ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲೂ ವೈರಸ್ ರೂಪಾಂತರ ಸೃಷ್ಟಿ? ವಿಜ್ಞಾನಿಗಳ ಎಚ್ಚರಿಕೆಯಿದು

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಕೊರೊನಾ ವೈರಸ್ ಭೀತಿಯೊಂದಿಗೇ ಆರಂಭಗೊಂಡ 2020ರ ವರ್ಷವನ್ನು ಯಾರಾದರೂ ಮರೆಯಲು ಸಾಧ್ಯವೇ? ಇದರ ನಡುವೆ ವರ್ಷ ಮುಗಿದು, ಭರವಸೆಯ ವರ್ಷವಾಗಿ 2021 ಕಾಲಿಡುತ್ತಿದೆ.

ಕೊರೊನಾ ಸೋಂಕಿಗೆ ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿದ್ದು, ಹಲವು ಲಸಿಕೆಗಳ ಪ್ರಯೋಗಗಳು ವಿವಿಧ ಹಂತಗಳಲ್ಲಿ ಸಾಗುತ್ತಿವೆ. ಆದರೆ ಕೊರೊನಾ ವೈರಸ್ ರೂಪಾಂತರಗೊಳ್ಳುತ್ತಿರುವ ಸಂಗತಿ ಮತ್ತೆ ಆತಂಕ ಸೃಷ್ಟಿ ಮಾಡಿದೆ. ಬ್ರಿಟನ್ ನಲ್ಲಿ ಪತ್ತೆಯಾದ ರೂಪಾಂತರ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ. ಅಷ್ಟೇ ಅಲ್ಲ, ಈ ವೈರಸ್ ರೂಪಾಂತರ ಭಾರತದಲ್ಲೂ ಆಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...

ಚೀನಾ ಪ್ರಯಾಣಿಕರನ್ನು ಕರೆತರಬೇಡಿ: ವಿಮಾನಯಾನ ಸಂಸ್ಥೆಗಳಿಗೆ ಭಾರತ ಸರ್ಕಾರದ ಸೂಚನೆಚೀನಾ ಪ್ರಯಾಣಿಕರನ್ನು ಕರೆತರಬೇಡಿ: ವಿಮಾನಯಾನ ಸಂಸ್ಥೆಗಳಿಗೆ ಭಾರತ ಸರ್ಕಾರದ ಸೂಚನೆ

ಸಣ್ಣ ವೈರಸ್ ಮಾರಕವಾಗುತ್ತದೆ ಎಂದಿದ್ದ ಚಿಂತಕ

ಸಣ್ಣ ವೈರಸ್ ಮಾರಕವಾಗುತ್ತದೆ ಎಂದಿದ್ದ ಚಿಂತಕ

ಪ್ರಕೃತಿ ಮೇಲೆ ಮಾನವನ ನಿರಂತರ ದಬ್ಬಾಳಿಕೆಗೆ ಒಂದು ಸಣ್ಣ ವೈರಸ್ ಉತ್ತರ ನೀಡುತ್ತದೆ ಎಂದು ಈ ಹಿಂದೆ ಚಿಂತಕ ನೋಬಲ್ ಲಾರೆಟ್ ಜಾಯಿಶ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಇಂದು ನಿಜವಾಗಿದೆ. ಈಚೆಗಿನ ಪರಿಸ್ಥಿತಿ, ಇದರ ಗಂಭೀರತೆಯನ್ನು ಮತ್ತೆ ಸಾಬೀತುಪಡಿಸಿದೆ.
ಅಂಟಾರ್ಟಿಕಾದಲ್ಲಿ 58 ಮಂದಿಗೆ ಕೊರೊನಾ ವೈರಸ್ ಹೊಸ ರೂಪಾಂತರದ ಸೋಂಕು ದೃಢಪಟ್ಟಿದ್ದು, ಈ ಸೋಂಕು ಇತರೆ ದೇಶಗಳಿಗೂ ಹರಡುತ್ತಿದೆ. ಬ್ರಿಟನ್ ನಲ್ಲಿ ಪತ್ತೆಯಾದ ಈ ಸೋಂಕು ಮತ್ತೆ ವಿಶ್ವದಲ್ಲಿ ಆತಂಕ ಮೂಡಿಸಿದೆ.

ದಕ್ಷಿಣ ಕೊರಿಯಾದಲ್ಲಿ ರೂಪಾಂತರಿತ ಮೊದಲ ಕೊರೊನಾವೈರಸ್ ಪತ್ತೆದಕ್ಷಿಣ ಕೊರಿಯಾದಲ್ಲಿ ರೂಪಾಂತರಿತ ಮೊದಲ ಕೊರೊನಾವೈರಸ್ ಪತ್ತೆ

ಅನಿರ್ದಿಷ್ಟ ರೂಪಾಂತರ ಸೃಷ್ಟಿ ಸಾಧ್ಯ?

ಅನಿರ್ದಿಷ್ಟ ರೂಪಾಂತರ ಸೃಷ್ಟಿ ಸಾಧ್ಯ?

SARS-CoV-2 ಸೋಂಕಿನ ಜೆನೋಮ್ ಅಥವಾ ತಳಿ ಹಲವು ರೂಪಾಂತರಗಳನ್ನು ಕಾಣಬಹುದು. ಅನಿರ್ದಿಷ್ಟ ರೂಪಾಂತರ ಸೃಷ್ಟಿಯಾಗಬಹುದು ಎನ್ನಲಾಗಿದೆ. ಈ ರೂಪಾಂತರಗಳಲ್ಲಿ ಹಲವು ಹಾನಿಕಾರಕವಾಗಿದ್ದು, ಹಿಂದೆಂದೂ ಕಂಡಿರದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂಬ ಎಚ್ಚರಿಕೆ ಕೇಳಿಬಂದಿದೆ. ವೇಗವಾಗಿ ಸೋಂಕು ತಗುಲುವ, ಹಾಗೆಯೇ ದ್ವಿಗುಣಗೊಳ್ಳುವ, ದೇಹದ ಪ್ರತಿರೋಧಕ ಶಕ್ತಿ ಕುಂದಿಸುವ ಸಾಮರ್ಥ್ಯ ಹೊಂದಿರುತ್ತದೆ. ಸೋಂಕಿನ ಸಂಖ್ಯೆ ಹೆಚ್ಚಿದಂತೆ ಪ್ರತಿರೋಧಕ ಶಕ್ತಿಯ ಮಟ್ಟವೂ ಕಡಿಮೆಯಾಗುತ್ತದೆ ಎನ್ನಲಾಗಿದೆ. ಉದಾಹರಣೆಗೆ, ಕೊರೊನಾ ವೈರಸ್ ಸೋಂಕಿತ ಕೋಶವು 12 ಗಂಟೆಗಳಲ್ಲಿ ಸುಮಾರು 1000 ಹೊಸ ವೈರಾಣುಗಳನ್ನು ಸೃಷ್ಟಿಸಬಲ್ಲದ್ದಾಗಿದೆ ಎಂದು ಅಂದಾಜಿಸಲಾಗಿದೆ

ಬ್ರಿಟನ್ ನಲ್ಲಿ ಪತ್ತೆಯಾದ ಸೋಂಕು

ಬ್ರಿಟನ್ ನಲ್ಲಿ ಪತ್ತೆಯಾದ ಸೋಂಕು

ಈಚೆಗೆ ಬ್ರಿಟನ್ ನಲ್ಲಿ ಕೊರೊನಾ ವೈರಸ್ (B.1.1.7) ) ಪತ್ತೆಯಾಯಿತು. ಇದೇ ಜೆನೋಮ್ ನ ಎರಡು ವೈರಸ್ ಗಳನ್ನು ಸೆಪ್ಟೆಂಬರ್ ನಲ್ಲೇ ಪತ್ತೆಹಚ್ಚಲಾಗಿತ್ತು, ಡಿಸೆಂಬರ್ ತಿಂಗಳಿಗೆ ಇದರ ಸಂಖ್ಯೆ 1,623 ಆಗಿತ್ತು. ಇದೀಗ ಬ್ರಿಟನ್ ಮಾತ್ರವಲ್ಲದೇ, ಫ್ರಾನ್ಸ್, ಐರ್ಲೆಂಡ್, ಇಸ್ರೇಲ್, ಹಾಂಗ್ ಕಾಂಗ್, ಸಿಂಗಪುರದಲ್ಲಿಯೂ ಪತ್ತೆಯಾಗಿದೆ.

 ಈ ರೂಪಾಂತರದ ಪರಿಣಾಮ ಏನು?

ಈ ರೂಪಾಂತರದ ಪರಿಣಾಮ ಏನು?

ಮೂಲ ಸೋಂಕಿಗೆ ಹೋಲಿಸಿದರೆ, ಈ ರೂಪಾಂತರ ಇನ್ನಷ್ಟು ಶಕ್ತಿಶಾಲಿಯಾಗಿದ್ದು, ಸುಮಾರು 23 ರೂಪಾಂತರವನ್ನು ಇದು ತಾಳಬಹುದು ಎನ್ನಲಾಗಿದೆ. ಈ ರೂಪಾಂತರ ಸೋಂಕು ಪತ್ತೆ ಹಚ್ಚುವುದು ಸುಲಭ ಸಾಧ್ಯವಲ್ಲದೇ, ಲಸಿಕೆ ಅಭಿವೃದ್ಧಿಗೆ ಇದು ತೊಡಕಾಗಬಹುದು ಎನ್ನಲಾಗಿದೆ. ಸೋಂಕು ಹಾನಿಕಾರಕ ಎಂಬುದು ಸಾಬೀತಾಗಿದ್ದು, ಮೂಗು ಹಾಗೂ ಗಂಟಲಿನಲ್ಲಿ ಹೆಚ್ಚಿನ ವೈರಸ್ ಹರಡಿ, ಉಸಿರಾಟದಿಂದ ಹೆಚ್ಚು ಜನರಿಗೆ ತಗುಲುತ್ತದೆ ಎಂದು ತಿಳಿದುಬಂದಿದೆ. ಸೋಂಕು ಹೆಚ್ಚಿದಂತೆ ಗಂಭೀರತೆ ಹೆಚ್ಚಾಗಿ ಮರಣ ಪ್ರಮಾಣ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಚಿಂತೆ ಪಡುವ ಅಗತ್ಯವಿಲ್ಲ ಏಕೆ?

ಚಿಂತೆ ಪಡುವ ಅಗತ್ಯವಿಲ್ಲ ಏಕೆ?

ಈಚೆಗೆ ವಿಜ್ಞಾನಿಗಳು, ಈತ ಅಭಿವೃದ್ಧಿಗೊಳಿಸಿರುವ ಲಸಿಕೆಗಳು ಈ ರೂಪಾಂತರ ಸೋಂಕಿನ ವಿರುದ್ಧವೂ ಹೋರಾಡಬಹುದು ಎಂದು ಹೇಳಿರುವುದು ಸಮಾಧಾನಕರ ಸಂಗತಿಯಾಗಿದೆ. ಅಮೆರಿಕದ ಟೆಕ್ಸಾಸ್ ಮೆಡಿಕಲ್ ಬ್ರಾಂಚ್ ನ ಮೈಕ್ರೊಬಯಾಲಜಿ ಹಾಗೂ ಇಮ್ಯುನಾಲಜಿ ವಿಭಾಗದ ಸಹಾಯಕ ಪ್ರೊಫೆಸರ್ ವಿನೀತ್ ಮೆನಾಚೆರಿ ಸಾಕ್ಷ್ಯವೂ ದೊರೆತಿರುವುದಾಗಿ ತಿಳಿಸಿದ್ದಾರೆ.

ಭಾರತದಲ್ಲೂ ಜುಲೈ ವೇಳೆಗೆ ರೂಪಾಂತರ ಸಾಧ್ಯತೆ

ಭಾರತದಲ್ಲೂ ಜುಲೈ ವೇಳೆಗೆ ರೂಪಾಂತರ ಸಾಧ್ಯತೆ

ರೂಪಾಂತರ ಸೋಂಕನ್ನು ತಡೆಗಟ್ಟಲು ಬ್ರಿಟನ್ ನಿಂದ ಭಾರತಕ್ಕೆ ಬರುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಆದರೆ ದೇಶದ ಒಳಗೇ ಈ ವೈರಸ್ ಗಳು ಸೃಷ್ಟಿಯಾಗಬಹುದು ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 501.V2 ರೂಪಾಂತರ ಸ್ವತಂತ್ರವಾಗಿ ಸೃಷ್ಟಿಯಾದಂತೆ, ಭಾರತದಲ್ಲೂ ರೂಪಾಂತರಗಳು ಸೃಷ್ಟಿಯಾಗಬಹುದು ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದಾರೆ. ಭಾರತದಲ್ಲಿ ಸದ್ಯಕ್ಕೆ ಇಲ್ಲವಾದರೂ ಜುಲೈ ವೇಳೆಗೆ ಬೇರೆ ರೂಪಾಂತರಗಳು ಸೃಷ್ಟಿಯಾಗಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಈ ರೂಪಾಂತರಗಳು ಸೃಷ್ಟಿಯಾಗಿ ಹರಡುವ ಮುನ್ನವೇ ಸೋಂಕಿನ ಜೆನೋಮಿಕ್ ಪತ್ತೆ ಹಚ್ಚಿದರೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡುವುದನ್ನು ತಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

English summary
Fast spreading UK-type variants of coronavirus can also develop independently in India, warned scientists,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X