ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನಿಗೆ ನಾವೀಗ ಮೂರು ಹೆಜ್ಜೆ ಹತ್ತಿರ: ಇಸ್ರೋ

|
Google Oneindia Kannada News

ನವದೆಹಲಿ, ಜುಲೈ 29: ಸಣ್ಣ ಅಡ್ಡಿ ಆತಂಕದ ಬಳಿಕ ಯಶಸ್ವಿಯಾಗಿ ಚಂದ್ರಲೋಕದತ್ತ ಪ್ರಯಾಣ ಬೆಳೆಸಿರುವ ದೇಶದ ಹೆಮ್ಮೆಯ ಚಂದ್ರಯಾನ-2 ಮಹತ್ವದ ಮೈಲುಗಲ್ಲು ನಿರ್ಮಿಸುವ ಸನಿಹದಲ್ಲಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22ರಂದು ಉಡಾವಣೆಗೊಂಡಿದ್ದ ಚಂದ್ರಯಾನ-2ರ ಇದುವರೆಗಿನ ಪಯಣ ಸುಗಮವಾಗಿದೆ. ತನ್ನ ಮೂರನೇ ಕಕ್ಷಾ ಸಂಚಾರವನ್ನು ನೌಕೆ ಪೂರ್ಣಗೊಳಿಸಿದೆ. ಈ ಮೂಲಕ ಭಾರತವನ್ನು ಚಂದ್ರನಿಗೆ ಮೂರು ಹೆಜ್ಜೆ ಸಮೀಪಕ್ಕೆ ಕೊಂಡೊಯ್ದಿದೆ.

ಇಸ್ರೋ ಚಂದ್ರಯಾನ-2 ಹೆಮ್ಮೆಯ ಕಿರೀಟದಲ್ಲಿ ಧಾರವಾಡದ ಗರಿಇಸ್ರೋ ಚಂದ್ರಯಾನ-2 ಹೆಮ್ಮೆಯ ಕಿರೀಟದಲ್ಲಿ ಧಾರವಾಡದ ಗರಿ

'ಚಂದ್ರಯಾನ-2 ಬಾಹ್ಯಾಕಾಶ ನೌಕೆಯ ಮೂರನೇ ಭೂ ಕಕ್ಷಾ ಪರ್ಯಟನೆಯು ಇಂದು (ಜುಲೈ 29) ಯೋಜನೆಯಂತೆಯೇ ಪೂರ್ಣಗೊಂಡಿತು' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಟ್ವಿಟ್ಟರ್‌ನಲ್ಲಿ ಚಂದ್ರಯಾನ-2ರ ಕಾರ್ಯಾಚರಣೆಯ ಕುರಿತಾದ ಚಿತ್ರದೊಂದಿಗೆ ಸಂತಸ ಹಂಚಿಕೊಂಡಿದೆ.

We Are Now 3 Steps Closer To The Moon ISRO Tweet

ಮೂರನೇ ಕಕ್ಷೆ ಚಲನಾ ಪ್ರಕ್ರಿಯೆಯನ್ನು ಚಂದ್ರಯಾನ-2 ಇಂದು ಪೂರ್ಣಗೊಳಿಸುವ ಮೂಲಕ ನಾವು ಚಂದ್ರನಿಗೆ ಮೂರು ಹೆಜ್ಜೆ ಹತ್ತಿರ ಸಮೀಪಿಸಿದ್ದೇವೆ ಎಂದು ಇಸ್ರೋ ಮತ್ತೊಂದು ಟ್ವೀಟ್ ಮಾಡಿದೆ.

ಅವೆಂಜರ್ಸ್ ಎಂಡ್‌ ಗೇಮ್‌ಗಿಂತಲೂ ಚಂದ್ರಯಾನ ಅಗ್ಗ ಹೇಗೆ?ಅವೆಂಜರ್ಸ್ ಎಂಡ್‌ ಗೇಮ್‌ಗಿಂತಲೂ ಚಂದ್ರಯಾನ ಅಗ್ಗ ಹೇಗೆ?

ಭೂಮಿಯ ಸುತ್ತಲೂ ಸುತ್ತುತ್ತಲೇ ಉಪಗ್ರಹವು ಕಕ್ಷೆಯೊಂದರ ಒಳ ಪ್ರವೇಶಿಸಿ ಚಂದ್ರನಡೆಗೆ ಸಾಗುವ ಪ್ರಕ್ರಿಯೆಯಿದು. ಇದರ ನಾಲ್ಕನೆಯ ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ 2-3 ಗಂಟೆಯಲ್ಲಿ ನಡೆಯಲಿದೆ. ಬಾಹ್ಯಾಕಾಶ ನೌಕೆಯ ಎಲ್ಲ ನಿಯತಾಂಕಗಳು ಸಹಜ ಸ್ಥಿತಿಯಲ್ಲಿವೆ ಎಂದು ಇಸ್ರೋ ತಿಳಿಸಿದೆ.

English summary
ISRO Tweeted about Chandrayaan-2, Today after performing the third orbit raising maneuver, we are now 3 steps closer to the moon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X