ಅರ್ನಬ್ 'ರಿಪಬ್ಲಿಕ್' ಟಿವಿ ಆರಂಭಕ್ಕೆ ಕಾಲ ಕೂಡಿ ಬಂತು!

By: anuSh
Subscribe to Oneindia Kannada

ನವದೆಹಲಿ, ಏಪ್ರಿಲ್ 12:ಪತ್ರಕರ್ತ ಅರ್ನಬ್ ಗೋಸ್ವಾಮಿಗಳ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಟೈಮ್ಸ್ ನೌನ ಮಾಜಿ ಉದ್ಯೋಗಿ ಅರ್ನಬ್ ಅವರ ಹೊಚ್ಚ ಹೊಸ ಟಿವಿ ಚಾನೆಲ್ ರಿಪಬ್ಲಿಕ್ ಟಿವಿ ಆರಂಭವಾಗುವ ಕಾಲ ಸನ್ನಿಹಿತವಾಗಿದ್ದು, ಮೇ ತಿಂಗಳಿನಲ್ಲಿ ಮೊದಲ ಶೋ ಕಾಣಬಹುದು.

ಚಾನೆಲ್ ಆರಂಭಕ್ಕೆ ಇದ್ದ ವಿಘ್ನ ನಿವಾರಣೆಯಾಗಿದ್ದು, ಸುದ್ದಿ ವಾಹಿನಿಯ ಟೆಸ್ಟ್ ರನ್ ಈಗಾಗಲೇ ಆರಂಭವಾಗಿದೆ.ಮೇ ತಿಂಗಳಿನಲ್ಲಿ ಚಾನೆಲ್ ಆರಂಭವಾಗಲಿದೆ ಎಂಬ ಸುದ್ದಿ ಲಭ್ಯವಾಗಿದ್ದರೂ ದಿನಾಂಕ ಇನ್ನೂ ನಿಗದಿಯಾಗಿಲ್ಲ. [ಅರ್ನಬ್ 'ರಿಪಬ್ಲಿಕ್' ಸಂಸ್ಥೆಗೆ ಸಂಸದ ರಾಜೀವ್ ಹೂಡಿಕೆ!]

Fans of journalist Arnab Goswami may have some reason to cheer. The wait for the prominent journalist's channel is likely to come to an end soon. Sources associated with the media venture claim that Republic TV will be launched in May.

ಕಳೆದ ನಾಲ್ಕು ತಿಂಗಳಿನಿಂದ ಚಾನೆಲ್ ಆರಂಭದ ಬಗ್ಗೆ ಸುದ್ದಿ ಬರುತ್ತಲೇ ಇದೆ. ವಿವಿಧ ಮಾಧ್ಯಮಗಳ ಪ್ರಮುಖರನ್ನು ಅರ್ನಬ್ ಅವರು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.

ಟೈಮ್ಸ್ ನೌ ಮಾಜಿ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ಅವರ ಹೊಸ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಹೂಡಿಕೆದಾರರ ವಿವರ ಬಹಿರಂಗವಾಗಿದೆ. ಬಿಜೆಪಿ ಬೆಂಬಲಿತ ರಾಜೀವ್ ಚಂದ್ರಶೇಖರ್ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಹೂಡಿಕೆ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ರಿಪಬ್ಲಿಕ್ ಹೆಸರಿನ ಈ ಸುದ್ದಿ ಚಾನೆಲ್ ನವೆಂಬರ್ ಕೊನೆಗೆ ಅಪ್‌ಲಿಂಕ್ ಹಾಗೂ ಡೌನ್‌ಲೋಡಿಂಗ್ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದೆ. ರಿಪಬ್ಲಿಕ್, ಎಆರ್ ‌ಸಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ಅಂಗ ಸಂಸ್ಥೆಯಾಗಿದೆ.

1995ರಲ್ಲಿ ಟಿವಿ ಲೋಕಕ್ಕೆ ಪರಿಚಿತರಾದ ಅರ್ನಬ್ ಅವರು ಟೈಮ್ ನೌ ನ ಪ್ರಧಾನ ಸಂಪಾದಕರಾಗಿದ್ದರು. ಟೈಮ್ಸ್ ನೌ ಸಂಸ್ಥೆಗೂ ಮುನ್ನ ಕೋಲ್ಕತ್ತಾದ ದಿ ಟೆಲಿಗ್ರಾಫ್ ನಲ್ಲಿ ಪತ್ರಕರ್ತರಾಗಿ ಸಿಎನ್ಎನ್ ಐಬಿಎನ್ ನಲ್ಲಿ ರಾಜದೀಪ್ ಸರ್ದೇಸಾಯಿ ಹಾಗೂ ಎನ್ ಡಿ ಟಿವಿಯಲ್ಲಿ ಪ್ರಣವ್ ರಾಯ್ ಅವರ ಜತೆ ಕಾರ್ಯನಿರ್ವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Fans of journalist Arnab Goswami may have some reason to cheer. The wait for the prominent journalist's channel is likely to come to an end soon. Sources associated with the media venture claim that Republic TV will be launched in May.
Please Wait while comments are loading...