ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಗಾ ಯೋಜನೆ ದಿನದ ಕೂಲಿ 202 ರೂ.ಗೆ ಏರಿಕೆ

|
Google Oneindia Kannada News

ನವದೆಹಲಿ, ಮೇ 14 : "ನರೇಗಾ ಯೋಜನೆಯಡಿ ಪ್ರತಿ ದಿನದ ಕೆಲಸಕ್ಕೆ ನೀಡುತ್ತಿದ್ದ ಕೂಲಿಯನ್ನು 182 ರೂ. ಗಳಿಂದ 202 ರೂ.ಗಳಿಗೆ ಏರಿಕೆ ಮಾಡಲಾಗುತ್ತದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Recommended Video

ನಡೆದು ಹೋಗ್ತಿರೋ ಅಮ್ಮನ ಸೂಟ್ ಕೇಸ್ ಮೇಲೆಯೇ ನಿದ್ರೆ ಮಾಡ್ತಿರೋ ಕಂದ..ಸರ್ಕಾರಕ್ಕೆ ಕಣ್ಣಿಲ್ವಾ? | Punjab

ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 20 ಲಕ್ಷ ಕೋಟಿ ಪ್ಯಾಕೇಜ್‌ನ ಎರಡನೇ ಹಂತದ ವಿವರಗಳನ್ನು ನೀಡಿದರು. "ಕನಿಷ್ಠ ಕೂಲಿಯನ್ನು ಎಲ್ಲಾ ಕಾರ್ಮಿಕರಿಗೂ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತದೆ. ಪ್ರಸ್ತುತ ಶೇ 30ರಷ್ಟು ಕಾರ್ಮಿಕರಿಗೆ ಮಾತ್ರ ಇದೆ" ಎಂದರು.

ಕೊರೊನಾ ಸಂಕಷ್ಟದಲ್ಲಿ ಗ್ರಾಮೀಣ ಜನರಿಗೆ ನೆರವಾದ ನರೇಗಾ ಕೊರೊನಾ ಸಂಕಷ್ಟದಲ್ಲಿ ಗ್ರಾಮೀಣ ಜನರಿಗೆ ನೆರವಾದ ನರೇಗಾ

"ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಕನಿಷ್ಠ ಕೂಲಿಯನ್ನು ನಮೂದಿಸಿಯೇ ಅಪಾಯಿಂಟ್‌ಮೆಂಟ್ ಲೆಟರ್ ನೀಡುವಂತೆ" ಬದಲಾವಣೆ ತರುಲಾಗುತ್ತದೆ ಎಂದು ಸಚಿವರು ವಿವರಣೆ ನೀಡಿದರು.

ಲಾಕ್ ಡೌನ್ ಸಂಕಷ್ಟದಲ್ಲಿ ಹಳ್ಳಿ ಜನರಿಗೆ ನೆರವಾದ ನರೇಗಾ ಲಾಕ್ ಡೌನ್ ಸಂಕಷ್ಟದಲ್ಲಿ ಹಳ್ಳಿ ಜನರಿಗೆ ನೆರವಾದ ನರೇಗಾ

Wage Under MGNREGA Increase To 202 Rs Per Day

"ಕಳೆದ ಎರಡು ತಿಂಗಳಿನಲ್ಲಿ ನರೇಗಾ ಯೋಜನೆಯಡಿ 10,000 ಕೋಟಿ ಖರ್ಚು ಮಾಡಲಾಗಿದ್ದು 14.62 ಕೋಟಿ ದಿನದ ಉದ್ಯೋಗವನ್ನು ಸೃಷ್ಟಿ ಮಾಡಲಾಗಿದೆ. ಇದರಿಂದಾಗಿ ವಲಸೆ ಕಾರ್ಮಿಕರಿಗೆ ಸಹಾಯಕವಾಗಿದೆ" ಎಂದು ಹಣಕಾಸು ಸಚಿವರು ತಿಳಿಸಿದರು.

ಏ. 1ರಿಂದ ನರೇಗಾ ಕೂಲಿ ಕಾರ್ಮಿಕರಿಗೂ ಆಧಾರ್ ಕಡ್ಡಾಯ ಏ. 1ರಿಂದ ನರೇಗಾ ಕೂಲಿ ಕಾರ್ಮಿಕರಿಗೂ ಆಧಾರ್ ಕಡ್ಡಾಯ

"ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನರೇಗಾ ಯೋಜನೆಯಡಿ ಕೂಲಿ ಬಯಸುತ್ತಿರುವವರ ಸಂಖ್ಯೆ 40 ರಿಂದ 50ರಷ್ಟು ಹೆಚ್ಚಾಗಿದೆ. ಯೋಜನೆಯಡಿ ನೀಡುತ್ತಿದ್ದ ದಿನ ಕೂಲಿಯನ್ನು 182 ರಿಂದ 202 ರೂ.ಗೆ ಏರಿಕೆ ಮಾಡಲಾಗಿದೆ" ಎಂದು ಹೇಳಿದರು.

English summary
In his announcement finance minister Nirmala Sitharaman said that national average wage under MGNREGA will increase to Rs 202 per person per day from Rs 182.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X