ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್-ಅಮೆರಿಕ ಯುದ್ಧ ಸನ್ನಿವೇಶ; ಭಾರತದ ತೈಲ ಸಂಗ್ರಹ 9.5 ದಿನಕ್ಕೆ

By ಅನಿಲ್ ಆಚಾರ್
|
Google Oneindia Kannada News

ಭಾರತವು ತನ್ನ ತೈಲ ಅಗತ್ಯಗಳಿಗೆ ಹೆಚ್ಚಿನ ಪಕ್ಷ ಅವಲಂಬಿಸಿರುವುದು ಮಧ್ಯಪೂರ್ವ ರಾಷ್ಟ್ರಗಳಿಂದ ಆಮದಾಗುವ ತೈಲಗಳ ಮೇಲೆ. ಇದೀಗ ಅಮೆರಿಕ ಹಾಗೂ ಇರಾನ್ ಮಧ್ಯೆ ಏರ್ಪಟ್ಟಿರುವ ಯುದ್ಧ ಸನ್ನಿವೇಶದಲ್ಲಿ ಭಾರತ ಸಂದಿಗ್ಧಕ್ಕೆ ಸಿಲುಕಿದೆ. ಭಾರತವು ಕಳೆದ ಆರ್ಥಿಕ ವರ್ಷದಲ್ಲಿ ಆಮದು ಮಾಡಿಕೊಂಡಿರುವ ತೈಲ ಪ್ರಮಾಣ ಶೇಕಡಾ 84ರಷ್ಟು.

ಪ್ರತಿ ಮೂರು ಬ್ಯಾರೆಲ್ ತೈಲದ ಪೈಕಿ ಎರಡು ಬ್ಯಾರೆಲ್ ಅನ್ನು ಈಗ ಬಿಕ್ಕಟ್ಟು ಉದ್ಭವ ಆಗಿರುವ ಭಾಗಗಳಿಂದಲೇ ದೇಶಕ್ಕೆ ಬಂದಿದೆ ಎಂದು ಸರಕಾರದ ದತ್ತಾಂಶಗಳು ಬಹಿರಂಗ ಪಡಿಸುತ್ತದೆ. ಮಧ್ಯಪೂರ್ವದಲ್ಲಿ ಮುಖ್ಯವಾದ ಯುದ್ಧ ಸನ್ನಿವೇಶವು ಗ್ರಾಹಕ ವಸ್ತುಗಳ ಬೆಲೆ ಏರಿಕೆಯ ಆತಂಕ ತಂದಿದೆ. ಜತೆಗೆ ದೇಶದ ಆರ್ಥಿಕ ಪ್ರಗತಿಗೆ ಮತ್ತಷ್ಟು ವೇಗ ನೀಡಲು ಯತ್ನಿಸುತ್ತಿರುವ ಪ್ರಧಾನಿ ಮೋದಿ ಪ್ರಯತ್ನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಅಮೆರಿಕ ಪರ ಬೇಹುಗಾರಿಕೆ: 16 ಅಧಿಕಾರಿಗಳನ್ನು ಬಂಧಿಸಿದ ಇರಾನ್ಅಮೆರಿಕ ಪರ ಬೇಹುಗಾರಿಕೆ: 16 ಅಧಿಕಾರಿಗಳನ್ನು ಬಂಧಿಸಿದ ಇರಾನ್

ಮಧ್ಯ ಪೂರ್ವದಿಂದ ಶೇ 63, ಆಫ್ರಿಕಾದಿಂದ ಶೇ 15, ದಕ್ಷಿಣ ಅಮೆರಿಕದಿಂದ ಶೇ 10, ಉತ್ತರ ಅಮೆರಿಕದಿಂದ ಶೇ 8 ಹಾಗೂ ಇತರೆಡೆಯಿಂದ ಶೇ 5ರಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಭಾರತದ ತೈಲ ಸಚಿವಾಲಯದ ಮೂಲಗಳು ಖಾತ್ರಿ ಪಡಿಸುತ್ತವೆ.

ಅಮೆರಿಕ- ಇರಾನ್ ಮಧ್ಯೆ ಯುದ್ಧ ಸನ್ನಿವೇಶ

ಅಮೆರಿಕ- ಇರಾನ್ ಮಧ್ಯೆ ಯುದ್ಧ ಸನ್ನಿವೇಶ

ಪ್ರತಿ ಬ್ಯಾರಲ್ ತೈಲಕ್ಕೆ $ 10 ಹೆಚ್ಚಾದರೆ, ದೇಶದ ವಿತ್ತೀಯ ಕೊರತೆ ಪ್ರಮಾಣವನ್ನು ಜಿಡಿಪಿಗೆ 0.4 ಪರ್ಸೆಂಟ್ ಹೆಚ್ಚು ಮಾಡುತ್ತದೆ. ಅಮೆರಿಕದ ದಿಗ್ಬಂಧನದ ಪರಿಣಾಮವಾಗಿ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲಾಗದೆ, ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಭಾರತ ತಿಣುಕಾಡುತ್ತಿದೆ. ಈ ವರ್ಷದ ಮಾರ್ಚ್ ತನಕವೂ 10 ಪರ್ಸೆಂಟ್ ನಷ್ಟು ತೈಲವು ಭಾರತಕ್ಕೆ ಆಮದು ಆಗುತ್ತಿದ್ದುದು ಪರ್ಷಿಯನ್ ಗಲ್ಫ್ ರಾಷ್ಟ್ರಗಳಿಂದ ಎಂಬುದು ಸರಕಾರಿ ದತ್ತಾಂಶದಿಂದ ತಿಳಿದುಬರುತ್ತದೆ. ಪರ್ಷಿಯನ್ ಗಲ್ಫ್ ಬಳಿ ಟ್ಯಾಂಕರ್ಸ್ ಮೇಲೆ ಆದ ದಾಳಿ, ಅಮೆರಿಕದ ಡ್ರೋಣ್ ಅನ್ನು ಇರಾನ್ ಹೊಡೆದುರುಳಿಸಿದ ಮೇಲೆ, ಎರಡು ದೇಶಗಳ ಮಧ್ಯೆ ಯುದ್ಧ ಸನ್ನಿವೇಶ ಸೃಷ್ಟಿಯಾಯಿತು. ಜೂನ್ ಮಧ್ಯದ ಕಡಿಮೆ ಬೆಲೆಯಿಂದ ಬ್ರೆಂಟ್ ತೈಲವು 8 ಪರ್ಸೆಂಟ್ ಏರಿಕೆಯಾಯಿತು.

9.5 ದಿನಕ್ಕೆ ಆಗುವಷ್ಟು ತೈಲ ಮಾತ್ರ ಭಾರತದ ಬಳಿಯಿದೆ

9.5 ದಿನಕ್ಕೆ ಆಗುವಷ್ಟು ತೈಲ ಮಾತ್ರ ಭಾರತದ ಬಳಿಯಿದೆ

ಭಾರತದ ಬಳಿ ಸದ್ಯಕ್ಕೆ ಇರುವ 39.1 ಮಿಲಿಯನ್ ಬ್ಯಾರಲ್ಸ್ ತುರ್ತು ಕಚ್ಚಾ ತೈಲವು 9.5 ದಿನಗಳ ಅಗತ್ಯವನ್ನು ಮಾತ್ರ ಪೂರೈಸಬಲ್ಲದು. ಇನ್ನು ಇತರ ರಾಷ್ಟ್ರಗಳಿಗೆ ಹೋಲಿಸುವುದಾದರೆ ಚೀನಾದ ಬಳಿ 550 ಮಿಲಿಯನ್ ಬ್ಯಾರಲ್ಸ್ ಹಾಗೂ ಅಮೆರಿಕ ಬಳಿ 645 ಮಿಲಿಯನ್ ಬ್ಯಾರಲ್ಸ್ ತೈಲ ದಾಸ್ತಾನು ಇದೆ. ತೈಲ ಸಮಸ್ಯೆ ನಿವಾರಣೆಗೆ ಸ್ವತಃ ನರೇಂದ್ರ ಮೋದಿ ಪ್ರಯತ್ನ ಮಾಡುತ್ತಿದ್ದು, ಎರಡು ಹೊಸ ಸಂಗ್ರಹಾಗಾರ- ಎರಡೂ ಸೇರಿ 47.6 ಮಿಲಿಯನ್ ಬ್ಯಾರಲ್ಸ್ ಸಂಗ್ರಹ ಸಾಮರ್ಥ್ಯದ್ದನ್ನು ಸೇರ್ಪಡೆ ಮಾಡಿಕೊಳ್ಳಲು ಆಲೋಚಿಸುತ್ತಿದ್ದಾರೆ. ಭಾರತದ ಹಡಗುಗಳನ್ನು ಕಾವಲು ಕಾಯುವ ಉದ್ದೇಶದಿಂದಲೇ ಕಳೆದ ವಾರ ಪರ್ಷಿಯನ್ ಗಲ್ಫ್ ಗೆ ಎರಡು ಹಡಗು ನಿಯೋಜನೆ ಮಾಡಿದೆ.

5.8 ಪರ್ಸೆಂಟ್ ಗೆ ಕುಸಿಯಿತು ಆರ್ಥಿಕ ಪ್ರಗತಿ ದರ

5.8 ಪರ್ಸೆಂಟ್ ಗೆ ಕುಸಿಯಿತು ಆರ್ಥಿಕ ಪ್ರಗತಿ ದರ

ಭಾರತದ ಇಂಧನ ಸಚಿವರು ಸೌದಿ ಅರೇಬಿಯಾದೊಂದಿಗೆ ಮಾತುಕತೆ ನಡೆಸಿ, OPEC+ ಒಕ್ಕೂಟ ರಾಷ್ಟ್ರಗಳು ಕಚ್ಚಾ ತೈಲ ಬೆಲೆಯನ್ನು ತೀರಾ ಹೆಚ್ಚಿಸಿದಂತೆ ನಿರ್ವಹಿಸಿಕೊಂಡು ಹೋಗಲು ಕೇಳಿದ್ದಾರೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದ ಭಾರತದ ಆರ್ಥಿಕ ಪ್ರಗತಿ ಜನವರಿಯಿಂದ ಮಾರ್ಚ್ ಅವಧಿಗೆ 5.8 ಪರ್ಸೆಂಟ್ ಗೆ ಕುಸಿಯಿತು. ಅದು ಬ್ಲೂಮ್ ಬರ್ಗ್ ಅಂದಾಜು ಮಾಡಿದ್ದ 6.3 ಪರ್ಸೆಂಟ್ ಗಿಂತ ಕಡಿಮೆಯಾಯಿತು.

ನಿರುದ್ಯೋಗ ಸಮಸ್ಯೆ ವಿಪರೀತ ಹೆಚ್ಚಾಗಿದೆ

ನಿರುದ್ಯೋಗ ಸಮಸ್ಯೆ ವಿಪರೀತ ಹೆಚ್ಚಾಗಿದೆ

ಹಣದುಬ್ಬರುವು ಮೇ ತಿಂಗಳಲ್ಲಿ 3.05 ಪರ್ಸೆಂಟ್ ಗೆ ತಲುಪಿತು. ಅಂದ ಹಾಗೆ ಜನವರಿಯಲ್ಲಿ ಈ ಪ್ರಮಾಣ 1.97 ಪರ್ಸೆಂಟ್ ಇತ್ತು. ಇದರ ಜತೆಗೆ ಭಾರತವು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಕೂಡ ಹೆಚ್ಚಾಗಿ, ಆರ್ಥಿಕತೆಗೆ ಆತಂಕ ಆಗಿದೆ.

English summary
War situation between Iran and America leads to tense situation in India. Because India have only 9.5 days emergency reserve of oil. India imports 84% of it's oil through middle east. So, what next?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X