ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ದಣಿದಿರಬಹುದು ಆದರೆ ಕೊರೊನಾ ವೈರಸ್ ಅಲ್ಲ: ಕೇಂದ್ರ

|
Google Oneindia Kannada News

ನವದೆಹಲಿ, ಜುಲೈ 27: ನಾವು ಆಯಾಸಗೊಳ್ಳಬಹುದು ಆದರೆ ಕೊರೊನಾ ವೈರಸ್ ಅಲ್ಲ ಹೀಗಾಗಿ ಮುಂಬರುವ ಹಬ್ಬಗಳಿಗೂ ಮುಂಚಿತವಾಗಿ ಎಲ್ಲರಿಗೂ ಕೊರೊನಾ ಲಸಿಕೆ ಹಾಕಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲಸಿಕೆಗಳು ಶೇ.98ರಷ್ಟು ಪ್ರಕರಣಗಳಲ್ಲಿ ಜೀವವನ್ನು ಉಳಿಸುತ್ತವೆ ಎಂದು ಹೇಳಲಾಗಿದೆ. ಯಾವುದೇ ಲಸಿಕೆಗೆ ಶೇ.100ರಷ್ಟು ಗ್ಯಾರಂಟಿ ನೀಡಲು ಸಾಧ್ಯವಿಲ್ಲ. ಆದರೆ ಲಸಿಕೆ ಪಡೆದವರಿಗೆ ಸೋಂಕು ತಗುಲಿದರೆ ಗಂಭೀರ ಪ್ರಮಾಣದಲ್ಲಿ ತೊಂದರೆಗಳಾಗುವುದಿಲ್ಲ ಎನ್ನಲಾಗಿದೆ. ಸಾವಿನ ಪ್ರಮಾಣ ಬಹುತೇಕ ಕಡಿಮೆಯಾಗಿದೆ ಈ ಕುರಿತು ವಿಕೆ ಪೌಲ್ ತಿಳಿಸಿದ್ದಾರೆ.

 132 ದಿನಗಳ ನಂತರ ದೇಶದಲ್ಲಿ ತಗ್ಗಿದ ಕೊರೊನಾ ಸೋಂಕು 132 ದಿನಗಳ ನಂತರ ದೇಶದಲ್ಲಿ ತಗ್ಗಿದ ಕೊರೊನಾ ಸೋಂಕು

ಕೊರೊನಾ ಸೋಂಕು ಜಾಗತಿಕವಾಗಿ ಹರಡಿದ್ದು, ನಾವು ಆಯಾಸಗೊಂಡಿರಬಹುದು ಆದರೆ ಕೊರೊನಾ ಸೋಂಕು ದಣಿದಿಲ್ಲ ಎಂದಿದ್ದಾರೆ. ಈ ಹಂತದಲ್ಲಿ ಲಸಿಕೆ ಹಾಗೂ ಜಾಗ್ರತೆ ಕೇವಲ ಎರಡೇ ಮಾರ್ಗಗಳಿವೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

We May Be Tired, But Virus Is Not; Cant Have Guard Down: Centre

ಹಬ್ಬದ ಸೀಸನ್‌ಗಳು ಸನಿಹವಿರುವುದರಿಂದ ತುಂಬಾ ಎಚ್ಚರಿಕೆವಹಿಸಬೇಕಾಗುತ್ತದೆ. ದೇಶದಲ್ಲಿ ಕೊರೊನಾ ನಿಯಮಗಳನ್ನು ಸಡಿಲಗೊಳಿಸಿದ ಬಳಿಕ ಸೋಂಕು ಹೆಚ್ಚಳವಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ 29,689 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕೊರೊನಾ ಸೋಂಕಿತ ತಾಯಿಯಿಂದ ಭ್ರೂಣಕ್ಕೆ ತೊಂದರೆಯೇ?; ವೈದ್ಯರಿಂದ ಸ್ಪಷ್ಟನೆಕೊರೊನಾ ಸೋಂಕಿತ ತಾಯಿಯಿಂದ ಭ್ರೂಣಕ್ಕೆ ತೊಂದರೆಯೇ?; ವೈದ್ಯರಿಂದ ಸ್ಪಷ್ಟನೆ

ಒಂದು ದಿನದ ಅವಧಿಯಲ್ಲಿ 42,363 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 415 ಮಂದಿ ಸಾವನ್ನಪ್ಪಿದ್ದಾರೆ.

ಮಂಗಳವಾರದ ಅಂಕಿಸಂಖ್ಯೆ ಪ್ರಕಾರ, ಇದುವರೆಗೂ ದೇಶದಲ್ಲಿ ಒಟ್ಟು 3,06,21,469 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 3,98,100 ಆಗಿದೆ. ಇಲ್ಲಿಯವರೆಗೆ ಸೋಂಕಿನಿಂದ 4,21,382 ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, ಇದುವರೆಗೂ 44,19,12,395 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಕೊರೊನಾ ಲಸಿಕೆ ಪಡೆದ ನಂತರ ಹೊಸ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
The Centre today underscored the need to step up vaccination ahead of the coming festive season, saying vaccines save life in 98 per cent of the cases even if there is any breakthrough infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X