ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಮಾರ್ಚ್ 14: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ 2022-23ನೇ ಸಾಲಿನ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ ಕೆಳಮನೆಯಲ್ಲಿ ಮಂಡಿಸಿದರು.

ಜಮ್ಮು ಕಾಶ್ಮೀರದಲ್ಲಿ ಪ್ರಸ್ತುತ ಯಾವುದೇ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದ ಕಾರಣಕ್ಕೆ ಈ ಬಾರಿ ವಾರ್ಷಿಕ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು. 2022-23ನೇ ಸಾಲಿಗೆ 1.42 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.

Budget 2022; ಬೆಂಗಳೂರು ಸಬ್ ಅರ್ಬನ್ ರೈಲಿಗೆ 450 ಕೋಟಿBudget 2022; ಬೆಂಗಳೂರು ಸಬ್ ಅರ್ಬನ್ ರೈಲಿಗೆ 450 ಕೋಟಿ

ಕೇಂದ್ರಾಡಳಿತ ಪ್ರದೇಶದ ಬಜೆಟ್ ಮಂಡಿಸಿದ ಅವರು, ಲೋಕಸಭೆಯಲ್ಲಿ ಅನುದಾನಕ್ಕಾಗಿ ಪೂರಕ ಬೇಡಿಕೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿ ಅನುದಾನಕ್ಕಾಗಿ ಬೇಡಿಕೆಗಳನ್ನು ಮಂಡಿಸಿದರು. ಕಳೆದ 2021-22ನೇ ಸಾಲಿಗೆ ಕೇಂದ್ರಾಡಳಿತ ಪ್ರದೇಶಕ್ಕೆ ಒಟ್ಟು 18,860.32 ಕೋಟಿ ರೂಪಾಯಿಗಳ ಪೂರಕ ಬೇಡಿಕೆಗಳನ್ನು ಮಂಡಿಸಿದರು. ಜೂನ್ 2022ರ ನಂತರ GST ಅಡಿಯಲ್ಲಿ ಪರಿಹಾರ ಕಾರ್ಯವಿಧಾನವನ್ನು ವಿಸ್ತರಿಸಲು ಹಲವು ರಾಜ್ಯಗಳು ವಿನಂತಿಸಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಸಾಂವಿಧಾನಿಕ ನಿಬಂಧನೆಯ ಪ್ರಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 5 ವರ್ಷಗಳವರೆಗೆ GST ಪರಿಹಾರವನ್ನು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸೀತಾರಾಮನ್ ಹೇಳಿದರು.

What are the Special in J&K Budget presented by Finance Minister Nirmala Sitharaman In Parliament

ಜಮ್ಮು ಕಾಶ್ಮೀರಕ್ಕೆ ಪೂರಕ ಅನುದಾನ:

ಲೋಕಸಭೆಯಲ್ಲಿ 2021-22ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರಕ ಬೇಡಿಕೆ ಅನುದಾನದ ಕುರಿತು ಚರ್ಚಿಸಲಾಯಿತು. ಈ ವೇಳೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಮಾತನಾಡಿ, ರಾಜ್ಯದ ಪ್ರವಾಸೋದ್ಯಮ ಮತ್ತು ಕರಕುಶಲ ಕೈಗಾರಿಕೆಗಳು ಕೆಟ್ಟದಾಗಿ ಪರಿಣಾಮ ಬೀರಿವೆ. ಕಳೆದ ಮೂರು ವರ್ಷಗಳಿಂದ ಕೇಂದ್ರಾಡಳಿತವು ಕಠಿಣ ಹಂತವನ್ನು ಎದುರಿಸುತ್ತಿದೆ ಎಂದರು.

ಸಂಸತ್ ಅಧಿವೇಶನದ ಎರಡನೇ ಭಾಗ ಶುರು:

ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗ ಸೋಮವಾರದಿಂದ ಶುರುವಾಯಿತು. ರಷ್ಯಾದೊಂದಿಗಿನ ಸಂಘರ್ಷದಿಂದಾಗಿ ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಚರ್ಚೆ ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು. ಹೋಳಿ ಹಬ್ಬದ ಹಿನ್ನೆಲೆ ಉಭಯ ಸದನಗಳ ಕಲಾಪವನ್ನು ಮಾರ್ಚ್ 17ಕ್ಕೆ ಮುಂದೂಡಲಾಯಿತು.

1 ಕೋಟಿ ಎಲ್‌ಪಿಜಿ ಸಂಪರ್ಕ:

ಉಜ್ವಲ 2.0 ಅಡಿಯಲ್ಲಿ 1 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ ಎಂದು ರಾಜ್ಯಸಭೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಲಿಖಿತ ಉತ್ತರ ನೀಡಿದರು.

ಸರ್ಕಾರವು 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅನ್ನು ಬಡ ಮನೆಗಳಿಗೆ ಶುದ್ಧ ಅಡುಗೆ ಇಂಧನವನ್ನು ಒದಗಿಸಲು ಜಾರಿಗೊಳಿಸಲಾಯಿತು. ಸೆಪ್ಟೆಂಬರ್ 2019ರ ವೇಳೆಗೆ 8 ಕೋಟಿ ಠೇವಣಿ ಇಟ್ಟುಕೊಂಡು ಉಚಿತ ಎಲ್‌ಪಿಜಿ ಅನ್ನು ಒದಗಿಸಲಾಗಿದೆ. PMUY ಅಡಿಯಲ್ಲಿ ಉಳಿದ ಕುಟುಂಬಗಳಿಗೆ ಉಜ್ವಲ 2.0 ಅನ್ನು 10 ಆಗಸ್ಟ್, 2021ರಂದು ಪ್ಯಾನ್-ಇಂಡಿಯಾ ಆಧಾರದ ಮೇಲೆ ಉಚಿತ ಮೊದಲ ಮರುಪೂರಣ ಮತ್ತು ಸ್ಟೌ ಜೊತೆಗೆ ಹೆಚ್ಚುವರಿ ಒಂದು ಕೋಟಿ LPG ಸಂಪರ್ಕಗಳನ್ನು ಒದಗಿಸಲು ಪ್ರಾರಂಭಿಸಲಾಗಿದೆ ಎಂದು ರಾಮೇಶ್ವರ್ ತೇಲಿ ಸದನಕ್ಕೆ ತಿಳಿಸಿದರು. ಮಾರ್ಚ್ 1, 2022ರ ವೇಳೆಗೆ OMC ಗಳು ಉಜ್ವಲ 2.0 ಅಡಿಯಲ್ಲಿ 1 ಕೋಟಿ LPG ಸಂಪರ್ಕಗಳನ್ನು ಬಿಡುಗಡೆ ಮಾಡಿದೆ ಎಂದರು.

English summary
What are the Special in Jammu Kashmir Budget presented by Finance Minister Nirmala Sitharaman In Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X