ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಬಡತನದ ಬಗ್ಗೆ ವಿಶ್ವ ಬ್ಯಾಂಕ್‌ ವರದಿಯಲ್ಲಿ ಹೇಳಿದ್ದು ಏನು?

|
Google Oneindia Kannada News

ನವದೆಹಲಿ, ಏಪ್ರಿಲ್‌ 18: ಆರ್ಥಿಕತೆ ನಮ್ಮ ದೇಶದ ಬಡತನ ಮೇಲೆ ಅವಲಂಬಿಸಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಭಾರತ ದೇಶ ಬಡತನದಿಂದ ಮುಕ್ತಿಯಾದರೆ ದೇಶದ ಆರ್ಥಿಕತೆಯನ್ನು ಮತ್ತಷ್ಟು ಸುಧಾರಣೆ ಮಾಡಬಹುದು. ಹೀಗೆ ಭಾರತದ ದೇಶದ ಬಡತನದ ಪ್ರಮಾಣ ಅಳೆಯುವ ವಿಶ್ವ ಬ್ಯಾಂಕ್‌ ಭಾರತದಲ್ಲಿ ಬಡತನವು ಇಳಿಕೆ ಕಂಡಿದೆ ಎಂದು ಹೊಸ ಸಂಶೋಧನಾ ವರದಿಯಲ್ಲಿ ತಿಳಿಸಿದೆ.

ಭಾರತದಲ್ಲಿ ಬಡತನ ದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು ಆದರೆ ವಿಶ್ವ ಬ್ಯಾಂಕಿನ ವರದಿಯ ಪ್ರಕಾರ ದೇಶದಲ್ಲಿ ಕಳೆದ 8 ವರ್ಷಗಳಲ್ಲಿ ಬಡತನವು ಗಮನಾರ್ಹ ಇಳಿಕೆ ಕಂಡಿದೆ ಎಂದು ವಿಶ್ವ ಬ್ಯಾಂಕ್‌ನ ಸಂಶೋಧನಾ ವರದಿಯಿಂದ ತಿಳಿದು ಬಂದಿದ್ದು, 8 ವರ್ಷಗಳ ನಡುವಿನ ಭಾರತದ ಆರ್ಥಿಕತೆಯನ್ನು ಗಮನಿಸಿರುವ ವಿಶ್ವ ಬ್ಯಾಂಕ್‌ ವರದಿಯು ಬಡತನದಲ್ಲಿ ಭಾರತ ದೇಶವು ಕುಸಿತವನ್ನು ಕಂಡಿದ್ದು 2011 ರಿಂದ 2019ರ ನಡುವೆ ಭಾರತದಲ್ಲಿ ಶೇ.12.3 ಪ್ರಮಾಣ ದೇಶದ ಬಡತನದಲ್ಲಿ ಇಳಿಕೆ ಕಂಡಿದೆ. 2011ರಲ್ಲಿ ವಿಶ್ವ ಬ್ಯಾಂಕ್‌ ಹೇಳಲಾಗಿದ್ದ ವರದಿಯಲ್ಲಿ ಶೇ.22.5ರಷ್ಟು ತೀವ್ರ ಬಡತನವನ್ನು ಭಾರತ ಎದುರಿಸುತ್ತಿತ್ತು. ಆದರೆ 2019ರ ವರದಿಯಲ್ಲಿ ಬಡತನದಲ್ಲಿ ಭಾರತ ಶೇ.10.2ರಷ್ಟು ಇಳಿಮುಖ ಕಂಡಿದೆ ಎಂದು ವಿಶ್ವ ಬ್ಯಾಂಕ್‌ ವರದಿಯಲ್ಲಿ ಹೇಳಿದೆ.

Covid cases in India : ಕೋವಿಡ್ ಕಾಟ: ಭಾರತದಲ್ಲಿ ಶೇ.90ರಷ್ಟು ಕೊರೊನಾವೈರಸ್ ಪ್ರಕರಣಗಳ ಏರಿಕೆ! Covid cases in India : ಕೋವಿಡ್ ಕಾಟ: ಭಾರತದಲ್ಲಿ ಶೇ.90ರಷ್ಟು ಕೊರೊನಾವೈರಸ್ ಪ್ರಕರಣಗಳ ಏರಿಕೆ!

ವಿಶ್ವ ಬ್ಯಾಂಕ್‌ ದೇಶದ ಬಡತನದ ಕುರಿತಾಗಿ ಸಂಶೋಧನಾ ಕಾರ್ಯಗಾರಗಳನ್ನು ಕೈಗೊಂಡಿದ್ದು, ಈ ಕಾರ್ಯಗಾರದ ಸಂಶೋಧನೆಗಳಲ್ಲಿ ಕೆಲವು ಮಹತ್ವದ ಮಾಹಿತಿಗಳು ಬಹಿರಂಗಗೊಂಡಿವೆ ಮತ್ತು ಭಾರತವು ಬಡತನ ನಿರ್ಮೂಲನೆಯಲ್ಲಿ ಸುಧಾರನೆಯನ್ನು ಕಂಡುಕೊಂಡಿದ್ದು ಬಹುತೇಕವಾಗಿ ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಭಾರತ ಪ್ರಯತ್ನಿಸಿದೆ ಅಲ್ಲದೆ ಭಾರತದ ತೀವ್ರ ಮಟ್ಟದ ಬಡತನವನ್ನು ನಿರ್ಮೂಲನೆ ಮಾಡಿದೆ ಎಂದು ವಿಶ್ವ ಬ್ಯಾಂಕಿನ ಸಂಶೋಧನೆಗಳ ವರದಿಗಳು ಹೇಳಿವೆ.

What Did the “World Bank Report” on Poverty in India?

ದೇಶದ ರಾಜ್ಯಗಳು ಒದಗಿಸಿರುವ ಹಸಿವು ಕುರಿತಾದ ಕಾರ್ಯಕ್ರಮಗಳು, ಆಹಾರ ಪೂರೈಕೆಗೆ ಒದಗಿಸಲಾದ ಕರಪತ್ರಗಳ ಬಳಕೆಯಿಂದ ಕಳೆದ 40 ವರ್ಷಗಳಲ್ಲಿ ಸಮಾನತೆಯಲ್ಲಿಯು ಕೂಡಾ ಭಾರತದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ ಇನ್ನುಗ್ರಾಮೀಣ ಪ್ರದೇಶಗಳಲ್ಲಿ ಶೇ.11.6 ರಷ್ಟು ಬಡತನವಿದ್ದು, ನಗರಳಲ್ಲಿ ಪ್ರದೇಶದಲ್ಲಿ ಹೊಲಿಸಿದರೆ ಶೇ. 6.3ರಷ್ಟು ನಗರಗಳಲ್ಲಿ ಬಡತನವಿದೆ.

What Did the “World Bank Report” on Poverty in India?

ಗ್ರಾಮೀಣ ಪ್ರದೇಶಗಳನ್ನು ಹೊಲಿಸಿದರೆ ನಗರಗಳಲ್ಲಿನ ಬಡತನ ಸುಧಾರಣೆಯಾಗಿದ್ದು ದೇಶದಲ್ಲಿ ಬಡತನವನ್ನು ತಡೆಯುವಲ್ಲಿ ನಗರಗಳು ಹೆಚ್ಚಾಗಿ ಗಮನ ಸೆಳೆದಿವೆ ಎಂದು ತಿಳಿದು ಬಂದಿದೆ.

What Did the “World Bank Report” on Poverty in India?

ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ವರದಿಯು ಭಾರತೀಯ ಜನಸಂಖ್ಯೆಯ ಶೇಕಡಾ 1ಕ್ಕಿಂತ ಕಡಿಮೆ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ ಮತ್ತು ಪ್ರಮುಖ ಆಹಾರ ಯೋಜನೆಯನ್ನು ನಿಭಾಯಿಸಿದ ಹಿನ್ನಲೆ ಹಾಗೂ ಅನೇಕ ಎನ್‌ಜಿಒಗಳು ಕೆಲಸ ಮಾಡಿರುವ ಕಾರಣದಿಂದಾಗಿ ಭಾರತದಲ್ಲಿ ಬಡತನವು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಏರಿಕೆಯಾಗಲಿಲ್ಲ ಎಂದು ತಿಳಿದು ಬಂದಿದೆ.

English summary
The World Bank has published a new research report that measures India's poverty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X