ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ; ಸೇನಾ ಮುಖ್ಯಸ್ಥ

|
Google Oneindia Kannada News

ನವದೆಹಲಿ, ಜುಲೈ 02: "ಡ್ರೋನ್‌ಗಳ ಸುಲಭ ಲಭ್ಯತೆ ದೇಶಗಳು ಹಾಗೂ ದೇಶ ಪ್ರಾಯೋಜಿತ ಉಗ್ರರಿಂದ ಭದ್ರತಾ ಸವಾಲುಗಳನ್ನು ಹೆಚ್ಚಿಸಿದೆ" ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಗುರುವಾರ ಹೇಳಿದ್ದಾರೆ.

"ಹೊಸ ಬೆದರಿಕೆ ಸೃಷ್ಟಿಸಿರುವ ಈ ಆಧುನಿಕ ಡ್ರೋನ್ ಯುದ್ಧದ ಬದಲಾಗುತ್ತಿರುವ ಸನ್ನಿವೇಶವನ್ನು ನಿಭಾಯಿಸಲು ಹಳೆಯ ಮನಸ್ಥಿತಿಯನ್ನು ನಾವು ಬದಲಾಯಿಸಿಕೊಳ್ಳಬೇಕಿದೆ" ಎಂದು ಕರೆ ನೀಡಿದ್ದಾರೆ.

We Need To Shed Old Mindsets Says Indian Army Chief On Drone Warfare

"ಕೃತಕ ಬುದ್ಧಿಮತ್ತೆಯಂಥ ಸ್ಥಾಪಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು, ಮಾಹಿತಿ ತಂತ್ರಜ್ಞಾನದಲ್ಲಿನ ನಮ್ಮ ಜ್ಞಾನವನ್ನು ಒರೆಗೆ ಹಚ್ಚಲು ಹಾಗೂ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಅರಿತುಕೊಳ್ಳಲು ನಾವು ಹಳೆ ಮನಸ್ಥಿತಿಯನ್ನು ತೊರೆಯಬೇಕು. ನಮ್ಮ ಕಾರ್ಯವಿಧಾನಗಳನ್ನು ಸುಲಭವಾಗಿ ನಿರ್ವಹಿಸುವಂತೆ ಯೋಜನೆ ರೂಪಿಸಬೇಕು" ಎಂದು ನರವಣೆ ಸಲಹೆ ನೀಡಿದ್ದಾರೆ.

"ಭಾರತೀಯ ಸೇನೆಯನ್ನು ಡಿಜಿಟಲ್ ಯುಗಕ್ಕೆ ಪರಿವರ್ತನೆ ಮಾಡಿಕೊಳ್ಳಬೇಕಿದೆ. ಎಲ್ಲ ಪರಿವರ್ತನೆಗೆ ಅನುಕೂಲವಾಗುವ ಸರಳೀಕೃತ ಕಾರ್ಯವಿಧಾನಗಳ ಅಗತ್ಯವಿರುತ್ತದೆ. ದುರದೃಷ್ಟವಶಾತ್ ಇದು ನಮ್ಮ ಅತಿದೊಡ್ಡ ಎಡವಟ್ಟುಗಳಲ್ಲಿ ಒಂದಾಗಿದೆ" ಎಂದು ಜಾಗತಿಕ ಭಯೋತ್ಪಾದಕ ವಿರೋಧಿ ಸಮಿತಿ ಆಯೋಜಿಸಿದ್ದ ವರ್ಚುಯಲ್ ಸಮ್ಮೇಳನದಲ್ಲಿ ಮಾತನಾಡಿದರು.

ಭಾರತ-ಪಾಕ್‌ ಪರಿಸ್ಥಿತಿ ರಾತ್ರೋರಾತ್ರಿ ಬದಲಾಗುವಂಥದ್ದಲ್ಲ; ನರವಣೆ
ಜಮ್ಮು ಸೇನಾ ಪ್ರದೇಶದಲ್ಲಿ ಈಚೆಗೆ ಡ್ರೋನ್ ಬಳಸಿ ಸ್ಫೋಟ ನಡೆದಿತ್ತು. ಭಾರತೀಯ ವಾಯುಸೇನೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ದಾಳಿ ನಂತರ ಮತ್ತೆ ಮತ್ತೆ ಡ್ರೋನ್‌ಗಳು ಕಾಣಿಸಿಕೊಳ್ಳುತ್ತಿವೆ.

ಈ ಕುರಿತು ಉಲ್ಲೇಖಿಸಿ ಮಾತನಾಡಿರುವ ಅವರು, "ಡ್ರೋನ್‌ಗಳ ಸುಲಭ ಲಭ್ಯತೆ ನಾವು ಎದುರಿಸಬೇಕಾದ ಸವಾಲುಗಳನ್ನು ಹೆಚ್ಚಿಸಿವೆ. ನಾವು ಸಮಸ್ಯೆಯನ್ನು ಗುರುತಿಸಿದ್ದೇವೆ ಹಾಗೂ ಇದಕ್ಕೆ ತೆಗೆದುಕೊಳ್ಳುವ ಕ್ರಮಗಳತ್ತ ಚಿಂತಿಸಬೇಕಿದೆ" ಎಂದಿದ್ದಾರೆ.

English summary
Indian Army Chief General MM Naravane on Thursday said that, "We need to shed old mindset make our procedures more adaptive"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X