ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ 'ಮಾಮ್ ಐ ಲವ್ ಯೂ' ಎಂದಿದ್ದು ಕೇಳಿದರೆ, ಕರುಳು ಕಿವುಚುತ್ತೆ!

|
Google Oneindia Kannada News

ದಾಂತೇವಾಡ(ಛತ್ತೀಸ್ ಗಢ), ಅಕ್ಟೋಬರ್ 31: ನಕ್ಸಲರ ದಾಳಿಯಲ್ಲಿ ದೂರದರ್ಶನದ ಕ್ಯಾಮೆರಾಮ್ಯಾನ್ ಸೇರಿದಂತೆ ಮೂವರು ಹತ್ಯೆಯಾದ ಘಟನೆ ಕುರಿತು ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡುವ ವೇಳೆ ಛತ್ತೀಸಗಢದ ದಾಂತೇವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಣ್ಣೀರಿಟ್ಟ ಸುದ್ದಿ ಓದಿರಬಹುದು.

ಈಗ ಈ ದುರ್ಘಟನೆಗೆ ಸಾಕ್ಷಿಯಾಗಿ, ಸಾವಿನ ದವಡೆಯಲ್ಲಿದ್ದಾಗ ದೂರದರ್ಶನ ಸಿಬ್ಬಂದಿ ತಮ್ಮ ತಾಯಿಗೆ ಹೇಳಿದ ಕೊನೆ ಮಾತುಗಳನ್ನು ಎಎನ್ ಐ ವರದಿ ಮಾಡಿದೆ.

ಛತ್ತೀಸ್ ಗಢ ನಕ್ಸಲ್ ದಾಳಿ: ಮಾಧ್ಯಮದ ಮುಂದೆ ಮಾತಾಡುವಾಗ ಕಣ್ಣೀರಿಟ್ಟ ಎಸ್‌ಪಿ ಛತ್ತೀಸ್ ಗಢ ನಕ್ಸಲ್ ದಾಳಿ: ಮಾಧ್ಯಮದ ಮುಂದೆ ಮಾತಾಡುವಾಗ ಕಣ್ಣೀರಿಟ್ಟ ಎಸ್‌ಪಿ

ಭಯಾನಕ ಘಟನೆಯನ್ನು ಕಣ್ಣಾರೆ ನೋಡಿದ ದೂರದರ್ಶನ ಸಿಬ್ಬಂದಿ ತಮಗಾದ ಅನುಭವವನ್ನು ಸಾಯುವ ಮುನ್ನ ಹಂಚಿಕೊಂಡಿದ್ದರು. ಈ ವೇಳೆ ಅವರು ತಮ್ಮ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ, 'ಮಾಮ್ ಐ ಲವ್ ಯೂ, ನಾನು ಇಂದು ಈಗ ಸಾಯಬಹುದು ಎಂದು ಹೇಳಿದ್ದಾರೆ.

Watch: Heartbreaking video Doordarshan staffer recorded as Naxals attacked him

ದೆಹಲಿಯಿಂದ ಬಂದಿದ್ದ ದೂರದರ್ಶನ ವಾಹಿನಿಯ ವರದಿಗಾರರ ತಂಡ, ಬೆಳಿಗ್ಗೆ ಅಭಿಷೇಕ್ ಪಲ್ಲವ್ ಅವರ ಸಂದರ್ಶನ ಮುಗಿಸಿ, ನೀಲಭಯ ಎಂಬ ಸ್ಥಳಕ್ಕೆ ತೆರಳುತ್ತಿದ್ದರು. ಆಗ ನಕ್ಸಲರ ತಂಡ ಅವರ ಮೇಲೆ ದಾಳಿ ನಡೆಸಿತ್ತು. ದೂರದರ್ಶನದ ಕ್ಯಾಮೆರಾಮ್ಯಾನ್ ಮತ್ತು ಇಬ್ಬರು ಪೊಲೀಸರು ನಕ್ಸಲರ ದಾಳಿಗೆ ಬಲಿಯಾದರು.

ಮಂಗಳವಾರ ಮುಂಜಾನೆ ಪೊಲೀಸ್ ಹಾಗೂ ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ದೂರದರ್ಶನ ಕ್ಯಾಮರಾಮನ್​ ಅಚ್ಯುತಾನಂದನ್​ ಸಾಹು ಮೃತಪಟ್ಟಿದ್ದರು. ಆದರೆ ಅವರು ದಾಳಿಯಲ್ಲಿ ಸಾಯುವ ಮುನ್ನ ತಮ್ಮ ತಾಯಿಯೊಂದಿಗೆ ಮಾತನಾಡಿದ ದೃಶ್ಯ ವೈರಲ್​ ಆಗಿದ್ದು, ಎಲ್ಲರ ಮನಕಲಕುತ್ತಿದೆ.

ನಕ್ಸಲರಿಂದ ದೂರದರ್ಶನ ಛಾಯಾಗ್ರಾಹಕನ ಬರ್ಬರ ಹತ್ಯೆ ನಕ್ಸಲರಿಂದ ದೂರದರ್ಶನ ಛಾಯಾಗ್ರಾಹಕನ ಬರ್ಬರ ಹತ್ಯೆ

ಈ ನಡುವೆ ನಕ್ಸಲ್ ದಾಳಿಯಲ್ಲಿ ಇಬ್ಬರು ಪೊಲೀಸರು ಹಾಗೂ ದೂರದರ್ಶನ ಕ್ಯಾಮರಾಮನ್ ಮೃತಪಟ್ಟಿದ್ದರು. ದೂರದರ್ಶನದ ತಂಡ ದಂತೇವಾಡ ಜಿಲ್ಲೆಯಲ್ಲಿ ವರದಿಗಾಗಿ ತೆರಳುತ್ತಿತ್ತು. ಅಲ್ಲಿನ ಚುನಾವಣೆಯ ವರದಿಗಾಗಿ ನೀಲವಾಯ ಪ್ರದೇಶ ಮಾರ್ಗವಾಗಿ ತೆರಳುವ ವೇಳೆ ಈ ಘಟನೆ ನಡೆದಿದೆ.

200 ರಿಂದ 250 ನಕ್ಸಲರು ಬರೋಬ್ಬರಿ 45 ನಿಮಿಷಗಳ ಕಾಲ ಸತತವಾಗಿ ಗುಂಡಿನ ಮಳೆಗರೆದಿದ್ದಾರೆ. ಈ ದಾಳಿಗೆ ಮೂವರು ಪ್ರಾಣ ತೆತ್ತರು. ಇಂದು ಮತ್ತೊಬ್ಬರ ಪ್ರಾಣ ಪಕ್ಷಿ ಹಾರಿದೆ. ಒಟ್ಟು ಈ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ.

ತಮ್ಮ ತಾಯಿಗೆ ಮೊರ್ ಮುಕುತ್ ಶರ್ಮ​ ಸಾವಿಗೆ ಮುನ್ನ ಹೇಳಿದ್ದು...

ಛತ್ತೀಸಗಡ: ಪೊಲೀಸ್ ಎನ್‌ಕೌಂಟರ್‌ಗೆ 14 ನಕ್ಸಲರು ಬಲಿ ಛತ್ತೀಸಗಡ: ಪೊಲೀಸ್ ಎನ್‌ಕೌಂಟರ್‌ಗೆ 14 ನಕ್ಸಲರು ಬಲಿ

ಇನ್ನು ನಕ್ಸಲರ ಬಳಿ ಗ್ರೇನೆಡ್, ಸ್ಫೋಟಕ ಸಾಮಗ್ರಿಗಳಿದ್ದವು. ನಾವು ನಮ್ಮ ವಾಹಿನಿಯ ಲೋಗೋ ತೋರಿಸುವ ಪ್ರಯತ್ನ ಮಾಡಿದೆವು. ಆದರೆ ಕ್ಷಣ ಕ್ಷಣಕ್ಕೂ ಗುಂಡಿನ ದಾಳಿ ಹೆಚ್ಚಾಗುತ್ತಲೇ ಹೋಯಿತು ಎಂದು ದೂರದರ್ಶನದ ಸಿಬ್ಬಂದಿ ಘಟನೆ ಮಾಹಿತಿಯನ್ನ ತಮ್ಮ ತಾಯಿಗೆ ವಿವರಣೆ ನೀಡಿದ್ದರು.

ಅಷ್ಟೇ ಅಲ್ಲ, ನನಗೆ ಗುಂಡೇಟು ಬಿದ್ದಿದೆ. ನಾನು ಈ ದಾಳಿಯಲ್ಲಿ ಸಾಯಲು ಬಹುದು. ನನಗೆ ನನ್ನ ತಾಯಿ ಅಂದ್ರೆ ಬಹಳ ಇಷ್ಟ. ಅಮ್ಮ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಈ ದಾಳಿಯಲ್ಲಿ ನಾನು ಬದುಕುಳಿಯದೇ ಇರಬಹುದು. ನೀನು ಧೈರ್ಯದಿಂದ ಇರು ಎಂದು ಮನಕಲುಕುವ ಸಂದೇಶವನ್ನು ತಮ್ಮ ತಾಯಿಗೆ ಕ್ಯಾಮರಾಮೆನ್​ ಶರ್ಮ ಸಂದೇಶ ರವಾನಿಸಿದ್ದರು.

ನಕ್ಸಲರ ಅಟ್ಟಹಾಸ, ಟಿಡಿಪಿ ಶಾಸಕ ಹಾಗೂ ಮಾಜಿ ಶಾಸಕನ ಹತ್ಯೆ ನಕ್ಸಲರ ಅಟ್ಟಹಾಸ, ಟಿಡಿಪಿ ಶಾಸಕ ಹಾಗೂ ಮಾಜಿ ಶಾಸಕನ ಹತ್ಯೆ

ಇನ್ನು ಕ್ಯಾಮೆರಾ ಮ್ಯಾನ್ ಕೊನೆಯ ಮಾತು ವೈರಲ್​ ಆಗಿದ್ದು, ಈ ಸನ್ನಿವೇಶ ನೋಡಿದವರೆಲ್ಲ ಅಯ್ಯೋ ಎಂದು ಮರುಗುತ್ತಿದ್ದಾರೆ.

English summary
Mom, I love you... I might die today... But somehow I am not scared even though I am facing death. These heartbreaking words were part of Doordarshan staffer Mormukut Sharma's message that he recorded while being attacked by Naxals in Chhattisgarh's Dantewada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X