• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀದೇವಿಯವರ ಸಾವಿಗೆ ನಿಜವಾದ ಕಾರಣವಾದರೂ ಏನು?

By Prasad
|
   ಬಾಲಿವುಡ್ ನಟಿ ಶ್ರೀದೇವಿಯ ನಿಧನಕ್ಕೆ ನಿಜವಾದ ಕಾರಣ ಏನಿರಬಹುದು? | Oneindia Kannada

   ಒಂದಾನೊಂದು ಕಾಲದಲ್ಲಿ ಚಿತ್ರರಸಿಕರ ಹೃದಯ ಸಾಮ್ರಾಜ್ಞಿಯಾಗಿ ಮೆರೆದ ಶ್ರೀದೇವಿ ಅಕಾಲಿಕ ಸಾವು ಇಡೀ ದೇಶವನ್ನು ದಿಗ್ಮೂಢರನ್ನಾಗಿ ಮಾಡಿದ್ದರೆ, ಅವರ ಸಾವಿನ ಸುತ್ತ ಹುಟ್ಟಿಕೊಂಡಿರುವ ನಾನಾ ಊಹಾಪೋಹಗಳು ಮತ್ತಷ್ಟು ವಿಚಲಿತರನ್ನಾಗಿ ಮಾಡಿವೆ.

   ಅವರ ವಯಸ್ಸು 54. ಹೃದಯ ಬೇನೆಯ ಸಂಕೇತ ಲವಲೇಶವೂ ಇರಲಿಲ್ಲ. ಸಾಯುವ ವಯಸ್ಸೂ ಅಲ್ಲ. ಅಂತಿಮ ಕ್ಷಣದ ವರೆಗೂ ಆನಂದತುಂದಿಲರಾಗಿಯೇ ಇದ್ದ ಅವರನ್ನು ಯಮದೇವರು ಸೆಳೆದುಕೊಂಡು ಹೋಗಿದ್ದಾದರೂ ಹೇಗೆ ಮತ್ತು ಏಕೆ ಎಂಬುದಕ್ಕೆ ಉತ್ತರಗಳು ಸಿಗುತ್ತಿಲ್ಲ.

   ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!

   ಆದರೆ, ಸಾಮಾಜಿಕ ತಾಣದಲ್ಲಿ ಹುಟ್ಟಿಕೊಂಡಿರುವ ಹಲವಾರು ಹೇಳಿಕೆಗಳು, ಕಥೆಗಳು, ಚರ್ಚೆಗಳು, ಸೌಂದರ್ಯ ಮತ್ತು ಪ್ರತಿಷ್ಠೆಯ ಹಿಂದೆ ಬಿದ್ದಿರುವ ಚಲನಚಿತ್ರ ತಾರೆಯರ ಜೀವನದ ಮತ್ತೊಂದು ಮಗ್ಗುಲನ್ನು ತೆರೆದು ತೋರಿಸುತ್ತಿದೆ. ತಾರೆಯರು ಅನುಭವಿಸುವ ಅಂತರಂಗದ ತುಮುಲಗಳನ್ನು ಈ ಚರ್ಚೆ ಬರಿದು ಮಾಡುತ್ತಿದೆ.

   ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ?

   ಆ ಬಟ್ಟಲಗಣ್ಣುಗಳ ಕೆಣಕುವ ನೋಟ, ತುಂಬಿದ ಕೆನ್ನೆಗಳ ಆಕರ್ಷಣೆ, ಮಾದಕ ಮೈಮಾಟ, ವಿಶಿಷ್ಟವಾದ ಹಾವಭಾವ, ಜೊತೆಗೆ ಹುಚ್ಚೆದ್ದು ಕುಣಿಸುವಂಥ ನರ್ತನ ಶ್ರೀದೇವಿಯನ್ನು ಸೂಪರ್ ಸ್ಟಾರ್ ಅನ್ನಾಗಿ ಮಾಡಿತ್ತು. ಆದರೆ, ಅದೇ ಸೌಂದರ್ಯ, ಅದೇ ಮೈಮಾಟ ಶ್ರೀದೇವಿಯವರಿಗೆ ಮುಳುವಾಯಿತೆ?

   ಕಣ್ಣುಗಳು ಏನೇನೋ ಕಥೆ ಹೇಳುತ್ತಿದ್ದವು

   ಕಣ್ಣುಗಳು ಏನೇನೋ ಕಥೆ ಹೇಳುತ್ತಿದ್ದವು

   ಶ್ರೀದೇವಿಯವರಿಗೆ ವಯಸ್ಸು 54 ದಾಟಿದ್ದರೂ ಅವರು 40ರ ಹರೆಯದ ಸುಂದರ ಮಹಿಳೆಯಂತೆ ಕಾಣಬಯಸಿದ್ದರು. ತುಂಬಿದ ಕೆನ್ನೆಗಳು ಅಂದ ಕಳೆದುಕೊಂಡಿದ್ದವು. ಮುಖ ಅಂದುಕೊಂಡಿದ್ದಕ್ಕಿಂತ ಸುಕ್ಕುಗಟ್ಟಿತ್ತು. ಆಕರ್ಷಕ ಮೂಗು ವಯಸ್ಸನ್ನು ಎತ್ತೆತ್ತಿ ತೋರಿಸುತ್ತಿತ್ತು. ಕಣ್ಣುಗಳು ಏನೇನೋ ಕಥೆಗಳನ್ನು ಹೇಳುತ್ತಿದ್ದವು.

   ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ನಿಲ್ಲದ ಕಂಬನಿ

   ಸೌಂದರ್ಯ ಮರಳಿ ಪಡೆಯುವ ಪ್ರಯತ್ನ

   ಸೌಂದರ್ಯ ಮರಳಿ ಪಡೆಯುವ ಪ್ರಯತ್ನ

   ಶ್ರೀದೇವಿಯ ಆಪ್ತೆ ಪಿಯಾಲಿ ಗಂಗೂಲಿ ಪ್ರಕಾರ, ಇದೇ ಅವರನ್ನು ಕಂಗೆಡಿಸಿತ್ತು. ಹೊರಳಿಹೋದ ಸೌಂದರ್ಯವನ್ನು ಮತ್ತೆ ಮರಳಿ ಪಡೆಯುವ ವಿಫಲ ಪ್ರಯತ್ನದಲ್ಲಿ ಅವರು ತೊಡಗಿದ್ದರು. ಸೊಂಟದ ಕೊಬ್ಬು ಕರಗಿಸಿಕೊಂಡು ಮತ್ತೆ ಬಳುಕುವ ಬಳ್ಳಿಯಂತಾಗಬೇಕು ಎಂಬ ಹಪಾಹಪಿ ಶ್ರೀದೇವಿಯನ್ನು ಶ್ರೀದೇವಿಯನ್ನಾಗಿಸಿರಲಿಲ್ಲ.

   ತಮ್ಮನ್ನೇ ತಾವು ದ್ವೇಷಿಸುತ್ತಿದ್ದರು

   ತಮ್ಮನ್ನೇ ತಾವು ದ್ವೇಷಿಸುತ್ತಿದ್ದರು

   ಹೀಗಾಗಿ ಅವರು ಹಲವಾರು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಕ್ಯಾಲಿಫೋರ್ನಿಯಾಗೆ ಇದಕ್ಕಾಗಿ ಎಡತಾಕಿದ್ದರು. ಇಪ್ಪತ್ತೆಂಟು ಬಾರಿ ನಡೆದ ಪ್ಲಾಸ್ಟಿಕ್ ಸರ್ಜರಿಯಿಂದ ಅವರ ಅಂದ ಮತ್ತಷ್ಟು ಹದಗೆಟ್ಟಿತೇ ವಿನಹ ಅವರ ಸೌಂದರ್ಯ ಮರುಕಳಿಸಲಿಲ್ಲ. ಈ ಸಂಗತಿಯಿಂದಾಗಿ ಅವರು ತಮ್ಮನ್ನು ತಾವೇ ದ್ವೇಷಿಸಿಕೊಳ್ಳುವಂತಾಗಿತ್ತು.

   ತೀವ್ರ ಒತ್ತಡದಲ್ಲಿದ್ದ ಶ್ರೀದೇವಿ

   ತೀವ್ರ ಒತ್ತಡದಲ್ಲಿದ್ದ ಶ್ರೀದೇವಿ

   ಐದು ವರ್ಷಗಳ ಹಿಂದೆ ತಾವು ಶ್ರೀದೇವಿಯನ್ನು ಭೇಟಿಯಾಗಿದ್ದಾಗಿ ಬರೆದಿರುವ ಪಿಯಾಲಿ ಗಂಗೂಲಿಯವರು, ಆಗ ಶ್ರೀದೇವಿಯವರು ಹೆಚ್ಚುತ್ತಿರುವ ತಮ್ಮ ಮೈತೂಕ ಮತ್ತು ಜಾರುತ್ತಿರುವ ಸೌಂದರ್ಯದ ಬಗ್ಗೆ ವಿಪರೀತ ಒತ್ತಡದಲ್ಲಿದ್ದರು. ಇದಕ್ಕಾಗಿ ಹಲವಾರು ಬಾರಿ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದರು ಎಂದು ಫೇಸ್ ಬುಕ್ಕಿನಲ್ಲಿ ಬರೆದಿದ್ದಾರೆ.

   ವಯಸ್ಸು ಬಚ್ಚಿಡಲು ಸಾಧ್ಯವೆ?

   ವಯಸ್ಸು ಬಚ್ಚಿಡಲು ಸಾಧ್ಯವೆ?

   ಅವರ ಡಯಟ್ ಮೇಲೆ ಕಣ್ಣಾಡಿಸಿದರೆ ಎಂಥವರಿಗೂ ಅಚ್ಚರಿಯಾಗಬೇಕು. ಅಷ್ಟೊಂದು ಪ್ರಜ್ಞಾಪೂರ್ವಕವಾಗಿ ಅವರು ಸೌಂದರ್ಯ ಮರಳಿಪಡೆಯುವ ಪ್ರಯತ್ನದಲ್ಲಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಯೋಗಕ್ಕೆ ಮೊರೆಹೋಗಿದ್ದರು. ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಸಮಯದಲ್ಲಿ ವಯಸ್ಸು ಬಚ್ಚಿಡಲಾಗದಿದ್ದರೂ, ಅವರ ಪ್ರತಿಭೆ ಅದೆಲ್ಲವನ್ನೂ ಮರೆಮಾಚಿತ್ತು.

   ಆತ್ಮಗೌರವಕ್ಕಿಂತ ಸೌಂದರ್ಯವೇ ಹೆಚ್ಚಾಯಿತೆ?

   ಆತ್ಮಗೌರವಕ್ಕಿಂತ ಸೌಂದರ್ಯವೇ ಹೆಚ್ಚಾಯಿತೆ?

   ಚರ್ಮದ ಪ್ಲಾಸ್ಟಿಕ್ ಸರ್ಜರಿಯಲ್ಲದೆ, ಸ್ತನದ ಶಸ್ತ್ರಚಿಕಿತ್ಸೆ, ಸೊಂಟಕ್ಕೆ ಕತ್ತರಿ ಮುಂತಾದವಕ್ಕೆ ಸಾಕಷ್ಟು ಹಣ ವ್ಯಯಿಸುತ್ತಿದ್ದರು. ಆತ್ಮಗೌರವಕ್ಕಿಂತ ಅವರಿಗೆ ಸೌಂದರ್ಯವೇ ಹೆಚ್ಚಾಗಿತ್ತೆ ಎಂಬ ಪ್ರಶ್ನೆಯೂ ಕಾಡದೆ ಇರದು. ಸಹಜ ಸೌಂದರ್ಯಕ್ಕಿಂತ ಕೃತಕ ಸೌಂದರ್ಯಕ್ಕೆ ಶ್ರೀದೇವಿ ಬಲಿಯಾದರೆ? ಯಾವುದಕ್ಕೂ ಉತ್ತರ ಸಿಗುವುದಿಲ್ಲ.

   ಇತರ ನಟಿಯರಿಗೆ ಈ ಸಾವು ಪಾಠವಾಗುವುದೆ?

   ಇತರ ನಟಿಯರಿಗೆ ಈ ಸಾವು ಪಾಠವಾಗುವುದೆ?

   ಈ ಎಲ್ಲದರ ಪರಿಣಾಮ ಅವರನ್ನು ಹೃದಯಾಘಾತಕ್ಕೆ ಈಡು ಮಾಡಿದ್ದರೂ ಅಚ್ಚರಿಯಿಲ್ಲ. ಹಿಂದಿ ಚಿತ್ರರಂಗದಲ್ಲಿ ಶ್ರೀದೇವಿಯವರೊಬ್ಬರೇ ಇಲ್ಲ, ಅವರ ಜೊತೆ ಇಂಥದೇ ಅನಾರೋಗ್ಯಕರ ಪೈಪೋಟಿಯಲ್ಲಿ ಇನ್ನೂ ಹಲವರಿದ್ದಾರೆ. ಅವರಿಗೆ ಶ್ರೀದೇವಿಯವರ ಸಾವು ಒಂದು ಪಾಠವಾಗಬೇಕು. ಆದರೆ, ಒಂದು ಮಾತ್ರ ಸತ್ಯ. ಶ್ರೀದೇವಿ ಮರಳಿ ಬರುವಿದಿಲ್ಲ.

   ಅಗಲಿದ ಶ್ರೀದೇವಿಯವರು ಸರಕಾರಿ ಗೌರವಕ್ಕೆ ಅರ್ಹರಾ?

   ಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   What could be the real reason behind Sridevi's death? Many versions are roaming around in the social media. No doubt, Sridevi was extremely beauty conscious and had undergone several surgeries to get back the old beauty. Did this cause heart attack? God knows.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more