ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ: ಹಿರಿಯ ನಾಗರಿಕರು ಮಾರ್ಚ್ 1 ರಿಂದ ವಾಕ್ ಇನ್ ಮೂಲಕವೂ ನೋಂದಾಯಿಸಬಹುದು

|
Google Oneindia Kannada News

ನವದೆಹಲಿ,ಫೆಬ್ರವರಿ 27: 60 ವರ್ಷ ಮೇಲ್ಪಟ್ಟವರು ಮಾರ್ಚ್ 1 ರಿಂದ ಕೋವಿನ್ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಬಹುದು. ಜತೆಗೆ ವಾಕ್ ಇನ್ ಮೂಲಕವೂ ನೋಂದಾಯಿಸಬಹುದು ಎಂದು ಹೇಳಲಾಗಿದೆ.

ಆರೋಗ್ಯ ಸೇತು ಆಪ್ ಮೂಲಕ ಕೂಡಾ ಕೊರೊನಾ ಲಸಿಕೆಗೆ ಹೆಸರು ನೊಂದಾಯಿಸಬಹುದು. ಕೊವಿನ್ ಆಪ್ ಮೂಲಕವೂ ಅಪಾಯಿಂಟ್ಮೆಂಟ್ ಪಡೆಯಬಹುದು.

Cowin.gov.in ವೆಬ್ ಪೋರ್ಟಲ್ ಮೂಲಕವೂ ನೋಂದಾಯಿಸಬಹುದು. ಕಂಪ್ಯೂಟರ್, ಸ್ಮಾರ್ಟ್ ಫೋನ್ ಇಲ್ಲದವರು ಕಾಮನ್ ಸರ್ವಿಸ್ ಸೆಂಟರ್ (Common Service Center) ಮೂಲಕವೂ ರೆಜಿಸ್ಟ್ರೇಶನ್ ಮಾಡಿಸಿಕೊಳ್ಳಬಹುದು. 6 ಲಕ್ಷ ಹಳ್ಳಿಗಳಲ್ಲಿ 2.5 ಲಕ್ಷ ಕಾಮನ್ ಸರ್ವಿಸ್ ಸೆಂಟರ್ ಸ್ಥಾಪಿಸಲಾಗಿದೆ.

Walk-In Registration For Covid19 Vaccination For Senior Citizens

ಮಾರ್ಚ್ 1ರಿಂದ ಆರಂಭವಾಗಲಿರುವ ಕೊರೊನಾ ಲಸಿಕೆ ಅಭಿಯಾನಕ್ಕೆ ಅರ್ಹರಾದ ಅಭ್ಯರ್ಥಿಗಳು ಸರ್ಕಾರದ ಕೋವಿನ್ ಅಪ್ಲಿಕೇಶನ್ ಮೂಲಕ ಲಸಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಒಟ್ಟು 10 ಸಾವಿರ ಸರ್ಕಾರಿ ಆಸ್ಪತ್ರೆ ಹಾಗೂ 20 ಸಾವಿರಕ್ಕೂ ಹೆಚ್ಚು ಖಾಸಗಿ ಕೇಂದ್ರಗಳಲ್ಲಿ ಮಾರ್ಚ್ 1ರಿಂದ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತದೆ. ಸರ್ಕಾರದಿಂದ ಈ ಲಸಿಕೆ ಉಚಿತವಾಗಿ ಸಿಗಲಿದೆ.

ಕೇಂದ್ರ ಲಸಿಕೆವಿತರಣೆಯ ಇಡೀ ಪ್ರಕ್ರಿಯೆ ನಿರ್ವಹಣೆ ಮತ್ತು ಕಣ್ಗಾವಲಿಗೆ ಕೋವಿನ್ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ. ಕೋವಿನ್ ಅಪ್ಲಿಕೇಶನ್ ಮೂಲಕ ಜನತೆ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ ಅಭ್ಯರ್ಥಿಗಳಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ಯಾವುದಾದರೂ ಒಂದನ್ನ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ನೀಡಲಾಗಿಲ್ಲ. ಆದರೆ ಲಸಿಕೆ ದಿನಾಂಕ ಹಾಗೂ ಕೇಂದ್ರವನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದೀಗ ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಈಗಾಗಲೇ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಎರಡನೇ ಹಂತದಲ್ಲಿ ಮುಂಚೂಣಿ ಕೊರೊನಾ ವಾರಿಯರ್ಸ್ಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಸದ್ಯ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾರ್ಚ್ 1 ರಿಂದ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ಹಾಕಿಸಿಕೊಳ್ಳುವಾಗ ಖಂಡಿತ ಕೆಲವು ದಾಖಲೆ (Documents) ಕೇಳುತ್ತಾರೆ. 60 ವರ್ಷ ಆಗಿದೆ ಎನ್ನುವುದಕ್ಕೆ ಯಾವುದಾದರೂ ದಾಖಲೆ ನಿಮ್ಮಲ್ಲಿರಬೇಕು.(ಆಧಾರ್, ಓಟರ್ ಐಡಿ, ಪಾನ್ ಕಾರ್ಡ್ ಇತ್ಯಾದಿ). 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಬೇಕೆಂದರೆ ಬಳಲುತ್ತಿರುವ ಗಂಭೀರ ಕಾಯಿಲೆಯ ಮೆಡಿಕಲ್ ಸರ್ಟಿಫಿಕೆಟ್ ಜೊತೆಯಲ್ಲಿರಬೇಕು.
ನೀವು ನೋಂದಣಿ ಮಾಡುವುದು ಹೇಗೆ?
Co-WIN app ಅಥವಾ cowin.gov.in ವೆಬ್ಸೈಟ್ಗೆ ಹೋಗಿ
* ಅಲ್ಲಿ ನಿಮ್ಮ ಮೊಬೈಲ್ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿಸಬೇಕು
*ನಿಮಗೆ ಬರುವ ಒಟಿಪಿಯನ್ನು ನೊಂದಾಯಿಸಿದ ಬಳಿಕ ನಿಮ್ಮ ಖಾತೆ ತೆರೆಯಲಿದೆ
*ಇಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಖಾತೆಯನ್ನೂ ತೆರೆಯಬಹುದು
*ಇದಾದ ಬಳಿಕ ನಿಗದಿತ ದಿನಾಂಕದಂದು ಲಸಿಕೆ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಿರಿ.
* ಒಬ್ಬರಿಗೆ ಲಸಿಕೆ ನೀಡಲು 30 ನಿಮಿಷ ಬೇಕು. ಹೀಗಾಗಿ ಪ್ರತಿ ಸೆಷನ್ನಲ್ಲಿ 100 ಜನರಿಗೆ ಮಾತ್ರವೇ ಕೊರೊನಾ ಲಸಿಕೆ ನೀಡಲಾಗುತ್ತದೆ.

*45 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ತಮಗೆ ಅನಾರೋಗ್ಯಇರುವುದರ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿರಲಿದೆ

English summary
The Co-WIN 2.0 app, which will drive the next phase of COVID-19 vaccination set to begin from March 1, will be launched on the same day, according R S Sharma, chairman of Co-Win panel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X