ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಟಿಕ್‌ಗೆ ಗುಡ್‌ ಬೈ, ರೈಲ್ವೆ ನಿಲ್ದಾಣಗಳಲ್ಲಿ ಬರಲಿದೆ ವಾಟರ್‌ ಎಟಿಎಂ

By Nayana
|
Google Oneindia Kannada News

Recommended Video

ರೈಲ್ವೆ ನಿಲ್ದಾಣಗಳಲ್ಲಿ ಬರಲಿದೆ ವಾಟರ್‌ ಎಟಿಎಂ | Oneindia Kannada

ಬೆಂಗಳೂರು, ಜೂನ್‌ 26: ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಹಾಗಾಗಿ ದೇಶದ ಒಟ್ಟು 104 ರೈಲ್ವೆ ನಿಲ್ದಾಣಗಳಲ್ಲಿ ವಾಟರ್‌ ಎಟಿಎಂಗಳನ್ನು ಅಳವಡಿಸಲು ಮುಂದಾಗಿದೆ ಎಂದು ರೈಲ್ವೆ ಮೂಲಗಳಿಂದ ತಿಳಿದುಬಂದಿದೆ.

ಭಾರತೀಯ ರೈಲ್ವೆ ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಮತ್ತು ಕ್ಯಾಟರಿಂಗ್‌ ಕಾರ್ಪೊರೇಷನ್‌ ಈಗಾಗಲೇ ಸ್ವರಾಜ್‌ ಎನ್ನುವ ಜಲ ತಂತ್ರಜ್ಞಾನದ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 14 ರಾಜ್ಯಗಳ 104 ರೈಲ್ವೆ ನಿಲ್ದಾಣಗಳಲ್ಲಿ ವಾಟರ್‌ ಎಟಿಎಂಗಳನ್ನು ಸ್ಥಾಪಿಸಲಾಗುತ್ತಿದೆ.

ಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ ಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ

ತಮ್ಮ ನೀರಿನ ಬಾಟಲ್‌ಗಳನ್ನು ಪ್ರಯಾಣಿಕರು ಭರ್ತಿ ಮಾಡಿಕೊಳ್ಳಲು, ಅಗ್ಗದ ದರದಲ್ಲಿ ಮಿನರಲ್‌ ವಾಟರ್‌ ಪಡೆಯಲು ಈ ಎಟಿಎಂಗಳು ಸಹಕಾರಿಯಾಗಲಿವೆ.

Water ATMs in 104 railway stations soon

ಪ್ಲಾಸ್ಟಿಕ್‌ ಬಳಕೆಯೂ ಇದರಿಂದ ತಗ್ಗಲಿದೆ. ಈ ವಾಟರ್‌ ಎಟಿಎಂಗಳಲ್ಲಿ ಒಂದು ಲೀಟರ್‌ ನೀರಿಗೆ 5 ರೂ. ಇದ್ದು ಪೇಪರ್‌ ಲೋಟ ಬೇಕಾದರೆ ಹೆಚ್ಚುವರಿಯಾಗಿ 1 ರೂ ನೀಡಬೇಕಾಗುತ್ತದೆ. ಭೀಮ್‌ ಅಪ್ಲಿಕೇಷನ್‌ ಅಥವಾ ಪೇಟಿಎಂ ಮೂಲಕ ಹಣ ಪಾವತಿಸಿ ನೀರು ಪಡೆಯಬಹುದಾಗಿದೆ. ಇಲ್ಲವೇ ಸ್ವರಾಜ್‌ ಕಾರ್ಡ್ ಬಳಸಿ ನೀರು ಪಡೆದುಕೊಳ್ಳಬಹುದು.

ಇದು ಹಣದ ಎಟಿಎಂನಂತೆಯೇ ಕೆಲಸ ಮಾಡಲಿದೆ, ಹಣದ ಬದಲಾಗಿ ನೀರು ಲಭ್ಯವಾಗಲಿದೆ ಇದು ಉತ್ತಮ ಯೋಜನೆಯಾಗಿದ್ದು ಇದರಿಂದ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಬಹುದು ಜತೆಗೆ ಕಡಿಮೆ ಬೆಲೆಯಲ್ಲಿ ನೀರು ಕೂಡ ಲಭ್ಯವಾಗಲಿದೆ.

English summary
Indian railways has decided to install water ATMs at 104 railway stations in 14 states. Railway department has made collaboration with IRCTC and SWARAJ, a non profit organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X