಾರ್ಚ್ 27: ಭಾರತದ ವಿಜ್ಞಾನಿಗಳು ಕೆಳಮಟ್ಟದ ಭೂ ಕಕ್ಷೆಯ (ಎಲ್‌ಇಒ) ಉಪಗ್ರಹವನ್ನು ಹೊಡೆದುರುಳಿಸುವ ಸಾಧನೆ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೆಳಮಟ್ಟದ ಭೂ ಕಕ್ಷೆ ಉಪಗ್ರಹ ಎಂದರೇನು?

ಲೋ ಅರ್ಥ್ ಆರ್ಬಿಟ್ (ಭೂಮಿಯ ಕೆಳಕಕ್ಷೆ) ಎನ್ನುವುದು ಭೂಮಿ ಕೇಂದ್ರಿತವಾದ ಕಕ್ಷೆ. ಇದು ಭೂಮಿಯಿಂದ 2,000 ಕಿ.ಮೀ. ಅಥವಾ ಅದಕ್ಕಿಂತ ಕಡಿಮೆ ಎತ್ತರದಲ್ಲಿದೆ. ಈ ಎತ್ತರದಲ್ಲಿ ಸ್ಯಾಟಲೈಟ್‌ ಭೂಮಿಯ ಕಕ್ಷೆಯನ್ನು 84ರಿಂದ 127 ನಿಮಿಷಗಳಲ್ಲಿ ಸುತ್ತುತ್ತದೆ.

ಮೋದಿ ಭಾಷಣ LIVE: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಮೋದಿ ಭಾಷಣ LIVE: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

ಕೆಳಮಟ್ಟದ ಭೂ ಕಕ್ಷೆಯು ದೂರಸಂಪರ್ಕ ಸಂವಹನ ಮತ್ತು ಅಂತರ್ಜಾಲದಲ್ಲಿ ಬಳಸುವ ಉಪಗ್ರಹ ವ್ಯವಸ್ಥೆಯಾಗಿದೆ. ಇಮೇಲ್, ವಿಡಿಯೋ ಕಾನ್ಫರೆನ್ಸ್ ಮುಂತಾದ ಮಾಹಿತಿ ಸಂವಹನಕ್ಕಾಗಿ ಮುಖ್ಯವಾಗಿ ಇದನ್ನು ಬಳಸಲಾಗುತ್ತದೆ. ಇವು ಅತ್ಯಂತ ವಿಪರೀತ ವೇಗದಿಂದ ಚಲಿಸುತ್ತವೆ ಮತ್ತು ಭೂಮಿಗೆ ನಂಟು ಬೆಸೆಯುವಂತೆ ಬಾಹ್ಯಾಕಾಶದಲ್ಲಿ ಸ್ಥಿರವಾಗಿ ಇರುವುದಿಲ್ಲ.

what is low earth orbit? who it works

ಎಲ್‌ಇಒದಲ್ಲಿ ಉಪಗ್ರಹಗಳನ್ನು ನಿಲ್ಲಿಸಲು ತಗುಲುವ ಶಕ್ತಿ ತೀರಾ ಕಡಿಮೆ. ಇದು ಅಧಿಕ ಬ್ಯಾಂಡ್‌ವಿಡ್ತ್ ಮತ್ತು ಸಂವಹನ ಗುಣಮಟ್ಟವನ್ನು ನೀಡುತ್ತದೆ. ಎಲ್‌ಇಒದಲ್ಲಿರುವ ಉಪಗ್ರಹಗಳು ಮತ್ತು ಬಾಹ್ಯಾಕಾಶ ನಿಲ್ದಾಣಗಳು ಸಿಬ್ಬಂದಿಯ ಪ್ರವೇಶಕ್ಕೆ ಮತ್ತು ದುರಸ್ತಿಗೆ ಹೆಚ್ಚು ಅನುಕೂಲಕರವಾಗಿವೆ.

ಈ ಕಕ್ಷೆಯಲ್ಲಿ ಸರ್ಕಾರಿ ಮತ್ತು ಖಾಸಗಿಯಾದ 4,000ಕ್ಕೂ ಅಧಿಕ ಉಪಗ್ರಹಗಳಿವೆ. ತಂತ್ರಜ್ಞಾನ ಬಳಸಿ ಹೊಡೆದುರುಳಿಸುವ ಉಪಗ್ರಹವು ತುಂಡುಗಳಾಗಿ ಭೂ ವಲಯದೊಳಗೆ ಬಿದ್ದು ಸುಟ್ಟುಹೋಗುತ್ತವೆ.

ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಬಲ? ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಬಲ?

700 ಕಿ.ಮೀ. ಎತ್ತರದ ಉಪಗ್ರಹವನ್ನು ಚೀನಾ ಹೊಡೆದುರುಳಿಸಿತ್ತು. ಆ ಎತ್ತರದಲ್ಲಿ ಯಾವುದೇ ಗುರುತ್ವಾಕರ್ಷಣೆ ಇಲ್ಲದ ಕಾರಣ ಆ ಉಪಗ್ರಹದ ಅವಶೇಷಗಳು ಭೂಮಿಗೆ ಪ್ರವೇಶಿಸಿರಲಿಲ್ಲ. ಈ ಅವಶೇಷಗಳು ಈಗಲೂ ಬಾಹ್ಯಾಕಾಶದಲ್ಲಿ ತೇಲಾಡುತ್ತಿವೆ.

ಭಾರತ ಹೊಡದುರುಳಿಸಿರುವ ಉಪಗ್ರಹ 300 ಕಿ.ಮೀ. ಎತ್ತರದಲ್ಲಿ ಇದೆ. ಇದು ಅತ್ಯಂತ ಕಡಿಮೆ ಎತ್ತರದ ಕಕ್ಷೆ. ಇದರ ಅವಶೇಷಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ ಸುಟ್ಟುಹೋಗುತ್ತವೆ.

English summary
Prime Minister Narendra Modi has announced that Indian scientists shot down A Low earth Orbit satellite. What is LEO? Here is the detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X