• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಾದಾತ್ಮಕ 'ಲವ್‌ ಜಿಹಾದ್‌'? ಎಂದರೇನು

|

ಬೆಂಗಳೂರು. ಆ. 25 : ಮತ್ತೆ 'ಲವ್‌ ಜಿಹಾದ್‌' ವಿವಾದಕ್ಕೆ ಜೀವ ಬಂದಿದೆ. ಕೇರಳ, ಕರ್ನಾಟಕದಲ್ಲಿ ಕೇಳಿಬರುತ್ತಿದ್ದ ಆರೋಪಗಳು ಉತ್ತರ ಪ್ರದೇಶಕ್ಕೂ ಕಾಲಿಟ್ಟಿದೆ. ಇದೇ ವಿಷಯ ಇಟ್ಟುಕೊಂಡು ಸಮಾಜವಾದಿ ಪಕ್ಷದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಸಮಾಜವಾದಿ ಪಕ್ಷದ ನಾಯಕ, ಮುಖ್ಯಮಂತ್ರಿ, ಅಖಿಲೇಶ್‌ ಯಾದವ್‌ ನೇತೃತ್ವದ ಸರ್ಕಾರ 'ಲವ್‌ ಜಿಹಾದ್‌' ಗೆ ಪ್ರಚಾರಕ ಮತ್ತು ಪೋಷಕನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಘಟಕ ಗಂಭೀರ ಆರೋಪ ಮಾಡಿದೆ. ಎರಡು ದಿನ ಕಾಲ ವೃಂದಾವನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.

ಲವ್‌ ಜಿಹಾದ್‌ ಎಂದರೇನು?

ಹಿಂದೂ ಸಂಪ್ರದಾಯವಾದಿಗಳು ಹೇಳುವಂತೆ ಲವ್‌ ಜಿಹಾದ್‌ ಎಂದರೆ ಪರೋಕ್ಷವಾಗಿ ಮತಾಂತರ ಮಾಡುವ ಪ್ರಕ್ರಿಯೆ. ಹಿಂದು ಅಥವಾ ಮುಸ್ಲಿಮೇತರ ಯುವತಿಯರನ್ನು ನಂಬಿಸಿ ಮದುವೆಯಾಗುವ ಮುಸ್ಲಿಂ ಯುವಕರು ನಂತರ ಅವರನ್ನು ಬಲವಂತದಿಂದ ಮುಸ್ಲಿಂ ಆಗಿ ಮತಾಂತರ ಮಾಡುತ್ತಾರೆ.

ಈ ರೀತಿಯ ಲವ್‌ ಜಿಹಾದ್‌ ಪ್ರಕರಣಗಳು ದಶಕದ ಹಿಂದೆ ಕೇರಳದಲ್ಲಿ ಕಂಡುಬಂದಿತು. ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶಕ್ಕೂ ವ್ಯಾಪಿಸಿದೆ ಎಂದು ಲಕ್ನೋ ವಿಶ್ವವಿದ್ಯಾಲಯಯ ರಾಜೀವ್‌ ಶುಕ್ಲಾ ಹೇಳುತ್ತಾರೆ.

ಬಿಜೆಪಿ ಕಾರ್ಯಕಾರಣಿಯಲ್ಲಿ ಕೇಳಿಬಂದಿದ್ದೇನು?

ಬಿಜೆಪಿ ಸಭೆಯಲ್ಲಿ ಲವ್‌ ಜಿಹಾದ್‌ ಬಗ್ಗೆ ಗಹನ ಚರ್ಚೆ ನಡೆಯಿತು. ಹಿಂದೂ ಸಮಾಜ ಮತ್ತು ಮಹಿಳೆಯರ ಮೇಲೆ ಇದು ಮಾಡುತ್ತಿರುವ ಪರಿಣಾಮ, ತಂದಿಟ್ಟಿರುವ ಆತಂಕ ಮತ್ತು ಈ ಬಗ್ಗೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಎಲ್ಲವನ್ನು ಚರ್ಚಿಸಲಾಯಿತು.

ಉತ್ತರ ಪ್ರದೇಶ ಬಿಜೆಪಿ ವಕ್ತಾರ ವಿಜಯ್‌ ಬಹಾದ್ದೂರ್‌ ಪಾಠಕ್‌ ಹೇಳುವಂತೆ, ಇಂಥ ಆತಂಕಕಾರಿ ಪರಿಸ್ಥಿತಿಯನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಬಹಳಷ್ಟು ಪ್ರಕರಣಗಳಲ್ಲಿ ಕಷ್ಟಕ್ಕೆ ಸಿಲುಕುತ್ತಿರುವವರು ಹಿಂದು, ಕಷ್ಟಕ್ಕೆ ದೂಡುತ್ತಿರುವವರು ಮುಸ್ಲಿಂ. ರಾಜ್ಯ ಕಾರ್ಯಕಾರಣಿ ಸಭೆ ನಡೆಯುವಾಗ ಇಂಥ ವಿಚಾರವನ್ನು ಚರ್ಚಿಸಬೇಕಾದ ಅಗತ್ಯವಿದೆ. ಲವ್‌ ಜಿಹಾದ್‌ ಸಮಾಜದ ಯಾವ ರೀತಿ ಮೇಲೆ ವರ್ತಿಸುತ್ತಿದೆ ಎಂಬುದನ್ನು ಕಂಡುಹಿಡಿಯಬೇಕಿದೆ ಎಂದು ಹೇಳಿದ್ದಾರೆ.

ಕಾರ್ಯಕಾರಿಣಿಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಬಿಜೆಪಿ ಮುಖಂಡ ಲಕ್ಷ್ಮೀಕಾಂತ್‌ ಬಾಜ್‌ಪೈ, ಯುವಕರು ಇಂಥ ಲವ್‌ ಜೀಹಾದ್‌ಗೆ ಸದಾ ವಿರುದ್ಧವಾಗಿ ವರ್ತಿಸಬೇಕು. ಇಂಥ ಪ್ರಕರಣಗಳಲ್ಲಿ ಭಾಗಿಯಾಗುವವರ ಮೇಲೆ ಸರ್ಕಾರ ಯಾಕೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬಗೆಯ ಮೃದು ಧೋರಣೆ ಯಾವುದೋ ಒಂದು ವರ್ಗಕ್ಕೆ ಮತಾಂತರ ಮಾಡಲು ಪರವಾನಗಿ ನೀಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತ ವರ್ಗದವರಿಗೆ ನೀಡಿದ ಅನೇಕ ಸೌಲಭ್ಯಗಳು, ಅವರ ಪರವಾಗಿ ಜಾರಿ ಮಾಡಿದ ಕಾನೂನುಗಳು ಸಹ ಮತಾಂತರಕ್ಕೆ ಕಾರಣವಾಗುತ್ತಿವೆ, ಈ ರೀತಿಯ ಕ್ರಮಗಳು ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಲು ಕಾರಣವಾಗಿದೆ ಎಂದು ಹೇಳಿದರು.

ಏಳೆಂಟು ವರ್ಷದ ಹಿಂದೆ ಅಲ್ಲಿಲ್ಲಿ ಕಂಡುಬರುತ್ತಿದ್ದ ಲವ್‌ ಜಿಹಾದ್‌ ಕಳೆದ ಒಂದೆರಡು ವರ್ಷಗಳಲ್ಲಿ ರಾಜ್ಯದ ತುಂಬೆಲ್ಲಾ ಹರಡುತ್ತಿದೆ ಎಂಬುದು ಬಿಜೆಪಿಯ ಶಾಸಕರೊಬ್ಬರ ಆರೋಪ.

ಸಮಾಜವಾದಿ ಪಕ್ಷ ಏನು ಹೇಳುತ್ತೆ?

ಕೇವಲ ರಾಜಕೀಯ ಲಾಭಕ್ಕೆ ಬಿಜೆಪಿ ಇಂಥ ಸುಳ್ಳು ಆರೋಪ ಮಾಡುತ್ತಿದೆ. ಸುಳ್ಳು ಸುದ್ದಿಗಳು ಅಮೆರಿಕಕ್ಕೂ ತಲುಪಿವೆ. ಒಬ್ಬ ಮುಖ್ಯಮಂತ್ರಿಯಾಗಿ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದೇ ತಿಳಿಯದಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಅಖಿಲೇಶ್‌ ಯಾದವ್‌ ತೀಕ್ಷ್ಣವಾಗಿ ಉತ್ತರಿಸುತ್ತಾರೆ.

ಈ ರೀತಿಯ ಬಹಳಷ್ಟು ಪ್ರಕರಣಗಳಲ್ಲಿ ಹುಡುಗ ಮತ್ತು ಹುಡುಗಿ ಪರಿಚಯದವರೇ ಆಗಿದ್ದಾರೆ. ಪ್ರೀತಿಸುವವರನ್ನು ಅಥವಾ ಪ್ರೀತಿಯನ್ನು ತಡೆಯಲು ಮಂದಾಗಬೇಕೆ? ಮೊಬೈಲ್‌ನಲ್ಲಿ ಮಾತನಾಡುವುದು, ಸಂದೇಶ ಕಳಿಸುವುದನ್ನು ತಡೆಯಲು ಸಾಧ್ಯವಿಲ್ಲ. ಪ್ರೇಮಿಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಇಲ್ಲಿ ಒಳ್ಳೆಯದೂ ಆಗಿದೆ, ಕೆಲವೊಮ್ಮೆ ಕೆಟ್ಟದ್ದು ಆಗಿದೆ ಎಂದು ಹೇಳಿದ್ದಾರೆ.

ರಾಜಕಾರಣಿಯಾಗಿ ಬದಲಾದ ನಟಿ ಹೇಮಾಮಾಲಿನಿಯವರೇ ಅಭಿನಯಿಸಿದ್ದ 1975ರಕಲ್ಲಿ ಧರ್ಮಾತ್ಮ ಚಿತ್ರದ ಕತೆ ಏನು ಹೇಳುತ್ತದೆ. ಫಿರೋಜ್‌ ಖಾನ್‌ ಜತೆ ಅಭಿನಯಿಸಿದ್ದ ಚಿತ್ರದಲ್ಲಿ ಪ್ರೀತಿ-ಪ್ರೇಮದ ಸಂದೇಶವಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ದೂರಿದ ಮಾಯಾವತಿ

ಬಿಜೆಪಿಯವರು ಮತ ಸೆಳೆಯಲು ಇಲ್ಲದ ತಂತ್ರ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜವಾದಿ ಪಾರ್ಟಿ ಆರೋಪಿದೆ. ನಾಯಕಿ ಮಾಯಾವತಿ ಮಾತನಾಡಿ, ಮುಂಬರುವ ಸೆಪ್ಟೆಂಬರ್‌ನಲ್ಲಿ 12 ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ಬಿಜೆಪಿ ಈಗಿನಿಂದಲೇ ಸಿದ್ಧತೆಯಲ್ಲಿ ತೊಡಗಿದೆ. ಇಂಥ ಆರೋಪ-ಪ್ರತ್ಯಾರೋಪಗಳು ದೇಶವನ್ನು ಗಂಡಾಂತರಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಸಿದ್ದಾರೆ.

English summary
A day after the BJP's Uttar Pradesh unit accused the Akhilesh Yadav-led Samajwadi Party government of promoting and patronizing "love jihad" in the state during its two-day state executive meet in Vrindavan, the party on Sunday distanced itself from the controversial issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X