ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ನಿಮ್ಮ ಶ್ವಾಸಕೋಶಕ್ಕೆ ನಿಖರವಾಗಿ ಏನು ಮಾಡುತ್ತದೆ?

|
Google Oneindia Kannada News

ನವದೆಹಲಿ, ಜುಲೈ 29: ಕೊವಿಡ್ 19 ರೋಗದ ಲಕ್ಷಣಗಳು, ಅದರಿಂದಾಗುವ ಪರಿಣಾಮಗಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದು ನಿಖರವಾಗಿ ಶ್ವಾಸಕೋಶದ ಮೇಲೆ ಯಾವ ರೀತಿಯಾದ ಪರಿಣಾಮವನ್ನು ಬೀರಬಲ್ಲದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

Recommended Video

DK Shivakumar ಇಂದು ಮಂಗಳಮುಖಿಯರ ಕಷ್ಟಕ್ಕೆ ಕಿವಿ ಕೊಟ್ಟರು | Oneindia Kannada

ಕೊರೊನಾ ಸೋಂಕಿನಿಂದ ಗುಣಮುಖವಾದ ವ್ಯಕ್ತಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದರ ಕುರಿತು ಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ರೋಗವು ಶ್ವಾಸಕೋಶದ ಮೇಲೆ ದೀರ್ಘಕಾಲದ ಪರಿಣಾಮವನ್ನು ಬೀರುತ್ತದೆ.

ಕೊವಿಡ್ ನಿಯಂತ್ರಣದಲ್ಲಿ ಕರ್ನಾಟಕ ಎಡವಿದ್ದೆಲ್ಲಿ:ಕಿರಣ್ ಮಜುಂದಾರ್ ಮಾತುಕೊವಿಡ್ ನಿಯಂತ್ರಣದಲ್ಲಿ ಕರ್ನಾಟಕ ಎಡವಿದ್ದೆಲ್ಲಿ:ಕಿರಣ್ ಮಜುಂದಾರ್ ಮಾತು

ಮೊದಲು ಜ್ವರ, ಉಸಿರಾಟದ ತೊಂದರೆ, ತಲೆನೋವು, ಕಫ ಕಾಣಿಸಿಕೊಳ್ಳುತ್ತದೆ. ಬಳಿಕ ವಾಸನೆ ಗ್ರಹಿಕೆ ಶಕ್ತಿಯನ್ನು ರೋಗಿ ಕಳೆದುಕೊಳ್ಳಲಾರಂಭಿಸುತ್ತಾನೆ ಎಂದು ಡಾ. ಬಾಲಸುಬ್ರಮಣಿ ವಿವರಿಸಿದ್ದಾರೆ.

ಕೊವಿಡ್ 19 ಆರಂಭಿಕ ಲಕ್ಷಣಗಳೇನು?

ಕೊವಿಡ್ 19 ಆರಂಭಿಕ ಲಕ್ಷಣಗಳೇನು?

ಕೊವಿಡ್ 19 ರೋಗವು ಆರಂಭದಲ್ಲಿ ಸಣ್ಣ ಪ್ರಮಾಣದ ಜ್ವರವಿರುತ್ತದೆ. ನಂತರದಲ್ಲಿ ಅನೇಕ ಲಕ್ಷಣಗಳು ಗೋಚರಿಸುತ್ತದೆ. ಶ್ವಾಸಕೋಶದ ತೊಂದರೆ, ನ್ಯುಮೋನಿಯಾ ಸೇರಿದಂತೆ ಹಲವು ಬಾರಿ ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್‌ನಿಂದ ಕೂಡ ಸಾವನ್ನಪ್ಪುವ ಸಂಖ್ಯೆಯೂ ಹೆಚ್ಚಿದೆ.

ಎಷ್ಟು ಮಂದಿಗೆ ಅಲ್ಪ ಪ್ರಮಾಣದ ಲಕ್ಷಣ ಗೋಚರ

ಎಷ್ಟು ಮಂದಿಗೆ ಅಲ್ಪ ಪ್ರಮಾಣದ ಲಕ್ಷಣ ಗೋಚರ

ಕೊರೊನಾ ಸೋಂಕಿಗೆ ಒಳಗಾಗಿರುವ ಸುಮಾರು ಶೇ.80ರಷ್ಟು ಮಂದಿಗೆ ಸಣ್ಣ ಪ್ರಮಾಣದ ಲಕ್ಷಣಗಳಿರುತ್ತವೆ. ಶೇ.13ರಷ್ಟು ಮಂದಿಗೆ ನ್ಯುಮೋನಿಯಾ, ಶೇ.5ರಷ್ಟು ಮಂದಿ ಅಂಗಾಂಗ ವೈಫಲ್ಯ, ಶೇ.2 ರಷ್ಟು ಮಂದಿ ಮೃತಪಡುತ್ತಾರೆ.

ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ

ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ

ಕೊರೊನಾ ಸೋಂಕು ಮೊದಲು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಬಳಿಕ ಹೃದಯ, ರಕ್ತನಾಳಗಳು, ಮೆದುಳು, ಕಿಡ್ನಿ, ಲಿವರ್, ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಮೊದಲು ನ್ಯೂಮೋನಿಯಾ ಕಾಣಿಸಿಕೊಂಡು ಶ್ವಾಸಕೋಶದ ನಾಳಗಳಲ್ಲಿ ಕೀವು ತುಂಬಿಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ. ಅದಕ್ಕೆ ವೆಟ್ ಲಂಗ್ಸ್ ಎಂದು ಕರೆಯುತ್ತಾರೆ.

ಶ್ವಾಸಕೋಶದ ಮೇಲೆ ದೀರ್ಘಕಾಲದ ಪರಿಣಾಮ?

ಶ್ವಾಸಕೋಶದ ಮೇಲೆ ದೀರ್ಘಕಾಲದ ಪರಿಣಾಮ?

ಶ್ವಾಸಕೋಶವು ಕೊರೊನಾ ಸೋಂಕಿನಿಂದ ಮುಕ್ತವಾದರೂ ಕೂಡ ಶ್ವಾಸಕೋಶದಲ್ಲೇ ಸೋಂಕು ದೀರ್ಘಕಾಲದ ವರೆಗೆ ಇರಬಲ್ಲದು. ಸಾರ್ಸ್ ವೈರಸ್ ಆಂಜಿಯೋಟೆನ್ಸಿನ್ ಗ್ರಾಹಕದ ಮೂಲಕ ವಾಯುಮಾರ್ಗದ ಕೋಶಗಳಿಗೆ ಪ್ರವೇಶಿಸುತ್ತದೆ. ಇದು ಜೀವಕೋಶಗಳ ಒಳಭಾಗವನ್ನು ಕೋಶ ಪೊರೆಯ ಮೂಲಕ ಹೊರ ಭಾಗಕ್ಕೆ ಸಂಪರ್ಕಿಸುತ್ತದೆ. ಇದಾದ ಬಳಿಕ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಇದು ಶ್ವಾಸಕೋಶಕ್ಕೆ ಹಾನಿಯುಂಟುಮಾಡಬಲ್ಲದು.

English summary
COVID-19, short for coronavirus disease 2019, is a new illness caused by a novel coronavirus now called severe acute respiratory syndrome coronavirus 2 (SARS-CoV-2). There has been a lot of discussion about the symptoms of COVID-19, but not much is known about the condition after a patient has recovered from the illness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X