• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರವಾಹದ ನಂತರ ಕೇರಳಕ್ಕೆ ಅಪ್ಪಳಿಸಿದ ಇಲಿಜ್ವರ: ಏನಿದು, ಲಕ್ಷಣವೇನು?

|
   ಲೆಪ್ಟೋಸ್ಪಿರೊಸಿಸ್ ಅಥವಾ ಇಲಿಜ್ವರ ಎಂದರೇನು? ಇದರ ಲಕ್ಷಣಗಳೇನು? ಮನೆಮದ್ದು ಹಾಗು ಚಿಕಿತ್ಸೆ ಹೇಗೆ?

   ತಿರುವನಂತಪುರಂ, ಸೆಪ್ಟೆಂಬರ್ 04: ಪ್ರವಾಹದ ದುರಂತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕೇರಳ ಜನತೆಗೆ ಲೆಪ್ಟೋಸ್ಪಿರೊಸಿಸ್ ಎಂಬ ಹೊಸ ಆಘಾತ ಬಂದೆರಗಿದೆ. ಲೆಪ್ಟೋಸ್ಪಿರೊಸಿಸ್ ಅಥವಾ ಇಲಿಜ್ವರ ಎಂಬ ಈ ಮಾರಣಾಂತಿಕ ಕಾಯಿಲೆಗೆ ಕೇರಳದಲ್ಲಿ ಇದುವರೆಗೆ 41 ಮಂದಿ ಬಲಿಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

   ಇತ್ತೀಚೆಗಷ್ಟೇ ನಿಫಾಹ್ ವೈರಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಕಂಗೆಟ್ಟಿದ್ದ ಕೇರಳಕ್ಕೆ ಒಂದರಮೇಲೊಂದರಂತೆ ಕಷ್ಟಗಳು ಬಂದೆರಗುತ್ತಲೇ ಇವೆ.

   ಪ್ರವಾಹ ಆಯ್ತು, ಈಗ ಇಲಿ ಜ್ವರದ ಭೀತಿ: ಕೇರಳದಲ್ಲಿ 41 ಸಾವು

   ಅಷ್ಟಕ್ಕೂ ಇದೀಗ ಕೇರಳಿಗರ ನಿದ್ದೆ ಕೆಡಿಸಿರುವ ಈ ಇಲಿಜ್ವರಕ್ಕೆ ಕಾರಣವೇನು? ಲಕ್ಷಣವೇನು? ಮನೆಮದ್ದು, ಮುನ್ನೆಚ್ಚರಿಕೆ ಕ್ರಮಗಳು ಯಾವವು. ಇಲ್ಲಿವೆ ಮಾಹಿತಿ.

   ಏನಿದು ಲೆಪ್ಟೋಸ್ಪಿರೊಸಿಸ್ ಅಥವಾ ಇಲಿಜ್ವರ ?

   ಏನಿದು ಲೆಪ್ಟೋಸ್ಪಿರೊಸಿಸ್ ಅಥವಾ ಇಲಿಜ್ವರ ?

   ಲೆಪ್ಟೋಸ್ಪಿರೊಸಿಸ್ ಅಥವಾ ಇಲಿಜ್ವರ ಎಂಬುದು ಲೆಪ್ತೋಸ್ಪಿರಾ ಇಂಟರಾಗನ್ಸ್ ಎಂಬ ಬ್ಯಾಕ್ಟೀರಿಯಾ ದಿಂದ ಬರುವ ಕಾಯಿಲೆ. ಈ ಬ್ಯಾಕ್ಟೀರಿಯಾ ಪ್ರಾಣಿಗಳ ಕಿಡ್ನಿಯಲ್ಲಿ ಕಂಡುಬರುತ್ತದೆ. ಇದು ಅವುಗಳ ಮೂತ್ರದ ಮೂಲಕ ಮಣ್ಣು ಅಥವಾ ನೀರನ್ನು ಸೇರಿ ನಂತರ ಮನುಷ್ಯನಿಗೆ ಹರಡುತ್ತದೆ. ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸುಲಭವಾಗಿ ಹರಡಬಹುದಾದ ಸೋಂಕು ಕಾಯಿಲೆ ಅಲ್ಲದಿದ್ದರೂ, ತಾಯಿ ಎದೆಹಾಲಿನಿಂದ ಮಗುವಿಗೆ ಮತ್ತು ಲೈಂಗಿಕತೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು ಎನ್ನುತ್ತಾರೆ ವೈದ್ಯರು.

   ಯಾರಿಗೆ ಅಪಾಯ ಹೆಚ್ಚು?

   ಯಾರಿಗೆ ಅಪಾಯ ಹೆಚ್ಚು?

   ಪ್ರಾಣಿಗಳ ಬಳಿ ಹೆಚ್ಚು ಸಮಯ ಕಳೆಯುವವರಿಗೆ ಮತ್ತು ಪ್ರಾಣಿಗಳು ವಾಸಿಸುವ ಪ್ರದೇಗಳಲ್ಲಿ ಹೆಚ್ಚು ಕೆಲಸ ಮಾಡುವವರಿಗೆ ಈ ಕಾಯಿಲೆಯ ಅಪಾಯ ಹೆಚ್ಚು. ಅದರಲ್ಲೂ ಕಾಡು ಇಲಿಗಳು ಇದರ ಮುಖ್ಯ ಪ್ರವರ್ತಕರಾಗಿರುವುದರಿಂದ ಅವುಗಳಿಂದ ದೂರವಿರಿ. ಇದು ಮಣ್ಣಿನ ಕೆಲಸ ಮಾಡುವವರಿಗೆ ಮತ್ತು ನೀರಿನ ಸಂಪರ್ಕಕ್ಕೆ ಹೆಚ್ಚು ಮೈಯೊಡ್ಡುವವರಿಗೆ ಬಹುಬೇಗ ಬರಬಹುದು. ಏಕೆಂದರೆ ಪ್ರಾಣಿಗಳ ಮೂತ್ರ ಮಣ್ಣು ಮತ್ತು ನೀರಿಗೆ ಸೇರುವುದರಿಂದ ಚರ್ಮದ ಮೇಲಾದ ಗಾಯಗಳ ಮೂಲಕ, ಚರ್ಮದ ಬಿರುಕುಗಳ ಮೂಲಕ, ಮೂಗಿನ ಮೂಲಕ, ಬಾಯಿ ಮತ್ತು ಜನನಾಂಗಗಳ ಮೂಲಕ ದೇಹಕ್ಕೆ ಸೇರುವ ಅಪಾಯ ಹೆಚ್ಚು. ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಹೆಚ್ಚು ಕೆಲಸ ಮಾಡುವ ರೈತರು, ಸೇನಾ ಸಿಬ್ಬಂದಿ, ಪಶುವೈದ್ಯರು, ಮಾಂಸದ ವ್ಯಾಪಾರಿಗಳಿಗೆ ಈ ರೋಗ ತಗುಲುವ ಅಪಾಯ ಹೆಚ್ಚು.

   ರೋಗದ ಲಕ್ಷಣಗಳೇನು?

   ರೋಗದ ಲಕ್ಷಣಗಳೇನು?

   ಬ್ಯಾಕ್ಟೀರಿಯಾ ಸೋಂಕು ತಗುಲಿದ ಎರಡು ವಾರಗಳ ಒಳಗೆ ಅದರ ಲಕ್ಷಣ ಕಂಡುಬರುವುದಕ್ಕೆ ಆರಂಭವಾಗುತ್ತದೆ. ಮೊದಲಿಗೆ ಜ್ವರ ಆರಂಭವಾಗುತ್ತದೆ.

   * 104 ಡಿಗ್ರಿಯವರೆಗೆ ಸುಡುವ ಜ್ವರ ಮೊದಲ ಲಕ್ಷಣ.

   * ಅತಿಯಾದ ತಲೆನೋವು

   * ಮಾಂಸಖಂಡಗಳಲ್ಲಿ ನೋವು

   * ಕಾಮಾಲೆ ಅಥವಾ ಜಾಂಡೀಸ್(ಚರ್ಮ ಮತ್ತು ಕಣ್ಣು ಹಳದಿಯಾಗುವುದು)

   * ವಾಂತಿ,ಬೇಧಿ

   * ಚರ್ಮಗಳಲ್ಲಿ ತುರಿಕೆ ಮತ್ತು rashes ಕಂಡುಬರುವುದು.

   ಪತ್ತೆ ಹಚ್ಚುವುದು ಹೇಗೆ?

   ಪತ್ತೆ ಹಚ್ಚುವುದು ಹೇಗೆ?

   ಈ ಮೇಲಿನ ಲಕ್ಷಣಗಳಲ್ಲಿ ಕೆಲವು ನಿಮ್ಮಲ್ಲಿ ಕಂಡುಬಂದರೆ, ತಕ್ಷಣೇ ವೈದ್ಯರನ್ನು ಕಾಣಿ. ಸಹಜ ಜ್ವರವಲ್ಲ ಎಂಬ ಅನುಮಾನ ಬಂದರೆ ವೈದ್ಯರೇ ರಕ್ತ ಪರೀಕ್ಷೆಗೆ ಸೂಚಿಸುತ್ತಾರೆ. ರಕ್ತ ಪರೀಕ್ಷೆಯಿಂದ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗುತ್ತದೆ. ರೋಗ ಉಲ್ಬಣಿಸುವ ಮೊದಲು ಚಿಕಿತ್ಸೆ ಪಡೆದಿದ್ದೇ ಆದಲ್ಲಿ ರೋಗ ಗುಣಮುಖನಾಗುವುದು ಖಂಡಿತ. ದೇಹದಲ್ಲಿ ಈ ಬ್ಯಾಕ್ಟೀರಿಯಾ ಪತ್ತೆಯಾದರೆ ವೈದ್ಯರು antibiotics ಗಳನ್ನು ನೀಡಿ ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾವನ್ನು ಸಾಯಿಸಲು ಮುಂದಾಗುತ್ತಾರೆ. ಕೆಲವೊಮ್ಮೆ ರಕ್ತ ಪರೀಕ್ಷೆಯಲ್ಲಿ ರೋಗ ಪತ್ತೆಯಾಗದಿದ್ದರೂ, ರೋಗ ಲಕ್ಷಣಗಳು ಕಂಡುಬಂದು, ಯಾವ ಔಷಧಕ್ಕೂ ಕಡಿಮೆಯಾಗದ ಪಕ್ಷದಲ್ಲಿ ವೈದ್ಯರು ಡಿಎನ್ ಎ ಪರೀಕ್ಷೆಗೂ ಸೂಚಿಸಬಹುದು.

   ಚಿಕಿತ್ಸೆ ಹೇಗೆ?

   ಚಿಕಿತ್ಸೆ ಹೇಗೆ?

   ರೋಗ ಪತ್ತೆಯಾಗುತ್ತಿದ್ದಂತೆಯೇ ವೈದ್ಯರು antibiotecs ಗಳನ್ನು ನೀಡುತ್ತಾರೆ. ಪೆನ್ಸಿಲಿನ್, ಡಾಕ್ಸಿಸೈಕ್ಲಿನ್ ಔಷಧಗಳನ್ನು ನೀಡುತ್ತಾರೆ. ರೋಗ ಪತ್ತೆಯಾಗುತ್ತಿದ್ದಂತೆಯೇ ಚಿಕಿತಸೆ ಆರಂಭಿಸುವುದರಿಂದ ಪರಿಹಾರ ಸಾಧ್ಯ. ನಿರ್ಲಕ್ಷ್ಯಿಸುವುದರಿಂದ ಕಿಡ್ನಿ ವೈಫಲ್ಯ, ಶ್ವಾಸಕೋಶದ ಸಮಸ್ಯೆ ಮುಂತಾದವು ಆರಂಭವಾಗಬಹುದು.

   ಮುನ್ನೆಚ್ಚರಿಕೆ ಕ್ರಮಗಳು ಯಾವವು?

   ಮುನ್ನೆಚ್ಚರಿಕೆ ಕ್ರಮಗಳು ಯಾವವು?

   ರೋಗ ಬರುವುದಕ್ಕೂ ಮುನ್ನವೇ ಮುನ್ನೆಚ್ಚರಿಕೆ ವಹಿಸುವುದು ರೋಗ ತಡೆಗೆ ಅತ್ಯುತ್ತಮ ಮಾರ್ಗ.

   * ಹೊರಗಡೆ, ಶುದ್ಧವಲ್ಲದ ನೀರು ಕುಡಿಯುವುದನ್ನು ನಿಲ್ಲಿಸಿ.

   * ಈ ಸಮಯದಲ್ಲಿ ಈಜು, ಸೇಲಿಂಗ್, ಮೀನುಗಾರಿಕೆ ಸೇರಿದಮತೆ ನೀರಿನ ಸಂಪರ್ಕಕ್ಕೆ ಬರುವ ಯಾವುದೇ ಕೆಲಸವನ್ನು ಸ್ವಲ್ಪದಿನದ ಮಟ್ಟಿಗೆ ನಿಲ್ಲಿಸಿ.

   * ಕಾಡು ಇಲಿ ಮತ್ತು ಇನ್ನಿತರ ಪ್ರಾಣಿಗಳಿಂದ ಆದಷ್ಟು ದೂರವಿರಿ. ಪ್ರಾಣಿಗಳ ಮೈಡವಿದರೆ ಅಥವಾ ಅವುಗಳ ಮೂತ್ರ, ಎಂಜಿಲು ಸೋಂಕಿದರೆ ತಕ್ಷಣವೇ ಸೋಪಿನಿಂದ ಅದು ತಾಕಿದ ಜಾಗವನ್ನು ಚೆನ್ನಾಗಿ ತೊಳೆಯಿರಿ.

   * ಮಣ್ಣಿನ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಿ.

   ಮುನ್ನೆಚ್ಚರಿಕೆಯಾಗಿ ಮನೆಮದ್ದು

   ಮುನ್ನೆಚ್ಚರಿಕೆಯಾಗಿ ಮನೆಮದ್ದು

   ಇಲಿಜ್ವರ ಪತ್ತೆಯಾದ ಕೂಡಲೇ ವೈದ್ಯರು ಸೂಚಿಸಿದ ಔಷಧವನ್ನು ಕಡ್ಡಾಯವಾಗಿ ಸೇವಿಸಲೇಬೇಕು. ಅದರೊಟ್ಟಿಗೆ ಮನೆಮದ್ದುಗಳನ್ನೂ ಮಾಡುವುದು ಹೆಚ್ಚು ಪರಿಣಾಮಕಾರಿ. ಜೊತೆಗೆ ರೋಗ ಬರುವುದಕ್ಕೂ ಮುನ್ನವೇ ಮನೆ ಮದ್ದುಗಳನ್ನು ಮುನ್ನೆಚ್ಚರಿಕೆಯಾಗಿಯೂ ಬಳಸಬಹುದು.

   * ದೇಹದಲ್ಲಿ ಗ್ಲೊಕೋಸ್ ಮತ್ತು ಉಪ್ಪಿನ ಅಂಶ ಸಮಪ್ರಮಾಣದಲ್ಲಿ ಇರುವಂಥ ಆಹಾರ ಸೇವಿಸಿ. ಇದರಿಂದ ರೋಗ ಬರದಂತೆ ಎಚ್ಚರಿಕೆ ವಹಿಸಬಹುದು.

   * ಶುಂಠಿ ಸೇವನೆ: ರೋಗ ನಿರೋಧಕ ಶಕ್ತಿ ಹೆಚ್ಚಿರುವ ಶೂಂಠಿ ಸೇವನೆಯಿಂದಲೂ ಈ ರೋಗ ಬರದಂತೆ ಎಚ್ಚರಿಕೆ ವಹಿಸುವುದಕ್ಕೆ ಸಾಧ್ಯ.

   *ಕಬ್ಬಿಣದ ಅಂಶ ಹೆಚ್ಚಿರುವ ಆಹಾರ ಸೇವಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ(ಪಾಲಾಕ್, ಮಾಂಸ, ಮೊಟ್ಟೆ ಇತ್ಯಾದಿ)

   * ಕ್ಯಾಲ್ಷಿಯಂ ಹೆಚ್ಚಿರುವ ಆಹಾರವನ್ನು ಸ್ವಲ್ಪ ದಿನ ಸೇವಿಸಬೇಡಿ(ಹಾಲು ಮತ್ತು ಹಾಲಿನ ಉತ್ಪನ್ನಗಳು)

   * ನೆಲಬೇವಿನ(Andrographis) ಕಷಾಯ ಮಾಡಿ ಕುಡಿಯುವುದು ಉತ್ತಮ.

   * ಅರಿಶಿಣ: ಅರಿಶಿಣದಲ್ಲೂ ಸಾಕಷ್ಟು ರೋಗನಿರೋಧಕ ಶಕ್ತಿ ಇರುವುದರಿಂದ ಅದನ್ನು ಹೆಚ್ಚು ಸೇವಿಸಿ.

   English summary
   What is Leptospirosis or rat fever? What are the symptoms, precautionary measures, what are home remedies? Here are the details. About 41 people died due to this Leptospirosis disease in Kerala so far.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more