ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಾರ್ಡ್ ವಾಪಸಿ ಮಾಡಿದರೂ ನಾವೇ ಗೆಲ್ಲೋದು: ಅಮಿತ್ ಶಾ

|
Google Oneindia Kannada News

ಜೈಪುರ, ಸೆಪ್ಟೆಂಬರ್ 11: ರಾಜಸ್ಥಾನದಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಚುನಾವಣೆ ಬಂದಾಗಲೆಲ್ಲ ಅಖ್ಲಾಕ್‌ ಹತ್ಯೆ, ಅವಾರ್ಡ್ ವಾಪಸಿಯ ವಿವಾದಗಳನ್ನು ಎಬ್ಬಿಸುತ್ತಾರೆ. ಆದರೆ, ಆಗಲೂ ನಾವು ಗೆದ್ದಿದ್ದೆವು, ಮುಂದೆಯೂ ಗೆಲ್ಲುತ್ತೇವೆ ಎಂದು ಜೈಪುರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

ಅಮಿತ್ ಶಾ ರಾಜ್ಯಕ್ಕೆ: ರಾಜ್ಯ ರಾಜಕೀಯ ಗೊಂದಲಕ್ಕೆ ಕೊನೆ ಮೊಳೆ?ಅಮಿತ್ ಶಾ ರಾಜ್ಯಕ್ಕೆ: ರಾಜ್ಯ ರಾಜಕೀಯ ಗೊಂದಲಕ್ಕೆ ಕೊನೆ ಮೊಳೆ?

2015ರ ಸೆಪ್ಟೆಂಬರ್‌ನಲ್ಲಿ ದಾದ್ರಿ ಗ್ರಾಮದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಸಂಶಯದಲ್ಲಿ ಮೊಹಮ್ಮದ್ ಅಖ್ಲಾಕ್‌ ಎಂಬಾತನ ಮೇಲೆ ಗೋರಕ್ಷಕರ ಗುಂಪು ದಾಳಿ ನಡೆಸಿ ಹತ್ಯೆ ಮಾಡಿತ್ತು. ಇದು ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗಿತ್ತು.

we will win despite award wapsi, dadri mob killing: amit shah

'ಅಜೇಯ ಬಿಜೆಪಿ' ಸಾರಥ್ಯ ಅಮಿತ್ ಶಾಗೆ; ಬಿಜೆಪಿ ಕಾರ್ಯಕಾರಿಣಿ ಮುಖ್ಯಾಂಶ'ಅಜೇಯ ಬಿಜೆಪಿ' ಸಾರಥ್ಯ ಅಮಿತ್ ಶಾಗೆ; ಬಿಜೆಪಿ ಕಾರ್ಯಕಾರಿಣಿ ಮುಖ್ಯಾಂಶ

ಇದರ ಬಳಿಕ ರಾಜಸ್ಥಾನದಲ್ಲಿ ಸರಣಿ ದಾಳಿ ಪ್ರಕರಣಗಳು ವರದಿಯಾಗಿದ್ದವು. ಈ ಘಟನೆಗಳ ಬಳಿಕ ವಸುಂಧರಾ ರಾಜೇ ಸರ್ಕಾರ ವಿರೋಧಪಕ್ಷಗಳ ಟೀಕೆಗೆ ಗುರಿಯಾಗಿತ್ತು.

2019ರಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಈ ರಾಜ್ಯಗಳ ಮೇಲೆ ಬಿಜೆಪಿ ಕಣ್ಣು!2019ರಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಈ ರಾಜ್ಯಗಳ ಮೇಲೆ ಬಿಜೆಪಿ ಕಣ್ಣು!

ಈ ಆರೋಪಗಳ ನಡುವೆಯೂ ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಿತ್ತು ಎಂಬುದನ್ನು ಉಲ್ಲೇಖಿಸಿದ ಅಮಿತ್ ಶಾ, ನಾವು ಆಗಲೂ ಗೆದ್ದಿದ್ದೆವು, ಮುಂದೆಯೂ ಗೆಲ್ಲುತ್ತೇವೆ ಎಂದಿದ್ದಾರೆ.

English summary
BJP National President Amit Shah said that, Party will win despite the issues like Dadri mob killing and Award Wapsi rakes whenever elections came.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X