ಗೆಲುವಿನ ಮಣಿ ಪೋಣಿಸುವ ಪಕ್ಷಗಳ ಮಜವಾದ ಲೆಕ್ಕಾಚಾರ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್ 9: ನೋಟು ನಿಷೇಧದ ನಿರ್ಧಾರದ ನಂತರ ಬಂದ ಮಹತ್ವದ ಐದು ರಾಜ್ಯಗಳ ಚುನಾವಣೆ ಬಿಜೆಪಿ ಪಾಲಿಗೆ ಏನಾಗಬಹುದು ಎಂಬ ಬಗ್ಗೆ ಬಹಳ ಕುತೂಹಲವಿದೆ. ಮಾರ್ಚ್ 9ರಂದು ಬಂದಿರುವ ಚುನಾವಣೋತ್ತರ ಸಮೀಕ್ಷೆ ಗಮನಿಸಿದರೆ, ಬಿಜೆಪಿ ಪಾಲಿಗೆ ಬಹಳ ಪ್ಲಸ್ ಗಳು ಕಾಣುತ್ತಿವೆ.

ಇಂಡಿಯಾ ಟುಡೆ-ಮೈ ಆಕ್ಸಿಸ್ ಇಂಡಿಯಾದ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶದಲ್ಲಿ 403 ಸ್ಥಾನಗಳ ಪೈಕಿ 251ರಿಂದ 279 ಸ್ಥಾನಗಳನ್ನು ಬಿಜೆಪಿ ಗಳಿಸುವ ಸಾಧ್ಯತೆ ಇದೆಯಂತೆ. ಇನ್ನು ಎಸ್ ಪಿ-ಕಾಂಗ್ರೆಸ್ ಮೈತ್ರಿ ಕೂಟಕ್ಕೆ 88ರಿಂದ 112 ಸ್ಥಾನ ಸಿಗಬಹುದು ಎಂಬುದು ಸದ್ಯದ ಲೆಕ್ಕಾಚಾರ. ಇದು ನಿಜವಾದರೆ, ಉತ್ತರಪ್ರದೇಶದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ಸಂಖ್ಯೆ 202 ಆ ಮೈತ್ರಿಕೂಟಕ್ಕೆ ದೂರದ ಮಾತಾಯಿತು.[ಎನ್ ಡಿ ಟಿವಿ ಬ್ರೇಕಿಂಗ್ : ಸಮೀಕ್ಷೆಗಳ ಸಮೀಕ್ಷೆಯಲ್ಲಿ ಬಿಜೆಪಿ ಮುಂದೆ]

ಈಗಿನ ಸ್ಥಿತಿಯಲ್ಲಿ ಕಾಣುವಂತೆ ಉತ್ತರಪ್ರದೇಶದಲ್ಲಿ ದೊಡ್ಡ ಮಟ್ಟದ ನಿರಾಶೆಗೆ ಕಾರಣವಾಗಿರುವುದು ಬಿಎಸ್ ಪಿ. ಆ ಪಕ್ಷ ಕೇವಲ 28ರಿಂದ 42 ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎನ್ನುತ್ತಿವೆ ಸಮೀಕ್ಷೆಗಳು.

Narendra Modi

ಉತ್ತರಪ್ರದೇಶ ಚುನಾವಣೋತ್ತರ ಸಮೀಕ್ಷೆ-2017 ಅಧಿಕಾರಕ್ಕಾಗಿ 403 ಸ್ಥಾನಗಳ ಪೈಕಿ 202 ಗೆಲ್ಲಬೇಕು
ಎಸ್ ಪಿ-ಕಾಂಗ್ರೆಸ್ ಮೈತ್ರಿ ಕೂಟ: ನ್ಯೂಸ್ ಎಕ್ಸ್-ಎಂಆರ್ ಸಿ-120, ಇಂಡಿಯಾ ನ್ಯೂಸ್-ಎಂಆರ್ ಸಿ-120, ಟೈಮ್ಸ್ ನೌ-ವಿಎಂಆರ್: 110-130, ಸಿ ವೋಟರ್: 135-147, ಎಬಿಪಿ ನ್ಯೂಸ್-ಲೋಕ್ ನೀತಿ: 156-169
ಬಿಜೆಪಿ: ನ್ಯೂಸ್ ಎಕ್ಸ್-ಎಂಆರ್ ಸಿ-185, ಇಂಡಿಯಾ ನ್ಯೂಸ್-ಎಂಆರ್ ಸಿ-185, ಟೈಮ್ಸ್ ನೌ-ವಿಎಂಆರ್: 190-210, ಸಿ ವೋಟರ್: 155-167, ಎಬಿಪಿ ನ್ಯೂಸ್-ಲೋಕ್ ನೀತಿ: 164-176
ಬಿಎಸ್ ಪಿ: ನ್ಯೂಸ್ ಎಕ್ಸ್-ಎಂಆರ್ ಸಿ-90, ಇಂಡಿಯಾ ನ್ಯೂಸ್-ಎಂಆರ್ ಸಿ-90, ಟೈಮ್ಸ್ ನೌ-ವಿಎಂಆರ್: 57-74, ಸಿ ವೋಟರ್: 81-93, ಎಬಿಪಿ ನ್ಯೂಸ್-ಲೋಕ್ ನೀತಿ: 60-72
ಇತರರು: ನ್ಯೂಸ್ ಎಕ್ಸ್-ಎಂಆರ್ ಸಿ-8, ಇಂಡಿಯಾ ನ್ಯೂಸ್-ಎಂಆರ್ ಸಿ-8, ಟೈಮ್ಸ್ ನೌ-ವಿಎಂಆರ್: 8, ಸಿ ವೋಟರ್: 8-10, ಎಬಿಪಿ ನ್ಯೂಸ್-ಲೋಕ್ ನೀತಿ: 2-6 [ಸಮೀಕ್ಷೆ LIVE : ಉತ್ತರಪ್ರದೇಶದಲ್ಲಿ ಬಿಜೆಪಿ ಹೋಳಿಯ ರಂಗು]

Rahul Gandi-Priyanka Gandhi

ಪಂಜಾಬ್ ನಲ್ಲಿ ಕಾಂಗ್ರೆಸ್ ಮೇಲುಗೈ
ಇಂಡಿಯಾ ಟುಡೇ ಹಾಗೂ ಮೈ ಆಕ್ಸಿಸ್ ಇಂಡಿಯಾದ ಚುನಾವಣೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 62ರಿಂದ 71 ಸ್ಥಾನಗಳಲ್ಲಿ ಜಯ ಗಳಿಸಲಿದೆ. ಅಕಾಲಿ ದಳ ಹಾಗೂ ಬಿಜೆಪಿ ಮೈತ್ರಿ ಕೂಟ 4-7 ಸ್ಥಾನ ಗಳಿಸಬಹುದು ಎಂಬ ಭವಿಷ್ಯ ನುಡಿಯಲಾಗಿದೆ. ಇದೇ ಮೊದಲ ಬಾರಿಗೆ ಪಂಜಾಬ್ ನಲ್ಲಿ ಚುನಾವಣೆ ಕಣದಲ್ಲಿರುವ ಆಮ್ ಆದ್ಮಿ ಪಕ್ಷ 42-51 ಸ್ಥಾನ ಗಳಿಸುವ ಸಾಧ್ಯತೆ ಇದೆಯಂತೆ.

ಪಂಜಾಬ್ ಚುನಾವಣೋತ್ತರ ಸಮೀಕ್ಷೆ-2017 ಅಧಿಕಾರಕ್ಕಾಗಿ 117 ಸ್ಥಾನಗಳ ಪೈಕಿ 50ರಲ್ಲಿ ಗೆಲ್ಲಬೇಕು
ಕಾಂಗ್ರೆಸ್: ಇಂಡಿಯಾ ಟುಡೇ- ಮೈ ಆಕ್ಸಿಸ್ ಇಂಡಿಯಾ: 62-71, ಚಾಣಕ್ಯ: 54, ಸಿ ವೋಟರ್: 41-49
ಬಿಜೆಪಿ-ಅಕಾಲಿ ದಳ: ಇಂಡಿಯಾ ಟುಡೇ- ಮೈ ಆಕ್ಸಿಸ್ ಇಂಡಿಯಾ: 4-7, ಚಾಣಕ್ಯ: 9, ಸಿ ವೋಟರ್: 5-13
ಆಮ್ ಆದ್ಮಿ ಪಕ್ಷ: ಇಂಡಿಯಾ ಟುಡೇ- ಮೈ ಆಕ್ಸಿಸ್ ಇಂಡಿಯಾ: 42-51, ಚಾಣಕ್ಯ: 54, ಸಿ ವೋಟರ್: 59-67
ಇತರರು: ಇಂಡಿಯಾ ಟುಡೇ- ಮೈ ಆಕ್ಸಿಸ್ ಇಂಡಿಯಾ: 0-2, ಚಾಣಕ್ಯ: 0, ಸಿ ವೋಟರ್: 0-3

Prakash Singh Badal

ಉತ್ತರಾಖಂಡ್ ನಲ್ಲಿ ದೊಡ್ಡ ಗೆಲುವು ದಾಖಲಿಸಲಿದೆ ಬಿಜೆಪಿ
ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ ಪ್ರಕಾರ ಉತ್ತರಾಖಂಡದಲ್ಲಿ ಬಿಜೆಪಿ ದೊಡ್ಡ ಗೆಲುವು ದಾಖಲಿಸಲಿದೆ. ಅದರ ಸಮೀಕ್ಷೆ ಅನ್ವಯ ಬಿಜೆಪಿ 43ರಿಂದ 53 ಸ್ಥಾನ ಗೆಲ್ಲಲಿದೆ. ಅದೇ ರೀತಿ ಕಳೆದುಕೊಳ್ಳುವ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಗೆ ದೊಡ್ಡ ಮೈನಸ್. ಅಂದರೆ ಕಾಂಗ್ರೆಸ್ 12ರಿಂದ 21 ಸ್ಥಾನ ಗೆಲ್ಲಲಿದೆ. ಇತರರು 1-4 ಸ್ಥಾನಗಳಲ್ಲಿ ಜಯ ಗಳಿಸುತ್ತಾರೆ ಎಂದಿದೆ.

ಉತ್ತರಾಖಂಡ್ಚುನಾವಣೋತ್ತರ ಸಮೀಕ್ಷೆ -2017 ಅಧಿಕಾರಕ್ಕಾಗಿ 70 ಸ್ಥಾನಗಳ ಪೈಕಿ 36ರಲ್ಲಿ ಗೆಲ್ಲಬೇಕು
ಬಿಜೆಪಿ: ಚಾಣಕ್ಯ: 53, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 46-53, ಸಿ ವೋಟರ್: 29-35, ಇಂಡಿಯಾ ನ್ಯೂಸ್-ಎಂಆರ್ ಸಿ: 38
ಕಾಂಗ್ರೆಸ್: ಚಾಣಕ್ಯ: 15, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 12-21, ಸಿ ವೋಟರ್: 29-35, ಇಂಡಿಯಾ ನ್ಯೂಸ್-ಎಂಆರ್ ಸಿ: 30
ಇತರರು: ಚಾಣಕ್ಯ: 2, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 2-6, ಸಿ ವೋಟರ್: 2-9, ಇಂಡಿಯಾ ನ್ಯೂಸ್-ಎಂಆರ್ ಸಿ: 2

Manohar Parikkar

ಗೋವಾದಲ್ಲಿ ಬಿಜೆಪಿ ಮುನ್ನಡೆ
ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ ಪ್ರಕಾರ ಗೋವಾದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಚುನಾವಣೋತ್ತರ ಸಮೀಕ್ಷೆ ಪ್ರಕಾರ ಆಡಳಿತಾರೂಢ ಬಿಜೆಪಿ 18ರಿಂದ 22 ಸ್ಥಾನ ಗಳಿಸಲಿದೆ. ಇನ್ನು ಕಾಂಗ್ರೆಸ್ 9-13 ಸ್ಥಾನ ಪಡೆಯಲಿದೆ. ಇದೇ ಮೊದಲ ಬಾರಿಗೆ ಸ್ಪರ್ಧೆಗೆ ಇಳಿದಿರುವ ಆಮ್ ಆದ್ಮಿ ಪಕ್ಷ 0-2, ಎಂಜಿಪಿ ಮತ್ತು ಶಿವಸೇನೆ 3-6, ಇತರರು 1-3 ಸ್ಥಾನ ಗಳಿಸಲಿದೆ.

ಗೋವಾ ಚುನಾವಣೋತ್ತರ ಸಮೀಕ್ಷೆ-2017 ಅಧಿಕಾರಕ್ಕಾಗಿ 40 ಸ್ಥಾನಗಳ ಪೈಕಿ 21ರಲ್ಲಿ ಗೆಲ್ಲಬೇಕು
ಬಿಜೆಪಿ: ಸಿ ವೋಟರ್: 15-21, ಎಂಆರ್ ಸಿ-ನ್ಯೂಸ್ ಎಕ್ಸ್: 15, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 18-22, ಇಂಡಿಯಾ ನ್ಯೂಸ್-ಎಂಆರ್ ಸಿ: 15
ಕಾಂಗ್ರೆಸ್: ಸಿ ವೋಟರ್: 12-18, ಎಂಆರ್ ಸಿ-ನ್ಯೂಸ್ ಎಕ್ಸ್: 10, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 9-13, ಇಂಡಿಯಾ ನ್ಯೂಸ್-ಎಂಆರ್ ಸಿ: 10
ಆಮ್ ಆದ್ಮಿ ಪಕ್ಷ: ಸಿ ವೋಟರ್: 0-4, ಎಂಆರ್ ಸಿ-ನ್ಯೂಸ್ ಎಕ್ಸ್: 7, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 0-2, ಇಂಡಿಯಾ ನ್ಯೂಸ್-ಎಂಆರ್ ಸಿ: 7
ಇತರರು: ಸಿ ವೋಟರ್: 2-8, ಎಂಆರ್ ಸಿ-ನ್ಯೂಸ್ ಎಕ್ಸ್: 0, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 4-9, ಇಂಡಿಯಾ ನ್ಯೂಸ್-ಎಂಆರ್ ಸಿ: 8

Okram Ibobi Singh

ಮಣಿಪುರದಲ್ಲಿ ಕಾಂಗ್ರೆಸ್ ಸಂಭ್ರಮಿಸಲು ಕಾರಣಗಳಿವೆ
ಮಣಿಪುರದಲ್ಲಿ ಕಾಂಗ್ರೆಸ್ ಸಂಭ್ರಮಿಸುವುದಕ್ಕೆ ಕಾರಣಗಳಿವೆ. ಹದಿನೈದು ವರ್ಷ ಅಧಿಕಾರ ನಡೆಸಿದ ನಂತರ ಕೂಡ ಮತ್ತೆ ಅಧಿಕಾರ ಹಿಡಿಯಲಿದೆ ಎಂದಿದೆ ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾದ ಚುನಾವಣೋತ್ತರ ಸಮೀಕ್ಷೆ. ಅದರ ಪ್ರಕಾರ ಅಲ್ಲಿ 30ರಿಂದ 36 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ.

ಬಿಜೆಪಿ 16ರಿಂದ 22 ಸ್ಥಾನ ಪಡೆಯಲಿದೆ. ಸಮೀಕ್ಷೆ ಪ್ರಕಾರ ಬಿಜೆಪಿಯು ಸರಕಾರ ರಚಿಸುವ ಸಾಧ್ಯತೆ ಇಲ್ಲ. ಇನ್ನು ಬಿಎಸ್ ಪಿ 3-5 ಸ್ಥಾನ ಪಡೆಯಲಿದೆ. ಇತರರು 3-6 ಸ್ಥಾನಗಳಲ್ಲಿ ಜಯ ಪಡೆಯಲಿದ್ದಾರೆ.

ಮಣಿಪುರ ಚುನಾವಣೋತ್ತರ ಸಮೀಕ್ಷೆ-2017 ಅಧಿಕಾರಕ್ಕಾಗಿ 60 ಸ್ಥಾನಗಳ ಪೈಕಿ 31ರಲ್ಲಿ ಗೆಲ್ಲಬೇಕು
ಬಿಜೆಪಿ: ಸಿ ವೋಟರ್: 25-31, ಇಂಡಿಯಾ ಟಿವಿ: 25, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 16-22
ಕಾಂಗ್ರೆಸ್: ಸಿ ವೋಟರ್: 17-23, ಇಂಡಿಯಾ ಟಿವಿ: 17, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 30-36
ಇತರರು: ಸಿ ವೋಟರ್: 9-15, ಇಂಡಿಯಾ ಟಿವಿ: 9, ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ: 3-5

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What exit poll numbers says about 5 state assembly election? Uttar Pradesh, Uttarakhand, Goa, Punjab and Manipur- Here is the different numbers tells various things. But, we have to wait for results till March 11th
Please Wait while comments are loading...