ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವೀಪಕ್ಕೆ ತೆರಳಲು ರಾಜೀವ್ ಕುಟುಂಬ ಐಎನ್‌ಎಸ್ ವಿರಾಟ್ ಬಳಸಿದ್ದು ಸತ್ಯವೇ, ಸುಳ್ಳೇ?

|
Google Oneindia Kannada News

ನವದೆಹಲಿ, ಮೇ 9: ಸಾಗರ ಗಡಿಯ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಐಎನ್‌ಎಸ್ ವಿರಾಟ್ ನೌಕೆಯನ್ನು ರಾಜೀವ್ ಗಾಂಧಿ ಅವರ ಕುಟುಂಬ ರಜೆಯ ಮೋಜು ಅನುಭವಿಸಲು ಲಕ್ಷದ್ವೀಪಕ್ಕೆ ತೆರಳಲು 'ಕುಟುಂಬದ ಖಾಸಗಿ ಟ್ಯಾಕ್ಸಿ'ಯಂತೆ ಬಳಸಲಾಗಿತ್ತು. ಹತ್ತು ದಿನ ಈ ನೌಕೆ ಅಲ್ಲಿಯೇ ಇತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಆರೋಪ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪ್ರಚಾರಕ್ಕೆ ವಿಷಯಗಳಿಲ್ಲದ ಕಾರಣ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಅಪಪ್ರಚಾರ ಮಾಡುತ್ತಿದ್ದಾರೆ. ದೇಶಕ್ಕಾಗಿ ಪ್ರಾಣ ತೆತ್ತ ರಾಜೀವ್ ಅವರಿಗೆ ಅವಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

ಆದರೆ, ಮೋದಿ ಅವರ ಹೇಳಿಕೆ ಸತ್ಯ. ರಾಜೀವ್ ಗಾಂಧಿ ಅವರು ತಮ್ಮ ಕುಟುಂಬದೊಂದಿಗೆ ಲಕ್ಷದ್ವೀಪಕ್ಕೆ ರಜೆಯನ್ನು ಕಳೆಯಲು ತೆರಳಿದ್ದರು. ಅವರ ಕುಟುಂಬವೂ ಆಗ ಅವರೊಂದಿಗೆ ಹೋಗಿತ್ತು. ಅವರು ದ್ವೀಪಕ್ಕೆ ಹೋಗಲು ಗಡಿ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಐಎನ್‌ಎಸ್ ವಿರಾಟ್ ನೌಕೆಯನ್ನು ಬಳಸಲಾಗಿತ್ತು.

'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ 'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ

ಹತ್ತು ದಿನ ಆ ನೌಕೆ ದ್ವೀಪದಲ್ಲಿಯೇ ಇದ್ದು, ರಜೆ ಅವಧಿ ಮುಗಿದ ಬಳಿಕ ಅವರನ್ನು ಕರೆದುಕೊಂಡು ಬಂದಿತ್ತು. ನೌಕೆಯ ಅಧಿಕಾರಿಗಳು, ಸಿಬ್ಬಂದಿಯನ್ನು ರಾಜೀವ್ ಕುಟುಂಬದ ಸೇವೆಗೆಂದು ಬಳಸಿಕೊಳ್ಳಲಾಗಿತ್ತು ಎಂದು ಅನೇಕರು ಮಾಹಿತಿ ನೀಡಿದ್ದಾರೆ.

ಆ ಅವಧಿಯಲ್ಲಿ ಐಎನ್‌ಎಸ್ ವಿರಾಟ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದ ನಿವೃತ್ತ ವೈಸ್ ಅಡ್ಮಿರಲ್ ವಿನೋದ್ ಪಸ್ರಿಚಾ ಅವರು ಕುಟುಂಬವು ದ್ವೀಪಕ್ಕೆ ತೆರಳಲು ನೌಕೆಯನ್ನು ಬಳಸಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ಅಧಿಕಾರಿಗಳು ಖಚಿತಪಡಿಸಿದ್ದಾರೆ

1987ರಲ್ಲಿ ಐಎನ್‌ಎಸ್ ವಿರಾಟ್‌ನಲ್ಲಿದ್ದ ನೌಕಾ ಪಡೆ ಅಧಿಕಾರಿಗಳು, ರಾಜೀವ್ ಗಾಂಧಿ ಅವರು ತಮ್ಮ ಕುಟುಂಬದೊಂದಿಗೆ ರಜೆ ಕಳೆಯಲು ಹೊರಟಿದ್ದಾಗ ಸಮುದ್ರ ಗಡಿಯಲ್ಲಿ ನಿಯೋಜನೆಗೊಂಡಿದ್ದ ಯುದ್ಧವಿಮಾನ ಸಾಗಣೆ ಹಡಗನ್ನು ಮುಂಬೈನಿಂದ ಲಕ್ಷದ್ವೀಪಕ್ಕೆ ಸಾಗಿಸಲು ಆದೇಶಿಸಲಾಗಿತ್ತು ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ಪತ್ರಕರ್ತ ರಾಹುಲ್ ಕನ್ವಾಲ್ ಟ್ವೀಟ್ ಮಾಡಿದ್ದಾರೆ.

ರಾಜೀವ್ ಗಾಂಧಿ ಸಾವಿಗೆ ಬಿಜೆಪಿ ಕಾರಣ ಎಂದ ಅಹ್ಮದ್ ಪಟೇಲ್ರಾಜೀವ್ ಗಾಂಧಿ ಸಾವಿಗೆ ಬಿಜೆಪಿ ಕಾರಣ ಎಂದ ಅಹ್ಮದ್ ಪಟೇಲ್

ನೌಕೆ ಬಳಸಿದ್ದಕ್ಕೆ ನಾನೇ ಪ್ರತ್ಯಕ್ಷದರ್ಶಿ

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ರಜೆಯ ಮೋಜು ಮಾಡಲು ಬಂಗಾರಾಮ್ ದ್ವೀಪಕ್ಕೆ ಪ್ರಯಾಣಿಸಲು ಐಎನ್‌ಎಸ್‌ ವಿರಾಟ್ ಬಳಸಿದ್ದರು ಎಂಬುದಕ್ಕೆ ತಾವೇ ಪ್ರತ್ಯಕ್ಷದರ್ಶಿ ಎಂದು ಐಎನ್‌ಎಸ್‌ ವಿರಾಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿವೃತ್ತ ಕಮಾಂಡರ್ ವಿ.ಕೆ. ಜೇಟ್ಲಿ ಟ್ವೀಟ್ ಮಾಡಿದ್ದಾರೆ.

'ಶಹೆನ್‌ಶಾ' ರಾಬರ್ಟ್ ವಾದ್ರಾ ಶೀಘ್ರದಲ್ಲೇ ಜೈಲಿಗೆ: ಪ್ರಧಾನಿ ಮೋದಿ 'ಶಹೆನ್‌ಶಾ' ರಾಬರ್ಟ್ ವಾದ್ರಾ ಶೀಘ್ರದಲ್ಲೇ ಜೈಲಿಗೆ: ಪ್ರಧಾನಿ ಮೋದಿ

ದುರ್ಬಳಕೆ ಮಾಡಿಕೊಂಡಿರಲಿಲ್ಲ

32 ವರ್ಷಗಳ ಹಿಂದೆ ರಾಜೀವ್ ಗಾಂಧಿ ಮತ್ತು ಅವರ ಪತ್ನಿ ಸೋನಿಯಾ ಗಾಂಧಿ ಐಎನ್‌ಎಸ್ ವಿರಾಟ್‌ನಲ್ಲಿ ಏರಿದ್ದು ನಿಜ. ಆದರೆ ಅದು ರಜೆಯ ಮೋಜಿಗಾಗಿ ಅಲ್ಲ. ಅವರು ಲಕ್ಷದ್ವೀಪಕ್ಕೆ ಅಧಿಕೃತ ಕೆಲಸದ ನಿಮಿತ್ತ ಹೊರಟಿದ್ದರು. ಬಂಗಾರಾಮ್ ದ್ವೀಪದಲ್ಲಿ ಸಭೆ ನಡೆಸಲು ರಾಜೀವ್ ಹೊರಟಿದ್ದರು. ಕಚೇರಿ ಕೆಲಸಗಳಿಗೆ ತೆರಳುವಾಗ ಪತ್ನಿಯೊಂದಿಗೆ ಪ್ರಯಾಣಿಸಲು ಪ್ರಧಾನಿಗೆ ಅಧಿಕಾರವಿರುತ್ತದೆ. ಆದರೆ, ಅವರು ಅಲ್ಲಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು. ಅವರ ಸುರಕ್ಷತೆಗಾಗಿ ನೌಕಾಪಡೆಯ ಕೆಲವು ಸಿಬ್ಬಂದಿ ದ್ವೀಪಕ್ಕೆ ಮೊದಲೇ ತೆರಳಿದ್ದರು ಎಂದು ಐಎನ್‌ಎಸ್ ವಿರಾಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿವೃತ್ತ ಅಡ್ಮಿರಲ್ ಎಲ್ ರಾಮದಾಸ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಹಂಚಿಕೊಂಡಿದ್ದಾರೆ.

ದ್ವೀಪಕ್ಕೆ ತೆರಳಲು ವಿರಾಟ್ ಬಳಕೆ

ದ್ವೀಪಕ್ಕೆ ತೆರಳಲು ವಿರಾಟ್ ಬಳಕೆ

ಐಎನ್‌ಎಸ್‌ ವಿರಾಟ್ ನೌಕೆಯನ್ನು ದೇಶದ ಸಮುದ್ರ ತೀರದ ಗಡಿಯಲ್ಲಿ ಕಾವಲು ಕಾಯಲು ನಿಯೋಜಿಸಲಾಗಿತ್ತು. ಆದರೆ, ಅದನ್ನು ರಜೆಯನ್ನು ಕಳೆಯಲು ದ್ವೀಪಕ್ಕೆ ಹೊರಟಿದ್ದ ರಾಜೀವ್ ಗಾಂಧಿ ಮತ್ತು ಅವರ ಕುಟುಂಬವನ್ನು ಕರೆಯೊಯ್ಯಲು ಬಳಸಲಾಯಿತು. ಅವರ ಅಳಿಯ ಕೂಡ ಐಎನ್‌ಎಸ್ ವಿರಾಟ್‌ ಒಳಗೆ ಇಳಿದಿದ್ದರು. ಇದು ರಾಷ್ಟ್ರೀಯ ಭದ್ರತೆಯೊಂದಿಗೆ ಮಾಡಿಕೊಂಡ ರಾಜಿಯಲ್ಲವೇ? ಎಂದು ನರೇಂದ್ರ ಮೋದಿ ಪ್ರಶ್ನಿಸಿದ್ದರು.

English summary
Lok Sabha Elections 2019: Prime Minister Narendra Modi in Delhi accused former PM Rajiv Gandhi used INS Virat as a personal taxi for the vacation of his family at the island for 10 days. Some retd. officers said yes, but also some seniors officers denied this allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X