ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8731 ರೈಲುಗಳಲ್ಲಿ ಡಿಮ್ಯಾಂಡ್ ಮಾಡಿ ವಿಡಿಯೋ ನೋಡ್ಬಹುದು

|
Google Oneindia Kannada News

ನವದೆಹಲಿ, ಜನವರಿ 15: ಭಾರತೀಯ ರೈಲ್ವೆಯ ರೈಲ್ ಟೆಲ್ ಮೂಲಕ ಪ್ರಯಾಣಿಕರಿಗೆ ಕಂಟೆಂಟ್ ಆನ್ ಡಿಮ್ಯಾಂಡ್ ಸೌಲಭ್ಯವನ್ನು ಹೊರ ತಂದಿದೆ. ಪ್ರಯಾಣಿಕರು ಅನಿಯಮಿತ ಉಚಿತ ಅಥವಾ ಚಂದಾದಾರಿಕೆಯುಳ್ಳ ಮನರಂಜನಾ ಸೇವೆಯನ್ನು ಪ್ರಯಾಣದ ವೇಳೆ ಪಡೆದುಕೊಳ್ಳಬಹುದು.

ರೈಲ್ ಟೆಲ್ ಜೊತೆಗೆ ಮಾರ್ಗೋ ನೆಟ್ವರ್ಕ್(ಝೀ ನೆಟ್ವರ್ಕ್ ನ ಸೋದರ ಸಂಸ್ಥೆ) ಜೊತೆ ಒಪ್ಪಂದ ಮಾಡಿಕೊಂಡಿದ್ದು, ಡಿಜಿಟಲ್ ಮನರಂಜನಾ ಸೇವೆಯನ್ನು ಒದಗಿಸಲಿದೆ. ವಿವಿಧ ಭಾಷೆಗಳಲ್ಲಿ ಸಿನಿಮಾ, ಮ್ಯೂಸಿಕ್ ವಿಡಿಯೋ ಮುಂತಾದ ಮನರಂಜನೆ ಕಾರ್ಯಕ್ರಮಗಳನ್ನು ಪ್ರಯಾಣದ ವೇಳೆಯಲ್ಲಿ ಪಡೆದುಕೊಳ್ಳಬಹುದು. ಇದಲ್ಲದೆ, ಟ್ರಾವೆಲ್ ಬುಕ್ಕಿಂಗ್ (ಕ್ಯಾಬ್, ಬಸ್, ಟ್ರೈನ್) ಮಾಡಬಹುದು.

2022ರಲ್ಲಿ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿರುವ ಈ ಸೌಲಭ್ಯ ಪ್ರಯಾಣಿಕರಿಗೆ ಉಪಯುಕ್ತವಾಗಲಿದೆ ಎಂಬ ಆಶಯವನ್ನು ರೈಲ್ ಟೆಲ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Watch movies, shows on trains: Indian Railways to offer this new facility

ಭಾರತೀಯ ರೈಲ್ವೆಯ 17 ವಲಯಗಳಲ್ಲೂ ಈ ಸೌಲಭ್ಯ ಲಭ್ಯವಾಗಲಿದ್ದು, ಸಬ್ ಅರ್ಬನ್ ರೈಲುಗಳಿಗೂ ವಿಸ್ತರಿಸಲಾಗುತ್ತದೆ. ವೈಫೈ ಸೌಲಭ್ಯವುಳ್ಳ ರೈಲ್ವೆ ನಿಲ್ದಾಣಗಳಲ್ಲೂ ಬಳಸಬಹುದು. ಹೀಗಾಗಿ 8,731 ರೈಲು ಹಾಗೂ 5,563 ರೈಲು ನಿಲ್ದಾಣಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.

English summary
Indian Railways has decided to provide ‘Content on Demand Service (CoD)’ on trains and railway stations to generate more non-fare revenues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X