ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಿದ ITBP ಯೋಧರು

|
Google Oneindia Kannada News

ಲೆಹ್, ಜನವರಿ 26: ವಿಶ್ವದ ಅತಿ ಹೆಚ್ಚು ಎತ್ತರದ ಗಡಿ ಪ್ರದೇಶ ಹಾಗೂ ಅತಿ ಶೀತ ಪ್ರದೇಶಗಳಲ್ಲಿ ಒಂದೆನಿಸಿರುವ ಲೆಹ್, ಲಡಾಕ್ ಪ್ರಾಂತ್ಯದಲ್ಲಿ ಇಂಡೊ ಟಿಬೆಟಿಯನ್ ಬಾರ್ಡರ್‌ ಪೊಲೀಸ್ ಪಡೆ(ITBP) ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಎಲ್ಲರ ಗಮನ ಸೆಳೆದಿದೆ.

ಕೊರೆಯುವ ಚಳಿ( ಮೈನಸ್ 30 ಡಿಗ್ರಿ)ಯಲ್ಲಿ ಹಿಮಾಲಯ ಶ್ರೇಣಿಯ ತಪ್ಪಲಲ್ಲಿ ಸಮುದ್ರ ಮಟ್ಟದಿಂದ ಸುಮಾರು18000 ಅಡಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದ ಇಂಡೊ ಟಿಬೆಟಿಯನ್ ಬಾರ್ಡರ್‌ ಪೊಲೀಸ್ ಪಡೆಗೆ ದೇಶದಾದ್ಯಂತ ಮೆಚ್ಚುಗೆಗಳ ಮಹಾಪೂರ ಹರಿದು ಬರುತ್ತಿದೆ.

ಐಟಿಬಿಪಿ ಪಡೆ ಜೈ ಹಿಂದ್, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಜಯಘೋಶ ಮೊಳಗಿಸಿದ ವಿಡಿಯೋವನ್ನು ಎಎನ್ಐ ಹಂಚಿಕೊಂಡಿದೆ. ಹೆಪ್ಪುಗಟ್ಟಿದ ಜಲಾಗರಗಳ ಮೇಲೆ ಶಿಸ್ತಿನ ಹೆಜ್ಜೆ ಇಡುತ್ತಾ ಐಟಿಬಿಪಿ ಪಡೆ ಸಾಗುತ್ತಾ 72ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮಾಡಿದೆ.

Watch: ITBP jawans celebrate Republic Day on an ice body in Ladakh

ಗಣರಾಜ್ಯೋತ್ಸವ ಅಂಗವಾಗಿ ಇಂಡೊ ಟಿಬೇಟಿಯನ್ ಗಡಿಯ ಪೊಲೀಸ್ ಪಡೆಯ 17 ಸಿಬ್ಬಂದಿಗೆ ವಿವಿಧ ವಿಭಾಗಗಳಲ್ಲಿ ವಿಶಿಷ್ಟ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ.

ಐಟಿಬಿಪಿ ತುಕಡಿಯೊಂದು ನೀರು ಹೆಪ್ಪುಗಟ್ಟುವ ಚಳಿಯ ವಾತಾವರಣದಲ್ಲೂ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದೆ, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆಗಳು ಕೇಳಿ ಬಂದಿವೆ.

Watch: ITBP jawans celebrate Republic Day on an ice body in Ladakh

ಗಣರಾಜ್ಯೋತ್ಸವ ಅಂಗವಾಗಿ ಭಾರತೀಯ ಸೇನೆಯು ದೆಹಲಿಯ ರಾಜಪಥದಲ್ಲಿ ನಡೆದ ಪೆರೆಡ್‌ನಲ್ಲಿ ಕೂಡಾ ಐಟಿಬಿಪಿಯ ತುಕಡಿಯೊಂದು ಪಾಲ್ಗೊಂಡು ತನ್ನ ವೈವಿಧ್ಯತೆ, ಶಕ್ತಿ, ಶಿಸ್ತುಗಳ ಪ್ರದರ್ಶನ ಮಾಡಿದೆ.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಗಡಿ ಕಾಯಲು 1962ರಲ್ಲಿ ಬಾರ್ಡರ್‌ ಪೊಲೀಸ್ ಪಡೆ ಸ್ಥಾಪಿಸಲಾಯಿತು. ಈ ಬಾರಿ ಇಬ್ಬರು ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ, ಮೂವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಪದಕ ಹಾಗೂ 12 ಮಂದಿಗೆ ಪ್ರಶಂಸನೀಯ ಸೇವೆಗಾಗಿ ಪದಕ ನೀಡಿ ಗೌರವಿಸಲಾಗಿದೆ.

English summary
Be it on a frozen water body or at a high-altitude Border Outpost, Indo-Tibetan Border Police (ITBP) jawans braved the intense cold to march with the national flag on a frozen water body in Ladakh on the occasion of 72nd Republic Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X