ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಾಕ್‌ಡೌನ್: ನಿಮ್ಮ ಪುಟಾಣಿಗಳೇನು ಮಾಡ್ತಿದ್ದಾರೆ? ಒಂದು ಫೋಟೊ ಕಳಿಸಿ

|
Google Oneindia Kannada News

ನವದೆಹಲಿ, ಏಪ್ರಿಲ್ 8: ಮಕ್ಕಳು ಅಂದ ಮೇಲೆ ಕೇಳಬೇಕಾ ಊಟ, ನಿದ್ದೆ ಎಲ್ಲಾ ಬಿಟ್ಟು ಮೂರು ಹೊತ್ತು ಆಟದಲ್ಲೇ ಕಾಲ ಕಳೆಯುತ್ತವೆ.

ಕೊರೊನಾ ಲಾಕ್‌ಡೌನ್ ಎನ್ನುವುದು ದೊಡ್ಡವರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ದೊಡ್ಡವರೇನೋ ಟಿವಿ, ಸಿನಿಮಾ, ಮೊಬೈಲ್, ಲ್ಯಾಪ್‌ಟಾಪ್‌ ಎಂದು ಕಾಲ ಕಳೆಯುತ್ತಾರೆ.

ಆದರೆ ಮಕ್ಕಳಿಗೆ ಸ್ನೇಹಿತರೊಂದಿಗೆ ಒಡನಾಟವಿಲ್ಲದೆ, ಮನೆಯಲ್ಲೇ ಇರುವುದು ಖಂಡಿತವಾಗಿಯೂ ಕಷ್ಟವೇ, ಇಷ್ಟು ದಿನ ಸ್ಕೂಲ್, ಟ್ಯೂಷನ್, ಆಟ, ಮನೆ ಅಂತಿದ್ದ ಮಕ್ಕಳು ಮೂರು ಹೊತ್ತು ಅಮ್ಮನ ಹಿಂದೆ ಬೇಜಾರು ಎನ್ನುತ್ತಾ ಓಡಾಡುತ್ತಿರುತ್ತಾರೆ.

What Does Your Child Think About Lockdown: Send Their Views To Us

ಅಮ್ಮ ತಾನೆ ಏನು ಮಾಡೋಕೆ ಸಾಧ್ಯ, ಮನೆಯ ಹೊರಗೆ ಹೋದರೆ 'ಕೊರೊನಾ ಭೂತ' ತೊಂದರೆ ಕೊಡುತ್ತೆ ಮನೆಯಿಂದ ಆಚೆ ಹೋಗಬಾರದು ಸ್ವಲ್ಪ ದಿನ ಮನೆಯೊಳಗೇ ಇರು, ಇಲ್ಲೇ ಏನಾದರೂ ಆಟ ಆಡುವಾ ಎಂದು ಹೇಳಿ ಹೇಗೋ ಸಮಾಧಾನ ಪಡಿಸುತ್ತಾಳೆ.

ಹಾಗಾದರೆ ಮನೆಯಲ್ಲಿದ್ದುಕೊಂಡು ಮಕ್ಕಳು ಏನೇನೆಲ್ಲಾ ಚಟುವಟಿಕೆಗಳನ್ನು ಮಾಡಬಹುದು, ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ನೀವು ನಮಗೆ ಕಳುಹಿಸಿ.

ನಿಮ್ಮ ಮಕ್ಕಳ ಸೃಜನಶೀಲ ಬರಹ, ಚಿತ್ರ ಬಿಡಿಸುವುದು, ಪ್ರಬಂಧ ರಚನೆ, ಪ್ಲೇಕಾರ್ಡ್ ಮಾಡುವುದು, ಪತ್ರ ಬರೆದಿರಬಹುದು ಏನೇ ಇದ್ದರೂ ನಮ್ಮ ಬಳಿ ಶೇರ್ ಮಾಡಿ. ಅದನ್ನು ಗ್ಯಾಲರಿ ಮಾಡಿ ನಿಮ್ಮ ಮುಂದಿಡುತ್ತೇವೆ.

ನಿಮ್ಮ ಮಗುವಿನ ಹೆಸರು, ಊರು, ನಿಮ್ಮ(ಅಪ್ಪ, ಅಮ್ಮ) ಹೆಸರು, ಮಗು ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬ ಸಂಕ್ಷಿಪ್ತ ವಿವರದೊಂದಿಗೆ ಸೆಲ್ಫಿ ಅಥವಾ ನಾರ್ಮಲ್ ಫೋಟೋ ಕಳಿಸಿ

ಇಮೇಲ್ ಮಾಡಬೇಕಾದ ವಿಳಾದ: [email protected]

English summary
What Does Your Child Think About Lockdown: Send Their Views To Us, The lockdown has been hard on all and we are aware all of you are spending time inside your homes for the past several weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X