ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ನಿಯಂತ್ರಣದಲ್ಲಿ 'ಹರ್ಡ್ ಇಮ್ಯುನಿಟಿ' ಪಾತ್ರವೇನು?

|
Google Oneindia Kannada News

ಜನತೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಸೋಂಕು ಹರಡದಂತೆ ತಡೆಯುವುದೇ ಹರ್ಡ್ ಇಮ್ಯುನಿಟಿ ಅಥವಾ ಸಮುದಾಯ ಪ್ರತಿರೋಧಕ ಶಕ್ತಿ ಎಂದು ಕರೆಯುತ್ತಾರೆ.

ಹರ್ಡ್ ಇಮ್ಯುನಿಟಿ ಎನ್ನುವುದು ವೈರಸ್ ಅಥವಾ ರೋಗದಿಂದ ನಮಗೆ ಸಿಗುವ ಪರೋಕ್ಷ ರಕ್ಷಣೆ, ಇದರಿಂದ ಜನರನ್ನು ರಕ್ಷಣೆ ಮಾಡಬಹುದಾಗಿದೆ. ಒಂದು ಲಸಿಕಅಭಿವೃದ್ಧಿಪಡಿಸಿದಾಗ ಅಥವಾ ಜನರಿಗೆ ಸೋಂಕು ತಗುಲಿ ಗುಣಮುಖರಾದಾಗ ಇದು ಹೆಚ್ಚು ಅನುಕೂಲವಾಗುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನ 57 ಸಾವಿರ ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನ 57 ಸಾವಿರ ಕೊರೊನಾ ಸೋಂಕಿತರು ಪತ್ತೆ

ಅತಿ ಹೆಚ್ಚು ಜನಸಂಖ್ಯೆಗೆ ಸೋಂಕು ಹರಡಿ ಗುಣವಾದಾಗ ಅಥವಾ ಅತಿ ಹೆಚ್ಚು ಜನರು ಪ್ರತಿರೋಧ ಶಕ್ತಿ ಬೆಳೆಸಿಕೊಂಡಾಗ ವೈರಸ್ ಹರಡುವಿಕೆ ಕ್ರಮೇಣ ಕಡಿಮೆಯಾಗುತ್ತದೆ.

ಬಹುಪಾಲು ಜನರಿಗೆ ಸೋಂಕು ತಗುಲಿದಾಗ ತನ್ನಿಂತಾನೆ ಜನರಲ್ಲಿ ರೋಗ ನಿರೋಧಕರ ಶಕ್ತಿ ಬೆಳೆಯುತ್ತದೆ, ಅದನ್ನು ಹರ್ಡ್ ಇಮ್ಯುನಿಟಿ ಎನ್ನಲಾಗುತ್ತದೆ.

ಸಮುದಾಯ ಪ್ರತಿರೋಧಕ ಶಕ್ತಿಯ ಉಪಯೋಗವೇನು?

ಸಮುದಾಯ ಪ್ರತಿರೋಧಕ ಶಕ್ತಿಯ ಉಪಯೋಗವೇನು?

ಸಮುದಾಯದಲ್ಲಿ ಬಹುಪಾಲು ಜನರಿಗೆ ಕೊರೊನಾದಂತಹ ಸೋಂಕು ಕಾಣಿಸಿಕೊಂಡಾಗ ಅವರಲ್ಲಿಯೇ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ. ಲಸಿಕೆಗಳಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇಡೀ ಸಮುದಾಯಕ್ಕೆ ಸೋಂಕು ಆವರಿಸಿದರೆ ಚೇತರಿಸಿಕೊಂಡವರಲ್ಲಿ ತನ್ನಿಂತಾನೆ ರೋಗ ನಿರೋಧಕ ಶಕ್ಕಿ ಉತ್ಪತ್ತಿಯಾಗಿ ರೋಗ ಹರಡುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಆದರೆ ಸಮುದಾಯದ ಶೇ.94ರಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬೇಕು.

ಹರ್ಡ್ ಇಮ್ಯುನಿಟಿಯನ್ನು ಪಡೆಯುವುದು ಹೇಗೆ?

ಹರ್ಡ್ ಇಮ್ಯುನಿಟಿಯನ್ನು ಪಡೆಯುವುದು ಹೇಗೆ?

ಲಸಿಕೆ ಮೂಲಕ ಮತ್ತು ಸಹಜವಾಗಿ ಎರಡು ವಿಧಾನಗಳಿಂದ ಹರ್ಡ್ ಇಮ್ಯುನಿಟಿ ಪಡೆಯಬಹುದಾಗಿದೆ. ಲಸಿಕೆಯನ್ನು ನೀಡಿದರೆ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಆದರೆ ಅದರಿಂದ ಸಮಸ್ಯೆಗಳೇ ಹೆಚ್ಚು. ಲಸಿಕೆಗಳು ಪೊಲಿಯೋ, ಸ್ಮಾಲ್ ಪಾಕ್ಸ್, ರುಬೆಲ್ಲಾ ಸೇರಿದಂತೆ ಅನೇಕ ರೋಗಗಳನ್ನು ತಡೆಯಲು ಸಹಕಾರಿಯಾಗಿದೆ. ಆದರೆ ಈಗ ಕೊರೊನಾ ಸೋಂಕನ್ನು ತಡೆಯುವುದರಲ್ಲಿಯೂ ಯಶಸ್ವಿಯಾಗಿಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಕಷ್ಟು ಮಂದಿಗೆ ಲಸಿಕೆಯನ್ನು ಕೊಂಡುಕೊಳ್ಳುವ ಶಕ್ತಿ ಇರುವುದಿಲ್ಲ. ಅಮೆರಿಕದ ರೀತಿ ದಿನಕ್ಕೆ ಲಕ್ಷದ ವರೆಗೆ ಪ್ರಕರಣಗಳು ಪತ್ತೆಯಾದರೆ ಎಲ್ಲರಿಗೂ ಲಸಿಕೆಯನ್ನು ಪೂರೈಸುವುದು ಕೂಡ ಕಷ್ಟವಾಗಬಹುದು.

ಇನ್ನು ಸಹಜ ವಾಗಿಯೂ ಇಮ್ಯುನಿಟಿ ಪಡೆಯಬಹುದಾಗಿದೆ. ಸಮುದಾಯದ ಬಹುತೇಕ ಮಂದಿಗೆ ಸೋಂಕು ತಗುಲಿದರೆ ಅವರೊಳಗೆಯೇ ಪ್ರತಿರೋಧ ಶಕ್ತಿ ಉತ್ಪತ್ತಿಯಾಗುತ್ತದೆ. ಎಚ್‌1ಎನ್‌1, 1918 ಫ್ಲೂ ಗಳಲ್ಲಿ ಸಮುದಾಯದಲ್ಲೇ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿತ್ತು.

ಕೊರೊನಾ ಸೋಂಕು ಹರಡುವುದನ್ನು ಕಡಿಮೆ ಮಾಡುವುದು ಹೇಗೆ?

ಕೊರೊನಾ ಸೋಂಕು ಹರಡುವುದನ್ನು ಕಡಿಮೆ ಮಾಡುವುದು ಹೇಗೆ?

-ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿ
-ಪ್ರತಿಯೊಬ್ಬರಿಂದ 2 ಮೀಟರ್ ಅಥವಾ 6 ಅಡಿ ಅಂತರವನ್ನು ಕಾಯ್ದುಕೊಳ್ಳಿ
-ಪದೇವ ಪದೇ ಕೈಗಳನ್ನು ತೊಳೆಯಿರಿ
-ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸಿ ಅಥವಾ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಳ್ಳಿ
-ನೀವು ಸೀನುವಾಗ ಅಥವಾ ಕೆಮ್ಮುವಾಗ ನಿಮ್ಮ ಮುಖ, ಬಾಯಿಯನ್ನು ಮುಚ್ಚಿ
-ನಿಮ್ಮ ಮುಖ, ಕಣ್ಣು, ಮೂಗನ್ನು ಮುಟ್ಟಬೇಡಿ
-ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ ಅನವಶ್ಯಕ ಓಡಾಟ ಬೇಡ

ಸಮುದಾಯ ಪ್ರತಿರೋಧಕ ಶಕ್ತಿ ಸದ್ಯದ ಆಯ್ಕೆಯಲ್ಲ

ಸಮುದಾಯ ಪ್ರತಿರೋಧಕ ಶಕ್ತಿ ಸದ್ಯದ ಆಯ್ಕೆಯಲ್ಲ

ಸಮುದಾಯ ಪ್ರತಿರೋಧಕ ಶಕ್ತಿಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಹರ್ಡ್ ಇಮ್ಯುನಿಟಿ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಸಾಧ್ಯವಿಲ್ಲ. ಸದ್ಯಕ್ಕೆ ಕೊರೊನಾದ ಲಕ್ಷಣಗಳನ್ನು ನೋಡಿಕೊಂಡು ಚಿಕಿತ್ಸೆ ನೀಡಬೇಕಾಗಿದೆ. ಒಟ್ಟು ಜನಸಂಖ್ಯೆಯ ಶೇ.70-90ರಷ್ಟು ಮಂದಿಗೆ ಸೋಂಕು ತಗುಲಿದಾಗ ಹರ್ಡ್ ಇಮ್ಯುನಿಟಿ ತಂತ್ರ ಪ್ರಯೋಜನಕಾರಿ, ಆದರೆ ಇದನ್ನು ಈಗ ಬಳಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

\

English summary
Herd immunity occurs when a large portion of a community (the herd) becomes immune to a disease, making the spread of disease from person to person unlikely. As a result, the whole community becomes protected — not just those who are immune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X