ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪೋಷಕರು ಮಕ್ಕಳಲ್ಲಿ ಹಿಂದೂ ಧರ್ಮದ ಬಗ್ಗೆ ಹೆಮ್ಮೆ ಹುಟ್ಟಿಸಬೇಕು': ಮೋಹನ್‌ ಭಾಗವತ್‌

|
Google Oneindia Kannada News

ಉತ್ತರಾಖಂಡ, ಅಕ್ಟೋಬರ್‌ 11: "ಹಿಂದೂ ಯುವತಿಯರ ಹಾಗೂ ಹಿಂದೂ ಯುವಕರ ಮತಾಂತರವು ತಪ್ಪು, ಹಾಗೆಯೇ ನಮ್ಮ ಯುವ ಜನರಲ್ಲಿ ನಮ್ಮ ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುವುದು ಅಗತ್ಯ ಇದೆ," ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಹಲ್ದ್ವಾನಿಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಹಾಗೂ ಅವರ ಕುಟುಂಬಸ್ಥರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ "ತಮ್ಮ ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಉತ್ತಮ ಭಾವನೆ ಬೆಳೆಯುವಂತಹ ಸಂಸ್ಕಾರವನ್ನು ಕಲಿಸಿಕೊಡಿ," ಎಂದು ಪೋಷಕರಿಗೆ ತಿಳಿಸಿದರು.

ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಘರ್ಷಣೆ ತಂದಿಟ್ಟಿದ್ದೇ ಬ್ರಿಟಿಷರು: ಮೋಹನ್ ಭಾಗವತ್ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಘರ್ಷಣೆ ತಂದಿಟ್ಟಿದ್ದೇ ಬ್ರಿಟಿಷರು: ಮೋಹನ್ ಭಾಗವತ್

"ಮತಾಂತರ ನಡೆಯುವುದಾದರೂ ಹೇಗೆ?, ಮದುವೆಯಾಗುವ ಒಂದು ಸಣ್ಣ ಸ್ವಾರ್ಥಕ್ಕಾಗಿ ನಮ್ಮ ಹಿಂದೂ ಧರ್ಮದ ಯುವತಿಯರು ಹಾಗೂ ಯುವಕರು ಹೇಗೆ ಬೇರೆ ಧರ್ಮವನ್ನು ಸ್ವೀಕಾರ ಮಾಡುತ್ತಾರೆ?," ಎಂದು ಪೋಷಕರ ಬಳಿ ಪ್ರಶ್ನೆ ಕೇಳಿದರು.

We need to instill pride in hindu youths about our religion, says RSS chief to Parents

"ಈ ಮತಾಂತರವನ್ನು ಯಾರು ಮಾಡುತ್ತಾರೋ ಅದು ತಪ್ಪು, ಆದರೆ ಬೇರೆ ವಿಷಯ. ಆದರೆ ನಾವು ನಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸುವುದಿಲ್ಲವೇ?. ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ಸಂಸ್ಕೃತಿಯನ್ನು ನೀಡಬೇಕು. ನಮ್ಮ ಬಗ್ಗೆ, ನಮ್ಮ ಧರ್ಮದ ಬಗ್ಗೆ ನಮ್ಮ ಯುವಕರಲ್ಲಿ ಹೆಮ್ಮೆಯನ್ನು ನಾವು ಮೂಡಿಸಬೇಕು, ಹಾಗೆಯೇ ನಮ್ಮ ಸಂಸ್ಕೃತಿ ಬಗ್ಗೆ ಗೌರವವನ್ನು ನಾವು ಮೂಡಿಸಬೇಕು," ಎಂದು ಕಿವಿಮಾತು ಹೇಳಿದರು.

ಇನ್ನು ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನರಲ್ಲಿ ಯಾವುದೇ ಗೊಂದಲವಿಲ್ಲದೇ ನೀವು ಯಾವ ಪ್ರಶ್ನೆಗೂ ಉತ್ತರವನ್ನು ನೀಡಬೇಕು. ಅವರು ನಿಮ್ಮ ಬಳಿಗೆ ಬಂದು ಪ್ರಶ್ನೆ ಕೇಳಿದರೆ ಉತ್ತರ ನೀಡಿ. ಯಾವುದೇ ಗೊಂದಲಕ್ಕೆ ಒಳಗಾಗಬೇಡಿ. ನಾವು ನಮ್ಮ ಮಕ್ಕಳಿಗೆ ಪ್ರಶ್ನೆಗೆ ಉತ್ತರಿಸುವುದನ್ನು ಕಲಿಸಬೇಕು ಹಾಗೂ ನಾವು ಕೂಡಾ ಕಲಿಯಬೇಕು," ಎಂದರು.

'ಸಿಎಎ-ಎನ್‌ಆರ್‌ಸಿ ಭಾರತದ ಮುಸ್ಲಿಂ ನಾಗರಿಕರ ವಿರುದ್ಧವಲ್ಲ' ಎಂದ ಮೋಹನ್‌ ಭಾಗವತ್‌'ಸಿಎಎ-ಎನ್‌ಆರ್‌ಸಿ ಭಾರತದ ಮುಸ್ಲಿಂ ನಾಗರಿಕರ ವಿರುದ್ಧವಲ್ಲ' ಎಂದ ಮೋಹನ್‌ ಭಾಗವತ್‌

ಸಾಂಪ್ರದಾಯಿಕ ಕುಟುಂಬ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವ ವಿಚಾರವನ್ನು ಕೂಡಾ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು. ಭಾರತದ ಪ್ರವಾಸಿ ತಾಣಗಳಿಗೆ ನಮ್ಮ ಜನರು ಭೇಟಿ ನೀಡಬೇಕು. ಹಾಗೆಯೇ ಮನೆಯಲ್ಲೇ ಮಾಡಿದ ಆಹಾರವನ್ನು ಸೇವಿಸಿ ಹಾಗೂ ಸಾಂಪ್ರದಾಯಿಕ ಉಡುಪನ್ನು ಧರಿಸಬೇಕು ಎಂದು ಕೂಡಾ ಸಲಹೆ ನೀಡಿದರು.

ಇನ್ನು ಈ ಸಂದರ್ಭದಲ್ಲಿ ಭಾರತದ ಸಂಸ್ಕೃತಿಯ ಬೇರಿನೊಂದಿಗೆ ನಂಟು ಹೊಂದಿರಬೇಕಾದರೆ ನಾವು ಆರು ಮಂತ್ರಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, "ಆ ಆರು ಮಂತ್ರಗಳು ಭಾಷೆ, ಆಹಾರ, ಭಕ್ತಿಗೀತೆಗಳು, ಪ್ರವಾಸ, ಉಡುಪು ಹಾಗೂ ಮನೆ," ಎಂದರು. ಇನ್ನು ಜನರು ಸಂಪ್ರದಾಯವನ್ನು ಪಾಲಿಸಬೇಕು ಎಂದು ಹೇಳುವ ಸಂದರ್ಭದಲ್ಲೇ ಮೋಹನ್‌ ಭಾಗವತ್‌ ಅವರು, "ಅಸ್ಪೃಶ್ಯತೆಯನ್ನು ನಾವು ಪಾಲನೆ ಮಾಡಬಾರದು," ಎಂದು ಒತ್ತಿ ಹೇಳಿದರು.

"ಯಾರನ್ನೂ ಕೂಡಾ ಜಾತಿಯ ಆಧಾರದಲ್ಲಿ ವರ್ಗಿಕರಣ ಮಾಡಬೇಡಿ. ಅಸ್ಪೃಶ್ಯತೆ ಎಂಬುವುದು ಇನ್ನು ಇರಬಾರದು. ಹೆಸರುಗಳನ್ನು ಕೇಳಿ ಧರ್ಮವನ್ನು ಊಹಿಸುವ ಅಭ್ಯಾಸವನ್ನು ಜನರು ನಮ್ಮ ಈ ಸಮಾಜವು ಹೊಂದಿದೆ. ಆದ್ದರಿಂದ ನಮ್ಮ ಒಳಗೆ ಜನರ ನಡುವೆ ಭೇದ-ಭಾವವನ್ನು ಮಾಡುವುದು ಸಂಪೂರ್ಣವಾಗಿ ನಮ್ಮ ಹೃದಯಂತರಾಳದಿಂದ ಕೊನೆಯಾಗಬೇಕು," ಎಂದರು.

"ನಾವು ಈ ವಿಚಾರದ ಬಗ್ಗೆ ಚರ್ಚೆಯನ್ನು ನಡೆಸಬೇಕು. ಅದು ಮಾತ್ರವಲ್ಲದೇ ನೀರು ಹಾಗೂ ಸಸಿಗಳನ್ನು ನೆಡುವ ವಿಚಾರದ ಬಗ್ಗೆಯೂ ಚರ್ಚೆಯನ್ನು ನಡೆಸಬೇಕು," ಎಂದು ಹೇಳಿದ ಆರ್‌ಎಸ್‌ಎಸ್‌ ಮುಖಂಡರು, "ಯಾವಾಗ ಓರ್ವ ಹಿಂದೂ ಎಚ್ಚರಗೊಳ್ಳುತ್ತಾನೋ, ಆ ಬಳಿಕ ಇಡೀ ವಿಶ್ವವೇ ಎಚ್ಚರಗೊಳ್ಳುತ್ತದೆ," ಎಂದು ಅಭಿಪ್ರಾಯಿಸಿದರು.

Recommended Video

Dhoni ಪಂದ್ಯ ಮುಗಿದ ನಂತರ ಮಾಡಿದ್ದೇನು | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
We need to instill pride in hindu youths about our religion, says RSS chief Mohan Bhagwat to Parents. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X