ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಸೃಷ್ಟಿಗೆ ಸರ್ಕಾರ ಕೈಗೊಂಡ ಕ್ರಮವೇನು: ವಿಪಕ್ಷದ ಪ್ರಶ್ನೆಗೆ ಸರ್ಕಾರ ಉತ್ತರಿಸಿದ್ದು ಹೀಗೆ

|
Google Oneindia Kannada News

ನವದೆಹಲಿ, ಡಿಸೆಂಬರ್‌ 02: ಪ್ರಸ್ತುತ ವಿಧಾನಸಭೆ ಚಳಿಗಾಲದ ಅಧಿವೇಶನವೂ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಡಿಸೆಂಬರ್‌ 1 ರಂದು ನಡೆದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷದ ಸಂಸದರು ಲೋಕಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ತಾಂತ್ರಿಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ರಾಜ್ಯ ಸಭೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಹಾಗೂ ಶಿಕ್ಷಣ ಸಚಿವಾಲಯದ ಮುಂದೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ.

ಮುಖ್ಯವಾಗಿ ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಅಧಿಕವಾಗಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಸರ್ಕಾರ ಯಾವೆಲ್ಲಾ ಕ್ರಮವನ್ನು ಕೈಗೊಂಡಿದೆ ಎಂದು ಪ್ರಶ್ನೆ ಮಾಡಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಯೋಧ್ಯೆ ರಾಮಿ ರೆಡ್ಡಿ ಸರ್ಕಾರವು ಉದ್ಯೋಗ ಸೃಷ್ಟಿ ಮಾಡಲು ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

Winter Session Day 4 Roundup; 4ನೇ ದಿನದ ಮುಖ್ಯಾಂಶಗಳುWinter Session Day 4 Roundup; 4ನೇ ದಿನದ ಮುಖ್ಯಾಂಶಗಳು

ಗ್ರಾಮೀಣ ಭಾಗದ ಜನರಿಗೆ ಉದ್ಯೋಗವನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಯಾವುದಾದರೂ ಕ್ರಮವನ್ನು ಸರ್ಕಾರವು ಕೈಗೊಂಡಿದೆಯೇ ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಯೋಧ್ಯೆ ರಾಮಿ ರೆಡ್ಡಿ ಪ್ರಶ್ನೆ ಮಾಡಿದ್ದಾರೆ. ಸರ್ಕಾರವು ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿದ್ದರೆ, ಅದಕ್ಕಾಗಿ ಸರ್ಕಾರವು ತರಬೇತಿ ಕೇಂದ್ರಗಳ ಮೂಲಕ ಜನರಿಗೆ ತರಬೇತಿ ನೀಡಲು ಮುಂದಾಗಿದ್ದರೆ, ಈ ಕೇಂದ್ರಗಳು ಬೇಡಿಕೆಗೆ ಅನುಗುಣವಾಗಿ ತರಬೇತಿ ನೀಡದಿದ್ದರೆ, ಇದರಿಂದಾಗಿ ಜನರ ಜೀವನೋಪಾಯಕ್ಕೆ ಬೆದರಿಕೆ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

What Employment Generation Steps Taken: Ayodhya Rami Reddy Alla asked Govt

ಸಚಿವಾಲಯ ಇದಕ್ಕೆ ಏನು ಪ್ರತಿಕ್ರಿಯೆ ನೀಡಿದೆ?

ವಿರೋಧ ಪಕ್ಷದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, "2015 ರಲ್ಲಿ ಸ್ಕಿಲ್ ಇಂಡಿಯಾ ಮಿಷನ್ ಅನ್ನು ಪ್ರಾರಂಭಿಸಲಾಗಿದೆ. ಅದರ ಅಡಿಯಲ್ಲಿ ಸಚಿವಾಲಯವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ," ಎಂದು ಮಾಹಿತಿ ನೀಡಿದರು.

ಸಚಿವರು ವಿವರಿಸಿದ ಸರ್ಕಾರದ ಯೋಜನೆಗಳು ಯಾವುದು?

ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ), ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನಾ ಯೋಜನೆ (ಎನ್‌ಎಪಿಎಸ್‌), ಕುಶಲಕರ್ಮಿ ತರಬೇತಿ ಯೋಜನೆ (ಸಿಟಿಎಸ್‌), ಜನ್ ಶಿಕ್ಷಣ ಸಂಸ್ಥಾನ (ಜೆಎಸ್‌ಎಸ್‌) ಅನ್ನು ಸರ್ಕಾರವು ಜಾರಿ ಮಾಡಿದೆ. ಈ ಯೋಜನೆಗಳು ದೇಶಾದ್ಯಂತ ಯುವಕರಿಗೆ ಉದ್ಯೋಗ ಮತ್ತು ಸೂಕ್ಷ್ಮ ಉದ್ಯಮಿಗಳಾಗಲು ಕೌಶಲ್ಯ ತರಬೇತಿಯನ್ನು ನೀಡುತ್ತದೆ ಎಂದು ಸಚಿವಾಲಯವು ಅಧಿವೇಶನದಲ್ಲಿ ವಿವರಣೆಯನ್ನು ನೀಡಿದೆ.

"ಇನ್ನು ಎಂಎಸ್‌ಡಿಇಯು ಜನ ಶಿಕ್ಷಣ ಸಂಸ್ಥಾನದ ಯೋಜನೆಯನ್ನು ಎನ್‌ಜಿಒಗಳ ಮೂಲಕ ಅನುಷ್ಠಾನ ಮಾಡುತ್ತಿದೆ. ಅನಕ್ಷರಸ್ಥರು, ನವ-ಸಾಕ್ಷರರು, 8 ನೇ ವರೆಗಿನ ಶಿಕ್ಷಣವನ್ನು ಹೊಂದಿರುವ ವ್ಯಕ್ತಿಗಳು ಮತ್ತು 15-45 ನೇ ವಯಸ್ಸಿನ 12 ನೇ ತರಗತಿಯವರೆಗೆ ಶಾಲೆಯನ್ನು ಬಿಟ್ಟವರಿಗೆ ವೃತ್ತಿಪರ ಕೌಶಲ್ಯಗಳನ್ನು ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ," ಎಂದು ಕೂಡಾ ವಿವರಿಸಿದ್ದಾರೆ. ಇನ್ನು ಮುಖ್ಯವಾಗಿ ಮಹಿಳೆಯರು, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು ಮತ್ತು ಸಮಾಜದ ಇತರ ಹಿಂದುಳಿದ ವರ್ಗಗಳಿಗೆ ಅಧಿಕ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಸರ್ಕಾರವು ಹೇಳಿಕೊಂಡಿದೆ.

ಕೈಗಾರಿಕೆಗಳ ಸ್ಥಾಪನೆ

ಆಡಳಿತಾರೂಢ ಬಿಜೆಪಿ ಪಕ್ಷದ ಧರಮ್‌ಬೀರ್ ಸಿಂಗ್‌ ಹೊಸ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಸಂಸತ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ. ಕೇಂದ್ರ ಸರ್ಕಾರವು ವಿವಿಧ ನೀತಿ ಕ್ರಮಗಳ ಮೂಲಕ ಹೊಸ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರಗಳನ್ನು ಪ್ರೋತ್ಸಾಹಿಸುತ್ತಿದೆಯೇ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವನ್ನು ಧರಮ್‌ಬೀರ್‌ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಕಳೆದ ಮೂರು ವರ್ಷಗಳಲ್ಲಿ ಹರಿಯಾಣ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳಿಗೆ ನೀಡಿದ ಪ್ರೋತ್ಸಾಹದ ವಿವರಗಳನ್ನು ಕೂಡಾ ಸರ್ಕಾರದ ಬಳಿ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಾಣಿಜ್ಯ ಸಚಿವಾಲಯದ ರಾಜ್ಯ ಸಚಿವ ಸೋಮ್ ಪ್ರಕಾಶ್, "ವ್ಯಾಪಾರದ ಸೃಷ್ಟಿ ಮತ್ತು ಸುಗಮಗೊಳಿಸುವಿಕೆಗಾಗಿ, ಡಿಪಿಐಐಟಿ ವಿದೇಶಿ ನೇರ ಹೂಡಿಕೆಯಲ್ಲಿ ಸುಧಾರಣೆಗಾಗಿ, ವ್ಯವಹಾರವನ್ನು ಸುಲಭಗೊಳಿಸುವುದು, ವ್ಯವಹಾರಗಳು ಮತ್ತು ನಾಗರಿಕರ ಮೇಲಿನ ಅನುಸರಣೆ ಹೊರೆ ಕಡಿತದಂತಹ ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನು ಜಾರಿಗೊಳಿಸುತ್ತದೆ," ಎಂದು ತಿಳಿಸಿದರು.

"ಸಶಕ್ತ ಗ್ರೂಪ್ ಆಫ್ ಸೆಕ್ರೆಟರಿಗಳ ಸ್ಥಾಪನೆ, ಪ್ರಾಜೆಕ್ಟ್ ಡೆವಲಪ್‌ಮೆಂಟ್ ಸೆಲ್‌ಗಳು, ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್‌ಗಳು, ಸಿಂಗಲ್ ವಿಂಡೋ ಇನ್ವೆಸ್ಟ್‌ಮೆಂಟ್ ಕ್ಲಿಯರೆನ್ಸ್ ಸೆಲ್, ಒಂದು ಜಿಲ್ಲೆ ಒಂದು ಉತ್ಪನ್ನ, ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್, ಇಂಡಿಯಾ ಇಂಡಸ್ಟ್ರಿಯಲ್ ಲ್ಯಾಂಡ್ ಬ್ಯಾಂಕ್, ಇಂಡಸ್ಟ್ರಿಯಲ್ ಪಾರ್ಕ್ ರೇಟಿಂಗ್ ಸಿಸ್ಟಮ್ ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉತ್ತೇಜಿಸುವ ಯೋಜನೆಗಳನ್ನು ಮಾಡಲಾಗುತ್ತದೆ. ವಿಶ್ವ ದರ್ಜೆಯ ಮೂಲಸೌಕರ್ಯಗಳ ಸೃಷ್ಟಿಗಾಗಿ, ಡಿಪಿಐಐಟಿಯು ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ (ಎನ್‌ಎಂಪಿ), ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ. ಹೂಡಿಕೆಯ ಉತ್ತೇಜನಕ್ಕಾಗಿ, ಈಶಾನ್ಯ ಪ್ರದೇಶ ಮತ್ತು ಹಿಮಾಲಯ ರಾಜ್ಯಗಳಲ್ಲಿ ಸ್ಟಾರ್ಟ್‌ಅಪ್‌ಗಳು, ಜಿಎಸ್‌ಟಿ ಮರುಪಾವತಿಗಾಗಿ ಡಿಪಿಐಐಟಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಕೋವಿಡ್ ನಂತರದ ಅವಧಿಯಲ್ಲಿ ಕೈಗಾರಿಕಾ ಚಟುವಟಿಕೆಯ ತ್ವರಿತ ಚೇತರಿಕೆಗಾಗಿ ಹ್ಯಾಂಡ್‌ಹೋಲ್ಡಿಂಗ್ ಕ್ರಮಗಳನ್ನು ಸಹ ಜಾರಿಗೆ ತರಲಾಗಿದೆ," ಎಂದು ಮಾಹಿತಿ ನೀಡಿದರು.

English summary
What Employment Generation Steps Taken: Ayodhya Rami Reddy Alla asked Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X