ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ ಕನಿಷ್ಟ ಆದಾಯ ಖಾತ್ರಿ: ರಾಹುಲ್ ಗಾಂಧಿ ಭರವಸೆ

|
Google Oneindia Kannada News

ರಾಯಪುರ, ಜನವರಿ 28: ಬಡವರನ್ನು ಆರ್ಥಿಕವಾಗಿ ಶಕ್ತಗೊಳಿಸಲು 'ಕನಿಷ್ಟ ಆದಾಯ ಖಾತ್ರಿ' ನೀಡುವ ಕಾರ್ಯ ನಾವು ಅಧಿಕಾರಕ್ಕೆ ಬಂದರೆ ಮಾಡುತ್ತವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಭರವಸೆ ನೀಡಿದರು.

RSS-BJP ಯಿಂದ ಬಹುದೊಡ್ಡ ಉಡುಗೊರೆ ದೊರೆತಿದೆ: ರಾಹುಲ್ ಗಾಂಧಿ RSS-BJP ಯಿಂದ ಬಹುದೊಡ್ಡ ಉಡುಗೊರೆ ದೊರೆತಿದೆ: ರಾಹುಲ್ ಗಾಂಧಿ

ಚತ್ತೀಸ್‌ಗಡದ ರಾಯಪುರದಲ್ಲಿ ನಡೆದ ರೈತ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ರೀತಿಯ ನಿರ್ಣಯವನ್ನು ಹಿಂದಿನ ಯಾವುದೇ ಸರ್ಕಾರಗಳು ತಳೆದಿಲ್ಲ, ಅಂತಹಾ ಅತಿಮುಖ್ಯ, ಅವಶ್ಯ ನಿರ್ಣಯ ಇದಾಗಿದೆ ಎಂದು ಹೇಳಿದರು.

we will give Minimum Income Guarantee to every poor: Rahul Gandhi

ಮನ್‌ರೇಗಾ (MANREGA) ಮೂಲಕ 100 ಗಂಟೆಯ ಉದ್ಯೋಗ ಖಾತ್ರಿಯನ್ನು ಕಾಂಗ್ರೆಸ್ ನೀಡಿತ್ತೊ, ಆರ್‌ಟಿಐ ಮೂಲಕ ಆಡಳಿತವನ್ನು ಹೇಗೆ ಸ್ವಚ್ಛ ಮಾಡುವ ಮಹತ್ವದ ಹೆಜ್ಜೆ ಇಟ್ಟಿತೋ, ಆಹಾರ ಕಾಯ್ದೆ ಮೂಲಕ ಎಲ್ಲರಿಗೂ ಆಹಾರ ಕಡ್ಡಾಯವಾಗಿ ದೊರೆಯುವಂತೆ ಮಾಡಿತೊ, ಹಾಗೆಯೇ ಎಲ್ಲರಿಗೂ ಕನಿಷ್ಟ ಆದಾಯವನ್ನು ನಾವು ನೀಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್' ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್'

ತಮ್ಮ ಈ ಯೋಜನೆಯನ್ನು ಐತಿಹಾಸಿಕ ಎಂದು ಬಣ್ಣಿಸಿರುವ ರಾಹುಲ್ ಅವರು, ತಮ್ಮ ಪಕ್ಷವು 2019 ರ ಚುನಾವಣೆ ಗೆದ್ದು ಅಧಿಕಾರ ರಚಿಸಿದ ಬಳಿಕ ತುರ್ತಾಗಿ ದೇಶದ ಎಲ್ಲ ಬಡವರಿಗೂ ಕನಿಷ್ಟ ಆದಾಯವನ್ನು ನೀಡುವ ಕಾರ್ಯ ಮಾಡುತ್ತದೆ ಎಂದು ಹೇಳಿದ್ದಾರೆ.

ಲೋಕಸಭೆ 2019 : ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಿರುವ ಘಟಬಂಧನ ಲೋಕಸಭೆ 2019 : ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಿರುವ ಘಟಬಂಧನ

ತಮ್ಮ ಈ ಯೋಜನೆಯು ಹಸಿವು ಮುಕ್ತ ಬಡತನ ಮುಕ್ತ ಭಾರತವನ್ನು ನಿರ್ಮಾಣ ಮಾಡಲಿದೆ ಎಂದು ರಾಹುಲ್ ಅವರು ಹೇಳಿದರು. ಅಷ್ಟೆ ಅಲ್ಲದೆ ಚತ್ತೀಸ್‌ಗಡದಲ್ಲಿ 15 ವರ್ಷಗಳ ಬಳಿಕ ನಮ್ಮ ಪಕ್ಷಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

English summary
AICC president Rahul Gandhi said We have decided to give every poor person a Minimum Income Guarantee when we form the government. This is a historic step taken to eradicate hunger and poverty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X