ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST ಅನುಮಾನಗಳ ಪರಿಹಾರಕ್ಕೆ ವಾಲ್‌ಮಾರ್ಟ್ ನಿಂದ ಹೆಲ್ಪ್ ಲೈನ್

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 8: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಿಂದ ಉಂಟಾಗುವ ಗೊಂದಲಗಳ ನಿವಾರಣೆಗೆ ವಾಲ್‌ಮಾರ್ಟ್ ಉಚಿತ ಹೆಲ್ಪ್ ಲೈನ್ ಆರಂಭಿಸಿದೆ. ಆದರೆ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿರುವ ವಾಲ್‌ಮಾರ್ಟ್ ಕನ್ನಡ ಭಾಷಿಕರನ್ನು ಮಾತ್ರ ಕಡೆಗಣಿಸಿದೆ.

ಕಿರಾಣಿ ಅಂಗಡಿಗಳು ಮತ್ತು ಮಧ್ಯವರ್ತಿಗಳಿಗೆ ಎದುರಾಗಬಹುದಾದ ಸಮಸ್ಯೆಗಳು, ಗೊಂದಲಗಳಿಗೆ ಪರಿಹಾರ ಸೂಚಿಸಲು ವಾಲ್‌ಮಾರ್ಟ್ ಇಂಡಿಯಾ ಈ ಹೆಲ್ಪ್ ಲೈನ್ ಆರಂಭಿಸಿದೆ. ಮತ್ತು ಇದು ಉಚಿತವಾಗಿರಲಿದೆ. 0120-4878888 ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗೆ ತಜ್ಞರಿಂದ ಪರಿಹಾರ ಪಡೆದುಕೊಳ್ಳಬಹುದು.[ಶ್ರೀಸಾಮಾನ್ಯರಿಗೆ ಅನ್ವಯವಾಗುವ ಜಿಎಸ್ಟಿ ದರಗಳ ಅಂತಿಮ ಪಟ್ಟಿ ಇಲ್ಲಿದೆ]

Walmart India opened GST toll free helpline, but not in Kannada

ನೋಯ್ಡಾದಲ್ಲಿ ಈ ಹೆಲ್ಪ್ ಲೈನ್ ಆರಂಭಿಸಲಾಗಿದೆ. ದಿನಕ್ಕೆ 2500 ಕರೆಗಳನ್ನು ಇದರಲ್ಲಿನಿರ್ವಹಣೆ ಮಾಡಲಾಗುತ್ತದೆ. ಹಿಂದಿ, ಇಂಗ್ಲೀಷ್, ತೆಲುಗು, ಪಂಜಾಬಿ, ಮರಾಠಿ ಭಾಷೆಗಳಲ್ಲಿ ಈ ಹೆಲ್ಪ್ ಲೈನ್ ಕಾರ್ಯ ನಿರ್ವಹಿಸಲಿದೆ. ಆದರೆ ಕನ್ನಡ ಭಾಷೆಯಲ್ಲಿ ಮಾತ್ರ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಅವಕಾಶ ಇಲ್ಲ. ಇದೇ ಕನ್ನಡಿಗರ ಸದ್ಯದ ದುಸ್ಥಿತಿ.

English summary
Walmart India has opened a toll free helpline number for all the small shop owners and other reseller members to help them transit smoothly into new tax laws and also to ensure minimum disruptions in their business, with the roll out of GST from 1st July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X