ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಗೂಢಚಾರನ ಬಳಿ ಇದ್ದದ್ದು 190 ಸಿಮ್ ಕಾರ್ಡ್!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಡಿಸೆಂಬರ್ 8: ಕೇಂದ್ರ ಗೃಹ ಸಚಿವಾಲಯದ ಮಾಹಿತಿಯೇ ಅಧಿಕೃತವಾಗಿ ತಿಳಿಸಿರುವಂತೆ ಈ ವರ್ಷ ಭಾರತದಲ್ಲಿ ಗೂಢಚರ್ಯೆ ಮಾಡುತ್ತಿದ್ದ ಇಪ್ಪತ್ನಾಲ್ಕು ಐಎಸ್ ಐ ಏಜೆಂಟ್ ಗಳನ್ನು ಬಂಧಿಸಲಾಗಿದೆ. ಕುತಂತ್ರಿ ಪಾಕಿಸ್ತಾನವು ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಅದೆಷ್ಟು ಪ್ರಯತ್ನಿಸುತ್ತಿದೆ ಎಂಬುದನ್ನು ಈ ಸಂಖ್ಯೆಯೇ ಖಚಿತಪಡಿಸುತ್ತದೆ.

ಇತ್ತೀಚೆಗೆ ಪಶ್ಚಿಮ ಬಂಗಾಲದಲ್ಲಿ ನಡೆದ ಬಂಧನ, ಆ ನಂತರದ ವಿಚಾರಣೆಯಿಂದ ತಮಗೊಪ್ಪಿಸುವ ಕೆಲಸಕ್ಕೆ ಈ ಗೂಢಚಾರರು ಅದ್ಯಾವ ಪರಿಯ ಸಿದ್ಧತೆ ನಡೆಸಿರುತ್ತಾರೆ ಎಂಬ ಸಂಗತಿ ಸ್ಪಷ್ಟವಾಯಿತು. ರಣಬಿಜಯ್ ಸಿಂಗ್ ಎಂಬಾತನನ್ನು ಪಶ್ಚಿಮ ಬಂಗಾಲದ ಸಿಲಿಗುರಿಯಲ್ಲಿ ಬಂಧಿಸಲಾಯಿತು.[ಸೇನೆ ಮಾಹಿತಿ ಸಂಗ್ರಹಿಸುತ್ತಿದ್ದ ಪಾಕ್ ಗೂಢಚಾರ ಬಂಧನ]

ISI

ಈ ಪ್ರಕರಣದಲ್ಲಿ ಪಾಕಿಸ್ತಾನವು ಹೇಗೆ ಕೆಲಸ ಮಾಡುತ್ತದೆ ಎಂಬ ಹಲವು ಸಂಗತಿ ಪೊಲೀಸರಿಗೆ ತಿಳಿಯಿತು. ಸಿಂಗ್ ಬಳಿ ಕನಿಷ್ಠ 190 ಸಿಮ್ ಸಿಕ್ಕವು. ತಮ್ಮ ಪತ್ತೆ ಆಗಬಾರದು ಎಂಬುದಕ್ಕೆ ಈ ಗೂಢಚಾರರು ಅದೆಷ್ಟು ಶ್ರಮ ಹಾಕುತ್ತಾರೆ ಎಂಬುದು ಇದರಿಂದಲೇ ತಿಳಿಯುತ್ತಿತ್ತು.[50 ಸಾವಿರದ ಆಸೆಗೆ ಆತ ಎಂಥ ಮಾಹಿತಿ ಒದಗಿಸಿದ್ದ ಗೊತ್ತಾ?]

ಈ ವಿಚಾರಣೆ ಭಾಗವಾದ ಅಧಿಕಾರಿಯೊಬ್ಬರು ಒನ್ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ, ಸಿಂಗ್ ಬಳಿ ಮೂವತ್ತೈದು ಭಾರತೀಯ ಸಿಮ್ ಕಾರ್ಡ್ ಗಳು, ನಾಲ್ಕು ಲ್ಯಾಪ್ ಟಾಪ್, ಮೂರು ಮತದಾರರ ಗುರುತಿನ ಚೀಟಿ, ಇವಲ್ಲದೇ 155 ನೇಪಾಳಿ ಸಿಮ್ ಕಾರ್ಡ್ ಗಳು ಕೂಡ ಸಿಕ್ಕವು.[4 ಸಲ ಭಾರತಕ್ಕೆ ಬಂದಿದ್ದ ಪಾಕಿಸ್ತಾನ ಗೂಢಚಾರನಿಗೆ 3 ಸಾವಿರ ಸಂಬಳ]

ಈ ಸಿಂಗ್ ಮೂಲತಃ ಬಿಹಾರದವನು. ಪಾಕಿಸ್ತಾನದ ಐಎಸ್ ಐನ ಸಂಪರ್ಕಕ್ಕೆ ಬಂದ ನಂತರ ಸಿಲಿಗುರಿಯಲ್ಲಿ ಸಣ್ಣದೊಂದು ವ್ಯಾಪಾರ ಆರಂಭಿಸಿದ್ದ. ಪಾಕಿಸ್ತಾನದಿಂದ ಈತನಿಗೆ ಇಷಾರೆಗಳು ಬರುತ್ತಿದ್ದವು. ಆತ ತನ್ನ ಮಾಹಿತಿಗಳನ್ನು ಹಂಚಿಕೊಳ್ಳಲು ಆಗಿಂದಾಗ್ಗೆ ನೇಪಾಳಕ್ಕೆ ಭೇಟಿ ನೀಡುತ್ತಿದ್ದ. ಜೊತೆಗೆ ಹಲವಾರು ಬಾರೊ ಒಮನ್ ಗೂ ಭೇಟಿ ನೀಡಿರುವ ಸಂಗತಿ ವಿಚಾರಣೆ ವೇಳೆ ಗೊತ್ತಾಗಿದೆ.

ವಿಚಾರಣಾಧಿಕಾರಿಗಳೇ ಹೇಳುವ ಪ್ರಕಾರ, ಪಾಕಿಸ್ತಾನದಿಂದ ಸಂಪರ್ಕದಲ್ಲಿರುವವರ ಜತೆಗೆ ತನ್ನ ಬಳಿ ಇರುವ ಮಾಹಿತಿಗಳನ್ನು ಹಂಚಿಕೊಳ್ಳಲು ಹಾಗೂ ಮುಂದಿನ ಕಾರ್ಯಾಚರಣೆ ಏನು ಎಂಬುದನ್ನು ತಿಳಿದುಕೊಳ್ಳಲು ಅತ ವಿವಿಧ ದೇಶಗಳಿಗೆ ಭೇಟಿ ನೀಡುತ್ತಿದ್ದ ಎಂದು ಗೊತ್ತಾಗಿದೆ.

English summary
The arrest of Ranabijay Singh from Siliguri, West Bengal has given the police several leads about how a spy from Pakistan works. His kit contained at least 190 SIM cards. The number of SIM cards found on Singh only indicates how much of effort goes into an operation to stay undetected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X