ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ವಾರದ ಕೊರೊನಾ ಪ್ರಕರಣಗಳಲ್ಲಿ 15% ಇಳಿಕೆ; 6 ತಿಂಗಳಲ್ಲಿ ಕನಿಷ್ಠ ಪ್ರಕರಣ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಭಾನುವಾರ ಕೊನೆಗೊಂಡಂತೆ ದೇಶದಲ್ಲಿ ವಾರದ ಒಟ್ಟಾರೆ ಹೊಸ ಕೊರೊನಾ ಪ್ರಕರಣಗಳಲ್ಲಿ 15% ಇಳಿಕೆ ದಾಖಲಾಗಿದ್ದು, ಆರು ತಿಂಗಳ ನಂತರ ಈ ಇಳಿಕೆ ಕಂಡುಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ವಾರದ ಕೊರೊನಾ ಪಾಸಿಟಿವಿಟಿ ದರವು ಶೇ 2.04ರಷ್ಟಿದೆ. ಕಳೆದ 86 ದಿನಗಳಲ್ಲಿ 3%ಕ್ಕಿಂತ ದಾಖಲಾದ ಕಡಿಮೆ ಪಾಸಿಟಿವಿಟಿ ದರ ಇದಾಗಿದೆ. ಸೋಂಕಿನಿಂದ ಚೇತರಿಕೆ ಪ್ರಮಾಣವು ಶೇಕಡಾ 97.68ರಷ್ಟಿದೆ.

ದೇಶಾದ್ಯಂತ ತಗ್ಗುವ ಹಾದಿಯಲ್ಲಿದೆ ಕೊರೊನಾ; ಕೇಂದ್ರದೇಶಾದ್ಯಂತ ತಗ್ಗುವ ಹಾದಿಯಲ್ಲಿದೆ ಕೊರೊನಾ; ಕೇಂದ್ರ

ದೇಶದಲ್ಲಿ ಸೆ.20ರ ಕೊರೊನಾ ಪ್ರಕರಣ: ಕಳೆದ 24 ಗಂಟೆಗಳಲ್ಲಿ 30,256 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 295 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸತತ 85 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,18,181ಕ್ಕೆ ತಲುಪಿದೆ. ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಸೋಂಕಿನ ಪ್ರಮಾಣ 0.99% ಆಗಿದೆ.

Weekly Count Of New Corona Cases Lowest In More Than 6 Months

ಒಟ್ಟು 32715105 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಸೋಂಕಿನಿಂದ ಉಂಟಾದ ಮರಣ ಪ್ರಮಾಣ 445133 ಆಗಿದೆ.

ಕೇರಳದಲ್ಲಿ ತಗ್ಗುತ್ತಿದೆ ಕೊರೊನಾ:
ಕೇರಳದಲ್ಲಿ ಕ್ರಮೇಣ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ದೇಶದ ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣವನ್ನು ಕೇರಳ ದಾಖಲಿಸುತ್ತಿದ್ದರೂ ವಾರದ ಕೊರೊನಾ ಪ್ರಕರಣಗಳಲ್ಲಿ ಕೇರಳ 21% ಕುಸಿತ ದಾಖಲಿಸಿದೆ. ರಾಜ್ಯ ಆರೋಗ್ಯ ಸಚಿವಾಲಯದ ಪ್ರಕಾರ ರಾಜ್ಯದಲ್ಲಿ ಭಾನುವಾರ 19,653 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

'ಕೊರೊನಾ ಎನ್ನುವುದು ಮುಗಿದ ಅಧ್ಯಾಯ, ಡೋಂಟ್ ವರಿ': ಡಾ.ರಾಜು ಕೃಷ್ಣಮೂರ್ತಿ'ಕೊರೊನಾ ಎನ್ನುವುದು ಮುಗಿದ ಅಧ್ಯಾಯ, ಡೋಂಟ್ ವರಿ': ಡಾ.ರಾಜು ಕೃಷ್ಣಮೂರ್ತಿ

ಕೇರಳದಲ್ಲಿ ಒಟ್ಟು 173631 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 45,08,493 ಆಗಿದೆ.

Weekly Count Of New Corona Cases Lowest In More Than 6 Months

ಪ್ರಸ್ತುತ 512854 ಜನರು ಜಿಲ್ಲಾಡಳಿತದ ಕಣ್ಗಾವಲಿನಲ್ಲಿದ್ದು, 487587 ಜನರು ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರೆ, 25,267 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.

ಭಾರತದ ಪ್ರಸ್ತುತ ಕೊರೊನಾ ಪರಿಸ್ಥಿತಿಯ ಒಟ್ಟಾರೆ ಚಿತ್ರಣವನ್ನು ನೀಡಿರುವ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, 'ದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿವೆ. ಸತತ ಹನ್ನೊಂದನೇ ವಾರದಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ 3% ಕ್ಕಿಂತ ಕಡಿಮೆ ಇದೆ. ಪ್ರಸ್ತುತ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಒಂದೇ ಒಂದು ರಾಜ್ಯವಿದೆ. ಹೀಗಾಗಿ ಸೋಂಕು ನಿಯಂತ್ರಣ ಸುಲಭವಾಗಲಿದೆ' ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿ ನಡುವೆ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೆಚ್ಚಿಸುವುದರ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿದೆ. ದೇಶದಲ್ಲಿ 3,631 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಘೋಷಿಸಿದ್ದಾರೆ.

ಕೇರಳ, ಮೀಜೋರಾಂನಲ್ಲಿ ಹೆಚ್ಚಿರುವ ಸೋಂಕಿನ ಪ್ರಮಾಣ:
ಭಾರತದಲ್ಲಿ ವರದಿಯಾಗುತ್ತಿರುವ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ.68ರಷ್ಟು ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ಪತ್ತೆಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ದೇಶದಲ್ಲಿ ಪತ್ತೆಯಾಗುವ ಕೊವಿಡ್-19 ಪ್ರಕರಣಗಳಲ್ಲಿ ಶೇ.68ರಷ್ಟು ಕೇರಳದಲ್ಲಿ ವರದಿಯಾಗುತ್ತಿವೆ ಎಂದರು. ಕೇರಳವೊಂದರಲ್ಲೇ 1.99 ಲಕ್ಷ ಸಕ್ರಿಯ ಕೊರೊನಾ ಪ್ರಕರಣಗಳಿವೆ. ಮಿಜೋರಾಂ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 10,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಕಳೆದ 11 ವಾರಗಳಲ್ಲಿ ಪಾಸಿಟಿವಿಟಿ ದರ ಶೇ.3ರಷ್ಟಿದೆ. 64 ಜಿಲ್ಲೆಗಳಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾಗಿದೆ. ಈ ಪ್ರದೇಶಗಳಲ್ಲಿ ಕೊರೊನಾ ಲಸಿಕೆ ವಿತರಣೆ ಹೆಚ್ಚಿಸುವುದು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ," ಎಂದು ಹೇಳಿದ್ದಾರೆ.

English summary
The weekly count of new coronavirus infections is the lowest in the country in more than six months as India recorded a 15 per cent drop in new COVID-19 cases detected in the week ending Sunday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X