ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 2 ಯೋಜನೆ ವಿಶೇಷ ವಿಡಿಯೋ ಹೊರಬಿಟ್ಟ ಇಸ್ರೋ

|
Google Oneindia Kannada News

ಬೆಂಗಳೂರು, ಜುಲೈ 14: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವದ ಯೋಜನೆ ಚಂದ್ರಯಾನ 2ಗೆ ಸಂಬಂಧಿಸಿದ ವಿಶೇಷ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಚಂದ್ರಯಾನ 2ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಹಂಚಿಕೊಳ್ಳುತ್ತಿದೆ. ಚಂದ್ರಯಾನ 2 ನೇರ ಪ್ರಸಾರವನ್ನು ಕಾಣುವ ಅವಕಾಶವನ್ನು ಒದಗಿಸಿದೆ.

2009 ರಲ್ಲಿ ನಡೆದಿದ್ದ ಚಂದ್ರಯಾನ 1 ರ ಯಶಸ್ಸೇ ಚಂದ್ರಯಾನ 2 ಕ್ಕೆ ಸ್ಫೂರ್ತಿಯಾಗಿದ್ದು, ಆಗಲೂ ಚಂದ್ರನ ಮೇಲಿರುವ ವಾಸಯೋಗ್ಯ ವಾತಾವರಣ, ನೀರು ಮತ್ತಿತರ ಖನಿಜಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಚಂದ್ರಯಾನ 1 ರಲ್ಲಿ ಆರ್ಬಿಟರ್ ಘಟಕವನ್ನು ಬಳಸಲಾಗಿತ್ತಾದರೂ, ರೋವರ್ ಘಟಕವನ್ನು ಬಳಸಲಾಗಿರಲಿಲ್ಲ. ಆ ಕಾರಣದಿಂದ ಚಂದ್ರಯಾನ 2 ಮತ್ತಷ್ಟು ಕುತೂಹಲ ಸೃಷ್ಟಿಸಿದೆ.

Watch: Chandrayaan-2 missions behind-the-scenes footage

ಈ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಲು ಚಂದ್ರಯಾನ 2 ಯೋಜನೆಯ ರೋವರ್, ಆರ್ಬಿಟ್ ನೌಕೆಯ ಜೋಡಣೆ ಕಾರ್ಯದ ತಯಾರಿ ದೃಶ್ಯಗಳುಳ್ಳ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ.

ಚಂದ್ರಯಾನ 02 ಮಿಷನ್ LIVE ಕಣ್ತುಂಬಿಸಿಕೊಳ್ಳುವುದು ಹೇಗೆ?ಚಂದ್ರಯಾನ 02 ಮಿಷನ್ LIVE ಕಣ್ತುಂಬಿಸಿಕೊಳ್ಳುವುದು ಹೇಗೆ?

ಜುಲೈ 15ರ ಬೆಳಗ್ಗೆ 2.51ಕ್ಕೆ ಚಂದ್ರನತ್ತ ಪ್ರಯಾಣ ಆರಂಭಗೊಳ್ಳಲಿದೆ. ಶ್ರೀಹರಿಕೋಟಾದಿಂದ ಅತ್ಯಂತ ತೂಕವನ್ನು ಹೊರಬಲ್ಲ MkIII ರಾಕೆಟ್ ಮೂಲಕ ಅಧ್ಯಯನ ನೌಕೆಯನ್ನು ಉಡಾವಣೆ ಮಾಡಲಾಗುವುದು.

ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆ

ಭಾರತದ ಅತಿ ಭಾರದ ರಾಕೆಟ್ 'ಬಾಹುಬಲಿ' ಎಂದು ಹೆಸರಿಸಲಾದ ಜಿಎಸ್​ಎಲ್​ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ.

ಒಟ್ಟು 3.8 ಟನ್ ಸಾಮರ್ಥ್ಯದ GSLV MKIII, ಗಗನನೌಕೆ 11 ಪೇ ಲೋಡ್ ಗಳನ್ನು ಹೊತ್ತೊಯ್ಯಲಿದ್ದು, ಇವುಗಳಲ್ಲಿ ಭಾರತದ 6, ಯುರೋಪಿನ 3, ಅಮೆರಿಕದ 2 ಪೇ ಲೋಡ್ ಗಳು ಇರಲಿವೆ.

English summary
ISRO scientists have worked tirelessly for Chandrayaan-2 mission, and it is time now that hard work bears fruit. In a few hours from now, the nation will witnesses the launch of one of the most complex space missions undertaken by India ever. Here's a video posted by ISRO of behind-the-scenes footage of the mission
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X